Home
ಮೊಬೈಲ್

ಭಾರತದಲ್ಲಿ ಕಡಿಮೆ ಬೆಲೆಯ Nothing Phone 3a Lite ಬಿಡುಗಡೆ ಅಧಿಕೃತ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Nothing ಕಳೆದ ಅಕ್ಟೋಬರ್‌ನಲ್ಲಿ ತನ್ನ ಹೊಸ ಮಧ್ಯಮ ಶ್ರೇಣಿಯ Nothing Phone 3a Lite ಸ್ಮಾರ್ಟ್‌ಫೋನ್ ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸಿತ್ತು. ಈಗ, ಕಂಪೆನಿಯು ಭಾರತದಲ್ಲಿ ಈ ಫೋನ್ ಬಿಡುಗಡೆಯನ್ನು ಖಚಿತಪಡಿಸಿದೆ. Nothing ಕಂಪೆನಿಯ ಅಧಿಕೃತ ಸಾಮಾಜಿಕ ಮಾಧ್ಯಮ X ಪೋಸ್ಟ್ ಮೂಲಕ ದೇಶದಲ್ಲಿ Nothing Phone 3a Lite ಫೋನಿನ ಶೀಘ್ರ ಬಿಡುಗಡೆ ಕುರಿತು ಟೀಸ್ ಮಾಡಲಾಗಿದೆ. ನಿರೀಕ್ಷೆಯಂತೆಯೇ, Nothing Phone 3a Lite ಫೋನ್ ಭಾರತದಲ್ಲೂ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಫೀಚರ್ಸ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ.

Nothing ಪ್ರಕಟಿಸಿರುವ X ಪೋಸ್ಟ್ ನಲ್ಲ, "ಲೈಟ್-ನಿಂಗ್ ಯಾವಾಗಲೂ ಏನಾದರೂ ಹೆಚ್ಚಿನದರೊಂದಿಗೆ ಇರುತ್ತದೆ "(Lite-ning is always accompanied by something more) ಎಂದು ಹೇಳಲಾಗಿದೆ. ಇದರಿಂದ ಮುಂಬರುವ ಈ ಫೋನ್ ಹೆಚ್ಚಿನ ಕೊಡುಗೆಗಳನ್ನು ಹೊಂದಿರಬಹುದು ಎಂದು ಇದು ಸೂಚಿಸುತ್ತದೆ. ಆದರೆ, ಕಂಪೆನಿಯ "ಶೀಘ್ರದಲ್ಲೇ ಬರಲಿದೆ" ಎಂಬ ಹೇಳಿಕೆಯು, Nothing Phone 3a Lite ಸ್ಮಾರ್ಟ್‌ಫೋನಿನ ನಿಖರ ಬಿಡುಗಡೆ ದಿನಾಂಕ ಯಾವುದು ಎಂಬ ಬಗ್ಗೆ ಕುತೂಹಲವನ್ನು ಉಳಿಸಿದೆ. ಆದರೂ, ಕೈಗೆಟುಕುವ Nothing ಫೋನ್‌ ಆಗಮನದ ಸೂಚನೆಯು ಸಿಹಿಸುದ್ದಿ ಎನ್ನಬಹುದು.!

ಇನ್ನು ಈ ಟೀಸರ್ ಚಿತ್ರವು, ಮುಂಬರುವ Nothing Phone 3a Lite ಫೋನ್ ಕಪ್ಪು ಮತ್ತು ಬಿಳಿ ಎರಡೂ ಬಣ್ಣ ಆಯ್ಕೆಗಳು ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತವೆ ಎಂದು ಸೂಚಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಲಭ್ಯವಿರುವಂತೆಯೇ ವೈಶಿಷ್ಟ್ಯಗಳು ಮತ್ತು ಫೀಚರ್ಸ್‌ಗಳೊಂದಿಗೆ ಬರುವ ಸಾಧ್ಯತೆಯಿದೆ. ನಾವು ನೋಡುವುದಾದರೆ, ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್, OIS/EIS ಬೆಂಬಲದ 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಮತ್ತು 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳು ಮತ್ತು ಉತ್ತಮ ಬೆಲೆಯನ್ನು ಹೊಂದಿದೆ.

Nothing Phone 3a Lite: ಪ್ರಮುಖ ವೈಶಿಷ್ಟ್ಯಗಳು
ಹೊಸ Nothing Phone 3a Lite ನಲ್ಲಿ 6.77 ಇಂಚಿನ Full HD+ AMOLED ಡಿಸ್ಪ್ಲೇ ಇದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 3,000 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 8GB RAM ಮತ್ತು 256GB ವರೆಗೆ ಸ್ಟೋರೇಜ್ ವರೆಗೆ ಸಂಯೋಜಿಸಲಾಗಿರುವ 4nm MediaTek Dimensity 7300 Pro ಪ್ರೊಸೆಸರ್ ಇದೆ.

ಜೊತೆಗೆ ಇದರಲ್ಲಿ ಗಮನಾರ್ಹ ಅಂಶವೆಂದರೆ, ಬಳಕೆದಾರರು microSD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಇನ್ನು ನಿರೀಕ್ಷೆಯಂತೆಯೇ, Nothing OS 3.5 (Android 15 ಆಧಾರಿತ) ಮೇಲೆ ಕಾರ್ಯನಿರ್ವಹಿಸುವ ಈ ಫೋನ್‌ಗೆ 3 ವರ್ಷಗಳ Android ಅಪ್‌ಡೇಟ್‌ಗಳು ಹಾಗೂ 6 ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ದೊರೆಯುತ್ತವೆ ಎಂದು ಕಂಪೆನಿಯು ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Nothing Phone 3a Lite ಫೋನಿನ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ (Samsung ಸೆನ್ಸರ್, OIS/EIS ಬೆಂಬಲದೊಂದಿಗೆ) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇದೆ.ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 4K ವಿಡಿಯೋ ಚಿತ್ರೀಕರಣ (30fps) ಹಾಗೂ ಸ್ಲೋ-ಮೊಷನ್ (120fps) ಚಿತ್ರೀಕರಣವನ್ನೂ ಬೆಂಬಲಿಸುತ್ತದೆ. ಜೊತೆಗೆ "TrueLens Engine 4.0", "Night Mode" ಹಾಗೂ "Portrait Optimiser" ಫೀಚರ್‌ಗಳು ವೃತ್ತಿಪರ ಫೋಟೋ ಗುಣಮಟ್ಟವನ್ನು ಒದಗಿಸುವ ಭರವಸೆ ನೀಡಿವೆ.

ಬ್ಯಾಟರಿ ವಿಭಾಗದಲ್ಲಿ, ಈ ಫೋನ್‌ನಲ್ಲಿ 5,000mAh ಬ್ಯಾಟರಿ ಇದ್ದು, 33W ವೇಗದ ಚಾರ್ಜಿಂಗ್ ಹಾಗೂ 5W ರಿವರ್ಸ್ ಚಾರ್ಜಿಂಗ್ ಬೆಂಬಲ ನೀಡುತ್ತದೆ. ಸುರಕ್ಷತೆಗಾಗಿ in-display fingerprint sensor, IP54 ಧೂಳು ಮತ್ತು ನೀರಿನ ನಿರೋಧಕತೆ, ಹಾಗೂ Panda Glass ರಕ್ಷಣೆ ಇದೆ. ಫೋನ್‌ನ ತೂಕ ಕೇವಲ 199 ಗ್ರಾಂ ಇದ್ದು, ಇದು ಕೈಯಲ್ಲಿ ಹಿಡಿದಾಗ ಹಗುರ ಮತ್ತು ಆರಾಮದಾಯಕವಾಗಿದೆ.

ಭಾರತದಲ್ಲಿ ಕಡಿಮೆ ಬೆಲೆಯ Nothing Phone 3a Lite ಬಿಡುಗಡೆ ಅಧಿಕೃತ!

ಮುಖ್ಯವಾಗಿ ಗಮನಿಸುವುದಾದರೆ, ಈ ಫೋನ್ Nothing ಕಂಪೆನಿಯ ಸಿಗ್ನೇಚರ್ ಪಾರದರ್ಶಕ ಸೌಂದರ್ಯದ ಸ್ಕೇಲ್ಡ್-ಡೌನ್ ಆವೃತ್ತಿಯನ್ನು ಹೊಂದಿದೆ. ಇದು ಪ್ರೀಮಿಯಂ ನೋಟವನ್ನು ಕೈಗೆಟುಕುವ ಬೆಲೆಯೊಂದಿಗೆ ಸಮತೋಲನಗೊಳಿಸುವ ಸಲುವಾಗಿ ಇರಬಹುದು. ಪ್ರಮುಖ ಮಾದರಿಗಳಿಂದ ಇದನ್ನು ಪ್ರತ್ಯೇಕಿಸಲು, ಲೈಟ್ ಆವೃತ್ತಿಯು ಸರಳ ವಿನ್ಯಾಸ ಮತ್ತು ಕಡಿಮೆ ಗ್ಲಿಫ್ ಇಂಟರ್ಫೇಸ್ ಅನ್ನು ಹೊಂದಿದೆ. ಇದರ ವಿಶಿಷ್ಟ Glyph ಲೈಟ್ ಡಿಸೈನ್ ಸಹ ಆಕರ್ಷಿಸುವಂತಿದೆ.

Nothing Phone 3a Lite: ಬೆಲೆ ಎಷ್ಟು?
Nothing Phone 3a Lite ಸ್ಮಾರ್ಟ್‌ಫೋನ್ ಪ್ರಸ್ತುತ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿದೆ. ಈ ಫೋನಿನ ಯುರೋಪ್ ಬೆಲೆ EUR 249 (ಸುಮಾರು ₹25,600) ರಿಂದ ಪ್ರಾರಂಭವಾಗಿದ್ದರೆ, ಬ್ರಿಟನ್‌ನಲ್ಲಿ ಇದರ ಬೆಲೆ GBP 249 (ಸುಮಾರು ₹29,000) ಗಳಾಗಿವೆ. ಇನ್ನುಹೆಚ್ಚು ಸ್ಟೋರೇಜ್ ಇರುವ 256GB ಮಾದರಿಯು EUR 279 (ಸುಮಾರು ₹28,700) ಹಾಗೂ GBP 279 (ಸುಮಾರು ₹32,500) ದರದಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಫೋನ್ ಬೆಲೆಯನ್ನು 20 ಸಾವಿರ ಆಸುಪಾಸಿನಲ್ಲಿ ನಿರೀಕ್ಷಿಸಲಾಗಿದೆ.! ಆದರೆ, ಅಂತಿಮ ಬಿಡುಗಡೆಯು ಈ ಎಲ್ಲದಕ್ಕೂ ಉತ್ತರ ನೀಡಲಿದೆ.

Best Mobiles in India

English summary
Nothing’s official social media handle has teased the upcoming launch of the Nothing Phone 3a Lite in India. As expected, the Indian variant is likely to include the same features and specifications as the global model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+