ಸೋನಿ ಎರಿಕ್ಸನ್ ನೈಪಾನ್ ಗೆ ನೂತನ ನೊವಾಥಾರ್ ಚಿಪ್ ಸೆಟ್

Posted By: Staff
ಸೋನಿ ಎರಿಕ್ಸನ್ ನೈಪಾನ್ ಗೆ ನೂತನ ನೊವಾಥಾರ್ ಚಿಪ್ ಸೆಟ್

 

2012ನೇ ವರ್ಷ ಸೋನಿ ಎರಿಕ್ಸನ್ ಅಭಿಮಾನಿಗಳಿಗೆ ಒಳ್ಳೆ ವರ್ಷವೆನಿಸಲಿದೆ. ಎಕ್ಸ್ ಪಿರಿಯಾ ಮೊಬೈಲ್ ಬಿಡುಗಡೆಯಿಂದ ತನ್ನ ಸಾಮರ್ಥ್ ನಿರೂಪಿಸಿರುವ ಸೋನಿ ಎರಿಕ್ಸನ್ ಕಂಪನಿ ಮುಂದಿನ ವರ್ಷ ವಿಶೇಷ ಆಯ್ಕೆ ಹೊಂದಿರುವ ವಿನೂತನ ಶೈಲಿಯ ಸ್ಮಾರ್ಟ್ ಫೋನ್ ಹೊರತರುತ್ತಿರುವುದೇ ಇದಕ್ಕೆ ಕಾರಣವೆನ್ನಬಹುದು.

ಮುಂದಿನ ವರ್ಷ ತೆರೆಕಾಣಲಿರುವ ನೂತನ ಮೊಬೈಲ್ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಕಂಪನಿ ಅಧೀಕೃತವಾಗಿ ಎಲ್ಲೂ ಘೋಷಿಸಿಲ್ಲ. ಆದರೆ ಮುಂಬರುವ ಫೋನ್ ಅತ್ಯಾಧುನಿಕ ಕಾರ್ಯ ಕ್ಷಮತೆ ತೋರಲಿದೆ ಎಂದಷ್ಟೇ ಕಂಪನಿ ತಿಳಿಸಿದೆ.

ಇತ್ತೀಚೆಗೆ ಹಬ್ಬಿರುವ ಸುದ್ದಿ ಪ್ರಕಾರ, ಬರುತ್ತಿರುವ ಸೋನಿ ಎರಿಕ್ಸನ್ LT22i ಅಥವಾ ಸೋನಿ ಎರಿಕ್ಸನ್ ನೈಪಾನ್ ಮೊಬೈಲ್ ಫೋನ್ ಅತ್ಯಾಧುನಿಕವಾದ ಡ್ಯೂಯಲ್ ಕೋರ್ ST-ಎರಿಕ್ಸನ್ ನೊವಾಥಾರ್ U8500 ಸಿಸ್ಟಮ್ ಚಿಪ್ ಹೊಂದಿರುವುದು ತುಂಬಾ ವಿಶೇಷವೆನಿಸಲಿದೆ.

ನೊವಾಥಾರ್ U8500 ಸಿಸ್ಟಮ್ ಚಿಪ್ ಬಳಕೆ ಗ್ರಾಹಕರಿಗೆ ಅತ್ಯಾಶ್ಚರ್ಯ ತರುವ ವಿಷಯವಾಗಲಿದೆ. ಆದರೆ ತನ್ನ ಅನೇಕ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಿಕೊಂಡಿದ್ದ ಕ್ವಾಲ್ಕಂ ಚಿಪ್ ಸೆಟ್ಟನ್ನು ಸೋನಿ ಎರಿಕ್ಸನ್ ಏಕೆ ಬದಲಾಯಿಸಿದೆ ಎಂದು ತಿಳಿಸಿಲ್ಲ.

ಪ್ರಸ್ತುತ ಚಿಪ್ ಸೆಟ್ ನೋವಾಥಾರ್ U8500 ಬಗ್ಗೆ ಹೇಳುವುದಾದರೆ, ಇದು ಆಂಡ್ರಾಯ್ಡ್ 4.0, ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಇದು ಹೆಚ್ಚು ಸೂಕ್ತ. ಸೋನಿ ಎರಿಕ್ಸನ್ LT22i ಮೊಬೈಲ್ qHD 540 x 960 ಪಿಕ್ಸಲ್ ಡಿಸ್ಪ್ಲೇ ಹೊಂದಿದ್ದು, ಈ ಹೊಸ ಚಿಪ್ ಸೆಟ್ ಅಳವಡಿಸುವುದರಿಂದ ಡಿಸ್ಪ್ಲೇ ಇನ್ನಷ್ಟು ಗುಣಮಟ್ಟ ಪ್ರದರ್ಶಿಸಲಿದೆ.

ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಮೊಬೈಲ್ ವಿಶೇಷತೆಗಳ ಕುರಿತು ಕಂಪನಿ ಮಾಹಿತಿ ನೀಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot