Home
ಮೊಬೈಲ್

ರೂ.249ಕ್ಕೆ ನೋಕಿಯಾ 3310 ಮಾದರಿ ಫೋನ್: ಇಲ್ಲಿ ಮಾತ್ರ ಲಭ್ಯ..!

By Srinidhi

ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ನೊಂದಿಗೆ ಫೀಚರ್ ಫೋನ್‌ಗಳ ಆರ್ಭವು ಮತ್ತೆ ಹೆಚ್ಚಾಗಿದ್ದು, ಜಿಯೋ ಫೋನ್ ಲಾಂಚ್ ಆದ ನಂತರದಲ್ಲಿ ಹಲವು ಫೀಚರ್ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ. ಇದೇ ಮಾದರಿಯಲ್ಲಿ ಹೊಸದಾಗಿ ಬಿಡುಗಡೆಯಾದ ನೋಕಿಯಾ 3310 ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಸೆಡ್ಡು ಹೊಡೆಯುವಂತೆ ಮಾರುಕಟ್ಟೆಯಲ್ಲಿ ಹಲವು ಫೀಚರ್ ಫೋನ್‌ಗಳು ಮಾರಾಟವಾಗುತ್ತಿವೆ.

ರೂ.249ಕ್ಕೆ ನೋಕಿಯಾ 3310 ಮಾದರಿ ಫೋನ್: ಇಲ್ಲಿ ಮಾತ್ರ ಲಭ್ಯ..!

ರೂ.249ಕ್ಕೆ ನೋಕಿಯಾ 3310 ಮಾದರಿಯ ಫೀಚರ್ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೋಕಿಯಾ 3310 ಫೀಚರ್‌ಗಳನ್ನು ಒಳಗೊಂಡಿರುವುದಲ್ಲದೇ ನೋಡುವಂತೆ ಸಹ ನೋಕಿಯಾ 3310 ಮಾದರಿಯಲ್ಲಿಯೇ ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತೀ ಕಡಿಮೆ ಬೆಲೆಯ ಫೀಚರ್ ಫೋನ್‌ಗಳ ಮಾಹಿತಿಯೂ ಇಲ್ಲಿದೆ.

ಓದಿರಿ: ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಮೊಬೈಲ್ ಮೇಲೆ ಶೇ.40ರಷ್ಟು ರಿಯಾಯಿತಿ..!

ಐಕಾಲ್ K71:

ಐಕಾಲ್ K71:

ಸ್ನಾಪ್‌ಕ್ಲೂಸ್‌ನಲ್ಲಿ ಲಭ್ಯವಿರುವ ಐಕಾಲ್ K71 ರೂ.249ಕ್ಕೆ ದೊರೆಯುತ್ತಿದ್ದು, ಸಿಂಗಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ 800mAh ಬ್ಯಾಟರಿಯನ್ನು ಕಾಣಬಹುದಾಗಿದೆ. FM ರೆಡಿಯೋ ಮತ್ತು ಟಾರ್ಜ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಇದಲ್ಲದೇ ಮೂರು ಬಣ್ಣಗಳಲ್ಲಿ ಇದು ಲಭ್ಯವಿದೆ. ಒಂದು ವರ್ಷದ ವ್ಯಾರೆಂಟಿಯನ್ನು ಈ ಫೋನ್ ಹೊಂದಿದೆ.

ವಿವಾ V1:

ವಿವಾ V1:

ವಿವಾ V1 ರೂ.349ಕ್ಕೆ ದೊರೆಯುತ್ತಿದ್ದು, ಸ್ನಾಪ್‌ಕ್ಲೂಸ್‌ನಲ್ಲಿ ಲಭ್ಯವಿರುವ ಈ ಫೋನ್ 2G ಸಪೋರ್ಟ್ ಮಾಡಲಿದೆ. ಇದರಲ್ಲೂ FM ರೆಡಿಯೋವನ್ನು ಕಾಣಬಹುದು. ಅಲ್ಲದೇ ಇದರಲ್ಲಿ 650mAh ಬ್ಯಾಟರಿಯನ್ನು ನೋಡಬಹುದಾಗಿದ್ದು, ಸಿಂಗಲ್ ಸಿಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ ಮೇಡ್ ಇನ್ ಇಂಡಿಯಾ. ಇದು ಎರಡು ಬಣ್ಣಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಒಂದು ವರ್ಷದ ವ್ಯಾರೆಂಟಿಯನ್ನು ಈ ಫೋನ್ ಹೊಂದಿದೆ.

ಪೀಸ್ P3310:

ಪೀಸ್ P3310:

ರೂ.499ಕ್ಕೆ ಲಭ್ಯವಿರುವ ಪೀಸ್ P3310 ಫೋನ್‌ ಸಹ ಸ್ನಾಪ್‌ಕ್ಲೂಸ್‌ನಲ್ಲಿ ಮಾರಾಟವಾಗುತ್ತಿದೆ. ಈ ಫೋನ್ ಸಹ 2G ಸಪೋರ್ಟ್ ಮಾಡಲಿದೆ. ಇದರಲ್ಲಿ 850mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಈ ಫೋನ್ ಸಹ ಸಿಂಗಲ್ ಸಿಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, FM ರೆಡಿಯೋ ಮತ್ತು LED ಟಾರ್ಚ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ ಒಂದು ವರ್ಷದ ವ್ಯಾರೆಂಟಿಯನ್ನು ಈ ಫೋನ್ ಹೊಂದಿದೆ.

Best Mobiles in India

English summary
Now you can buy a feature phone for as low as Rs 249. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+