Home
ಮೊಬೈಲ್

Nubia Z60S Pro: 50MP ಕ್ಯಾಮೆರಾ, 5100mAh ಬ್ಯಾಟರಿಯ ಹೊಸ ಫೋನ್ ಬಿಡುಗಡೆ: ಬೆಲೆ ಎಷ್ಟು?

ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ZTE, ನುಬಿಯಾ ಬ್ರಾಂಡ್ ಅಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಯನ್ನು ಮಾಡುತ್ತಿದೆ. ಈವರೆಗೆ ಹೆಚ್ಚು ಮಧ್ಯಮ ಬೆಲೆಯ ಫೋನ್‌ಗಳನ್ನು ಲಾಂಚ್ ಮಾಡಿದ್ದ ಕಂಪನಿಯು, ಇದೀಗ ದುಬಾರಿ ಬೆಲೆಗೆ ಹೊಸ ನುಬಿಯಾ Z60S ಪ್ರೊ (Nubia Z60S Pro) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಸ್ನಾಪ್‌ಡ್ರಾಗನ್ 8 Gen 2, 16GB RAM ಮತ್ತು 5100mAh ಬ್ಯಾಟರಿ ಬಲವನ್ನು ಪಡೆದುಕೊಂಡಿರುವ ಈ ಫೋನ್ ಚೀನಾ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್‌ ಆಗಿದೆ. ಭಾರತದಲ್ಲೂ ನುಬಿಯಾ Z60S ಪ್ರೊ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದು 6.8 ಇಂಚಿನ OLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 2 4nm ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 14 ಜೊತೆಗೆ MyOS 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ, 8GBRAM+256GB, 12GB+512GB ಮತ್ತು 16GB LPDDR5X RAM ಜೊತೆಗೆ 1TB UFS 4.0 ಇಂಟರ್‌ ಸ್ಟೋರೇಜ್‌ ಹೊಂದಿದೆ. ಇನ್ನುಳಿದಂತೆ ಈ ಫೋನಿನ ಬೆಲೆ ಎಷ್ಟು? ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

Nubia Z60S Pro: 50MP ಕ್ಯಾಮೆರಾ, 5100mAh ಬ್ಯಾಟರಿಯ ಹೊಸ ಫೋನ್ ಲಾಂಚ್

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು?

ಫೋನಿನ ಮುಂಗಡ ಬುಕ್ಕಿಂಗ್‌ ಇಂದಿನಿಂದ ಜಾಗತಿಕವಾಗಿ ನುಬಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಾರಂಭವಾಗಿದೆ. ವಿಶೇಷ ಆಫರ್‌ಗಳು ಲಭ್ಯವಿದೆ. ಆಗಸ್ಟ್ 12 ರಿಂದ ಮಾರಾಟ ಪ್ರಾರಂಭವಾಗುತ್ತದೆ. ಈ ಫೋನ್ ಈಗಾಗಲೇ ಚೀನಾದಲ್ಲಿ ಮಾರಾಟ ಪ್ರಾರಂಭಿಸಿದೆ.

  • 12GB+256GB ಸ್ಟೋರೇಜ್‌ನ ಬೆಲೆ : ರೂ. 47,620 (USD 569 / 569 GBP / 669 ಯುರೋಗಳು)
  • 12GB+512GB ಸ್ಟೋರೇಜ್‌ನ ಬೆಲೆ : ರೂ. 55,990 (USD 669 / 669 GBP / 769 ಯುರೋಗಳು)
  • 16GB+1TBGB ಸ್ಟೋರೇಜ್‌ನ ಬೆಲೆ : ರೂ. 64,355 (USD 769 / 769 GBP / 869 ಯುರೋಗಳು

ನುಬಿಯಾ Z60S ಪ್ರೊ ವಿಶೇಷತೆಗಳೇನು?

ಡಿಸ್ಪ್ಲೇ: ನುಬಿಯಾ Z60S ಪ್ರೊ ಸ್ಮಾರ್ಟ್‌ಫೋನ್ 6.8-ಇಂಚಿನ (2800 x 1260 ಪಿಕ್ಸೆಲ್‌ಗಳು) 120Hz ರಿಫ್ರೆಶ್ ರೇಟ್‌ನೊಂದಿಗೆ 1.5K OLED ಡಿಸ್ಪ್ಲೇಯನ್ನು ಹೊಂದಿದೆ. 1000Hz ವರೆಗೆ ತ್ವರಿತ ಸ್ಪರ್ಶ ಮಾದರಿ ದರ, 1200nits ವರೆಗೆ ಬ್ರೈಟ್‌ನೆಸ್ ಮತ್ತು Longxi ಗಾಜಿನ ರಕ್ಷಣೆ ಹೊಂದಿದೆ.

ಪ್ರೊಸೆಸರ್: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 2 4nm ಪ್ರೊಸೆಸರ್‌ ಹೊಂದಿದೆ. 1GHz ವರೆಗೆ Adreno 740 GPU ನೊಂದಿಗೆ ಕಾರ್ಯನಿರ್ವಹಿಸಲಿದೆ.

ಸ್ಟೋರೇಜ್: ಇದು 8GB / 12GB / 16GB LPDDR5X RAM ಜೊತೆಗೆ 256GB / 512GB / 1TB UFS 4.0 ಸ್ಟೋರೇಜ್‌ ಹೊಂದಿದೆ. MyOS 14 ಜೊತೆಗೆ Android 14 ಸಾಫ್ಟ್‌ವೇರ್‌ ಒಳಗೊಂಡಿದೆ.

ಕ್ಯಾಮೆರಾ: ಇದು ಸೋನಿ IMX906 ಸೆನ್ಸಾರ್‌ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 50MP 120-ಡಿಗ್ರಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 8MP Hynix Hi847 ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ: ನುಬಿಯಾ Z60S ಪ್ರೊ ಸ್ಮಾರ್ಟ್‌ಫೋನ್ 5100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

ಇತರ ಫೀಚರ್ಸ್: ಇದು ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಡ್ಯುಯಲ್ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G NSA/SA, ಡ್ಯುಯಲ್ 4G VoLTE, Wi-Fi 6E 802.11 ax (2.4GHz + 5GHz + 6GHz), ಬ್ಲೂಟೂತ್ 5.3, GPS (L1/L5)+ ಗ್ಲೋನಾಸ್, USB ಟೈಪ್-C, NFC ನಂತಹ ಸೌಲಭ್ಯ ಒಳಗೊಂಡಿದೆ.

Best Mobiles in India

English summary
Nubia Z60S Pro with 6.78 OLED display, Snapdragon 8 Gen 2, up to 16GB RAM, 5100mAh battery announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+