Nubia Neo 3 5G ಸರಣಿ ಫೋನ್‌ಗಳು ಬಿಡುಗಡೆ!..6,000mAh ಬ್ಯಾಟರಿ, 4083mm² VC ಕೂಲಿಂಗ್!
ಮಂಗಳವಾರ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2025 ಕಾರ್ಯಕ್ರಮದಲ್ಲಿ Nubia Neo 3 5G ಮತ್ತು Nubia Neo 3 GT 5G ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು Nubia ಕಂಪೆನಿ ಪರಿಚಯಿಸಿದೆ. ನಿರೀಕ್ಷೆಯಂತೆಯೇ Nubia Neo 3 5G ಸರಣಿ ಸ್ಮಾರ್ಟ್‌ಫೋನ್‌ಗಳು ಹಿಂಭಾಗದಲ್ಲಿ RGB ಲೈಟಿಂಗ್‌ನ್ನು ಒಳಗೊಂಡ "ಗೇಮರ್-ಕೇಂದ್ರಿತ" ಸೈಬರ್-ಮೆಕಾ ವಿನ್ಯಾಸವನ್ನು ಹೊಂದಿದ್ದು, ಡ್ಯುಯಲ್ ಶೋಲ್ಡರ್ ಟ್ರಿಗ್ಗರ್, AI ಗೇಮ್ ಸ್ಪೇಸ್ 3.0 ವೈಶಿಷ್ಟ್ಯ, 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್, ಬೈಪಾಸ್ ಚಾರ್ಜಿಂಗ್ ಫೀಚರ್ ಮತ್ತು GT ಮತ್ತು 4083mm² VC ಕೂಲಿಂಗ್ ವ್ಯವಸ್ಥೆಯಂತಹ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿವೆ. ಹಾಗಾದರೆ, ಹೊಸ Nubia Neo 3 5G ಮತ್ತು Nubia Neo 3 GT 5G ಎರಡು ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್ ಹೊಂದಿವೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Nubia Neo 3 5G ಸರಣಿ ಫೋನ್‌ಗಳ ವೈಶಿಷ್ಟ್ಯಗಳು
ಡಿಸ್‌ಪ್ಲೇ: Nubia Neo 3 5G ಸರಣಿಯಲ್ಲಿ Nubia Neo 3 5G ಫೋನ್ 120Hz ರಿಫ್ರೆಶ್ ರೇಟ್ ಮತ್ತು 1,000 nits ವರೆಗೆ ಗರಿಷ್ಠ ಹೊಳಪಿನ ಮಟ್ಟವನ್ನು ಹೊಂದಿರುವ 6.8-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇತ್ತ GT ಮಾದರಿಯ Nubia Neo 3 GT 5G ಸ್ಮಾರ್ಟ್‌ಫೋನ್ 6.8-ಇಂಚಿನ ಪೂರ್ಣ-HD+ (1080x2392 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್, 1,200Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1,300nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
ಚಿಪ್‌ಸೆಟ್ ಮತ್ತು RAM: ubia Neo 3 5G ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಯುನಿಸಾಕ್ T8300 SoC ಪ್ರೊಸೆಸರ್‌ನಂದ ಚಾಲಿತವಾಗಿದೆ. ಇತ್ತ Nubia Neo 3 GT 5G ಸ್ಮಾರ್ಟ್‌ಫೋನ್ 12GB RAM ನೊಂದಿಗೆ ಯುನಿಸಾಕ್ T9100 ಚಿಪ್‌ಸೆಟ್ ಅನ್ನು ಹೊಂದಿದೆ. ಎರಡು ಫೋನ್‌ಗಳು 12GB ವರೆಗೆ ಹೆಚ್ಚುವರಿ ವರ್ಚುವಲ್ RAM ಅನ್ನು ಬೆಂಬಲಿಸುತ್ತವೆ. ಜೊತೆಗೆ AI ಗೇಮ್ ಸ್ಪೇಸ್ 3.0 ವೈಶಿಷ್ಟ್ಯಗಳು ಮತ್ತು ಡ್ಯುಯಲ್ ಗೇಮಿಂಗ್ ಶೋಲ್ಡರ್ ಟ್ರಿಗ್ಗರ್‌ಗಳನ್ನು ಹೊಂದಿವೆ. GT ರೂಪಾಂತರವು 4083mm² VC ಕೂಲಿಂಗ್ ವ್ಯವಸ್ಥೆಯೊಂದಿಗೆ ಬರುತ್ತದೆ.

ಕ್ಯಾಮೆರಾ: ಕ್ಯಾಮೆರಾ ವಿಭಾಗದಲ್ಲಿ Nubia Neo 3 5G ಮತ್ತು Nubia Neo 3 GT 5G ಎರಡು ಸ್ಮಾರ್ಟ್‌ಫೋನ್‌ಗಳು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಸಾಮರ್ಥ್ಯದ ಹಿಂಬಾಗದ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಕ್ಯಾಮೆರಾ ಸೆಟಪ್ ಹೊಂದಿವೆ. ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಶೂಟರ್ ಅನ್ನು ನೀಡಲಾಗಿದೆ.
ಬ್ಯಾಟರಿ: Nubia Neo 3 5G ಮತ್ತು Nubia Neo 3 GT 5G ಎರಡೂ ಸ್ಮಾರ್ಟ್‌ಫೋನ್‌ಗಳು 6,000mAh ಬ್ಯಾಟರಿಯನ್ನು ಹೊಂದಿವೆ. ಇದೆ ಮೂಲ ಮಾದರಿಯು 33W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಆದರೆ GT ಆವೃತ್ತಿಯು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬೈಪಾಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುವ ವೈಶಿಷ್ಟ್ಯವಿದೆ. ಸುರಕ್ಷತೆಗಾಗಿ, ಈ ಎರಡೂ ಫೋನ್‌ಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿವೆ.
Nubia Neo 3 5G ಸರಣಿ ಫೋನ್‌ಗಳ ಬೆಲೆಗಳು
Nubia Neo 3 5G ಬೆಲೆಯನ್ನು EUR 249 (ಸುಮಾರು ರೂ. 23,000) ಎಂದು ನಿಗದಿಪಡಿಸಲಾಗಿದೆ, ಮತ್ತು Nubia Neo 3 GT 5G ಫೋನ್ ಬೆಲೆ EUR 299 (ಸುಮಾರು ರೂ. 27,700) ಗಳಾಗಿವೆ. ಇದೇ ಮಾರ್ಚ್ ಅಂತ್ಯದ ನಂತರ ಆಯ್ದ ಮಾರುಕಟ್ಟೆಗಳಲ್ಲಿ ಈ ಫೋನ್‌ಗಳು ಲಭ್ಯವಾಗಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟ್ಯಾಂಡರ್ಡ್ 5G ಆವೃತ್ತಿಯು ಸೈಬರ್ ಸಿಲ್ವರ್, ಶ್ಯಾಡೋ ಬ್ಲ್ಯಾಕ್ ಮತ್ತು ಟೈಟಾನಿಯಂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದ್ದರೆ, GT ರೂಪಾಂತರವು ಎಲೆಕ್ಟ್ರೋ ಯೆಲ್ಲೋ ಮತ್ತು ಇಂಟರ್‌ಸ್ಟೆಲ್ಲರ್ ಗ್ರೇ ಛಾಯೆಗಳಲ್ಲಿ ಬರಲಿದೆ ಎಂದು ಕಂಪೆನಿ ಹೇಳಿದೆ.


Click it and Unblock the Notifications








