'ನುಬಿಯಾ ಝಡ್‌11' ಫೋನ್‌ ವಿಮರ್ಶೆ: 'ಒನ್‌ಪ್ಲಸ್ 3'ಗೆ ನೇರ ಪ್ರತಿಸ್ಪರ್ಧಿ

Written By:

ನುಬಿಯಾ ಝಡ್11, ZTE (ಝಡ್‌ಟಿಇ)ಯ ಅತೀ ಹೆಚ್ಚು ಸ್ಟೈಲಿಶ್ ಫೋನ್ ಆಗಿದ್ದು, ಇದರ ಜೊತೆಗೆ ಬ್ಯಾಟರಿ ಕೇಂದ್ರಿತ ನುಬಿಯ ಎನ್‌1 ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಅನುಕ್ರಮವಾಗಿ ಬೆಲೆ ರೂ.29,999 ಮತ್ತು ರೂ.11,999. ಎಕ್ಸ್‌ಕ್ಲೂಸಿವ್‌ ಆಗಿ ಅಮೆಜಾನ್‌ ಇ-ಕಾಮರ್ಸ್ ಸೈಟ್‌ನಲ್ಲಿ ಲಭ್ಯ.

'ನುಬಿಯಾ ಝಡ್‌11' ಫೋನ್‌ ವಿಮರ್ಶೆ: 'ಒನ್‌ಪ್ಲಸ್ 3'ಗೆ ನೇರ ಪ್ರತಿಸ್ಪರ್ಧಿ

ಅಂದಹಾಗೆ ನುಬಿಯಾ ಝಡ್11 ನೇರವಾಗಿ ಒನ್‌ಪ್ಲಸ್ 3ಟಿ ಮತ್ತು ಹುವಾವೆಯ ಹೋನರ್ 8 ಡಿವೈಶ್‌ಗಳಿಗ ಪ್ರತಿಸ್ಪರ್ಧಿ ಆಗಿದೆ. ನುಬಿಯಾ ಝಡ್11 6GB RAM ಜೊತೆಗೆ ಬೆಝೆಲ್ ಲೆಸ್ ಡಿಸ್‌ಪ್ಲೇ ಹೊಂದಿದ್ದು, ಫ್ರೇಮ್ ಪ್ರತಿಕ್ರಿಯೆ ತಂತ್ರಜ್ಞಾನ ಹೊಂದಿದೆ. ಬಜೆಟ್ ಫ್ಲಾಗ್‌ಶಿಪ್‌ನ ನುಬಿಯಾ ಝಡ್11 ಬಗೆಗಿನ ವಿಶೇಷತೆಗಳನ್ನು ಲಾಂಚ್‌ ವೇಳೆಯಲ್ಲಿ ಗಿಜ್‌ಬಾಟ್ ಪರೀಕ್ಷೆ ನಡೆಸಿದೆ. ಅವುಗಳು ಈ ಕೆಳಗಿನಂತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಅತ್ಯಾಕರ್ಷಕ ಡಿಸ್‌ಪ್ಲೇ

5.5 ಇಂಚಿನ ಅತ್ಯಾಕರ್ಷಕ ಡಿಸ್‌ಪ್ಲೇ

ಮೊದಲಿಗೆ ತಿಳಿಯಬೇಕಾದ ವಿಷಯವೆಂದರೆ ಅಂಚುಗಳೇ ಇಲ್ಲದ 5.5 ಇಂಚಿನ ಸ್ಕ್ರೀನ್‌ ಹೊಂದಿದ್ದು, 2.5D ಆರ್ಕ್‌ ಎಡ್ಜ್‌ ಟೆಂಪರ್ಡ್ ಗಾಜು ಹೊಂದಿದೆ. ಶೇ.81 ರಷ್ಟು ಬಾಡಿ ಇಂದ ಸ್ಕ್ರೀನ್‌ ರೇಟಿಯೋ ಹೊಂದಿದ್ದು, ಸಂಪೂರ್ಣ ಎಚ್‌ಡಿ ರೆಶಲ್ಯೂಶನ್ ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ ನುಬಿಯಾ ಫ್ರೇಮ್ ಪ್ರತಿಕ್ರಿಯೆ ತಂತ್ರಜ್ಞಾನ ಹೊಂದಿದ್ದು, ಕಣ್ಣುಗಳಿಗೆ ಆಕರ್ಷಕ ಅನಿಮೇಷನ್ ಎಫೆಕ್ಟ್ ಮತ್ತು ಹೊಸ ಮಾದರಿಯ ಟಚ್‌ ಸ್ಕ್ರೀನ್ ಪ್ರತಿಕ್ರಿಯೆ ನೀಡುತ್ತದೆ. ಸ್ಮಾರ್ಟ್‌ಫೋನ್ ಎಡ್ಜ್‌ಗಳಿಲ್ಲದ ಪೂರ್ಣ ಡಿಸ್‌ಪ್ಲೇ ಹೊಂದಿದ್ದು, ಇತರೆ ಸ್ಮಾರ್ಟ್‌ಫೋನ್‌ಗಳ ಫೀಚರ್‌ಗಳನ್ನು ಆಕ್ಸೆಸ್ ಮಾಡಬಹುದು.

1080p ಸ್ಕ್ರೀನ್‌ನಲ್ಲಿ ನುಬಿಯಾ ಝಡ್‌11(Nubia Z11) ವೀಡಿಯೊ ನೋಡುವಲ್ಲಿ ಮತ್ತು ಗೇಮ್ ಆಡುವುದರಲ್ಲಿ ಉತ್ತಮ ಅನುಭವ ನೀಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೊಗಸಾದ ವಿನ್ಯಾಸ

ಸೊಗಸಾದ ವಿನ್ಯಾಸ

ನುಬಿಯಾ ಝಡ್‌11, ಏರ್‌ಕ್ರ್ಯಾಫ್ಟ್ ಗ್ರೇಡ್ ಅಲ್ಯುಮಿನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟಿದ್ದು, ಹೆಚ್ಚು ಸ್ವಚ್ಛ ಮತ್ತು ಪ್ರೀಮಿಯಂ ವಿನ್ಯಾಸ ಆಫರ್ ಮಾಡಿದೆ. 5.5 ಇಂಚಿನ ಡಿಸ್‌ಪ್ಲೇಯ ಡಿವೈಸ್ ಹೆಚ್ಚು ಗಟ್ಟಿಯಾದ ಮತ್ತು ಅಚ್ಚುಕಟ್ಟಾದ ಫೀಲ್ ನೀಡುತ್ತದೆ.

ಸ್ಮಾರ್ಟ್‌ಫೋನ್ ತುಕ್ಕು ನಿರೋಧಕವಾಗಿದ್ದು, ಆಕ್ಸಿಡೇಟಿವ್ ವಿರೋಧಿ ಆಗಿದ್ದು, ಸುತ್ತಮುತ್ತಲ ಪರಿಸರದಿಂದ ಸುರಕ್ಷತೆ ನೀಡುತ್ತದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈ ವಿನ್ಯಾಸ ಮತ್ತು ಫೀಚರ್ ಇದೇ ಮೊದಲ ಬಾರಿ.

ಹೈ ಎಂಡ್ ಹಾರ್ಡ್‌ವೇರ್

ಹೈ ಎಂಡ್ ಹಾರ್ಡ್‌ವೇರ್

ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ನುಬಿಯಾ ಝಡ್11 ಕ್ವಾಲ್ಕಂ ಸ್ನಾಪ್‌ಡ್ರಾಗನ್ 820 ಸಿಪಿಯು ಜೊತೆಗೆ 6GB RAM ಹೊಂದಿದೆ. ಸಾಮಾನ್ಯವಾಗಿ ಇದೇ ರೀತಿಯ ಕಾನ್ಫಿಗರೇಷನ್ ಅನ್ನು ಒನ್‌ಪ್ಲಸ್ 3 ನಲ್ಲಿ ನೋಡಬಹುದಿತ್ತು. ಆದರೆ ಇದರ ಬದಲಾಗಿ ಈಗ ಒನ್‌ಪ್ಲಸ್ 3ಟಿ ಅಪ್‌ಗ್ರೇಡೆಡ್ ಲೇಟೆಸ್ಟ್ ಸ್ನಾಪ್‌ಡ್ರಾಗನ್ 821 ಸಿಪಿಯು ಮತ್ತು 6GB RAM ಆಫರ್ ಮಾಡುತ್ತಿದೆ. ಇದೂ ಸಹ ಉತ್ತಮ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ರೂ.30,000 ಕ್ಕಿಂತ ಕಡಿಮೆಯಲ್ಲಿ ಲಭ್ಯ ಎಂದು ರಿವೀವ್‌ ವೇಳೆ ತಿಳಿಸಿದ್ದೆವು.

ನುಬಿಯಾ ಝಡ್11 34GB ಇನ್‌ಬಿಲ್ಟ್ ಮೆಮೊರಿ ಆಫರ್ ಮಾಡಿದ್ದು, 200GB ವರೆಗೆ ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸಬಹುದು.

ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಅಲ್ಲಾ?

ಲೇಟೆಸ್ಟ್ ಆಂಡ್ರಾಯ್ಡ್ ಓಎಸ್ ಅಲ್ಲಾ?

ನುಬಿಯಾ ಝಡ್11 ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದ್ದು, ಲೇಟೆಸ್ಟ್ ಆಂಡ್ರಾಯ್ಡ್ 7.0 ನ್ಯೂಗಾ ಓಎಸ್ ಹೊಂದಿಲ್ಲ.

ಆದರೆ ಆಂಡ್ರಾಯ್ಡ್ ಸ್ಕಿನ್-ವಿ4.0 ಕ್ಲಿಯರ್ ಬಳಕೆದಾರರ ಇಂಟರ್ಫೇಸ್, ಗೆಸ್ಚರ್, ಸಪೋರ್ಟ್ ಮತ್ತು ನಿಫ್ಟಿ ತಂತ್ರಾಂಶ ಆಫರ್ ಮಾಡುತ್ತದೆ.

ಡೀಸೆಂಟ್ ಕ್ಯಾಮೆರಾ ಹಾರ್ಡ್‌ವೇರ್

ಡೀಸೆಂಟ್ ಕ್ಯಾಮೆರಾ ಹಾರ್ಡ್‌ವೇರ್

ನುಬಿಯಾ ಝಡ್11 16MP ಹಿಂಭಾಗ ಕ್ಯಾಮೆರಾ ಜೊತೆಗೆ ನುಬಿಯಾ ನಿಯೋವಿಸನ್ 6.0 ಫೀಚರ್ ಹೊಂದಿದ್ದು, ಕಂಪನಿ ಡಿಎಸ್‌ಎಲ್‌ಆರ್ ಫೋಟೋಗ್ರಫಿ ಸಿಸ್ಟಮ್‌ ಅನ್ನು ಈ ಮೊಬೈಲ್‌ಗೆ ನೀಡಿದೆ.

ಟ್ರೈಪಾಡ್ ಇಲ್ಲದೇ ದೂರದ ದೃಶ್ಯ ಸೆರೆಹಿಡಿಯಲು OIS (Optical Image Stabilizer), nubia HIS (Hand-Held Image Stabilization) EIS (Electronic Image Stabilization) ಕ್ಯಾಮೆರಾ ಫೀಚರ್ ಅನ್ನು ಅಳವಡಿಸಿದೆ. ಕ್ಯಾಮೆರಾ ಸ್ಲೋ ಮೋಶನ್, ಟೈಮ್‌ ಲ್ಯಾಪ್ಸ್, ಪ್ರೊ ಮೋಡ್ ಮತ್ತು ಫಿಲ್ಟರ್ ಕ್ಲೋನ್ ಕ್ಯಾಮೆರಾ, ಮ್ಯಾಕ್ರೊ ಮೋಡ್ ಇತರೆ ಫೀಚರ್‌ಗಳನ್ನು ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Nubia Z11 First Impressions: Impressive Bezel-less Design and High-End Hardware. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot