ಕೈಗೆಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್'ಫೋನ್!: ಫೀಚರ್ಸ್ ನೋಡಿದ್ರೆ ಖರೀದಿಸುವುದು ಗ್ಯಾರಂಟಿ!

By Precilla Dias
|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಹುದಿನಗಳಿಂದಲೇ ಪರಿಚಿತವಾಗಿರುವ ಜೆಡ್ ಟಿಇ ಕಂಪನಿ, ಹಿಂದೆ ಸಣ್ಣ ಫೋನ್'ಗಳನ್ನಷ್ಟೇ ತಯಾರಿಸುತ್ತಿತ್ತು. ಆದರೆ ಇದೇ ಮೊದಲ ಬಾರಿ ಸ್ಮಾರ್ಟ್ ಫೋನ್ ತಯಾರಿಕೆಯೆಡೆ ಒಲವು ತೋರಿಸಿದ್ದು, ಈ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್'ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜಡ್ ಟಿಇ ತನ್ನ ಸ್ಮಾರ್ಟ್'ಫೋನ್'ಗಳನ್ನು ನುಬಿಯಾ ಎಂಬ ಬ್ರಾಂಡ್ ನಡಿಯಲ್ಲಿ ಮಾರುಕಟ್ಟೆಗೆ ಬಿಡಲಿದೆ.

ಕೈಗೆಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್'ಫೋನ್!

ಸದ್ಯ ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಜೆಡ್ ಸರಣಿ’ಯ ಸ್ಮಾರ್ಟ್'ಫೋನುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನುಬಿಯಾ ಘೋಷಣೆ ಮಾಡಿದೆ. ಹೀಗಾಗಿ 'ನುಬಿಯಾ ಜೆಡ್ 17 ಮಿನಿ’ ಸ್ಮಾರ್ಟ್'ಫೋನ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ ಸದ್ಯ ಸ್ಮಾರ್ಟ್'ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್'ನಲ್ಲಿರುವ ಡ್ಯುಯಲ್ ಕ್ಯಾಮೆರಾ ಫೀಚರ್.

'ನುಬಿಯಾ ಜೆಡ್ 17 ಮಿನಿ’ ಫೋನಿನ ಹಿಂಬದಿಯಲ್ಲಿ 13 ಮೆಗಾಪಿಕ್ಸಲ್'ನ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದರ ಲೆನ್ಸ್ ಮೋನೋಕ್ರೋಮ್ ಆಗಿದ್ದರೆ ಮತ್ತೊಂದು ಲೆನ್ಸ್ ಆರ್'ಜಿಬಿಯದ್ದಾಗಿದೆ. ಸೋನಿಯ ಐಎಂಕೆ258 ಸೆನ್ಸಾರ್'ನ್ನೂ ಅಳವಡಿಸಿರುವುದು ಈ ಕ್ಯಾಮೆರಾದ ಮತ್ತೊಂದು ಪ್ರಮುಖ ಆರ್ಕಷಣೆ ಎಂದರೆ ತಪ್ಪಾಗುವುದಿಲ್ಲ. ಇದು ನೀವು ತೆಗೆಯುವ ಚಿತ್ರದ ಗುಣಮಟ್ಟವನ್ನು ಉತ್ತಮ ಪಡಿಸಲಿದೆ.

ಇಷ್ಟೇ ಅಲ್ಲದೆ ಇದರಲ್ಲಿರುವ ಕ್ಯಾಮೆರಾ ಆಲ್ಟ್ರಾ ಫಾಸ್ಟ್ ಫೋಕಸ್ ಫೀಚರ್ ಸಹ ಹೊಂದಿದ್ದು, ಡಿಎಸ್ಎಲ್ಆರ್ ಕ್ಯಾಮೆರಾಗಳಂತೆ ಅಪರ್ಚರ್ ಅಡ್ಜಸ್ಟಮೆಂಟ್ ಕೂಡಾ ಮಾಡಬಹುದಾಗಿದೆ. ಎಫ್/1.0 ನಿಂದ ಎಫ್/16.0 ವರೆಗೂ ಬದಲಾವಣೆಯನ್ನು ಮಾಡುವ ಅವಕಾಶ ಇದರಲ್ಲಿದೆ. ಇದರಿಂದ ಕ್ಲಿಕ್ಕಿಸಿದ ಫೋಟೋಗಳು ಶಾರ್ಪ್ ಹಾಗೂ ಕ್ರಿಸ್ಪಿಯಾಗಿ ಇರಲಿವೆ.

ಓದಿರಿ: ಕ್ಸಿಯೊಮಿ ಮಿ 6: ಹೊಸ ವರದಿ ತೋರಿಸಿದೆ ವರ್ಟಿಕಲ್ ಡುಯಲ್ ಕ್ಯಾಮೆರಾ ಸೆಟಪ್, ಸುಂದರವಾದ ಮುಂದಿನ ಭಾಗ ಮತ್ತು ಇತ್ಯಾದಿ

ಇನ್ನು ಸೆಲ್ಫೀ ಪ್ರಿಯರಿಗಾಗಿ ಸೆಲ್ಫಿ ತೆಗೆಯುವ ಸಲುವಾಗಿಯೇ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಇದರಲ್ಲಿ 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಅಳವಡಿಸಲಾಗಿದೆ. ಇದರಿಂದ ಗೆಳೆಯರೊಂದಿಗೆ ಗ್ರೂಪ್ ಸೆಲ್ಫಿ ತೆಗೆಸಲು ತುಂಬಾ ಉಪಯೋಗ ಬೀಳುತ್ತದೆ.

ಕ್ಯಾಮೆರಾವನ್ನು ಹೊರತುಪಡಿಸಿ 'ನುಬಿಯಾ ಜೆಡ್ 17 ಮಿನಿ’ ಫೋನು, ಫುಲ್ ಹೆಚ್ಡಿ 5.2 ಇಂಚಿನ 2.5ಡಿ ಕರ್ವಡ್ ಗ್ಲಾಸ್ ಡಿಸ್ಪ್ಲೇಯನ್ನು ಹೊಂದಿದ್ದು, ವೇಗದ ಕಾರ್ಯಚರಣೆಗಾಗಿ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652/653 ಪ್ರೊಸೆಸರ್ ಜೊತೆ ಗ್ರಾಫಿಕ್ಸ್ ಗಾಗಿ ಆಡ್ರಿನೋ 510 ಜಿಪಿಯು ಅಳವಡಿಸಲಾಗಿದೆ. ಈ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 4ಜಿಬಿ ರಾಮ್/6 ಜಿಬಿ ರಾಮ್ ನ ಹಾಗೂ 64 ಜಿಬಿ ಇಂಟರ್ನಲ್ ಮೊಮೊರಿಯೊಂದಿಗೆ ಲಭ್ಯವಿರಲಿದೆ. ಇನ್ನು ಎಸ್'ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 200 ಜಿಬಿ ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ.

ಆಂಡ್ರಾಯ್ಡ್ 6.0ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ 'ನುಬಿಯಾ ಜೆಡ್ 17 ಮಿನಿ’ ಫೋನ್'ನಲ್ಲಿ ಡ್ಯುಯಲ್ ಹೈಬಿಡ್ ಸಿಮ್ ಹಾಕಬಹುದಾಗಿದೆ. ಅಲ್ಲದೇ ಇದು 4ಜಿ ವೋಲ್ಟ್ ಕೂಡಾ ಸಫೋರ್ಟ್ ಮಾಡಲಿದೆ. ಇದರೊಂದಿಗೆ 2950 ಎಂಎಹೆಚ್ ಬ್ಯಾಟರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ. ಎಪ್ರಿಲ್ 13ರ ಬಳಿಕ ಚೀನಾದಲ್ಲಿ ಬಿಡುಗಡೆಗೊಳ್ಳಲಿರುವ ಈ ಸ್ಮಾರ್ಟ್ ಫೋನ್ ಕೇವಲ ರೂ.18,830 ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಅತ್ಯುತ್ತಮ ಫೀಚರ್'ಗಳಿದ್ದರೂ ಕೈಗೆಟಕುವ ಬೆಲೆಯಲ್ಲಿ ಸಿಗಲಿರುವ ಈ ಸ್ಮಾರ್ಟ್'ಫೋನ್ ಖರೀದಿಸಲು ಗ್ರಾಹಕರು ಮುಗಿಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಈ ಫೋನ್ ಬ್ಲಾಕ್, ಬ್ಲಾಕ್ ಅಂಡ್ ಗ್ಲೋಲ್ಡ್, ಗೋಲ್ಡ್ ಮತ್ತು ರೆಡ್ ಕಲರ್'ನಲ್ಲಿ ಸಿಗಲಿದೆ.

Best Mobiles in India

Read more about:
English summary
ZTE's sub-brand Nubia has just announced its latest smartphone in the 'Z Series' at an event in China. Dubbed as Nubia Z17 Mini, the smartphones comes with dual 13MP cameras, 4GB/6GB RAM and more. The smartphone is priced at 1699 yuan (approx Rs. 16,000) for the 4GB RAM while the 6GB RAM will cost 1999 yuan (approx Rs. 18,830).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X