ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ Nubia Z70S Ultra ಸ್ಮಾರ್ಟ್‌ಫೋನ್ ಬಿಡುಗಡೆ!
ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನುಬಿಯಾ ತನ್ನ ಬಹುನಿರೀಕ್ಷಿತ Nubia Z70S Ultra ಸ್ಮಾರ್ಟ್‌ಫೋನ್ ಅನ್ನು ಇಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ಕ್ಯಾಮೆರಾ ಮತ್ತು ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ನಂತಹ ಅತ್ಯಾಧುನಿನ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಪರಿಚಯಗೊಂಡಿದ್ದು, ಗ್ರಾಹಕರನ್ನು ಆಕರ್ಷಿಸುವಂತಹ 6.85-ಇಂಚಿನ 1.5K ಡಿಸ್‌ಪ್ಲೇ, 6,600mAh ಬ್ಯಾಟರಿ ಮತ್ತು ಮೂರು ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗಾದರೆ, ಹೊಸ Nubia Z70S Ultra ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Nubia Z70S Ultra ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು,
Nubia Z70S Ultra ಸ್ಮಾರ್ಟ್‌ಫೋನ್ 6.85-ಇಂಚಿನ 1.5K (1,216×2,688 ಪಿಕ್ಸೆಲ್‌ಗಳು) BOE Q9+ OLED ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 144Hz ರಿಫ್ರೆಶ್ ದರ, 960Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ, 2,000 nits ವರೆಗೆ ಗರಿಷ್ಠ ಹೊಳಪು, 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಮತ್ತು 2,592Hz PWM ಡಿಮ್ಮಿಂಗ್ ಸಾಮರ್ಥ್ಯಗಳನ್ನು ಒಳಗೊಂಡಿದೆ. ಕಾರ್ಯಕ್ಷಮತೆಗಾಗಿ, ಇದು 3nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ನಿಂದ 16GB ವರೆಗೆ LPDDR5X RAM ಮತ್ತು 512GB ವರೆಗೆ UFS 4.0 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ. ಇದು ನೆಬ್ಯುಲಾ AIOS 1.5 ನೊಂದಿಗೆ ಆಂಡ್ರಾಯ್ಡ್ 15-ಆಧಾರಿತದೊಂದಿಗೆ ಬರುತ್ತದೆ. ಇದಲ್ಲದೆ, ನುಬಿಯಾ Z70S ಅಲ್ಟ್ರಾ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ಪ್ರಮಾಣೀಕರಣವನ್ನು ಪಡೆದುಕೊಂಡಿದೆ, ಇದು ಬಾಳಿಕೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ Nubia Z70S Ultra ಸ್ಮಾರ್ಟ್‌ಫೋನ್ ಗಮನಾರ್ಹವಾದ ಮೂರು ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 120-ಡಿಗ್ರಿ ವೀಕ್ಷಣಾ ಕ್ಷೇತ್ರವನ್ನು ಹೊಂದಿರುವ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಅತ್ಯುತ್ತಮ ಜೂಮ್ ಸಾಮರ್ಥ್ಯಕ್ಕಾಗಿ OIS ನೊಂದಿಗೆ 64-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಸೇರಿವೆ. ಇದರೊಂದಿಗೆ ಫ್ಲಿಕರ್ ಮತ್ತು ಲೇಸರ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಅಂಡರ್-ಡಿಸ್ಪ್ಲೇ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ವಿಶೇಷವಾಗಿ, ಈ ಫೋನ್ ಡ್ಯುಯಲ್-ಸ್ಟೇಜ್ ಕಂಟ್ರೋಲ್‌ನೊಂದಿಗೆ ಭೌತಿಕ ಮೆಕ್ಯಾನಿಕಲ್ ಶಟರ್ ಬಟನ್ ಅನ್ನು ಹೊಂದಿದೆ, ಇದು ಛಾಯಾಗ್ರಹಣದ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Nubia Z70S Ultra ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,600mAh ಬ್ಯಾಟರಿಯನ್ನು ಪ್ಯಾಕ್ ಹೊಂದಿದ್ದು, ಇದರ 80W ವೇಗದ ಚಾರ್ಜಿಂಗ್ ಸೌಲಭ್ಯವು ಫೋನ್ ಅನ್ನು ಕ್ಷಿಪ್ರವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.. ಸಂಪರ್ಕ ಆಯ್ಕೆಗಳಲ್ಲಿ 5G, ಡ್ಯುಯಲ್ 4G VoLTE, Wi-Fi 7, ಬ್ಲೂಟೂತ್ 5.4, GPS, GLONASS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು DTS:X ಅಲ್ಟ್ರಾ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಭದ್ರತೆಗಾಗಿ, ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಈ ಫೋನ್‌ಗಾಗಿ ವಿಶೇಷ ಅಲ್ಟ್ರಾ ರೆಟ್ರೊ ಕಿಟ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ, ಇದು ವಿನ್ಯಾಸ ಮತ್ತು ಬಳಕೆಯ ಅನುಭವವನ್ನು ಇನ್ನಷ್ಟು ವಿಶಿಷ್ಟಗೊಳಿಸುವ ನಿರೀಕ್ಷೆಯಿದೆ. ಇನ್ನು ಹ್ಯಾಂಡ್‌ಸೆಟ್ 164.3×77.1×8.6mm ಗಾತ್ರವನ್ನು ಮತ್ತು 228g ತೂಗುತ್ತದೆ.
Nubia Z70S Ultra ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಅಮೆರಿಕದಲ್ಲಿ 12GB RAM ಮತ್ತು 256GB ಸಂಗ್ರಹಣೆಯ ಮೂಲ ಮಾದರಿಯ Nubia Z70S Ultra ಸ್ಮಾರ್ಟ್‌ಫೋನ್ ಬೆಲೆ $779 (ಸುಮಾರು ರೂ. 66,500) ರಿಂದ ಪ್ರಾರಂಭವಾಗುತ್ತದೆ. 16GB RAM ಮತ್ತು 512GB ಸಂಗ್ರಹಣೆಯ ಉನ್ನತ ಮಾದರಿಯ ಬೆಲೆ $869 (ಸುಮಾರು ರೂ. 74,200) ಆಗಿದೆ. ಅಮೆರಿಕದಲ್ಲಿ ಮೇ 28 ರವರೆಗೆ ಮುಂಗಡ-ಆದೇಶ ಲಭ್ಯವಿದ್ದು, ಆಂಟಿಕ್ ಬ್ರೌನ್ ಮತ್ತು ಕ್ಲಾಸಿಕ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿರುತ್ತದೆ.ಇನ್ನು ಯುಕೆ ಮತ್ತು ಆಯ್ದ ಯುರೋಪಿಯನ್ ದೇಶಗಳಲ್ಲಿಯೂ ಈ ಫೋನ್ ಬಿಡುಗಡೆಯಾಗಿದ್ದು, ಅಲ್ಲಿಯೂ ವಿಭಿನ್ನ ಬೆಲೆ ಮತ್ತು ಸಂಗ್ರಹಣೆಯ ಆಯ್ಕೆಗಳು ಲಭ್ಯವಿವೆ. ಯುಕೆ ಯಲ್ಲಿ 12GB RAM ಮಾದರಿಯ ಬೆಲೆ GBP 659 (ಸುಮಾರು ರೂ. 74,900) ಮತ್ತು 16GB RAM ಮಾದರಿಯ ಬೆಲೆ GBP 769 (ಸುಮಾರು ರೂ. 87,400) ಆಗಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ 12GB + 256GB ಮಾದರಿಗೆ EUR 769 (ಸುಮಾರು ರೂ. 73,600) ಮತ್ತು 16GB + 512GB ಮಾದರಿಗೆ EUR 869 (ಸುಮಾರು ರೂ. 83,100) ಬೆಲೆಯನ್ನು ನಿಗದಿಪಡಿಸಲಾಗಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ ಮತ್ತು ಬೆಲೆ ಎಷ್ಟು ಎಂಬ ಕುರಿತಂತೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








