ಬರಾಕ್ ಒಬಾಮಾರಿಗೆ ಬ್ಲ್ಯಾಕ್‌ಬೆರ್ರಿ ಫೋನ್‌ನಿಂದ ತಲೆನೋವಂತೆ!

By Shwetha
|

ಬರಾಕ್ ಒಬಾಮಾ ತಮ್ಮ ಬ್ಲ್ಯಾಕ್‌ಬೆರ್ರಿ ಫೋನ್‌ನೊಂದಿಗೆ ಯಶಸ್ಸಿನ ಪುಟಗಳನ್ನು ಬರೆದಿದ್ದಾರೆ ಎಂಬುದಾಗಿ ಮಾಧ್ಯಮಗಳು ಘೋಷಿಸಿದಾಗ ಡಿವೈಸ್‌ನ ಭದ್ರೆತೆಯತ್ತ ಎಲ್ಲರ ಕಣ್ಣು ಹರಿದಾಡಿದ್ದಂತೂ ಸುಳ್ಳಲ್ಲ. ಅಮೇರಿಕಾ ಅಧ್ಯಕ್ಷರ ಸಂವಹನ ಕ್ರಿಯೆಯನ್ನೇ ಗುಪ್ತವಾಗಿರಿಸಿರುವ ಬ್ಲ್ಯಾಕ್‌ಬೆರ್ರಿ ಡಿವೈಸ್‌ನ ಗುಟ್ಟು ತಿಳಿದುಕೊಳ್ಳುವ ಕಾತರ ಎಲ್ಲರಲ್ಲೂ ಇದ್ದೇ ಇದೆ. ಅದಾಗ್ಯೂ ಒಬಾಮಾರ ಬ್ಲ್ಯಾಕ್‌ಬೆರ್ರಿ ಡಿವೈಸ್ ಕೂಡ ಕೆಲವೊಂದು ಅಪಾಯಗಳನ್ನು ಹೊಂದಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಈ ಫೋನ್‌ನಲ್ಲಿ ಇರುವ ಸಣ್ಣ ದೋಷ ಕೂಡ ಒಬಾಮಾರ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು ಅಂತೆಯೇ ಸರಕಾರದ ರಹಸ್ಯಗಳನ್ನು ಸೋರಿಕೆ ಮಾಡಬಹುದು ಬನ್ನಿ ಅದು ಹೇಗೆ ಎಂಬುದನ್ನೇ ಇಂದಿಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ.

#1

#1

ಪ್ರತಿಯೊಂದು ಮೊಬೈಲ್ ಕೂಡ ಅನನ್ಯ ಸೀರಿಯಲ್ ಸಂಖ್ಯೆಯನ್ನು ಹೊಂದಿದ್ದು, ಇದನ್ನು IMEI ಅಥವಾ MEID ಎಂದು ಕರೆಯಲಾಗುತ್ತದೆ. ಸಮೀಪದ ಸೆಲ್ ಟವರ್ ಮೂಲಕ ಕ್ಲಿಯರ್ ಪಠ್ಯ ವಿಧಾನದಲ್ಲಿ ಈ ಸಂಖ್ಯೆಯನ್ನು ಟ್ರಾನ್ಸ್‌ಮಿಟ್ ಮಾಡಬಹುದಾಗಿದೆ ಇದರಿಂದ ಡಿವೈಸ್ ಅನ್ನು ಎನ್‌ಕ್ರಿಪ್ಟ್ ಕೂಡ ಮಾಡಬಹುದು.

#2

#2

ಸಾಮಾನ್ಯ ಟ್ರಿಗರ್‌ಫಿಶ್ IMEI ಅನ್ನು ಸಾಮಾನ್ಯ ಡಿವೈಸ್‌ಗಳಲ್ಲಿ ಬಳಸಲಾಗುತ್ತಿದ್ದು ಕಾನೂನು ಜಾರಿ ಮತ್ತು ಇಂಟಲಿಜೆನ್ಸಿ ಏಜೆನ್ಸಿಗಳು ಈ ಪರಿಕರವನ್ನು ಬಳಸುತ್ತವೆ. ಈ ಮಾದರಿಯ ಡಿವೈಸ್ ಟ್ರಿಕ್‌ಗಳನ್ನು ಸೆಲ್‌ ಫೋನ್‌ಗಳ ಸೀರಿಯಲ್ ನಂಬರ್‌ಗಳನ್ನು ಮತ್ತು ಇತರ ಮಾಹಿತಿಗಳನ್ನು ಟ್ರಾನ್ಸ್‌ಮೀಟಿಂಗ್ ಮಾಡಲು ಮೋಸದಿಂದ ಬಳಸಲಾಗುತ್ತದೆ.

#3

#3

ಹೆಚ್ಚು ದುಬಾರಿ ಎನ್ನಲಾದ ಬ್ರ್ಯಾಂಡ್ ಹೆಸರು ಟ್ರಿಗ್ಗರ್‌ಫಿಶ್ ಡಿವೈಸ್‌ಗಳನ್ನು ಹ್ಯಾರೀಸ್ ಕಾರ್ಪೊರೇಶನ್ ತಯಾರಿಸುತ್ತದೆ. ಅಂತೆಯೇ ಸರಕಾರಿ ಏಜೆನ್ಸಿಗಳಿಗೆ ಮಾತ್ರವೇ ಇದನ್ನು ಮಾರುತ್ತದೆ. ವಿದೇಶಿ ಸರಕಾರಗಳು ಇದೇ ಮಾದರಿಯ ತಂತ್ರಜ್ಞಾನವನ್ನು ಹೊಂದಿರುತ್ತವೆ.

#4

#4

ಪತ್ತೆಹಚ್ಚುವ ನಿಖರ ಉಪಕರಣದ ಮೂಲಕ ಒಬಾಮಾರ ಸ್ಮಾರ್ಟ್‌ಫೋನ್ ತನ್ನ IMEI ಸೀರಿಯಲ್ ಸಂಖ್ಯೆಯನ್ನು ಯಾರಿಗಾದರೂ ಸಂವಹಿಸುತ್ತದೆ. ಒಬಾಮಾರ ಕಠಿಣ ಭದ್ರತೆಯಿಂದಾಗಿ ಅಧ್ಯಕ್ಷರ ಬ್ಲ್ಯಾಕ್‌ಬೆರ್ರಿ ಮಾತ್ರವೇ ಈ ಟ್ರಿಕ್‌ಗೆ ಒಳಗಾಗಬೇಕೆಂದೇನಿಲ್ಲ. ಇದರ ಬದಲಿಗೆ ಸಾವಿರಾರು ಬ್ಲ್ಯಾಕ್‌ಬೆರ್ರಿಗಳು ಟ್ರಿಕ್‌ಗೆ ಒಳಗಾಗಬಹುದು.

#5

#5

ಅದಾಗ್ಯೂ ಅವರು ಶ್ವೇತಭವನದಿಂದ ಹೊರಗಿದ್ದ ಸಂದರ್ಭದಲ್ಲಿ ಹೆಚ್ಚು ತಾಳ್ಮೆಯಿಂದ ಕಾಯುವ ಮೂಲಕ ಒಬಾಮಾರ IMEI ಸಂಖ್ಯೆ ಯಾವುದು ಎಂಬುದನ್ನು ಪತ್ತೆಹಚ್ಚುವುದು ಅಷ್ಟು ಕಷ್ಟಕರವಾಗಲಿಕ್ಕಿಲ್ಲ

#6

#6

ಇವರ IMEI ಸಂಖ್ಯೆಯನ್ನು ಓದಿದವರು ಯಾರು ಬೇಕಾದರೂ ಗೌಪ್ಯ ಮಾಹಿತಿಗಳನ್ನು ಎಗರಿಸಿಕೊಳ್ಳಬಹುದು ಅಂತೆಯೇ IMEI ಸಂಖ್ಯೆಯ ಮೂಲಕ ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದಾಗಿದೆ ಕೂಡ.

#7

#7

ಈ ಸಮಸ್ಯೆಗೆ ಇರುವ ಸುಲಭ ಪರಿಹಾರವೆಂದರೆ ಅಧ್ಯಕ್ಷರು ಹೊಸ ಫೋನ್ ಅನ್ನು ಪಡೆದುಕೊಳ್ಳುವ ಮೂಲಕ ತಮ್ಮ IMEI ಸೀರಿಯಲ್ ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸುವುದಾಗಿದೆ. ಆದರೆ ಇದರಲ್ಲೂ ಕೆಲವೊಮ್ಮೆ ತೊಡಕು ಉಂಟಾಗಬಹುದು. ಹೊಸ IMEI ಸಂಖ್ಯೆ ಒಮ್ಮೆ ಕಾಣಿಸಿಕೊಳ್ಳುವುದು ನಂತರ ಹೊಸದು ಆ ಜಾಗವನ್ನು ಪ್ರವೇಶಿಸುವುದು ಹೀಗೆ ಆಗುತ್ತಲೇ ಇರುವುದು ಫೋನ್ ಬಳಸುವ ವ್ಯಕ್ತಿ ಒಬ್ಬನೇ ಎಂಬುದನ್ನು ತೋರಿಸುತ್ತದೆ.

#8

#8

ಇನ್ನು ಇದಕ್ಕೆ ಪರಿಹಾರವೆಂದರೆ ಅಧ್ಯಕ್ಷರ ತಂಡದಲ್ಲಿರುವ ಬ್ಲ್ಯಾಕ್‌ಬೆರ್ರಿ ಬಳಸುವವರೂ ಕೂಡ ಇದೇ ರೀತಿ IMEI ಸಂಖ್ಯೆಯನ್ನು ಆಗಾಗ್ಗೆ ಬದಲಾಯಿಸುವುದಾಗಿದೆ. ಇದರಿಂದ ಗುಪ್ತಚರರಿಗೆ ಒಬ್ಬರ ಮೇಲೆಯೇ ಕಣ್ಣಿಡಲು ಅಸಾಧ್ಯವಾಗುತ್ತದೆ.

#9

#9

ಪ್ರತೀ ವಾರವೂ ಹೊಸ ಹೊಸ ಬ್ಲ್ಯಾಕ್‌ಬೆರ್ರಿಯನ್ನು ಬದಲಾಯಿಸುವುದು ಒಬಾಮಾ ಮತ್ತು ಅವರ ತಂಡದವರಿಗೆ ದುಬಾರಿಯಾಗಿ ಪರಿಣಮಿಸಬಹುದು. ಶ್ವೇತ ಭವನದ ಟೆಕ್ ಸಿಬ್ಬಂದಿಗೆ ಅಧ್ಯಕ್ಷರ ಸ್ಥಾನ ಗೌಪ್ಯತೆಯನ್ನು ಕಡಿಮೆ ದರದಲ್ಲಿ ಸಂರಕ್ಷಿಸುವುದು ಇರುವ ಮಾರ್ಗವಾಗಿದೆ.

#10

#10

ಶ್ವೇತಭವನದ ಟೆಕ್ ಜನರು ಬ್ಲ್ಯಾಕ್‌ಬೆರ್ರಿ ಬಳಸುತ್ತಿರುವ ತಂಡದ ಫೋನ್‌ಗಳನ್ನು ಶಫಲ್ ಮಾಡಬೇಕು. ಪ್ರತಿಯೊಬ್ಬರ ಫೋನ್ ತೆಗೆದುಕೊಂಡು ಅದನ್ನು ಮಿಕ್ಸ್ ಮಾಡುವುದಾಗಿದೆ ಫ್ಯಾಕ್ಟ್ರಿ ಡೀಫಾಲ್ಟ್‌ಗೆ ಸಾಫ್ಟ್‌ವೇರ್ ರೀಸ್ಟೋರ್ ಮಾಡುವುದು, ಪ್ರತಿಯೊಬ್ಬರೂ ಹೊಸ ಫೋನ್ ಬಳಸಿಕೊಂಡಂತಾಗುತ್ತದೆ.

#11

#11

ಕೆಲವೇ ನಿಮಿಷಗಳಲ್ಲಿ, ಶ್ವೇತ ಭವನದ ಇಮೇಲ್ ಸರ್ವರ್‌ಗಳೊಂದಿಗೆ ಫೋನ್‌ಗಳು ಸಿಂಕ್ರೊನೈಜ್‌ಗೊಳ್ಳಬಹುದು ಅಂತೆಯೇ ಹಳೆಯ ಡಿವೈಸ್‌ನಲ್ಲಿದ್ದ ಮಾಹಿತಿಗಳು ಮತ್ತು ಇಮೇಲ್ ಅನ್ನು ಪ್ರವೇಶಿಸಲು ಹೊಸ ಡಿವೈಸ್‌ಗಳಿಗೆ ಸಾಧ್ಯವಾಗುತ್ತದೆ.

#12

#12

ಹೊಸ ಸೀರಿಯಲ್ ಸಂಖ್ಯೆಯನ್ನು ಹೊಂದಿರುವ ಡಿವೈಸ್‌ಗಳನ್ನು ವೈರ್‌ಲೆಸ್ ಕಮ್ಯುನಿಕೇಶನ್ ಕಂಪೆನಿಯೊಂದಿಗೆ ಮರುನೋಂದಣಿ ಮಾಡಬೇಕಾಗುತ್ತದೆ ಇಲ್ಲದಿದ್ದಲ್ಲಿ ಸೇವೆಯೊಂದಿಗೆ ಡಿವೈಸ್‌ಗಳ ಸೇವೆಯ ನಿರಾಕರಣೆಯಾಗುತ್ತದೆ.

#13

#13

ಫೋನ್ ಕಂಪೆನಿಯು ಬಳಸಲಾದ ಕಂಪ್ಯೂಟರ್ ಸಿಸ್ಟಮ್ ಅನ್ನು ಹ್ಯಾಕ್ ಮಾಡುವ ಮೂಲಕ ಒಬಾಮಾರ ಫೋನ್‌ನ ಮಾಹಿತಿಯನ್ನು ಕದಿಯುವ ಸಾಧ್ಯತೆ ಕೂಡ ಇರುತ್ತದೆ.

#14

#14

ಒಬಾಮಾರು ಕಚೇರಿ ಅವಧಿಯಲ್ಲಿ ಬಹಳಷ್ಟು ವಿದೇಶಿ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಚೀನಾದಲ್ಲಿ ಒಬಾಮಾ ತಮ್ಮ ಫೋನ್ ಅನ್ನು ಆನ್ ಮಾಡಿದ ಕ್ಷಣದಲ್ಲಿ ಅಲ್ಲಿನ ಸರಕಾರ ಅಧ್ಯಕ್ಷರ ಸ್ಥಾನವನ್ನು ಲೊಕೇಟ್ ಮಾಡಬಹುದು ಎಲ್ಲಿಯಾದರೂ ಒಬಾಮಾರ ಫೋನ್ ತಯಾರಕ ಕಂಪೆನಿ ಚೀನಾದ್ದಾಗಿದೆ ಎಂದಾದಲ್ಲಿ ಇದು ಸಾಧ್ಯ.

#15

#15

ಹೀಗೆಯೇ ಇತರೆ ದೇಶಗಳಲ್ಲಿ ಕೂಡ ಮೊಬೈಲ್ ಟ್ರ್ಯಾಕ್ ಮಾಡುವ ಸಂಭವನೀಯತೆಗಳು ಅಧಿಕವಾಗಿರುತ್ತದೆ. ಅದಕ್ಕಾಗಿಯೇ ಅಧ್ಯಕ್ಷರು ವಿದೇಶ ಪ್ರಯಾಣದಲ್ಲಿದ್ದಾಗ ಬ್ಲ್ಯಾಕ್‌ಬೆರ್ರಿಯನ್ನು ಬಳಸಲು ರಹಸ್ಯ ಸಿಬ್ಬಂದಿಗಳು ಅನುಮತಿಯನ್ನು ನೀಡಬೇಕಾಗುತ್ತದೆ.

#16

#16

ಒಬಾಮಾರ ಬ್ಲ್ಯಾಕ್‌ಬೆರ್ರಿ ಫೋನ್ ಹಲವಾರು ಭದ್ರತಾ ತಲೆನೋವುಗಳನ್ನು ತಂದೊಡ್ಡುವುದು ಮಾತ್ರವಲ್ಲದೆ ಇದಕ್ಕಾಗಿ ಹಲವಾರು ಜನರು ಮೈಯೆಲ್ಲಾ ಕಣ್ಣಾಗಿ ಇರಬೇಕಾಗುತ್ತದೆ ಕೂಡ. ಅಂತೆಯೇ ಹೆಚ್ಚಿನ ಭದ್ರತೆಗಳು ಟೊಳ್ಳಾಗುವುದೇ ಫೋನ್‌ನಲ್ಲಿರುವ ಬೋರಿಂಗ್ ಫಂಕ್ಶನ್‌ಗಳಿಂದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

ಬರಾಕ್ ಒಬಾಮಾರ ಫೋನ್ ವಿಶ್ವದಲ್ಲೇ ಅದ್ವಿತೀಯ

ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
The news coverage and analysis by armchair security experts thus far has failed to focus on the real threat: attacks against President Obama's location privacy, and the potential physical security risks that come with someone knowing the president's real-time physical location.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more