Home
ಮೊಬೈಲ್

ಒನ್ ಪ್ಲಸ್ 11R ನ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್; ಬೆಲೆ ಕೇಳಿದ್ರೆ ಈಗಲೇ ಖರೀದಿ ಮಾಡ್ತೀರಾ..

ಒನ್ ಪ್ಲಸ್ ಸ್ಮರ್ಟ್‌ಫೋನ್‌ಗಳಿಗೆ ಬಹು ಬೇಡಿಕೆ ಇದೆ. ಈ ನಡುವೆ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಆಗಾಗ ವಿಶೇಷ ರಿಯಾಯಿತಿಗಳನ್ನು ನೀಡುತ್ತಾ ಬಂದಿದ್ದು, ಇದೀಗ ಒನ್ ಪ್ಲಸ್ 11R ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ನೀವು 30,000 ರೂ.ಗಳಿಗಿಂತ ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗಿದ್ದರೆ ಈ ಫೋನ್ ಉತ್ತಮ ಆಯ್ಕೆ ಆಗಿರಲಿದೆ.

ಹೌದು, 39,999 ರೂ.ಗಳ ಮೂಲ ಬೆಲೆಯ ಒನ್‌ಪ್ಲಸ್ 11R ಫೋನ್‌ಗೆ ಅಮೇಜಾನ್ ಇ-ಕಾಮರ್ಸ್ ಸಂಸ್ಥೆ ಬರೋಬ್ಬರಿ 25% ಡಿಸ್ಕೌಂಟ್ ನೀಡುವ ಮೂಲಕ 10,000 ರೂಗಳನ್ನು. ಕಡಿತಗೊಳಿಸಿ 29,999 ರೂ. ಗಳಿಗೆ ನೀಡುತ್ತಿದೆ. ಅದಾಗ್ಯೂ ನೀವು ವಿವಿಧ ಬ್ಯಾಂಕುಗಳ ಕಾರ್ಡುಗಳನ್ನು ಬಳಸಿ ಮೊಬೈಲ್ ಖರೀದಿಸುವುದರಿಂದ ಬರೋಬ್ಬರಿ 2000 ರೂಪಾಯಿಗಳ ವರೆಗೂ ಡಿಸ್ಕೌಂಟ್ ಪಡೆಯಬಹುದು. ಇದಲ್ಲದೆ, ಕನಿಷ್ಠ 3,000 ರೂಪಾಯಿಗಳ ಖರೀದಿಯೊಂದಿಗೆ ಇಎಂಐ ಅಲ್ಲದ ವ್ಯವಹಾರದ ಮೇಲೆ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 500 ರೂ. ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು. ಹಾಗಿದ್ರಿ ಬನ್ನಿ ಒನ್ ಪ್ಲಸ್ 11R ಮೊಬೈಲ್ ಮೇಲೆ ಇನ್ನೂ ಏನೇನು ರಿಯಾಯಿತಿಗಳಿವೆ ಹಾಗೂ ಅದರ ಫೀಚರ್ಸ್ ಏನು ಎಂಬುದನ್ನು ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಯೋಣ.

ಒನ್ ಪ್ಲಸ್ 11R ನ ಸ್ಮಾರ್ಟ್‌ಫೋನ್‌ಗೆ ಅಮೇಜಾನ್‌ನಲ್ಲಿ ಭರ್ಜರಿ ಆಫರ್

ಒನ್ ಪ್ಲಸ್ 11R ವಿನಿಮಯ ಆಫರ್: ಬ್ಯಾಂಕ್‌ ಆಫರ್ ಮಾತ್ರವಲ್ಲದೆ ವಿನಿಮಯ ಆಫರ್ ಅನ್ನೂ ಸಹ ನೀಡಲಾಗಿದ್ದು, ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ನಿಮ್ಮಲ್ಲಿರುವ ಹಳೆಯ ಫೋನ್ ಅನ್ನು ವಿನಿಮಯ ಮಾಡಿದರೆ, ಅಲ್ಲದೆ ಆ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ 28,050 ರೂ.ವರೆಗೂ ಆಫರ್ ಪಡೆಯಬಹುದಾಗಿದೆ. ಫೋನ್ ಎಕ್ಸ್‌ಚೆಂಜ್‌ಗೂ ಮೊದಲು ನಿಮ್ಮ ಹಳೆಯ ಮೊಬೈಲ್ ನ ಬೆಲೆಯನ್ನು ಆನ್‌ಲೈನ್ ನಲ್ಲಿ ಪರಿಶೀಲಿಸಿಕೊಂಡು ಮುಂದುವರೆಯುವುದು ಉತ್ತಮ.

ಒನ್ ಪ್ಲಸ್ 11R ಸ್ಮಾರ್ಟ್‌ಫೋನ್‌ ಪ್ರೀಮಿಯಂಗೆ ಹೋಲುವ ವಿನ್ಯಾಸವನ್ನೇ ಹೊಂದಿದ್ದು ಆಂಡ್ರಾಯ್ಡ್ 16 ವರೆಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಸಹ ಪಡೆದಿರಲಿದೆ. ಈ ಮೂಲಕ ದೀರ್ಘ ವರ್ಷಗಳ ವರೆಗೆ ನೀವು ಈ ಫೋನ್‌ನಲ್ಲಿ ಯಾವುದೇ ಸಮಸ್ಯೆಗಳನ್ನು ಕಾಣದೆ ಉತ್ತಮವಾಗಿ ಬಳಕೆ ಮಾಡಬಹುದಾಗಿದೆ.

ಒನ್ ಪ್ಲಸ್ 11R ಸ್ಮಾರ್ಟ್‌ಫೋನ್ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 8+ ಜನ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 890 ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾ ಹೊಂದಿದೆ. ಹಾಗೆಯೇ ಈ ಫೋನ್ ಯುಎಸ್‌ಬಿ ಟೈಪ್-ಸಿ ಮೂಲಕ ಸೂಪರ್ ವಿಒಒಸಿ ಚಾರ್ಜಿಂಗ್‌ನೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್ ಅಮೆಜಾನ್ ನಲ್ಲಿ ಸೋನಿಕ್ ಬ್ಲಾಕ್ (sonic block) ಸೋಲಾರ್ ರೆಡ್ (solar red) ಗ್ಯಲಾಕ್ಟಿಕ್ ಸಿಲ್ವರ್ (galactic silver) ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿದೆ ಹಾಗೂ ಆಕ್ಸಿಜನ್ ಓಎಸ್ (OxygenOs) ಆಪರೇಟಿಂಗ್ ಸಿಸ್ಟಮ್ ಜೊತೆಗೆ 5G ತಂತ್ರಜ್ಞಾನವನ್ನು ಹೊಂದಿದೆ. ಮತ್ತು 29.999 ರೂಪಾಯಿ ಬೆಲೆಯ ಈ ಮೊಬೈಲ್ 8GB RAM ಮತ್ತು 128GB ಆಂತರಿಕ ಸ್ಟೋರೆಜ್ ಹೊಂದಿದೆ.

Best Mobiles in India

English summary
OnePlus 11R Smartphone available at discount price tag on amazon website. Check out offer price, Specifications and other details in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+