OnePlus 11R ಫೋನ್ ಮೇಲೆ 30% ಆಫರ್; 12,000 ರೂ. ಸೇವ್!
ನೀವು ಒನ್‌ಪ್ಲಸ್ ಮೊಬೈಲ್ ಪ್ರಿಯರೇ? ನಿಮಗೆ ಒನ್‌ಪ್ಲಸ್ ಫೋನ್ ಖರೀದಿಸುವ ಬಯಕೆ ಇದೆಯೇ? ಆಗಿದ್ರೆ, ನಿಮಗೆ ಇಲ್ಲಿದೆ ನೋಡಿ ಭರ್ಜರಿ ಗುಡ್ ನ್ಯೂಸ್! ಒನ್‌ಪ್ಲಸ್‌ನ ಈ ಫೋನ್ ಮೇಲೆ 30% ಭರ್ಜರಿ ಡಿಸ್ಕೌಂಟ್, ಇಎಂಐ ಸೌಲಭ್ಯ ಮತ್ತು ಕ್ಯಾಶ್‌ಬ್ಯಾಕ್ ಕೂಡ ಸಿಗುತ್ತೆ. ಹೌದು, OnePlus 11R ಸ್ಮಾರ್ಟ್‌ಫೋನ್ ಅನ್ನು Amazonನಲ್ಲಿ ರಿಯಾಯಿತಿ ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಡಿಸ್ಕೌಂಟ್ ಪಡೆಯಬಹುದು. 39,999 ರೂ. ಮೂಲ ಬೆಲೆಯ ಈ OnePlus 11R ಅನ್ನು ನೀವು, 12,000 ರೂ. ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದು.
ಒನ್‌ಪ್ಲಸ್ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ಒನ್‌ಪ್ಲಸ್ ಮಾರುಕಟ್ಟೆಗೆ ಪರಿಚಯಿಸಿರುವ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್ ಫೇವರಿಟ್ ಆಗಿವೆ. ಹೊಸ ಹೊಸ ಮೊಬೈಲ್ ಬಿಡುಗಡೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಈ ಮಧ್ಯೆ, ದುಬಾರಿ ಬೆಲೆಯ ಫೋನ್‌ಗಳ ಮೇಲೆ ಡಿಸ್ಕೌಂಟ್ ಸಹ ಘೋಷಿಸುತ್ತಿದೆ. ಇದೀಗ, ಒನ್‌ಪ್ಲಸ್ ನಾರ್ಡ್ 11R ಮೊಬೈಲ್ ಖರೀದಿ ಮೇಲೆಯೂ ರಿಯಾಯಿತಿ ನೀಡಿದೆ. ಈ ಡಿಸ್ಕೌಂಟ್ Amazon ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

ಒನ್‌ಪ್ಲಸ್ ನಾರ್ಡ್ 11R ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. 8GB RAM + 128GB ಮತ್ತು 16GB RAM + 256GB ಇಂಟರ್ನಲ್ ಸ್ಟೋರೇಜ್‌ನಲ್ಲಿ ಖರೀದಿಸಬಹುದು. Amazonನಲ್ಲಿ 8GB RAM ವೇರಿಯಂಟ್ ಬೆಲೆ 27,999 ರೂ. ಇದೆ. ಅದೇ ರೀತಿ 16GB RAM ಸ್ಟೋರೇಜ್ ರೂಪಾಂತರದ ಬೆಲೆ 33,999 ರೂ. ಇದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳ ಮೇಲೆ 10% (1,500) ಡಿಸ್ಕೌಂಟ್ ಪಡೆಯಬಹುದು.
ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯ
ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್ ಬಾಗಿದ ಡಿಸ್ಲ್ಪೇಯನ್ನು ಹೊಂದಿದೆ. ಇದು Snapdragon 8+ Gen 1 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಆಕ್ಸಿಜನ್ ಓಎಸ್ (OxygenOs) ಆಪರೇಟಿಂಗ್ ಸಿಸ್ಟಮ್ ಜೊತೆಗೆ 5G ತಂತ್ರಜ್ಞಾನವನ್ನು ಹೊಂದಿದೆ. ಈ ಮೊಬೈಲ್ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಸೋನಿಕ್ ಬ್ಲಾಕ್ (Sonic Black) ಸೋಲಾರ್ ರೆಡ್ (Solar Red) ಮತ್ತು ಗ್ಯಲಾಕ್ಟಿಕ್ ಸಿಲ್ವರ್ (galactic silver) ಬಣ್ಣಗಳಲ್ಲಿ Amazon ನಲ್ಲಿ ಖರೀದಿಗೆ ಲಭ್ಯವಿದೆ.
ಒನ್‌ಪ್ಲಸ್ 11R ಡಿಸ್‌ಪ್ಲೇ ಬೊಂಬಾಟ್
ಈ ಒನ್‌ಪ್ಲಸ್ 11R ಫೋನ್ 6.74 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 1B ಬಣ್ಣಗಳು, 120Hz ರಿಫ್ರೆಶ್ ರೇಟ್, HDR10+, 1450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 1240 x 2772 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 451 ppi ಸಾಂದ್ರತೆ ಹೊಂದಿದೆ.
ಈ ಸ್ಮಾರ್ಟ್‌ಫೋನ್ ಪ್ರೊಸೆಸರ್ ಏನು?
ಒನ್‌ಪ್ಲಸ್ 11R ಫೋನ್ ಕ್ವಾಲ್ಕಾಮ್ SM8475 ಸ್ನಾಪ್‌ಡ್ರಾಗನ್ 8+ ಜನ್ 1 (4 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ, ಆಂಡ್ರಾಯ್ಡ್ 13, ಆಕ್ಸಿಜನ್ ಓಎಸ್ 13 ಅನ್ನು ರನ್ ಮಾಡಲಿದೆ. ಇದರ ಜೊತೆಗೆ ಅಡ್ರಿನೊ 730 ಜಿಪಿಯು ಬಲ ಪಡೆದುಕೊಂಡಿದ್ದು, 128GB + 8GB RAM, 256GB + 16GB RAM, 512GB + 18GB RAM ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದೆ.
ವಾವ್ ಎನಿಸುವ ಕ್ಯಾಮೆರಾ ಸೆಟಪ್
ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ಅಲ್ಟ್ರಾವೈಡ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಪಡೆದಿದೆ. ಇದರ ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಹಾಗೂ ವಿಡಿಯೋ ಕ್ಯಾಮೆರಾವನ್ನು ಈ ಮೊಬೈಲ್‌ನಲ್ಲಿ ಕಾಣಬಹುದಾಗಿದೆ.
ಅದ್ಭುತವಾಗಿ ಈ ಫೋನ್‌ನ ಬ್ಯಾಟರಿ ಬ್ಯಾಕಪ್
ಒನ್‌ಪ್ಲಸ್ 11R ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. 100W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಜೊತೆಗೆ, ಸ್ಟೀರಿಯೋ ಸ್ಪೀಕರ್, 24-ಬಿಟ್/192kHz ಹೈ-ರೆಸ್ ಆಡಿಯೋ, ವೈ ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.3, A2DP, LE, aptX HD, ಯುಎಸ್‌ಬಿ ಟೈಪ್-ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಒಟ್ಟಾರೆ, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಬಹು ಬೇಡಿಕೆ ಇದೆ. ಈ ನಡುವೆ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಈ ರೀತಿಯ ವಿಶೇಷ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಇದೀಗ, ಒನ್‌ಪ್ಲಸ್ 11R ಫೋನ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ನೀವು 30,000 ರೂ.ಗಳಿಗಿಂತ ಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಅನ್ನು ಖರೀದಿಸಲು ಬಯಸಿದ್ರೆ, 27,999 ರೂ.ನ ಈ ಫೋನ್ ಪರ್ಫೆಕ್ಟ್ ಆಯ್ಕೆಯಾಗಿದೆ.


Click it and Unblock the Notifications








