Home
ಮೊಬೈಲ್

OnePlus: ಇಂದಿನಿಂದ ಸೇಲ್ ಆರಂಭಿಸಲಿದೆ ಒನ್‌ಪ್ಲಸ್ 12 ಗ್ಲಾಸಿಯಾ ವೈಟ್; ಫೀಚರ್ಸ್‌ ಏನಿರಲಿವೆ ?

ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಒಂದಾಗಿರುವ OnePlus, ತನ್ನ ವಿಭಿನ್ನವಾದ ಫೀಚರ್ಸ್‌ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ವಾರದ ಆರಂಭದಲ್ಲಿ ಭಾರತದಲ್ಲಿ OnePlus 12 Glacial White ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಲಾಂಚ್ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಇಂದಿನಿಂದ ತನ್ನ ಮಾರಾಟ ಆರಂಭಿಸಲಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ದವಾಗಿದೆ. ಹಾಗಿದ್ರೆ ಬನ್ನಿ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌, ಬೆಲೆ ಹಾಗೂ ಎಲ್ಲಿ ಇದರ ಲಭ್ಯತೆ ಇರಲಿದೆ ಎಂಬ ಅಂಶಗಳನ್ನು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

OnePlus 12 Glacial White ಇಂದು ಮೊದಲ ಬಾರಿಗೆ ಭಾರತದಲ್ಲಿ ತನ್ನ ಮಾರಾಟ ಆರಂಭಿಸಲು ಸಿದ್ಧವಾಗಿದೆ. ಈ ವಾರದ ಆರಂಭದಲ್ಲಿ OnePlus 12 5G ಭಾರತದಲ್ಲಿ ಹೊಸ ಗ್ಲಾಸಿಯಲ್ ಸಿರೀಸ್ ಅನ್ನು ವೈಟ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. OnePlus 12 5G ಅನ್ನು ಈ ವರ್ಷದ ಆರಂಭದಲ್ಲಿ ಫ್ಲೋವಿ ಎಮರಾಲ್ಡ್ ಮತ್ತು ಸಿಲ್ಕಿ ಬ್ಲ್ಯಾಕ್ ಶೇಡ್‌ಗಳಲ್ಲಿ ಅನಾವರಣಗೊಳಿಸಲಾಯಿತು. ಇದರ ಹೊರತಾಗಿಯೂ ಈ ಸ್ಮಾರ್ಟ್‌ಫೋನ್ ಸುಧಾರಿತ ತಂತ್ರಜ್ಞಾನದ ಮೂಲಕ ಭಾರತದಲ್ಲಿ ಮಾರಾಟಕ್ಕೆ ಸಿದ್ದವಾಗಿದೆ. ಇದು ನಯವಾದ, ಫ್ರಾಸ್ಟೆಡ್ ವಿನ್ಯಾಸದ ಜೊತೆಗೆ ಹಿಂಭಾಗದಲ್ಲಿ ಗ್ಲಾಸ್‌ ಅನ್ನು ಹೊಂದಿದೆ.

OnePlus: ಇಂದಿನಿಂದ ಸೇಲ್ ಆರಂಭಿಸಲಿದೆ ಒನ್‌ಪ್ಲಸ್ 12 ಗ್ಲಾಸಿಯಾ ವೈಟ್

OnePlus 12 Glacial White ಬೆಲೆ, ಕೊಡುಗೆಗಳು:

ಈ ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಸಿದ್ದ ಇ-ಕಾಮರ್ಸ್‌ ಫ್ಲಾಟ್‌ಫಾರ್ಮ್ ಆಗಿರುವ ಅಮೇಜಾನ್, OnePlus.in ಹಾಗೂ ಇತೆ ಆಯ್ದ ಕೆಲವು ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಇದು ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ನ 12GB RAM + 256GB ಸ್ಟೋರೇಜ್ ವೇರಿಯಂಟ್‌ನ ಬೆಲೆ 64,999 ರೂ. ಆಗಿರಲಿದೆ.

ಖರೀದಿದಾರರು ಆಯ್ದ ಪಾಲುದಾರ ಬ್ಯಾಂಕ್‌ಗಳಿಂದ 3,000 ರೂ. ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದು ಮತ್ತು ಜೂನ್ 6ರಿಂದ 20ರವರೆಗೆ 2,000 ರೂ. ಮೌಲ್ಯದ ವಿಶೇಷ ಕೂಪನ್ ಅನ್ನು ಪಡೆಯಬಹುದು. OnePlus ಕಮ್ಯುನಿಟಿ ಮಾರಾಟದ ಸಮಯದಲ್ಲಿ OnePlus ಉತ್ಪನ್ನಗಳ ಮೇಲೆ ಹೆಚ್ಚಿನ ರಿಯಾಯಿತಿ ದೊರೆಯಲಿದೆ.

OnePlus 12 Glacial White ವಿಶೇಷತೆಗಳು:

ಈ ಸ್ಮಾರ್ಟ್‌ಫೋನ್ 6.82 ಇಂಚಿನ 2K Pro XDR BOE X1 OLED ಡಿಸ್‌ಪ್ಲೇ ಹೊಂದಿದೆ. ಅಡಾಪ್ಟಿವ್ 120Hz ರಿಫ್ರೆಶ್ ರೇಟ್ (1Hz - 120Hz) ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ಗಾಗಿ LTPO 3.0 ತಂತ್ರಜ್ಞಾನ ಹೊಂದಿದೆ. ಡಿಸ್‌ಪ್ಲೇ 510 PPI ನ ಪಿಕ್ಸೆಲ್ ಸಾಂದ್ರತೆ ಮತ್ತು 4,500 nits ನಷ್ಟು ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ ಇದು ಡಾಲ್ಬಿ ವರ್ಷನ್, HDR10+ ಮತ್ತು ಡಾಲ್ಬಿ ಆಟ್ಮೋಸ್ ಅನ್ನು ಬೆಂಬಲಿಸುತ್ತದೆ.

ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಯನ್ನು 24GB ವರೆಗಿನ LPDDR5X RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ಜೊತೆಗೆ ಜೋಡಿಸುತ್ತದೆ. ಈ ಮೊಬೈಲ್‌ಗೆ ನಾಲ್ಕು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಐದು ವರ್ಷಗಳ ಸಾಫ್ಟ್‌ವೇರ್ ಪ್ಯಾಚ್‌ಗಳ ಭರವಸೆಯೊಂದಿಗೆ ಕಂಪನಿಯು ಮೇಲ್ಭಾಗದಲ್ಲಿ OxygenOS 14 ನೊಂದಿಗೆ ಆಂಡ್ರಾಯ್ಡ್‌ 14 ಅನ್ನು ನೀಡಿದೆ.

ಕ್ಯಾಮೆರಾ: ಈ ಮೊಬೈಲ್ OIS ಜೊತೆಗೆ 50 MP ಸೋನಿ LYTIA LYT-808 ಪ್ರಾಥಮಿಕ ಸೆನ್ಸಾರ್, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 64 MP ಓಮ್ನಿವರ್ಶನ್ O64B ಟೆಲಿಫೋಟೋ ಪೆರಿಸ್ಕೋಪ್ ಸೆನ್ಸಾರ್ ಜೊತೆಗೆ 70mm, OIS ಮತ್ತು 3x ಆಪ್ಟಿಕಲ್ ಜೂಮ್ ಮತ್ತು 48 MP ಸೋನಿ IMX581 ಅಲ್ಟ್ರಾವೈಡ್ ಶೂಟರ್‌ನ ಫೋಕಲ್ ಲೆಂತ್ ಜೊತೆಗೆ ಜೋಡಿಸಲಾಗಿದೆ.

ಈ ಎಲ್ಲಾ ಮೂರು ಕ್ಯಾಮೆರಾಗಳು ಹ್ಯಾಸೆಲ್‌ಬ್ಲಾಡ್ ಸಹಯೋಗದೊಂದಿಗೆ ಉತ್ತಮವಾಗಿ ಟ್ಯೂನ್ ಆಗಿವೆ. OnePlus 12 5G ಇದು 32 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಇದು 100W ವೈಯರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,400 mAh ಬ್ಯಾಟರಿಯನ್ನು ಸಹ ಹೊಂದಿದೆ.

Best Mobiles in India

English summary
OnePlus 12 Glacial White is all set to go on sale today for the first time in India. Earlier this week OnePlus 12 5G was launched in India in the new Glacial series in white color.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+