ಮತ್ತೆ 5,000 ಕುಸಿತ! OnePlus 12 ಅಗ್ಗದ ಬೆಲೆಗೆ ಲಭ್ಯ.. 7,000 ಡಿಸ್ಕೌಂಟ್ ಸಿಗುತ್ತೆ!
ಒನ್‌ಪ್ಲಸ್ ತನ್ನ ಗ್ರಾಹಕರಿಗೆ ಮತ್ತೆ ಸಿಹಿ ಸುದ್ದಿಯೊಂದು ನೀಡಿದೆ. ಹೌದು, ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ (OnePlus) ಕಂಪನಿಯು ಇತ್ತೀಚೆಗೆ ತನ್ನ ಪ್ರಮುಖ ಫೋನ್ ಒನ್‌ಪ್ಲಸ್ 12 (OnePlus 12) ಬೆಲೆಯನ್ನು ದಿಢೀರ್ ಇಳಿಕೆ ಮಾಡಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್ 12 ಒಂದಾಗಿದೆ. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಎರಡರ ಮೇಲೆಯೂ 5,000 ರೂ. ಬೆಲೆಯನ್ನು ಕಡಿತಗೊಳಿಸಿದೆ. ಈ ಫೋನ್ ಹೊಸ ಬೆಲೆಯೊಂದಿಗೆ ಮಾರಾಟವಾಗುತ್ತಿದೆ.
ಒನ್‌ಪ್ಲಸ್ 12 (OnePlus 12) ಸ್ಮಾರ್ಟ್‌ಫೋನ್ 6.82 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು Snapdragon 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 512GB ಸ್ಟೋರೇಜ್, 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನಿನಲ್ಲಿ 50MP Sony LYT 808 ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ ಇದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್ ಬಗ್ಗೆ ತಿಳಿಯೋಣ.

ಒನ್‌ಪ್ಲಸ್ 12 ಫೋನಿನ ಬೆಲೆ ಮತ್ತು ಆಫರ್
ಒನ್‌ಪ್ಲಸ್ 12 ಫೋನಿನ 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 64,999 ರೂ. ಇದೆ. 5,000 ರೂ.ಗಳ ಬೆಲೆ ಕಡಿತದೊಂದಿಗೆ ಪ್ರಸ್ತುತ ನೀವು 59,999 ರೂ. ಬೆಲೆಗೆ ಖರೀದಿಸಬಹುದು. 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ 69,999 ರೂ. ಇದೆ. ಬೆಲೆ ಇಳಿಕೆಯೊಂದಿಗೆ, ಪ್ರಸ್ತುತ ಇದು 64,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಇದಲ್ಲದೇ, ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಗರಿಷ್ಠ 7,000 ರೂ. ವರೆಗೆ ಡಿಸ್ಕೌಂಟ್ ಪಡೆಯಬಹುದು ಎಂದು ಕಂಪನಿ ಹೇಳಿದೆ. ಮತ್ತು 12 ತಿಂಗಳವರೆಗೆ ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು. ಈ ಒನ್‌ಪ್ಲಸ್ 12 ಫೋನ್ ಗ್ಲೇಶಿಯಲ್ ವೈಟ್, ಸಿಲ್ಕಿ ಬ್ಲ್ಯಾಕ್ ಮತ್ತು ಫ್ಲೋವಿ ಎಮರಾಲ್ಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
OnePlus 12 ಸ್ಮಾರ್ಟ್‌ಫೋನ್ ಫೀಚರ್ಸ್
ಡಿಸ್ಲ್ಪೇ: ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 6.82 ಇಂಚಿನ 2K ಬಾಗಿದ OLED ProXDR ಡಿಸ್ಲ್ಪೇಯನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ದರ, QHD+ ಜೊತೆಗೆ 31681 x 440 ಪಿಕ್ಸೆಲ್‌ಗಳ ರೆಸಲ್ಯೂಶನ್, 4500 nits ಗರಿಷ್ಠ ಬ್ರೈಟ್‌ನೆಸ್, 2160Hz PWM ಮಬ್ಬಾಗಿಸುವಿಕೆಯೊಂದಿಗೆ ಲಭ್ಯವಿದೆ. ಡಿಸ್ಲ್ಪೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದಿದೆ.
ಪ್ರೊಸೆಸರ್: ಒನ್‌ಪ್ಲಸ್ 12 ಫೋನ್ Snapdragon 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಚಿಪ್‌ಸೆಟ್ ಅನ್ನು Adreno 750 ಚಿಪ್‌ಸೆಟ್, 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಇದು ಕ್ರಯೋ ವೆಲಾಸಿಟಿ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಸಾಫ್ಟ್‌ವೇರ್: ಒನ್‌ಪ್ಲಸ್ 12 ಮೊಬೈಲ್ Android 14 ಆಧಾರಿತ OxygenOS 14 ಅನ್ನು ಹೊಂದಿದೆ. ಈ ಫೋನ್ 4 ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿ ತಿಳಿಸಿದೆ.
ಕ್ಯಾಮೆರಾ: ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP Sony LYT 808 ಮುಖ್ಯ ಕ್ಯಾಮೆರಾ, OIS ಜೊತೆಗೆ 64MP OmniVision OV64B ಪೆರಿಸ್ಕೋಪ್ ಲೆನ್ಸ್, 3X ಝೂಮಿಂಗ್ ಸಾಮರ್ಥ್ಯ ಮತ್ತು 48MP ಸೋನಿ IMX581 ಕ್ಯಾಮೆರಾ ಹೊಂದಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ವೇಗದ ಚಾರ್ಜಿಂಗ್ ಮತ್ತು 50W AIRVOOC ವೈರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 26 ನಿಮಿಷಗಳಲ್ಲಿ ಸಂಪೂರ್ಣ (ಶೇ.100 ರಷ್ಟು) ಚಾರ್ಜ್ ಮಾಡಬಹುದು.


Click it and Unblock the Notifications








