Home
ಮೊಬೈಲ್

OnePlus 12R ಹೊಸ ಬಣ್ಣದಲ್ಲಿ ಎಂಟ್ರಿ: ಜು.20ಕ್ಕೆ ಮಾರಾಟ.. 3,000 ಡಿಸ್ಕೌಂಟ್‌, OnePlus ಬಡ್ಸ್ 3 ಫ್ರೀ!

ಒನ್‌ಪ್ಲಸ್ ತನ್ನ ಭಾರತೀಯ ಗ್ರಾಹಕರಿಗೆ ಸದ್ದಿಲ್ಲದೇ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಂಪನಿಯು ಭಾರತದಲ್ಲಿ OnePlus 12R ಅನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ಸನ್‌ಸೆಟ್ ಡ್ಯೂನ್ (Sunset Dune colourway) ಕಲರ್‌ ಅನ್ನು ನೀಡಲಾಗಿದೆ. ಇನ್ಮುಂದೆ ಈ ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಕೂಲ್ ಬ್ಲೂ, ಐರನ್ ಗ್ರೇ ಮತ್ತು ಸನ್‌ಸೆಟ್ ಡ್ಯೂನ್ ಕಲರ್‌ಗಳಲ್ಲಿ ನೀವು ಖರೀದಿಸಬಹುದು. ಈ ಫೋನ್ ಅದ್ಭುತ ಬ್ಯಾಟರಿ ಬ್ಯಾಕಪ್, ದೊಡ್ಡ ಡಿಸ್ಲ್ಪೇನೊಂದಿಗೆ ಹಲವು ವಾವ್ ಎನಿಸುವ ಫೀಚರ್ಸ್‌ಗಳನ್ನು ಹೊಂದಿದೆ.

ಜುಲೈ 16 ರಂದು OnePlus Nord 4 ಅನ್ನು ಬಿಡುಗಡೆ ಮಾಡುವ ಮೊದಲೇ, ಈ ತಿಂಗಳು OnePlus ಬಿಡುಗಡೆ ಮಾಡಿದ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಮೊದಲನೆಯದು. ಈ ಒನ್‌ಪ್ಲಸ್ 12R ಸನ್‌ಸೆಟ್ ಡ್ಯೂನ್ ಬಣ್ಣದ ನೂತನ ಮಾದರಿಯನ್ನು ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ನೋ ಕಾಸ್ಟ್ EMI ಮತ್ತು ಖರೀದಿಯ ಮೇಲೆ ಉಚಿತವಾಗಿ OnePlus ಬಡ್ಸ್ 3 ಸೇರಿದಂತೆ ಹಲವು ಆಫರ್‌ಗಳು ಲಭ್ಯವಿದೆ. ಇದರ ಬೆಲೆ ಎಷ್ಟು? ಹೊಸ ಫೀಚರ್ಸ್‌ ಏನಿರಲಿದೆ? ಎನ್ನುವುದನ್ನು ತಿಳಿಯೋಣ ಬನ್ನಿ.

OnePlus 12R ಹೊಸ ಬಣ್ಣದಲ್ಲಿ ಎಂಟ್ರಿ: 3000 ಡಿಸ್ಕೌಂಟ್‌, ಜು.20ಕ್ಕೆ ಮಾರಾಟ

OnePlus 12R ಸನ್‌ಸೆಟ್ ಡ್ಯೂನ್ ಬೆಲೆ ಎಷ್ಟು?

ಒನ್‌ಪ್ಲಸ್‌ 12R ಸನ್‌ಸೆಟ್ ಡ್ಯೂನ್ ಕಲರ್‌ವೇ ಭಾರತದಲ್ಲಿ 42,999 ರೂಪಾಯಿ ಬೆಲೆಯನ್ನು ಹೊಂದಿದೆ. ಇದು ಮಾರ್ಚ್‌ನಲ್ಲಿ ಪರಿಚಯಿಸಲಾದ ಒಂದೇ 8GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇದು ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಜುಲೈ 20 ರಿಂದ ಮಾರಾಟವಾಗಲಿದೆ.

3,000 ರೂ. ಡಿಸ್ಕೌಂಟ್‌, OnePlus ಬಡ್ಸ್ 3 ಉಚಿತ?

ಒನ್‌ಪ್ಲಸ್‌ 12R ಫೋನ್ ಖರೀದಿಸುವ ಗ್ರಾಹಕರು ICICI ಬ್ಯಾಂಕ್ ಮತ್ತು OneCard ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ಪಾವತಿಯೊಂದಿಗೆ 3,000 ರೂ.ಗಳ ಬ್ಯಾಂಕ್ ಡಿಸ್ಕೌಟ್‌ ಪಡೆಯಬಹುದು. ಇದಲ್ಲದೆ, OnePlus ಬಡ್ಸ್ 3 ಅನ್ನು OnePlus 12Rನ ಸನ್‌ಸೆಟ್ ಡ್ಯೂನ್ ಸ್ಮಾರ್ಟ್‌ಫೋನ್‌ನೊಂದಿಗೆ ಉಚಿತವಾಗಿ ನಿಮ್ಮದಾಗಿಸಿಕೊಳ್ಳಬಹುದು. ಸಂಪೂರ್ಣ ಹಣವನ್ನು ಒಂದೇ ಬಾರಿಗೆ ಪಾವತಿಸಲು ಆಗದೇ ಇರುವವರು 9 ತಿಂಗಳ ನೋ ಕಾಸ್ಟ್ EMI ಆಯ್ಕೆಗಳನ್ನು ಪಡೆಯಬಹುದು.

OnePlus 12Rನಲ್ಲಿ ಏನೆಲ್ಲಾ ಹೊಸ ವಿಶೇಷತೆಗಳಿವೆ?

ಡಿಸ್ಪ್ಲೇ: ಈ ಸ್ಮಾರ್ಟ್‌ಫೋನ್ 6.78 ಇಂಚಿನ LTPO 4.0 AMOLED ProXDR ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಲ್ಪೇಯು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120 Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. 4,500nits ಗರಿಷ್ಠ ಬ್ರೈಟ್‌ನೆಸ್‌ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಹೊಂದಿದೆ.

ಪ್ರೊಸೆಸರ್: ಒನ್‌ಪ್ಲಸ್‌ ಕಂಪನಿಯು ಪರಿಚಯಿಸುವ ತನ್ನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ Qualcomm Snapdragon 8 Gen 2 ಪ್ರೊಸೆಸರ್‌ ಅಳವಡಿಸಿದೆ. ಅದರಂತೆ, ಹುಡ್ ಅಡಿಯಲ್ಲಿ ಇದು 12GBLPDDR5x RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ Qualcomm Snapdragon 8 Gen 2 ಚಿಪ್‌ಸೆಟ್‌ ಅನ್ನು ಹೊಂದಿದೆ.

ಕ್ಯಾಮೆರಾ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. 50MP (ಸೋನಿ IMX890) ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಇದು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 16MP ಕ್ಯಾಮೆರಾ ಪಡೆದಿದೆ.

OnePlus 12R ಹೊಸ ಬಣ್ಣದಲ್ಲಿ ಎಂಟ್ರಿ: 3000 ಡಿಸ್ಕೌಂಟ್‌, ಜು.20ಕ್ಕೆ ಮಾರಾಟ

ಆಪರೇಟಿಂಗ್ ಸಿಸ್ಟಮ್: ಒನ್‌ಪ್ಲಸ್‌ನ ಈ ಸ್ಮಾರ್ಟ್‌ಫೋನ್ Android 14 ಆಧಾರಿತ OxygenOS 14.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಥರ್ಮಲ್ ದಕ್ಷತೆಯನ್ನು ಕಾಪಾಡಿಕೊಳ್ಳಲು ಸ್ಮಾರ್ಟ್‌ಫೋನ್ ಕ್ರಯೋ-ವೆಲಾಸಿಟಿ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ.

ಸ್ಟೋರೇಜ್‌: ಕಂಪನಿಯು ಒನ್‌ಪ್ಲಸ್‌ 12R ಸನ್‌ಸೆಟ್ ಡ್ಯೂನ್ ಕಲರ್‌ವೇ ಅನ್ನು ಒಂದೇ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಪರಿಚಯಿಸಿದೆ. 8GB RAM + 256GB ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಬೇರೆ ಬಣ್ಣದ ಮಾದರಿಯು 8GB+128GB ಮತ್ತು 16GB+256GB ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಬ್ಯಾಟರಿ: ಈ ಮೊಬೈಲ್‌ 100W SuperVOOC ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್, NFC ಮತ್ತು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರುತ್ತದೆ.

Best Mobiles in India

English summary
OnePlus 12R was launched in India in a new Sunset Dune colourway. this colourway has been introduced in a single storage configuration and comes with several offers, including no-cost EMI and free OnePlus Buds 3 on purchase.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+