Home
ಮೊಬೈಲ್

OnePlus ಗಟ್ಟಿ ನಿರ್ಧಾರ: ಜುಲೈ 16ರಂದು 2 ಅಚ್ಚರಿ..! One Nord 4 ಲಾಂಚ್, ಇನ್ನೇನು?

ಒನ್‌ಪ್ಲಸ್ ತನ್ನ ಅಭಿಮಾನಿಗಳಿಗೆ ಸದ್ದಿಲ್ಲದೇ ಸರ್ಪ್ರೈಸ್ ಗಿಫ್ಟ್‌ ಕೊಡಲು ಸಜ್ಜಾಗಿದೆ. ಶೀಘ್ರದಲ್ಲೇ ತನ್ನ ಭಾರತೀಯ ಗ್ರಾಹಕರಿಗೆ ಒನ್‌ಪ್ಲಸ್‌ 12R (OnePlus 12R) ಸ್ಮಾರ್ಟ್‌ಫೋನ್‌ ಅನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಲಿದೆ. ಒನ್‌ಪ್ಲಸ್‌ನ ಈ ಫೋನ್ ಪ್ರಸ್ತುತ ಕೇವಲ ಎರಡು ಕಲರ್‌ಗಳಲ್ಲಿ ಮಾತ್ರ ಲಭ್ಯವಿದೆ. ಕಂಪನಿಯು ಈ ಫೋನ್ ಅನ್ನು ಕೂಲ್ ಬ್ಲೂ ಮತ್ತು ಐರನ್ ಗ್ರೇ ಬಣ್ಣಗಳಲ್ಲಿ ಪರಿಚಯಿಸಿತ್ತು. ಆದರೆ, ಹೊಸ ಬಣ್ಣದ ಆಯ್ಕೆಯ ನಂತರ, ಒನ್‌ಪ್ಲಸ್‌ ಪ್ರಿಯರು ಇದನ್ನು ಒಟ್ಟು ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಇದರ ಬೆಲೆ ಎಷ್ಟು? ಹೊಸ ಫೀಚರ್ಸ್‌ ಏನಿರಲಿದೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಕಂಪನಿಯು ಇದೇ ಜುಲೈ 16 ರಂದು ತನ್ನ ಹೊಸ OnePlus Nord 4 5G ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಮಧ್ಯೆಯೇ, ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ OnePlus 12R ಸ್ಮಾರ್ಟ್‌ಫೋನ್ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದರ ಹೊಸ ಬಣ್ಣದ ಫೋಟೋವನ್ನು ಶೇರ್‌ ಮಾಡಿರುವುದಲ್ಲದೇ, ಶ್ರೇಷ್ಠತೆ ಮತ್ತು ಸೊಬಗುಗಳು ಸೂಕ್ಷ್ಮವಾಗಿ ಬೆರೆತಾಗ ಏನಾಗುತ್ತದೆ? ಎಂದು ಪ್ರಶ್ನಿಸಿದೆ. ಈ ಸ್ಮಾರ್ಟ್‌ಫೋನ್ ಅನ್ನು ಸನ್‌ಸೆಟ್ ಡ್ಯೂನ್ ಬಣ್ಣದೊಂದಿಗೆ ಪರಿಚಯಿಸಲಿದೆ.

OnePlus ಗಟ್ಟಿ ನಿರ್ಧಾರ: ಜು.16ಕ್ಕೆ 2 ಅಚ್ಚರಿ.. One Nord 4 ಲಾಂಚ್, ಇನ್ನೇನು?

ಮುಖ್ಯಾಂಶಗಳು

  • ಜುಲೈ 16 ರಂದು OnePlus Nord 4 5G ಫೋನ್‌ ಭಾರತದಲ್ಲಿ ಬಿಡುಗಡೆ.
  • ಇದೇ ದಿನ OnePlus 12R ಸ್ಮಾರ್ಟ್‌ಫೋನ್ ಹೊಸ ಬಣ್ಣದಲ್ಲಿ ಲಾಂಚ್ ಸಾಧ್ಯತೆ.
  • ಈ ಸ್ಮಾರ್ಟ್‌ಫೋನ್ ಪ್ರಸ್ತುತ ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಇದೀಗ 'ಸನ್‌ಸೆಟ್ ಡ್ಯೂನ್' ಕಲರ್‌ನಲ್ಲಿ ರಿಲೀಸ್!

OnePlus 12R ಬೆಲೆ ಎಷ್ಟು?

OnePlus 12R ಸ್ಮಾರ್ಟ್‌ಫೋನ್ ಬೆಲೆಯು 39,999 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದು ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ನೀವು ಇದರ 8GB + 128GB ಸ್ಟೋರೇಜ್‌ ವೇರಿಯಂಟ್‌ ಅನ್ನು 39,999 ರೂ.ಗಳಲ್ಲಿ ಖರೀದಿಸಬಹುದು. 8GB + 256GB ಸ್ಟೋರೇಜ್‌ ಮಾದರಿಯ ಬೆಲೆ 42,999 ರೂ. ಇದೆ. ನೀವು 16GB + 256GB ಸ್ಟೋರೇಜ್‌ ರೂಪಾಂತರವನ್ನು 45,999 ರೂ. ಬೆಲೆಯಲ್ಲಿ ಖರೀದಿಸಬಹುದು.

OnePlus 12Rನ ಹೊಸ ವಿಶೇಷತೆಗಳೇನು?

ಡಿಸ್ಪ್ಲೇ: ಒನ್‌ಪ್ಲಸ್‌ 12R ಫೋನ್ LTPO4.0 ಜೊತೆಗೆ 6.78 ಇಂಚಿನ AMOLED ProXDR ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಲ್ಪೇಯು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120 Hz ವರೆಗೆ ರಿಫ್ರೆಶ್ ದರ ಹೊಂದಿದೆ. 4,500nits ಗರಿಷ್ಠ ಬ್ರೈಟ್‌ನೆಸ್‌ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್: ಒನ್‌ಪ್ಲಸ್‌ ಕಂಪನಿಯು ತನ್ನ ಫೋನ್‌ಗಳನ್ನು Qualcomm Snapdragon 8 Gen 2 ಮೊಬೈಲ್ ಪ್ಲಾಟ್‌ಫಾರ್ಮ್‌ನೊಂದಿಗೆ ತರುತ್ತದೆ. ಅದರಂತೆ, ಒನ್‌ಪ್ಲಸ್‌ 12R ಕೂಡ Qualcomm Snapdragon 8 Gen 2 ಚಿಪ್‌ಸೆಟ್‌ ಅನ್ನು ಹೊಂದಿದೆ.

ಆಪರೇಟಿಂಗ್ ಸಿಸ್ಟಮ್: ಒನ್‌ಪ್ಲಸ್‌ನ ಈ ಸ್ಮಾರ್ಟ್‌ಫೋನ್ Android 14 ಆಧಾರಿತ OxygenOS 14.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಕಂಪನಿಯು ಒನ್‌ಪ್ಲಸ್‌ 12R ಅನ್ನು ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಪರಿಚಯಿಸಿದೆ. 8GB+128GB, 8GB+256GB ಮತ್ತು 16GB+256GB ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ 8GB/16GB LPDDR5X RAM ಮತ್ತು 128GB/256GB UFS 3.1 ಸ್ಟೋರೇಜ್‌ನೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್: ಈ ಫೋನ್ 50MP (ಸೋನಿ IMX890) ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಒನ್‌ಪ್ಲಸ್‌ 12Rನಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 16MP ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕಪ್: ಈ ಮೊಬೈಲ್‌ನ ಬ್ಯಾಟರಿ ಬ್ಯಾಕಪ್‌ ಬಗ್ಗೆ ನೋಡುವುದಾದರೆ, 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಅನುಗುಣವಾಗಿ, 100W SUPERVOOC ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್, NFC ಮತ್ತು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರುತ್ತದೆ.

Best Mobiles in India

English summary
OnePlus 12R to launch in new colour option in India. It’s called ‘Sunset Dune’ and the teaser image shows a Rose Gold-like colour.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+