Home
ಮೊಬೈಲ್

OnePlus 13 ಫೋನಿನ ವಿನ್ಯಾಸ, ಕಲರ್ ಲೀಕ್.. ಯಾವಾಗ ಲಾಂಚ್?

ಒನ್‌ಪ್ಲಸ್‌ ತನ್ನ 13 ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಅದುವೇ, ಒನ್‌ಪ್ಲಸ್‌ 13 (OnePlus 13) ಮೊಬೈಲ್. ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್‌ ಆರಂಭದಲ್ಲಿ ಈ ಹೊಸ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ. ಈ ಮಧ್ಯೆಯೇ, ಮುಂಬರುವ ಹೊಸ ಫೋನಿನ ಪ್ರಮುಖ ವೈಶಿಷ್ಟ್ಯಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. ಇದೀಗ, ಒನ್‌ಪ್ಲಸ್‌ 13 ಫೋನಿನ ವಿನ್ಯಾಸ, ಕಲರ್ ಸೋರಿಕೆಯಾಗಿದೆ.

ಒನ್‌ಪ್ಲಸ್ ಸದಾ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದಲೇ, ಗ್ರಾಹಕರು ಒನ್‌ಪ್ಲಸ್ ಕಂಪನಿಯ ಮೊಬೈಲ್‌ಗಳನ್ನು ಹೆಚ್ಚು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಈ ಸಾಲಿಗೆ ಒನ್‌ಪ್ಲಸ್‌ 13 ಫೋನ್ ಸೇರ್ಪಡೆಯಾಗಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಸಸ್ಯಾಹಾರಿ ಲೆದರ್ ಬ್ಯಾಕ್‌ನೊಂದಿಗೆ ಹಸಿರು ಬಣ್ಣದಲ್ಲಿ ಬರಬಹುದು. ಫೋನ್ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಹಿಂದಿನ ಮಾದರಿಯಂತೆ ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಮಧ್ಯದಲ್ಲಿ ಕಂಪನಿಯ ಬ್ರ್ಯಾಂಡಿಂಗ್ ಲೋಗೋ ಇರಲಿದೆ.

OnePlus 13 ಫೋನಿನ ವಿನ್ಯಾಸ, ಕಲರ್ ಲೀಕ್.. ಯಾವಾಗ ಲಾಂಚ್?

ಒನ್‌ಪ್ಲಸ್‌ 13 ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಲ್ಫೇ: ಸೋರಿಕೆಯ ಪ್ರಕಾರ, ಒನ್‌ಪ್ಲಸ್‌ 13 ಫೋನ್ 6.7 ಇಂಚಿನ ಮೈಕ್ರೋ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಫೋನ್ 1440 x 3168 ಪಿಕ್ಸೆಲ್ 2K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕ, LTPO ತಂತ್ರಜ್ಞಾನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಪ್ರೊಸೆಸರ್: ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ ಶಕ್ತಿಯುತ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4ಪ್ರೊಸೆಸರ್‌ ಅನ್ನು ಹೊಂದಿರಲಿದೆ. ಇದರಲ್ಲಿ O916T ಹ್ಯಾಪ್ಟಿಕ್ ಮೋಟಾರ್ ಇರಲಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನೊಂದಿಗೆ ಬರಲಿದೆ. ಇದು ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರಲಿದೆ. ಈ ಫೋನ್‌ನಲ್ಲಿ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸಬಹುದು.

ಕ್ಯಾಮೆರಾ: ಮುಂಬರುವ ಹೊಸ ಒನ್‌ಪ್ಲಸ್‌ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಮಲ್ಟಿ-ಫೋಕಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರಲಿದೆ. 50 ಮೆಗಾಪಿಕ್ಸೆಲ್ Sony LYT-808 ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ IMX882 ಅಲ್ಟ್ರಾವೈಡ್ ಮತ್ತು 50 ಮೆಗಾಪಿಕ್ಸೆಲ್ IMX882 ಕ್ಯಾಮೆರಾ ಲೆನ್ಸ್‌ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, ಎಲ್ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳು ಲಭ್ಯವಿರುತ್ತದೆ.

ಬ್ಯಾಟರಿ: ಒನ್‌ಪ್ಲಸ್‌ 13 ಫೋನ್ OnePlus 12 ಫೋನಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಒದಗಿಸಲಾಗುತ್ತದೆ.

ಇತರೆ ಫೀಚರ್ಸ್‌: ಈ ಫೋನ್ ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರಲಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68/69 ರೇಟಿಂಗ್ ಪಡೆಯುವ ಸಾಧ್ಯತೆಯಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈ-ಫೈ, ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒನ್‌ಪ್ಲಸ್‌ 13 ಫೋನಿನ ನಿರೀಕ್ಷಿತ ಬೆಲೆ

ಕಂಪನಿಯು ಒನ್‌ಪ್ಲಸ್‌ 13 ಫೋನಿನ ಬೆಲೆ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಪ್ರಕಟಿಸಿಲ್ಲ. ಆದರೆ, ಒನ್‌ಪ್ಲಸ್‌ 12 ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನಿನ 12GB ಮತ್ತು 256GB ಸ್ಟೋರೇಜ್‌ ಬೆಲೆ 64,999 ರೂ. ಇದೆ. 16GB ಮತ್ತು 512GB ಸ್ಟೋರೇಜ್‌ ರೂಪಾಂತರವು 69,999 ರೂ. ಬೆಲೆಗೆ ಬಿಡುಗಡೆಯಾಗಿದೆ. ಮುಂಬರುವ ಒನ್‌ಪ್ಲಸ್‌ 13 ಫೋನಿನ ಬೆಲೆ ಇದಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ.

Best Mobiles in India

English summary
oneplus 13 design revealed, could get Green vegan leather back option: What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+