Home
ಮೊಬೈಲ್

OnePlus 13 ಮೊದಲ ಫೋಟೋ ಲೀಕ್! ಡಿಸೈನ್‌, ಫೀಚರ್ಸ್‌ ಎಲ್ಲವೂ ಸೂಪರ್.. ಲಾಂಚ್ ಯಾವಾಗ?

ಒನ್‌ಪ್ಲಸ್‌ (OnePlus) ಶೀಘ್ರದಲ್ಲೇ ತನ್ನ '13' ಸರಣಿಯಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದು, ಒನ್‌ಪ್ಲಸ್‌ 13 (OnePlus 13) ಹೆಸರಿನೊಂದಿಗೆ ಬರಲಿದೆ. ಈ ಮೊಬೈಲ್ ಅಕ್ಟೋಬರ್ 21ರ ಬಳಿಕ ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಮಾಹಿತಿಯ ಪ್ರಕಾರ, ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದೆ. ಬಳಿಕ, ಭಾರತ ಸೇರಿದಂತೆ ಇನ್ನಿತರ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮಧ್ಯೆಯೇ, ಮುಂಬರುವ ಸ್ಮಾರ್ಟ್‌ಫೋನಿನ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಬನ್ನಿ, ಈ ಫೋನಿನ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಹೌದು, ಒನ್‌ಪ್ಲಸ್‌ 13 ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಇತ್ತ, ನೂತನ ಫೋನಿನ ಪ್ರಮುಖ ವೈಶಿಷ್ಟ್ಯಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. ಈ ಫೋನ್ 6.82 ಇಂಚಿನ ಮೈಕ್ರೋ ಕರ್ವ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಜೊತೆಗೆ, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ, 6000mAh ಬ್ಯಾಟರಿ, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

OnePlus 13 ಮೊದಲ ಫೋಟೋ ಲೀಕ್! ಡಿಸೈನ್‌, ಫೀಚರ್ಸ್‌ ಸೂಪರ್.. ಲಾಂಚ್ ಯಾವಾಗ?

ಒನ್‌ಪ್ಲಸ್ 13 5G ಫೋನಿನ ವಿನ್ಯಾಸ (ನಿರೀಕ್ಷಿತ)

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ವೈಬೋ ಸೈಟ್‌ನಲ್ಲಿ ಒನ್‌ಪ್ಲಸ್ 13 5G ಫೋನಿನ ಮೊದಲ ವಿನ್ಯಾಸವನ್ನು ಹಂಚಿಕೊಳ್ಳಲಾಗಿದೆ. ಈ ಫೋನ್ ಹಿಂಭಾಗದ ಫಲಕದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿರಲಿದೆ. ಮಧ್ಯದಲ್ಲಿ ಕಂಪನಿಯ ಬ್ರ್ಯಾಂಡಿಂಗ್ ಲೋಗೋ ಇರಲಿದೆ. ಕಂಪನಿಯು ಒನ್‌ಪ್ಲಸ್‌ 13 ಅನ್ನು ಸಸ್ಯಾಹಾರಿ ಲೆದರ್ ಬ್ಯಾಕ್‌ನೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ವಿನ್ಯಾಸ ನೋಡಿದರೆ ಮುಂಬರುವ ಫೋನಿನಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ.

ಒನ್‌ಪ್ಲಸ್ 13 5G ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13 5G ಫೋನ್ 6.82 ಇಂಚಿನ 2K BOE 10-bit LTPO ಮೈಕ್ರೋ ಕರ್ವ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಸೆಲ್ಫಿಗಾಗಿ ಮೊಬೈಲ್‌ನ ಮುಂಭಾಗದಲ್ಲಿ ಪಂಚ್ ಹೋಲ್ ಕಟೌಟ್ ವಿನ್ಯಾಸವನ್ನು ಒದಗಿಸಲಾಗುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಒನ್‌ಪ್ಲಸ್ 13 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ 24GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಸೆಟಪ್

ಕಂಪನಿಯು ಒನ್‌ಪ್ಲಸ್ 13 5G ಸ್ಮಾರ್ಟ್‌ಫೋನ್‌ ಅನ್ನು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಟ್‌ನೊಂದಿಗೆ ಪರಿಚಯಿಸಲಿದೆ. ಹಿಂದಿನ ಪ್ಯಾನೆಲ್‌ನಲ್ಲಿ 50 ಮೆಗಾಪಿಕ್ಸೆಲ್ ಸೋನಿ LYT808 ಪ್ರಾಥಮಿಕ ಕ್ಯಾಮೆರಾ ಇರಲಿದೆ. ಜೊತೆಗೆ, 50 ಮೆಗಾಪಿಕ್ಸೆಲ್ LYT600 ಪೆರಿಸ್ಕೋಪ್ ಟೆಲಿಫೋಟೋ ಜೂಮ್ ಸಂವೇದಕ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಪ್ರಿಯರಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ 13 5G ಫೋನ್‌ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು ಮ್ಯಾಗ್ನೆಟಿಕ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ.

ಇತರೆ ವೈಶಿಷ್ಟ್ಯಗಳು

ಮುಂಬರುವ ಈ 5G ಫೋನ್ ಆಂಡ್ರಾಯ್ಡ್‌ 15 ಆಧಾರಿತ OxygenOS 15 ನೊಂದಿಗೆ ಕೆಲಸ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಇದು IP69 ರೇಟಿಂಗ್, ಅಲ್ಟ್ರಾ ಸಾನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಅಲರ್ಟ್ ಸ್ಲೈಡರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

Best Mobiles in India

English summary
OnePlus 13 design, specifications anf launch timeline leaked ahead of launch: What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+