ಇಂದು OnePlus 13 ಫಸ್ಟ್ ಸೇಲ್; 5000 ರಿಯಾಯಿತಿ.. ಮಸ್ತ್ ಫೀಚರ್ಸ್.. ಎಷ್ಟು ಕಡಿಮೆ ಬೆಲೆಗೆ ಸಿಗುತ್ತೆ?
ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಸ್ಮಾರ್ಟ್‌ಫೋನ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು ಒನ್‌ಪ್ಲಸ್ 13 (OnePlus 13) ಸರಣಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ಇಂದು (ಜನವರಿ 10) ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಕಂಪನಿಯು 5,000 ರೂ. ರಿಯಾಯಿತಿ, ನೋ ಕಾಸ್ಟ್ ಇಎಂಐ ಮತ್ತು 18,000 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒನ್‌ಪ್ಲಸ್ 13 ಮೊಬೈಲ್ ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನಿನಲ್ಲಿ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.82 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 12GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನುಒಳಗೊಂಡಿದೆ.ಈ ಫೋನಿನ ಆಫರ್ ಬೆಲೆ ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ 13: ಟಾಪ್ 5 ಫೀಚರ್ಸ್
ಡಿಸ್ಪ್ಲೇ ಹೇಗಿದೆ
ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ 6.82 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2K+ LTPO ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 3168 × 1440 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಜೊತೆಗೆ ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.
ಶಕ್ತಿಶಾಲಿ ಪ್ರೊಸೆಸರ್
ಒನ್‌ಪ್ಲಸ್ 13 ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15ನಲ್ಲಿ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, 900MHz ಅಡ್ರಿನೊ 830 ಜಿಪಿಯು ಸಹ ಹೊಂದಿದೆ. ಈ ಫೋನ್ 12GB, 16GB ಮತ್ತು 24GB RAM ಹೊಂದಿದೆ. ಜೊತೆಗೆ 256GB ಮತ್ತು 512GB ಸ್ಟೋರೇಜ್ ಲಭ್ಯವಿದೆ.
ಟ್ರಿಪಲ್ ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 13 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
6000mAh ಬಿಗ್ ಬ್ಯಾಟರಿ
ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಇದೆ.
ಒನ್‌ಪ್ಲಸ್ 13 ಬೆಲೆ ಮತ್ತು ಆಫರ್‌ಗಳು
ಒನ್‌ಪ್ಲಸ್ 13 ಫೋನನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರ ಬೆಲೆ 69,999 ರೂ. ಆಗಿದೆ. 16GB RAM + 512GB ಸ್ಟೋರೇಜ್ ಆಯ್ಕೆಯು 76,999 ರೂ.ಗೆ ಲಭ್ಯವಿದೆ. ಮತ್ತು 24GB RAM + 1TB ಸ್ಟೋರೇಜ್ ವೇರಿಯಂಟ್ 89,999 ರೂ. ಬೆಲೆ ಹೊಂದಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಮೂರು ರೂಪಾಂತರಗಳ ಮೇಲೆ 5,000 ರೂ. ರಿಯಾಯಿತಿ ಘೋಷಿಸಿದೆ.
ನೀವು ರಿಯಾಯಿತಿಯೊಂದಿಗೆ ಫೋನಿನ ಮೂಲ ಮಾದರಿಯನ್ನು 64,999 ರೂ.ಗೆ ಖರೀದಿಸಬಹುದು. ಇತರೆ ರೂಪಾಂತರವನ್ನು 71,999 ರೂ. ಮತ್ತು 84,999 ರೂ.ಗೆ ಕೊಳ್ಳಬಹುದು. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 5,000 ರೂ. ರಿಯಾಯಿತಿ ಮತ್ತು 12 ತಿಂಗಳ ನೋ ಕಾಸ್ಟ್ ಎಎಂಐ ಲಭ್ಯವಿದೆ. 18,000 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಮತ್ತು 7,000 ರೂ. ಬೋನಸ್ ಸಹ ಸಿಗುತ್ತದೆ.
ನೀವು ಒನ್‌ಪ್ಲಸ್ 13 ಫೋನನ್ನು ಬ್ಲ್ಯಾಕ್ ಎಕ್ಲಿಪ್ಸ್, ಆರ್ಕ್ಟಿಕ್ ಡಾನ್ ಮತ್ತು ಮಿಡ್‌ನೈಟ್ ಓಷನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ಇಂದು (ಜನವರಿ 10) ಮಧ್ಯಾಹ್ನ 12 ಗಂಟೆಯಿಂದ ಕಂಪನಿಯ ಅಧಿಕೃತ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್, ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.


Click it and Unblock the Notifications








