Home
ಮೊಬೈಲ್

OnePlus 'ಕ್ರಾಂತಿ'.. ಇದುವೇ IP69 ರೇಟಿಂಗ್‌ ಪಡೆದ ಮೊದಲ ಫೋನ್‌: ಫೀಚರ್ಸ್ ಲೀಕ್, ಬಿಡುಗಡೆ ಯಾವಾಗ?

ಒನ್‌ಪ್ಲಸ್ (OnePlus) ಮಾರುಕಟ್ಟೆಗೆ ಪರಿಚಯಿಸಿರುವ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್‌ ಫೇವರಿಟ್‌ ಆಗಿವೆ. ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿವೆ. ಇದೀಗ, ಮತ್ತೊಂದು ಹೊಸ ಮೊಬೈಲ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ ಅನ್ನು IP69 ರೇಟಿಂಗ್‌ನೊಂದಿಗೆ ಪ್ರಾರಂಭಿಸಬಹುದು. ಇದು Qualcomm Snapdragon 8 Gen 4 ಪ್ರೊಸೆಸರ್, 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6000mAh ಬ್ಯಾಟರಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಹೊಂದಿರಲಿದೆ. ಈ ಫೋನ್‌ನ ವಿಶೇಷತೆಗಳೇನು? ಯಾವಾಗ ಬಿಡುಗಡೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒನ್‌ಪ್ಲಸ್ ಕಂಪನಿಯು ತನ್ನ ಹೊಸ OnePlus 13 ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಹೊಸ ಮೊಬೈಲ್ ಸಖತ್‌ ಸ್ಟೈಲಿಶ್‌ ಆಗಿರಲಿದ್ದು, ಮೊಬೈಲ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಕಂಪನಿಯು ಅತಿದೊಡ್ಡ ಬ್ಯಾಟರಿಯೊಂದಿಗೆ ಈ ಫೋನ್‌ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಮಧ್ಯೆಯೇ ಒನ್‌ಪ್ಲಸ್ 13 ಮೊಬೈಲ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಸೋರಿಕೆ ಆಗಿವೆ. ಬನ್ನಿ, ಹೊಸ ಮಾಹಿತಿಯನ್ನು ವಿವರವಾಗಿ ತಿಳಿಯೋಣ.

OnePlus 'ಕ್ರಾಂತಿ'.. ಇದುವೇ IP69 ರೇಟಿಂಗ್‌ ಪಡೆದ ಮೊದಲ ಫೋನ್‌: ಫೀಚರ್ಸ್ ಲೀಕ್!

ವರ್ಷದ ಕೊನೆಯಲ್ಲಿ ಒನ್‌ಪ್ಲಸ್ ತನ್ನ ಸಂಖ್ಯೆಯ ಸರಣಿಯನ್ನು ವಿಸ್ತರಿಸಬಹುದು. ಇದರ ಅಡಿಯಲ್ಲಿ, OnePlus 13 ಸ್ಮಾರ್ಟ್‌ಫೋನ್ ಅನ್ನು ಮೊದಲು ಚೀನಾದಲ್ಲಿ ಮತ್ತು ನಂತರ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಬಹುದು. ಇನ್ನೂ ಸಾಕಷ್ಟು ಸಮಯ ಇದ್ದರೂ, ಫೋನ್‌ಗೆ ಸಂಬಂಧಿಸಿದ ಮಾಹಿತಿಗಳು ನಿರಂತರವಾಗಿ ಸೋರಿಕೆಯಾಗುತ್ತಿವೆ. ಇತ್ತೀಚಿನ ಅಪ್ಡೇಟ್‌ನಲ್ಲಿ ಈ ಮೊಬೈಲ್ IP69 ರೇಟಿಂಗ್ ಅನ್ನು ಪಡೆದಿದೆ ಎನ್ನಲಾಗಿದೆ. ಇದು ನಿಜವಾದರೆ, ಒನ್‌ಪ್ಲಸ್ ಮೊಬೈಲ್ ಮೊದಲ ಬಾರಿಗೆ ಇಂತಹ ಸೌಲಭ್ಯವನ್ನು ಹೊಂದಿರಲಿದೆ.

ಇದೇ ನೋಡಿ IP69 ರೇಟಿಂಗ್ ಪಡೆದ ಫಸ್ಟ್ ಫೋನ್!

  • OnePlus 13 ಮೊಬೈಲ್‌ಗೆ ಸಂಬಂಧಿಸಿದ ಹೊಸ ವಿವರಗಳನ್ನು ವೈಬೋ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಹಂಚಿಕೊಂಡಿದೆ. ಸೋರಿಕೆಯಲ್ಲಿ ಫೋನ್ ಹೆಸರಿಲ್ಲದಿದ್ದರೂ, ಇದು OnePlus 13 ಎಂದು ಹೇಳಲಾಗುತ್ತಿದೆ.
  • ಟಿಪ್‌ಸ್ಟರ್ ಪ್ರಕಾರ, OnePlus 13 ಧೂಳು ಮತ್ತು ನೀರಿನ ಪ್ರತಿರೋಧ IP68/IP69 ರೇಟಿಂಗ್‌ನೊಂದಿಗೆ ಬರಬಹುದು. ಈ ರೇಟಿಂಗ್ ಅನ್ನು ನೀರು ಮತ್ತು ಧೂಳಿಗೆ ಅತ್ಯಧಿಕವೆಂದು ಪರಿಗಣಿಸಲಾಗುತ್ತದೆ.
  • IP68 ನೊಂದಿಗೆ ಫೋನ್ ಅನ್ನು ಸುಮಾರು 30 ನಿಮಿಷಗಳ ಕಾಲ, 3 ಮೀಟರ್ ವರೆಗೆ ನೀರಿನಲ್ಲಿ ಮುಳುಗಿಸಬಹುದು. IP69 ನಲ್ಲಿ, ಫೋನ್ ಹೆಚ್ಚಿನ ಒತ್ತಡ ಮತ್ತು ಹೆಚ್ಚಿನ ತಾಪಮಾನದ ನೀರಿನ ಜೆಟ್‌ಗಳನ್ನು ತಡೆದುಕೊಳ್ಳುವ ಮೂಲಕ ಹೆಚ್ಚಿನ ರಕ್ಷಣೆ ನೀಡುತ್ತದೆ.
  • ಈ ಹಿಂದೆ ಪರಿಚಯಿಸಿದ್ದ OnePlus 12 ಫೋನ್ IP65 ರೇಟಿಂಗ್ ಅನ್ನು ಹೊಂದಿದೆ. ಅಂದರೆ, ಹೊಸ ರೂಪಾಂತರದಲ್ಲಿ IP68 ಅಥವಾ IP69 ರೇಟಿಂಗ್ ಅನ್ನು ಪಡೆಯುವುದು ದೊಡ್ಡ ಅಪ್‌ಗ್ರೇಡ್ ಎಂದು ಸಾಬೀತುಪಡಿಸುತ್ತದೆ.

OnePlus 13ನ ಫೀಚರ್ಸ್‌ಗಳೇನು?

  • ಬಿಡುಗಡೆ ದಿನಾಂಕ: OnePlus 13 ಅನ್ನು ಅಕ್ಟೋಬರ್‌ನಲ್ಲಿ ರಿಲೀಸ್ ಮಾಡಬಹುದು.
  • ಡಿಸ್ಲ್ಪೇ: ಇದುವರೆಗಿನ ವರದಿಗಳು ಮತ್ತು ಸೋರಿಕೆಗಳ ಪ್ರಕಾರ, OnePlus 13 6.8-ಇಂಚಿನ LTPO OLED ಕರ್ವ್ಡ್-ಎಡ್ಜ್ ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ.
  • ರಿಫ್ರೆಶ್ ರೇಟ್: ಇದು 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ನೀಡಬಹುದು.
  • ಪ್ರೊಸೆಸರ್: ಮುಂಬರುವ OnePlus 13 ನಲ್ಲಿ Qualcomm Snapdragon 8 Gen 4 ಚಿಪ್‌ಸೆಟ್ ಅನ್ನು ಒದಗಿಸಬಹುದು.
  • RAM ಮತ್ತು ಸ್ಟೋರೇಜ್: OnePlus 13 ನಲ್ಲಿ ನೀವು 16 GB LPDDR5X RAM ಮತ್ತು 1 TB UFS 4.0 ಸ್ಟೋರೇಜ್‌ ಅನ್ನು ಪಡೆಯಬಹುದು.
  • ಬ್ಯಾಟರಿ: OnePlus 13 ಅನ್ನು ಚಾರ್ಜ್ ಮಾಡಲು 100W ಕ್ಷಿಪ್ರ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಂತೆ ದೊಡ್ಡ 6000mAh ಬ್ಯಾಟರಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಅಳವಡಿಸಬಹುದಾಗಿದೆ.
  • ಕ್ಯಾಮೆರಾ: ಸೋರಿಕೆಯ ಪ್ರಕಾರ, OnePlus 13ರ ಹಿಂಬದಿಯ ಕ್ಯಾಮೆರಾ ಸೆಟಪ್ ಸೋನಿ LYT-808 ಪ್ರಾಥಮಿಕ, ಅಲ್ಟ್ರಾವೈಡ್ ಶಾಟ್‌ಗಳಿಗಾಗಿ Sony IMX882 ಲೆನ್ಸ್ ಮತ್ತು ಪೆರಿಸ್ಕೋಪ್ ಜೂಮ್‌ಗಾಗಿ IMX882 ಕ್ಯಾಮೆರಾ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲಾ ಮೂರು ಲೆನ್ಸ್‌ಗಳು 50MP ಆಗಿರಬಹುದು.
  • ಇತರೆ ಫೀಚರ್ಸ್: OnePlus 13 ಸ್ಮಾರ್ಟ್‌ಫೋನ್‌ನಲ್ಲಿ ಭದ್ರತೆಗಾಗಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಒದಗಿಸಬಹುದು.
Best Mobiles in India

English summary
OnePlus 13 IP69 rating leaked. OnePlus may expand its number series at the end of the year. What to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+