Home
ಮೊಬೈಲ್

OnePlus 13: ಇತಿಹಾಸದಲ್ಲಿ ಮೊದಲು.. ಅತಿ ದೊಡ್ಡ ಬ್ಯಾಟರಿ.. 36 ನಿಮಿಷದಲ್ಲೇ ಚಾರ್ಜ್! ಬೆಲೆ ಎಷ್ಟು?

ಒನ್‌ಪ್ಲಸ್ ಪ್ರಿಯರಿಗೆ ಇಷ್ಟು ಸಾಕು! 6,000mAh ಅತಿ ದೊಡ್ಡ ಬ್ಯಾಟರಿ.. ಜೊತೆಗೆ 100W ಚಾರ್ಜಿಂಗ್, ಫೋಟೋಗ್ರಫಿ ಪ್ರಿಯರಿಗೆ ಮೂರು 50MP ಕ್ಯಾಮೆರಾಗಳು. ಹೌದು, ಒನ್‌ಪ್ಲಸ್ 13 (OnePlus 13) ಅಕ್ಟೋಬರ್ 31 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು, ಈಗಾಗಲೇ ಚೀನಾ ವೆಬ್‌ಸೈಟ್‌ನಲ್ಲಿ ಮೈಕ್ರೋ ಸೈಟ್ ಅನ್ನು ಲೈವ್ ಮಾಡಿದೆ. ಇದೀಗ, ಮುಂಬರುವ ಹೊಸ ಫೋನಿನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕಂಪನಿಯು ಮುಂಬರುವ ಒನ್‌ಪ್ಲಸ್ 13 ಮೊಬೈಲ್‌ನ ಹಲವಾರು ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಬ್ಯಾಟರಿ ಗಾತ್ರ, ಚಾರ್ಜಿಂಗ್ ವೇಗ, ಎನ್‌ಎಫ್‌ಸಿ, ಯುಎಸ್‌ಬಿ ಸ್ಟ್ಯಾಂಡರ್ಡ್ ಸೇರದಿಂತೆ ಹಲವು ವಿಶೇಷತೆಗಳನ್ನು ಖಚಿತಪಡಿಸಲಾಗಿದೆ. ಈ ಶಕ್ತಿಶಾಲಿ ಮೊಬೈಲ್ 6,000mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಫೋನ್ ಕಂಪನಿಯ ಇತಿಹಾಸದಲ್ಲಿ ಅತಿ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಅಬ್ಸಿಡಿಯನ್ ಬ್ಲಾಕ್, ಬ್ಲೂ ಮೊಮೆಂಟ್ ಮತ್ತು ವೈಟ್ ಡ್ಯೂ ಮಾರ್ನಿಂಗ್ ಡಾನ್ ಬಣ್ಣಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್ ರೈನ್ ಟಚ್ 2.0 ಹೊಂದಿದೆ.

OnePlus 13 ಬರ್ತಿದೆ! 6,000mAh ಬ್ಯಾಟರಿ, 100W ಚಾರ್ಜಿಂಗ್ ಖಚಿತ; ಬೆಲೆ ಎಷ್ಟು?

36 ನಿಮಿಷಗಳಲ್ಲಿ 100% ಚಾರ್ಜ್

6,000mAh ದೊಡ್ಡ ಬ್ಯಾಟರಿ ಜೊತೆಗೆ, 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ. 100W ಸೂಪರ್‌ವೂಕ್‌ ವೇಗದ ಚಾರ್ಜಿಂಗ್ ತಂತ್ರಜ್ಞಾನದಿಂದ ಕೇವಲ 36 ನಿಮಿಷಗಳಲ್ಲಿ 0 ರಿಂದ 100 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಫೋನಿನಲ್ಲಿ ಒಂದು ಸೂಪರ್‌ವೂಕ್‌ S ಚಿಪ್ ಹೊಂದಿದ್ದು, ಇದು ಶೇ.99.5 ಡಿಸ್ಚಾರ್ಜ್ ದಕ್ಷತೆಯನ್ನು ನೀಡುತ್ತದೆ. ಇದು 100W UFCS ಫ್ಯೂಷನ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್ 13 ಫೋನಿನ ಬೆಲೆ (ನಿರೀಕ್ಷಿತ)

ಕಂಪನಿಯು ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಅನ್ನು ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಿದೆ.ಈ ಫೋನಿನ ಮೂಲ ರೂಪಾಂತರ 12GB RAM + 256GB ಸ್ಟೋರೇಜ್‌ ಹೊಂದಿರಲಿದೆ. ಇದರ ಬೆಲೆ 60 ಸಾವಿರಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಭಾರತದಲ್ಲಿ, ಒನ್‌ಪ್ಲಸ್‌ 12 ಫೋನಿನ 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 64,999 ರೂ. ಇರಲಿದೆ. ಇನ್ನೂ 16GB + 512GB ಸ್ಟೋರೇಜ್ ರೂಪಾಂತರದ ಬೆಲೆ 69,999 ರೂ.ಗೆ ಬಿಡುಗಡೆಯಾಗಲಿದೆ.

ಒನ್‌ಪ್ಲಸ್ 13 ಪೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13 ಫೋನ್ LTPO ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. HDR10+, ಡಾಲ್ಬಿ ವಿಷನ್, ಡಿಸ್ಪ್ಲೇಮೇಟ್ A++ ಮತ್ತು ಟಿಯುವಿ ರೈನ್‌ಲ್ಯಾಂಡ್ ಇಂಟೆಲಿಜೆಂಟ್ ಐ ಪ್ರೊಟೆಕ್ಷನ್ 4.0 ನೊಂದಿಗೆ ಬರುತ್ತದೆ. ಡಿಸ್ಪ್ಲೇಯು ಡಿಸಿ ಡಿಮ್ಮಿಂಗ್ ಮತ್ತು ಆಂಟಿ ಫ್ಲಿಕ್ಕರ್ ಐ ಪ್ರೊಟೆಕ್ಷನ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಒನ್‌ಪ್ಲಸ್ 13 ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಪ್ರೊಸೆಸರ್‌ ಹೊಂದಿರಲಿದೆ. ಇದು 8 ಕೋರ್ ಪ್ರೊಸೆಸರ್ ಆಗಿದ್ದು, ಸಿಪಿಯು 4.32 GHz ವರೆಗಿನ ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್‌ 13 ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ LYT-808 ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್, ಓಐಎಸ್‌ (OIS) ಬೆಂಬಲ ಹೊಂದಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟಗಳು

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನಿನ ಯುಎಸ್‌ಬಿ ಸಿ ಚಾರ್ಜಿಂಗ್ ಪೋರ್ಟ್ ಯುಎಸ್‌ಬಿ 3.2 ಜೆನ್ ಆಗಿದೆ. ಇದು ಯುಎಸ್‌ಬಿ ಮೂಲಕ ವೇಗದ ಡೇಟಾ ಚಾರ್ಜಿಂಗ್ ನೀಡುತ್ತದೆ. ಈ ಮೊಬೈಲ್ ಐಆರ್ ಬ್ಲಾಸ್ಟರ್, ಮಲ್ಟಿಫಂಕ್ಷನಲ್ ಎನ್‌ಎಫ್‌ಸಿ (NFC) ಮತ್ತು ಅಲರ್ಟ್‌ ಸ್ಲೈಡರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ರೈನ್ ಟಚ್ 2.0 ಹೊಂದಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಫೋನ್ ಒದ್ದೆಯಾದರೂ ಆಪರೇಟ್ ಮಾಡಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+