ಬರ್ತಿದೆ ಹೊಸ OnePlus ಫೋನ್: 50MP ಕ್ಯಾಮೆರಾ.. 5500mAh ಬ್ಯಾಟರಿ ಫಿಕ್ಸ್! ಬೆಲೆ ನೋಡಿ
ಒನ್ಪ್ಲಸ್ (OnePlus) ಕಂಪನಿಯು ಸದಾ ಉತ್ತಮ ಗುಣಮಟ್ಟದ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದಲೇ, ಒನ್ಪ್ಲಸ್ ಕಂಪನಿಯ ಪ್ರತಿಯೊಂದು ಮೊಬೈಲ್ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿದೆ. ಇದೀಗ, ಹೊಸ ಒನ್ಪ್ಲಸ್ ಫೋನ್ ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಹೌದು, ಒನ್ಪ್ಲಸ್ ಹೊಸ ಒನ್ಪ್ಲಸ್ 13 (OnePlus 13) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಬನ್ನಿ, ಈ ಹೊಸ ಒನ್ಪ್ಲಸ್ ಫೋನಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಒನ್ಪ್ಲಸ್ 13 ಸ್ಮಾರ್ಟ್ಫೋನ್ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಅಥವಾ ನವೆಂಬರ್ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಒನ್ಪ್ಲಸ್ 13 ಫೋನ್ ಚೀನಾದಲ್ಲಿ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಒನ್ಪ್ಲಸ್ 13 ಫೋನ್ ಬೆಲೆಯು ಒನ್ಪ್ಲಸ್ 12 ನಂತೆಯೇ ಇರುತ್ತದೆ. ಈ ಫೋನಿನ ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್ ತಿಳಿಯಲು ಮುಂದೆ ಓದಿ.

ಒನ್ಪ್ಲಸ್ 13 ಫೋನಿನ ಬೆಲೆ ಎಷ್ಟಿರಲಿದೆ?
ಮುಂಬರುವ ಹೊಸ ಒನ್ಪ್ಲಸ್ 13 ಫೋನ್ ಸ್ಮಾರ್ಟ್ಫೋನ್ ಪ್ರಿಯರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಒನ್ಪ್ಲಸ್ 13 ಫೋನ್ ಸ್ವಲ್ಪ ಹೆಚ್ಚಿನ ಬೆಲೆಗೆ ಬಿಡುಗಡೆಯಾಗಲಿದೆ. ಆದರೆ, ಈ ಫೋನ್ ಬೆಲೆಗೆ ತಕ್ಕಂತೆ ಯೋಗ್ಯವಾದ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಒನ್ಪ್ಲಸ್ 12 ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 12GB+256GB ಮತ್ತು 16GB+512GB ಮಾದರಿಯು ಕ್ರಮವಾಗಿ 64,999 ರೂ. ಮತ್ತು 69,999 ರೂ. ಬೆಲೆ ಹೊಂದಿದೆ.
ಒನ್ಪ್ಲಸ್ 13 ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಫೇ: ಒನ್ಪ್ಲಸ್ 13 ಫೋನಿನ ವೈಶಿಷ್ಟ್ಯಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ. ಮಾಹಿತಿಯ ಪ್ರಕಾರ, ಒನ್ಪ್ಲಸ್ 13 ಫೋನ್ 6.7 ಇಂಚಿನ ಮೈಕ್ರೋ-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಹೊಸ ಫೋನ್ 2K ರೆಸಲ್ಯೂಶನ್, LTPO ತಂತ್ರಜ್ಞಾನ ಸೇರಿದಂತೆ ಇನ್ನಿತರ ಡಿಸ್ಪ್ಲೇ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.
ಪ್ರೊಸೆಸರ್: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಶಕ್ತಿಯುತ Qualcomm Snapdragon 8 Gen 4 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಫೋನ್ನಲ್ಲಿ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ಗಳು ಮತ್ತು ಗೇಮಿಂಗ್ ಅಪ್ಲಿಕೇಶನ್ಗಳನ್ನು ಹೆಚ್ಚಾಗಿ ಬಳಸಬಹುದು. ಈ ಫೋನ್ನಲ್ಲಿ ಒದಗಿಸಲಾದ ಚಿಪ್ಸೆಟ್ ಸುಧಾರಿತ ವೇಗ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ.
ಸಾಫ್ಟ್ವೇರ್: ಹೊಸ ಒನ್ಪ್ಲಸ್ ಮೊಬೈಲ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನೊಂದಿಗೆ ಬಿಡುಗಡೆಯಾಗಲಿದೆ. ಈ ಒನ್ಪ್ಲಸ್ ಫೋನಿಗೆ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳು ಲಭ್ಯವಿರುತ್ತವೆ ಎಂದು ಹೇಳಲಾಗುತ್ತಿದೆ. ಈ ಫೋನ್ ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರಲಿದೆ.

ಕ್ಯಾಮೆರಾ ಸೆಟಪ್: ಈ ಒನ್ಪ್ಲಸ್ 13 ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ನೊಂದಿಗೆ ಮಲ್ಟಿ-ಫೋಕಲ್ ಕ್ಯಾಮೆರಾ ಸಿಸ್ಟಮ್ನೊಂದಿಗೆ ಬರಲಿದೆ. ಈ ಹೊಸ ಫೋನ್ 50MP ಪ್ರಾಥಮಿಕ ಕ್ಯಾಮೆರಾ, ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಹೊಂದಿದೆ.
ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾವನ್ನು ಸಹ ಹೊಂದಿದೆ. ನೀವು ಈ ಸ್ಮಾರ್ಟ್ಫೋನ್ ಸಹಾಯದಿಂದ ಸ್ಪಷ್ಟವಾದ ಫೋಟೋಗಳು ಮತ್ತು ವಿಡಿಯೋಗಳನ್ನು ಪಡೆಯಬಹುದು. ಇದಲ್ಲದೆ, ಫೋನ್ ಎಲ್ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗಿದೆ.
ಬ್ಯಾಟರಿ ಬ್ಯಾಕಪ್: ಒನ್ಪ್ಲಸ್ 13 ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ನಿಜವಾದರೆ, ಈ ಫೋನ್ ಖರೀದಿಸುವ ಗ್ರಾಹಕರು ಬ್ಯಾಟರಿ ಬ್ಯಾಕಪ್ ಬಗ್ಗೆ ಚಿಂತಿಸಬೇಕಿಲ್ಲ. ಜೊತೆಗೆ, ಮುಂಬರುವ ಹೊಸ ಫೋನ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ, ಯುಎಸ್ಬಿ ಟೈಪ್-ಸಿ ಪೋರ್ಟ್, ವೈ-ಫೈ, ಜಿಪಿಎಸ್ ಸೇರಿದಂತೆ ವಿವಿಧ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.


Click it and Unblock the Notifications








