Home
ಮೊಬೈಲ್

OnePlus 13 Mini ಎಂಬ ಹೊಸ ಬಜೆಟ್ ಬೆಲೆಯ ಫೋನ್ ಬಿಡುಗಡೆಗೆ ಸಜ್ಜು!

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೆಸರಾದ OnePlus ಕಂಪೆನಿ ಹೊಸದಾಗಿ OnePlus 13 Mini ಎಂಬ ಹೊಸ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ ಎಂದು ಹೇಳಲಾಗಿದೆ. OnePlus 13 ಸರಣಿಯಯಲ್ಲಿ ಫ್ಲ್ಯಾಗ್‌ಶಿಪ್ OnePlus 13 ಮತ್ತು ಮಧ್ಯಮ ಶ್ರೇಣಿಯ OnePlus 13R ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ OnePlus ಕಂಪೆನಿ, ಇದೀಗ ಈ ಸರಣಿಗೆ OnePlus 13 Mini ಎಂಬ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಬಹುದು. ಈ ಸ್ಮಾರ್ಟ್‌ಫೋನ್ ಕೈಗೆಟುಕುವ ಬೆಲೆಯಲ್ಲ ಸ್ನಾಪ್‌ಡ್ರಾಗನ್ 8 Gen 3 ಎಲೈಟ್-ಚಾಲಿತ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬುವುದಾದರೆ, OnePlus 13 ಸರಣಿಯಲ್ಲಿ OnePlus 13 Mini ಸ್ಮಾರ್ಟ್‌ಫೋನ್ ಅತ್ಯಂತ ಕೈಗೆಟುಕುವ Snapdragon 8 Gen 3 Elite ಸ್ಮಾರ್ಟ್‌ಫೋನ್ ಆಗುವ ನಿರೀಕ್ಷೆಯಿದೆ. ಇದಲ್ಲದೆ, ಈ ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.31-ಇಂಚಿನ LTPO OLED ಪ್ಯಾನೆಲ್ ಅನ್ನು ಹೊಂದುವ ನಿರೀಕ್ಷೆಯಿದೆ. ಕ್ಯಾಮೆರಾಗಳಿಗಾಗಿ, ಈ ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು ಎನ್ನಲಾಗಿದೆ.

ಇನ್ನು ಈ OnePlus 13 Mini ಸ್ಮಾರ್ಟ್‌ಫೋನ್ ಬೆಲೆ CNY 3,099 (ಸುಮಾರು 37,000 ರೂ. ) ಗಿಂತ ಕಡಿಮೆ ಇರಬಹುದು ಎಂಬುದನ್ನು ಸಹ ವರದಿಗಳು ಸೂಚಿಸಿವೆ. ಕೆಲವು ವರದಿಗಳಲ್ಲಿ ಹೇಳಿರುವಂತೆ, OnePlus 13 Mini ಸ್ಮಾರ್ಟ್‌ಫೋನ್ ಸ್ಟ್ಯಾಂಡರ್ಡ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಬದಲಿಗೆ, ಈ ಬಾರಿ ನಾವು ಬಾರ್-ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೋಡಬಹುದು. ಇದರ ಕಾಂಪ್ಯಾಕ್ಟ್ ಫೀಚರ್ಸ್ ಜೊತೆಗೆ ಇದು 6,000mAh ಬ್ಯಾಟರಿಯನ್ನು ಪಡೆಯಬಹುದು ಎಂದು ಹೇಳಿವೆ. ಇದರಿಂದ OnePlus 13 ಸರಣಿಯಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಬರುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಕುರಿತಂತೆ OnePlus ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಈ ವರೆಗೂ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕು.

OnePlus 13 Mini ಎಂಬ ಹೊಸ ಬಜೆಟ್ ಬೆಲೆಯ ಫೋನ್ ಬಿಡುಗಡೆಗೆ ಸಜ್ಜು!

ಈ ಸೋರಿಕೆಯ ಮಾಹಿತಿಗಳು ನಿಖರವಾಗಿದ್ದರೆ, OnePlus 13 Mini ಸ್ಮಾರ್ಟ್‌ಫೋನ್ ಇದೇ ಮೇ ಅಥವಾ Q2 2025 ರ ಸುಮಾರಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪೆನಿಯ ಇತ್ತೀಚಿನ OnePlus 10T ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ. ಕಂಪನಿಯು ಕೊನೆಯದಾಗಿ ಭಾರತದಲ್ಲಿ T-ಸರಣಿ ಸಾಧನವಾದ OnePlus 10T ಅನ್ನು ಆಗಸ್ಟ್ 2022 ರಲ್ಲಿ ಬಿಡುಗಡೆ ಮಾಡಿತ್ತು, ಇದರ ಬೆಲೆ ರೂ. 49,999. ಹಾಗಾಗಿ, ಈ ಹೊಸ OnePlus 13 Mini ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬರುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ವದಂತಿಗಳಂತೆ, OnePlus 13 Mini ಹೊಂದಿರಲಿರುವ ಪ್ರಮುಖ ಫೀಚರ್ಸ್ ಹೀಗಿವೆ,
ಸ್ನಾಪ್‌ಡ್ರಾಗನ್ 8 ಎಲೈಟ್ SoC,
6.31-ಇಂಚಿನ 1.5K LTPO OLED ಡಿಸ್ಪ್ಲೇ,
6000mAh ಬ್ಯಾಟರಿ,
2x ಆಪ್ಟಿಕಲ್ ಜೂಮ್ ಹೊಂದಿರುವ 50MP ಮುಖ್ಯ ಕ್ಯಾಮೆರಾ
ಆಂಡ್ರಾಯ್ಡ್ 15 ಆಧಾರಿತ OxygenOS 15.1

Best Mobiles in India

English summary
OnePlus 13 Mini, OnePlus 13 Mini Specifications, OnePlus 13 Mini Price, smartphone, news, ಒನ್‌ಪ್ಲಸ್ 13 ಮಿನಿ, ಒನ್‌ಪ್ಲಸ್ 13 ಮಿನಿ ವಿಶೇಷಣಗಳು, ಒನ್‌ಪ್ಲಸ್ 13 ಮಿನಿ ಬೆಲೆ, ಸ್ಮಾರ್ಟ್‌ಫೋನ್, ಸುದ್ದಿ,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+