Home
ಮೊಬೈಲ್

ಒಂದೇ ದಿನ ಬಾಕಿ! ನಾಳೆ OnePlus 13 ಬಿಡುಗಡೆ; ಟಾಪ್ 5 ಫೀಚರ್ಸ್‌ ಇಲ್ಲಿವೆ

ಕೇವಲ ಒಂದು ದಿನ ಮಾತ್ರ ಬಾಕಿ! ಒನ್‌ಪ್ಲಸ್ ಪ್ರಿಯರಿಗೆ ನಾಳೆ ಸಂಭ್ರಮದ ದಿನ. ಒನ್‌ಪ್ಲಸ್ 13 (OnePlus 13) ಅಬ್ಬರಕ್ಕೆ ಕ್ಷಣಗಣನೆ ಆರಂಭ. ಹೌದು, ನಾಳೆ (ಅಕ್ಟೋಬರ್ 31) ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ಈ ಮೊಬೈಲ್ 6,000mAh ಬ್ಯಾಟರಿಯನ್ನು ಹೊಂದಿದೆ. ಕಂಪನಿಯು, ಈ ಫೋನನ್ನು 60 ಸಾವಿರ ಬಜೆಟ್‌ನಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಬನ್ನು, ಈ ಹೊಸ ಫೋನಿನ ಟಾಪ್ 5 ವೈಶಿಷ್ಟ್ಯಗಳನ್ನು ತಿಳಿಯೋಣ.

ಒನ್‌ಪ್ಲಸ್ 13 ಫೋನಿನ ಮೈಕ್ರೋ ಸೈಟ್ ಚೀನಾ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಕಂಪನಿಯು, ಈ ಮೂಲಕ ಪ್ರಮುಖ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಪ್ರೊಸೆಸರ್‌ ಹೊಂದಿದೆ. ಫೋನಿನಲ್ಲಿ 6.82 ಇಂಚಿನ ಅಮೋಲೆಡ್ ಡಿಸ್ಪ್ಲೇ ಲಭ್ಯವಿರಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಜೊತೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ನೀವು, ಅಬ್ಸಿಡಿಯನ್ ಬ್ಲಾಕ್, ಬ್ಲೂ ಮೊಮೆಂಟ್, ವೈಟ್ ಡ್ಯೂ ಮಾರ್ನಿಂಗ್ ಡಾನ್ ಬಣ್ಣಗಳಲ್ಲಿ ಖರೀದಿಸಬಹುದು.

ಒಂದೇ ದಿನ ಬಾಕಿ! ನಾಳೆ OnePlus 13 ಬಿಡುಗಡೆ; ಟಾಪ್ 5 ಫೀಚರ್ಸ್‌ ಇಲ್ಲಿವೆ

ಒನ್‌ಪ್ಲಸ್ 13 ಫೋನಿನ ನಿರೀಕ್ಷಿತ ಬೆಲೆ

ಒನ್‌ಪ್ಲಸ್ 13 ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಫೋನಿನ 12GB RAM + 256GB ಸ್ಟೋರೇಜ್‌ ರೂಪಾಂತರವನ್ನು 60 ಸಾವಿರ ಬಜೆಟ್‌ನಲ್ಲಿ ಪರಿಚಯಿಸಲಾಗುವುದು. ಭಾರತದಲ್ಲಿ, ಒನ್‌ಪ್ಲಸ್‌ 12 ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವನ್ನು 64,999 ರೂ.ಗೆ ಲಾಂಚ್ ಮಾಡಲಾಗಿತ್ತು. ಮತ್ತು 16GB + 512GB ಸ್ಟೋರೇಜ್ ವೇರಿಯಂಟ್ 69,999 ರೂ.ಗೆ ಮಾರಾಟವಾಗುತ್ತಿದೆ.

ಒನ್‌ಪ್ಲಸ್ 13: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13 ಮೊಬೈಲ್ 6.82 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 168x 1440 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಇದರಲ್ಲಿ ಡಿಸಿ ಡಿಮ್ಮಿಂಗ್ ಮತ್ತು ಆಂಟಿ ಫ್ಲಿಕ್ಕರ್ ಐ ಪ್ರೊಟೆಕ್ಷನ್ ತಂತ್ರಜ್ಞಾನವೂ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್ 13 ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. ಇದು 8 ಕೋರ್ ಪ್ರೊಸೆಸರ್ ಆಗಿದೆ. ಈ ಫೋನ್ 12GB, 16GB ಮತ್ತು 24GB RAM ಹೊಂದಿದೆ. ಜೊತೆಗೆ, 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್‌ 13 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 50 ಮೆಗಾಪಿಕ್ಸೆಲ್ LYT-808 ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಮಪನಿಯು ಒನ್‌ಪ್ಲಸ್‌ 13 ಅನ್ನು 6,000mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಈ ಫೋನ್ ಕಂಪನಿಯ ಇತಿಹಾಸದಲ್ಲಿ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಹೆಗ್ಗಳಿಕೆ ಪಡೆದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ. ನೀವು, ಕೇವಲ 36 ನಿಮಿಷಗಳಲ್ಲಿ 0 ರಿಂದ 100 ರಷ್ಟು ಚಾರ್ಜ್ ಮಾಡಬಹುದು

ಇತರೆ ವೈಶಿಷ್ಟಗಳು

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಒಳಗೊಂಡಿದೆ. ಇದು ರೈನ್ ಟಚ್ 2.0 ಹೊಂದಿದ್ದು, ಫೋನ್ ಒದ್ದೆಯಾದರೂ ಆಪರೇಟ್ ಮಾಡಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್, ವೈ ಫೈ ಮತ್ತು ಯುಎಸ್‌ಬಿ ಸಿ ಪೋರ್ಟ್ (ಯುಎಸ್‌ಬಿ 3.2 ಜೆನ್), ಐಆರ್ ಬ್ಲಾಸ್ಟರ್, ಮಲ್ಟಿಫಂಕ್ಷನಲ್ ಎನ್‌ಎಫ್‌ಸಿ (NFC) ಮತ್ತು ಅಲರ್ಟ್‌ ಸ್ಲೈಡರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
OnePlus 13 to be Launched Tomorrow: Know Top 5 Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+