Home
ಮೊಬೈಲ್

ಜ.7ಕ್ಕೆ OnePlus 13R ಗ್ರ್ಯಾಂಡ್ ಲಾಂಚ್; ಎರಡು 50MP ಕ್ಯಾಮೆರಾ.. 6000mAh ಬ್ಯಾಟರಿ.. ಬೆಲೆಯೂ ಲೀಕ್!

ಒನ್‌ಪ್ಲಸ್‌ ಸಂಸ್ಥೆ ಭಾರತದಲ್ಲಿ ಹೊಸ ಒನ್‌ಪ್ಲಸ್‌ 13 (OnePlus 13) ಸರಣಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಎರಡು ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೌದು, ಜನವರಿ 7 ರಂದು ಒನ್‌ಪ್ಲಸ್‌ 13 (OnePlus 13) ಮತ್ತು ಒನ್‌ಪ್ಲಸ್‌ 13R (OnePlus 13R) ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಈ ಪೈಕಿ ಒನ್‌ಪ್ಲಸ್‌ 13R ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. ಇದು OnePlus Ace 5 ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿದೆ. ಪ್ರಸ್ತುತ, ಈ ಹೊಸ ಫೋನಿನ ಪ್ರಮುಖ ವಿಶೇಷತೆಗಳು ಬಹಿರಂಗವಾಗಿವೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒನ್‌ಪ್ಲಸ್‌ 13R ಫೋನ್‌ ಒನ್‌ಪ್ಲಸ್‌ 12R ಗಿಂತ ತೆಳ್ಳಗಿರುತ್ತದೆ. ಈ ಫೋನ್ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿರಲಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿರುತ್ತದೆ. ಜೊತೆಗೆ 256GB ಸ್ಟೋರೇಜ್‌, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ಫೋನಿ ಬೆಲೆ ತಿಳಿಯಲು ಮುಂದೆ ಓದಿ.

ಜ.7ಕ್ಕೆ OnePlus 13R ಲಾಂಚ್; ಎರಡು 50MP ಕ್ಯಾಮೆರಾ, 6000mAh ಬ್ಯಾಟರಿ.. ಬೆಲೆ?

ಒನ್‌ಪ್ಲಸ್ 13R ಬೆಲೆ (ನಿರೀಕ್ಷಿತ)

ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. ಚೀನಾದ ಬೆಲೆಗಿಂತ ಕಡಿಮೆ ಬೆಲೆಗೆ ಭಾರತದಲ್ಲಿ ಖರೀದಿಗೆ ಲಭ್ಯವಿರಲಿದೆ. ವರದಿಯ ಪ್ರಕಾರ, ಈ ಮೊಬೈಲ್ 40 ಸಾವಿರ ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನಿನ ಟಾಂಪ್ ವೇರಿಯಂಟ್ ಬೆಲೆ 52 ಸಾವಿರ ರೂ. ಇರಲಿದೆ. ಜನವರಿ 7 ರಂದು ರಾತ್ರಿ 9.30 ಗಂಟೆಗೆ ಈ ಫೋನಿನ ಅಧಿಕೃತ ಬೆಲೆ ಬಹಿರಂಗವಾಗಲಿದೆ.

ಒನ್‌ಪ್ಲಸ್ 13R ಫೋನಿನ ವೈಶಿಷ್ಟ್ಯಗಳು

ಒನ್‌ಪ್ಲಸ್ 13R ಫೋನಿನ ಡಿಸ್ಪ್ಲೇ, ಕ್ಯಾಮೆರಾ ಸೆಟಪ್, ಬ್ಯಾಟರಿ ಸೇರಿದಂತೆ ಎಲ್ಲ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಅವು ಈ ಕೆಳಗಿನಂತಿವೆ.

ಟ್ರಿಪಲ್ ಕ್ಯಾಮೆರಾ ಸೆಟಪ್

ಒನ್‌ಪ್ಲಸ್ 13R ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

6000mAh ದೊಡ್ಡ ಬ್ಯಾಟರಿ

ಒನ್‌ಪ್ಲಸ್ 13R ಮೊಬೈಲ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುತ್ತದೆ. ಈ ಹಿಂದೆ ಬಿಡುಗಡೆಯಾಗಿದ್ದ ಒನ್‌ಪ್ಲಸ್ 12R ಮೊಬೈಲ್ 5500mAh ಬ್ಯಾಟರಿಯನ್ನು ಹೊಂದಿದೆ. ಒನ್‌ಪ್ಲಸ್ 13R ಮೊಬೈಲ್ 80W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್

ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಒನ್‌ಪ್ಲಸ್ 12R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ OxygenOS 15.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.

ಜ.7ಕ್ಕೆ OnePlus 13R ಲಾಂಚ್; ಎರಡು 50MP ಕ್ಯಾಮೆರಾ, 6000mAh ಬ್ಯಾಟರಿ.. ಬೆಲೆ?

ಸ್ಟೋರೇಜ್ ಆಯ್ಕೆ

ಒನ್‌ಪ್ಲಸ್ 13R ಫೋನ್ 12GB RAM ಹೊಂದಿರುತ್ತದೆ. ಈ ಫೋನಿನಲ್ಲಿ 256GB ಸ್ಟೋರೇಜ್‌ ಆಯ್ಕೆ ಲಭ್ಯವಿರುತ್ತದೆ. ಒನ್‌ಪ್ಲಸ್ 12R ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿತ್ತು. ಮುಂಬರುವ ಒನ್‌ಪ್ಲಸ್ 13R ಟಾಪ್ ವೇರಿಯಂಟ್ 16GB RAM + 512GB ಸ್ಟೋರೇಜ್‌ ಹೊಂದಿರುತ್ತದೆ.

ದೊಡ್ಡ ಡಿಸ್ಪ್ಲೇ

ಒನ್‌ಪ್ಲಸ್ 13R ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1264 × 2780 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿರುತ್ತದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್‌ಫ್ರಾರೆಡ್ ರಿಮೋಟ್ ಕಂಟ್ರೋಲ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಎನ್‌ಎಫ್‌ಸಿ, ವೈ-ಫೈ, ಬ್ಲೂಟೂತ್ 5.4 ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
OnePlus 13R Camera Details Leaked Ahead of January 7 Launch in India: know details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+