ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್: ಒಂದೇ ದಿನ ಎರಡು OnePlus ಫೋನ್ ಲಾಂಚ್; ಬೆಲೆ, ವಿಶೇಷತೆಗಳೇನು?
ಒನ್‌ಪ್ಲಸ್ ತನ್ನ ಗ್ರಾಹಕರಿಗೆ ಒಂದೇ ದಿನ ಎರಡು ಸಿಹಿಸುದ್ದಿ ನೀಡಲು ಸಜ್ಜಾಗಿದೆ. ಜನವರಿ 7ರಂದು ಒನ್‌ಪ್ಲಸ್ 13 (OnePlus 13) ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಜೊತೆಗೆ, ಕಂಪನಿಯು ಭಾರತದಲ್ಲಿ ಒನ್‌ಪ್ಲಸ್ 13R (OnePlus 13R) ಅನ್ನು ಸಹ ಅನಾವರಣಗೊಳಿಸಲಿದೆ. ಒನ್‌ಪ್ಲಸ್ 13 ಈಗಾಗಲೇ ಚೀನಾದಲ್ಲಿ ಲಭ್ಯವಿದೆ. ಆದರೆ, ಒನ್‌ಪ್ಲಸ್ 13R ಹೊಸ ಮೊಬೈಲ್ ಆಗಿದ್ದು, ಇದನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಭಾರತೀಯ ಮೊಬೈಲ್ ಪ್ರಿಯರು ಮಾತ್ರವಲ್ಲದೇ, ಜಗತ್ತಿನಾದ್ಯಂತ ಇರುವ ಟೆಕ್ ಪ್ರೇಮಿಗಳು ಒನ್‌ಪ್ಲಸ್ 13R ಫೋನಿನ ಮೇಲೆ ಕಣ್ಣಿಟ್ಟಿದ್ದಾರೆ. ಈ ಫೋನ್ 6000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿರಲಿದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಜೊತೆಗೆ 512GB ಸ್ಟೋರೇಜ್ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒನ್‌ಪ್ಲಸ್ 13R ಬಿಡುಗಡೆ ಯಾವಾಗ?
ಒನ್‌ಪ್ಲಸ್ 13R ಜನವರಿ 7 (2025) ರಂದು ಬಿಡುಗಡೆಯಾಗಲಿದೆ. ಕಂಪನಿಯು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಬಿಡುಗಡೆ ಕಾರ್ಯಕ್ರಮವು ರಾತ್ರಿ 9 ಗಂಟೆಗೆ ಪ್ರಾರಂಭವಾಗುತ್ತದೆ. ಇದನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಸೇರಿದಂತೆ ಒನ್‌ಪ್ಲಸ್‌ನ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಮಾಡಲಾಗುತ್ತದೆ.
ಒನ್‌ಪ್ಲಸ್ 13R ಬೆಲೆ ಎಷ್ಟು?
ಒನ್‌ಪ್ಲಸ್ 13R ಫೋನನ್ನು ಅಪ್ಪರ್ ಮಿಡ್ ಬಜೆಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದರೆ 40 ಸಾವಿರ ರೂ. ಬಜೆಟ್‌ನಲ್ಲಿ ಪರಿಚಯಿಸಲಾಗುವುದು. ವರದಿಯ ಪ್ರಕಾರ, ಒನ್‌ಪ್ಲಸ್ 13R ಮೊಬೈಲ್ 41,999 ರೂ. ಆರಂಭಿಕ ಬೆಲೆ ಮತ್ತು 49,999 ರೂ. ಹೊಂದಿರಲಿದೆ.
ಒನ್‌ಪ್ಲಸ್ 13R ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ 13R ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು BOE ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇ ಆಗಿರಲಿದೆ. ಡಿಸ್ಪ್ಲೇಯು 1.5K ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನ್ ಅನ್‌ಲಾಕಿಂಗ್‌ಗಾಗಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರುತ್ತದೆ. ಜೊತೆಗೆ ಗೊರಿಲ್ಲಾ ಗ್ಲಾಸ್ ವಿಸ್ಟಾ ರಕ್ಷಣೆಯನ್ನು ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ 12R ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಮುಂಬರುವ ಒನ್‌ಪ್ಲಸ್ 13R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಇದು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾದ ಆಕ್ಟಾ ಕೋರ್ ಪ್ರೊಸೆಸರ್ ಆಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ OxygenOS 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 12GB RAM ನೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯು 16GB RAM ಹೊಂದಿರುವ ಫೋನನ್ನು ಸಹ ಪರಿಚಯಿಸುವ ಸಾಧ್ಯತೆಯಿದೆ. ಈ ಮೊಬೈಲ್ 256GB ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 13R ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಸಹ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ. ಒನ್‌ಪ್ಲಸ್ 12R ಫೋನಿನಲ್ಲಿ ಸಹ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗುತ್ತದೆ. ಒನ್‌ಪ್ಲಸ್ 12R ಮೊಬೈಲ್ 5500mAh ಬ್ಯಾಟರಿ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ 13R ಫೋನ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ.


Click it and Unblock the Notifications








