Home
ಮೊಬೈಲ್

ಭಾರತಕ್ಕೆ OnePlus 13s ಬರುತ್ತಿದೆ! ಬಿಡುಗಡೆ ಸಮಯ ಲೀಕ್.. ಫೀಚರ್ಸ್, ಬೆಲೆಯೂ ಬಹಿರಂಗ

ಬಹುನಿರೀಕ್ಷಿತ ಒನ್‌ಪ್ಲಸ್ 13T (OnePlus 13T) ಫೋನ್ ಏಪ್ರಿಲ್ 24 ರಂದು ಬಿಡುಗಡೆಯಾಗಲಿದೆ. ಇದು ಕಂಪನಿಯ '13' ಸರಣಿಯ ಮೂರನೇ ಮೊಬೈಲ್ ಆಗಿದೆ. ಒನ್‌ಪ್ಲಸ್ 13 (OnePlus 13) ಮತ್ತು ಒನ್‌ಪ್ಲಸ್ 13R (OnePlus 13R) ಬಳಿಕ ಲಾಂಚ್ ಆಗುತ್ತಿದೆ. ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವ ಮೊದಲು, ಕಂಪನಿಯು ಇದೇ ಸರಣಿಯ ನಾಲ್ಕನೇ ಫೋನ್ ಪರಿಚಯಿಸುತ್ತದೆ ಎಂಬ ಸುದ್ದಿ ಹೊರಬಂದಿದೆ. ಇದು ಒನ್‌ಪ್ಲಸ್ 13s (OnePlus 13s) ಆಗಿದೆ. ಇದೇ ಮೊದಲ ಬಾರಿಗ ಒನ್‌ಪ್ಲಸ್ 13S ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒನ್‌ಪ್ಲಸ್ 13s ಮೊಬೈಲ್ ಭಾರತಕ್ಕೆ ಬರುತ್ತಿದೆ. ಈ ಶಕ್ತಿಶಾಲಿ 5G ಫೋನಿನ ಬೆಲೆ, ವಿಶೇಷತೆಗಳು ಮತ್ತು ಬಿಡುಗಡೆ ಸಮಯ ಸೋರಿಕೆಯಾಗಿದೆ. ಈ ಮೊಬೈಲ್ 6.3 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP + 50MP + 32MP ಕ್ಯಾಮೆರಾ ಸೆಟಪ್ ಇರುತ್ತದೆ. ಜೊತೆಗೆ 16GB RAM + 512GB ಸ್ಟೋರೇಜ್, 6260mAh ಬ್ಯಾಟರಿ, 80W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಭಾರತಕ್ಕೆ OnePlus 13s ಬರುತ್ತಿದೆ! ಫೀಚರ್ಸ್, ಬೆಲೆಯೂ ಬಹಿರಂಗ.. ಲಾಂಚ್ ಯಾವಾಗ?

ಒನ್‌ಪ್ಲಸ್ 13s ಭಾರತದ ಬಿಡುಗಡೆ ಸಮಯ (ಸೋರಿಕೆ)

ಒನ್‌ಪ್ಲಸ್ 13s ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಸೋರಿಕೆಯಾಗಿದೆ. ಈ ಟಿಪ್‌ಸ್ಟರ್ ಟ್ವೀಟ್‌ನಲ್ಲಿ ಒನ್‌ಪ್ಲಸ್ 13s ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಈ ಒನ್‌ಪ್ಲಸ್ 13s ಮೊಬೈಲ್ ಚೀನಾದಲ್ಲಿ ಬಿಡುಗಡೆಯಾಗುತ್ತಿರುವ ಒನ್‌ಪ್ಲಸ್ 13T ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ಹೇಳಲಾಗಿದೆ. ಒನ್‌ಪ್ಲಸ್ 13s ಮೊಬೈಲ್ ಜೂನ್ ಕೊನೆಯ ವಾರದಲ್ಲಿ ರಿಲೀಸ್ ಆಗಬಹುದು. ಜುಲೈನಿಂದ ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತದೆ. ವರದಿಯ ಪ್ರಕಾರ, ಒನ್‌ಪ್ಲಸ್ 13s ಫೋನಿನ ಬೆಲೆ 50 ಸಾವಿರಕ್ಕಿಂತ ಹೆಚ್ಚಿರಲಿದೆ.

ಒನ್‌ಪ್ಲಸ್ 13s ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13s 5G ಫೋನ್ 6.3 ಇಂಚಿನ 1.5K ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ. ಇದು ಫ್ಲಾಟ್ OLED ಪ್ಯಾನೆಲ್‌ನಲ್ಲಿ ಮಾಡಿರುವ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಮುಂಬರುವ ಒನ್‌ಪ್ಲಸ್ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್ 13s ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಸರಣಿಯ ಪ್ರೊಸೆಸರ್ ಹೊಂದಿರಲಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಆಗಿರಬಹುದು ಅಥವಾ ಸ್ನಾಪ್‌ಡ್ರಾಗನ್ 8 ಜೆನ್ 3 ಆಗಿರಬಹುದು. ಈ ಫೋನ್ ಆಂಡ್ರಾಯ್ಡ್ 15 ಆಕ್ಸಿಜನ್ OS 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನಿನ ಟಾಪ್ ವೇರಿಯಂಟ್ 512GB ಸ್ಟೋರೇಜ್ ಮತ್ತು 16GB RAM ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಭಾರತಕ್ಕೆ OnePlus 13s ಬರುತ್ತಿದೆ! ಫೀಚರ್ಸ್, ಬೆಲೆಯೂ ಬಹಿರಂಗ.. ಲಾಂಚ್ ಯಾವಾಗ?

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ 13s 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ 13s ಫೋನಿನಲ್ಲಿ ಶಕ್ತಿಶಾಲಿ ಬ್ಯಾಟರಿ ಲಭ್ಯವಿರುತ್ತದೆ. ವರದಿಯ ಪ್ರಕಾರ, ಈ ಮೊಬೈಲ್ 6260mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನನ್ನು ವೈರ್ಡ್ ಮತ್ತು ವೈರ್‌ಲೆಸ್ ಎರಡರಲ್ಲೂ ಚಾರ್ಜ್ ಮಾಡಬಹುದು. ಈ 5G ಫೋನಿನಲ್ಲಿ 80W ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುವುದು.

Best Mobiles in India

English summary
OnePlus 13s launch soon in India: launch timeline, price and specifications leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+