ಭಾರತದಲ್ಲಿ ಬಹುನಿರೀಕ್ಷಿತ OnePlus 13s ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ನೋಡಿ!
ಭಾರತೀಯ ಮೊಬೈಲ್ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 13s ಇಂದು ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಒನ್‌ಪ್ಲಸ್ ಕಂಪೆನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ OnePlus 13s ಸ್ಮಾರ್ಟ್‌ಫೋನನ್ನು ಭರ್ಜರಿಯಾಗಿ ಪರಿಚಯಿಸಲಾಗಿದ್ದು, ನಿರೀಕ್ಷೆಯಂತೆಯೇ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 6.32-ಇಂಚಿನ 1.5K LTPO ಡಿಸ್‌ಪ್ಲೇ, 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,850mAh ಬ್ಯಾಟರಿ, ಮತ್ತು ಕಸ್ಟಮೈಸ್ ಮಾಡಬಹುದಾದ ಪ್ಲಸ್ ಕೀ ಸೇರಿದಂತೆ, ಫ್ಲ್ಯಾಗ್‌ಶಿಪ್ ಮಟ್ಟದ ವೈಶಿಷ್ಟ್ಯಗಳು ಮತ್ತು AI ಸಾಮರ್ಥ್ಯಗಳೊಂದಿಗೆ ಬಂದಿದೆ. ಹಾಗಾದರೆ, ಹೊಸ OnePlus 13s ಸ್ಮಾರ್ಟ್‌ಫೋನ್ ಹೇಗಿದೆ?, ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
OnePlus 13s ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
OnePlus 13s ಸ್ಮಾರ್ಟ್‌ಫೋನಿನ 12GB RAM ಮತ್ತು 256GB ಸಂಗ್ರಹಣೆಯ ಆರಂಭಿಕ ಮಾದರಿಗೆ ₹54,999 ನಿಗದಿಪಡಿಸಲಾಗಿದೆ. 12GB RAM ಮತ್ತು 512GB ಸಂಗ್ರಹಣೆಯ ಉನ್ನತ ಮಾದರಿಯ ಬೆಲೆ ₹59,999 ಆಗಿದೆ. ಈ ಸ್ಮಾರ್ಟ್‌ಫೋನ್ ಕಪ್ಪು ವೆಲ್ವೆಟ್, ಹಸಿರು ಸಿಲ್ಕ್ ಮತ್ತು ಪಿಂಕ್ ಸ್ಯಾಟಿನ್ ಬಣ್ಣಗಳಲ್ಲಿ ಲಭ್ಯವಿದೆ, ಆದರೆ ಉನ್ನತ ಮಾದರಿಯು ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಮಾತ್ರ ಸಿಗುತ್ತದೆ. ಜೂನ್ 12 ರಿಂದ, OnePlus 13s ಅನ್ನು Amazon, OnePlus ಇಂಡಿಯಾ ಇ-ಸ್ಟೋರ್ ಮತ್ತು ಆಯ್ದ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು. ಪ್ರಸ್ತುತ, ಪೂರ್ವ-ಆರ್ಡರ್‌ಗಳು ಲಭ್ಯವಿವೆ. ಖರೀದಿ ಆಫರ್‌ಗಳ ಕುರಿತು ಹೇಳುವುದಾದರೆ, SBI ಕ್ರೆಡಿಟ್ ಕಾರ್ಡ್ ಬಳಕೆದಾರರು ₹5,000 ತ್ವರಿತ ರಿಯಾಯಿತಿ ಪಡೆಯಬಹುದು. ಗ್ರಾಹಕರು ₹5,000 ವರೆಗೆ ವಿನಿಮಯ ರಿಯಾಯಿತಿಗಳನ್ನು ಸಹ ಪಡೆಯಬಹುದು ಮತ್ತು ಒಂಬತ್ತು ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಯನ್ನು ಆನಂದಿಸಬಹುದು ಎಂದು ಕಂಪೆನಿ ತಿಳಿಸಿದೆ.
OnePlus 13s ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು,
OnePlus 13s ಸ್ಮಾರ್ಟ್‌ಫೋನ್ 6.32-ಇಂಚಿನ 1.5K (1,216×2,640 ಪಿಕ್ಸೆಲ್‌ಗಳು) LTPO ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1,600 nits ಗರಿಷ್ಠ ಬ್ರೈಟ್‌ನೆಸ್ ಮತ್ತು 2,160Hz PWM ಡಿಮ್ಮಿಂಗ್ ದರವನ್ನು ನೀಡುತ್ತದೆ. ಇದರ ಅಕ್ವಾ ಟಚ್ 2.0 ತಂತ್ರಜ್ಞಾನ ಮತ್ತು ಗ್ಲೋವ್ ಮೋಡ್ ಮೂಲಕ ಒದ್ದೆಯಾದ ಕೈಗಳಿಂದ ಅಥವಾ ಕೈಗವಸುಗಳನ್ನು ಧರಿಸಿದ್ದಾಗಲೂ ಫೋನ್ ಅನ್ನು ಬಳಸಬಹುದು. ಕಾರ್ಯಕ್ಷಮತೆ ವಿಭಾಗದಲ್ಲಿ, ಈ OnePlus 13s ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಯಿಂದ ಚಾಲಿತವಾಗಿದ್ದು, 12GB LPDDR5X RAM ಮತ್ತು 512GB ವರೆಗೆ UFS 4.0 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್OS 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೂ, ಸುರಕ್ಷತೆಗಾಗಿ, ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, OnePlus 13s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-700 ಪ್ರಾಥಮಿಕ ಸಂವೇದಕ (OIS ಬೆಂಬಲದೊಂದಿಗೆ f/1.8 ಅಪರ್ಚರ್) ಮತ್ತು 50-ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಶೂಟರ್ (f/2.0 ಅಪರ್ಚರ್, 2x ಆಪ್ಟಿಕಲ್ ಜೂಮ್ ಮತ್ತು EIS ಬೆಂಬಲದೊಂದಿಗೆ) ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 32-ಮೆಗಾಪಿಕ್ಸೆಲ್ ಮುಂಭಾಗದ ಸಂವೇದಕವನ್ನು (f/2.0 ಅಪರ್ಚರ್ ಮತ್ತು EIS ಬೆಂಬಲದೊಂದಿಗೆ) ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ, 80W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 5,850mAh ಬ್ಯಾಟರಿಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 7, ಬ್ಲೂಟೂತ್ 6.0, NavIC ಜೊತೆ GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ. ಫೋನ್ 150.8×71.7×8.2mm ಅಳತೆ ಮತ್ತು 185g ತೂಕವನ್ನು ಹೊಂದಿದೆ.
ಕಸ್ಟಮೈಸ್ ಮಾಡಬಹುದಾದ 'ಪ್ಲಸ್ ಕೀ' ಮತ್ತು AI ವೈಶಿಷ್ಟ್ಯಗಳು:
OnePlus 13s ನಲ್ಲಿ ಹೊಸದಾಗಿ ಕಸ್ಟಮೈಸ್ ಮಾಡಬಹುದಾದ ಪ್ಲಸ್ ಕೀ ಯನ್ನು ಸೇರಿಸಲಾಗಿದೆ. ಇದನ್ನು ದೀರ್ಘವಾಗಿ ಒತ್ತಿದರೆ ರಿಂಗ್, ವೈಬ್ರೇಟ್ ಮತ್ತು ಸೈಲೆಂಟ್ ಮೋಡ್‌ಗಳ ನಡುವೆ ಬದಲಾಯಿಸಬಹುದು. ಅಲ್ಲದೆ, ಕ್ಯಾಮೆರಾ ತೆರೆಯುವುದು, ಆನ್-ಸ್ಕ್ರೀನ್ ಪಠ್ಯವನ್ನು ಅನುವಾದಿಸುವುದು ಅಥವಾ ಫ್ಲ್ಯಾಷ್‌ಲೈಟ್ ಆನ್ ಮಾಡುವಂತಹ ಕ್ರಿಯೆಗಳಿಗೆ ಇದನ್ನು ಕಸ್ಟಮೈಸ್ ಮಾಡಬಹುದು. ಕೀಲಿಯನ್ನು ಒಮ್ಮೆ ಒತ್ತಿದರೆ AI ಪ್ಲಸ್ ಮೈಂಡ್ ಸ್ಪೇಸ್ ಅನ್ನು ಪ್ರಾರಂಭಿಸಬಹುದು.ಮೈಂಡ್ ಸ್ಪೇಸ್ ವೈಶಿಷ್ಟ್ಯದ ಮೂಲಕ, ಬಳಕೆದಾರರು ಲೇಖನಗಳು, ಫೋಟೋಗಳು, ಚಾಟ್‌ಗಳು ಮತ್ತು ವೇಳಾಪಟ್ಟಿಗಳಂತಹ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಉಳಿಸಬಹುದು ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡಬಹುದು. ಈ ಸ್ಮಾರ್ಟ್‌ಫೋನ್ AI ಡಿಟೇಲ್ ಬೂಸ್ಟ್, AI ಅನ್‌ಬ್ಲರ್, AI ರಿಫ್ಲೆಕ್ಷನ್ ಎರೇಸರ್, AI ರಿಫ್ರೇಮ್‌ನಂತಹ ಹಲವಾರು AI-ಬೆಂಬಲಿತ ಇಮೇಜಿಂಗ್ ಪರಿಕರಗಳನ್ನು ಹೊಂದಿದೆ. ಇದು AI ಅನುವಾದ, AI ವಾಯ್ಸ್‌ಸ್ಕ್ರೈಬ್, AI ಕಾಲ್ ಅಸಿಸ್ಟೆಂಟ್, AI ಸರ್ಚ್, ಜೊತೆಗೆ Google ನ ಸರ್ಕಲ್ ಟು ಸರ್ಚ್ ಮತ್ತು Google ಜೆಮಿನಿ ಮುಂತಾದ AI ಉತ್ಪಾದಕತಾ ಪರಿಕರಗಳಿಗೂ ಬೆಂಬಲ ನೀಡುತ್ತದೆ.


Click it and Unblock the Notifications








