Home
ಮೊಬೈಲ್

ಅಸಲಿ ಆಟ ಶುರು! 6260mAh ಬ್ಯಾಟರಿ, 1TB ಸ್ಟೋರೇಜ್‌.. ಬಂದೇ ಬಿಡ್ತು OnePlus 13T ಫೋನ್; ಬೆಲೆಯೂ ಕಡಿಮೆ!

ಒನ್‌ಪ್ಲಸ್ ಅಸಲಿ ಆಟ ಶುರುವಾಯ್ತು..! ವಿವೋ ಮತ್ತು ಒಪ್ಪೋ ಅಬ್ಬರಕ್ಕೆ ಬಿತ್ತು ಬ್ರೇಕ್..! ಹೌದು, ಒನ್‌ಪ್ಲಸ್ ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಒನ್‌ಪ್ಲಸ್ 13T (OnePlus 13T) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಕಂಪನಿಯು ಇದನ್ನು ತನ್ನ ಜನಪ್ರಿಯ 'T' ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಇದು ಪ್ರೀಮಿಯಂ ವಿಶೇಷತೆಗಳೊಂದಿಗೆ, Vivo X200 Pro Mini ಮತ್ತು OPPO Find X8s ಸೇರಿದಂತೆ ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳಿಗೆ ನೇರ ಪೈಪೋಟಿ ನೀಡಲಿದೆ.

ಕಂಪನಿಯು 2022 ರಲ್ಲಿ OnePlus 10T ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ ಮೂರು ವರ್ಷಗಳ ಬಳಿಕ 'T' ಸರಣಿಯಲ್ಲಿ ಒನ್‌ಪ್ಲಸ್ 13T ಅನ್ನು ತಂದಿದೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಿದೆ. ಈ ಫೋನಿನ ವಿಶೇಷತೆಗಳೆಂದರೆ, ಈ ಸ್ಮಾರ್ಟ್‌ಫೋನ್ 185 ಗ್ರಾಂ ತೂಕ ಹೊಂದಿದೆ. ದೀರ್ಘಕಾಲದವರೆಗೆ ಫೋನ್ ಬಳಸುವಾಗ ಕೈಗಳಿಗೆ ಆಯಾಸವಾಗುವುದಿಲ್ಲ. ಇದು ಹೊಸ ಲೋಹದ ಘನ ವಿನ್ಯಾಸವನ್ನು ಹೊಂದಿದೆ. ನೀವು ಫೋನನ್ನು ಅಡ್ಡಲಾಗಿ ಅಥವಾ ಲಂಬವಾಗಿ ಬಳಸಿದರೂ ಇದನ್ನು ಹಿಡಿದಿಡಲು ಆರಾಮದಾಯಕವಾಗಿರಲಿದೆ. ಈ ಫೋನಿನ ಮಧ್ಯದ ಫ್ರೇಮ್ ಇದನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ. ಈ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುವುದಿಲ್ಲ.

ಬಂತು OnePlus 13T ಫೋನ್; 6260mAh ಬ್ಯಾಟರಿ, 1TB ಸ್ಟೋರೇಜ್‌.. ಬೆಲೆಯೂ ಕಡಿಮೆ!

ಒನ್‌ಪ್ಲಸ್ 13T ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13T ಮೊಬೈಲ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K 8T LTPO ಅಮೋಲೆಡ್ ಸ್ಕ್ರೀನ್‌ ಆಗಿದೆ. ಈ ಡಿಸ್ಪ್ಲೇಯು 2640 × 1216 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಹಾಗೆಯೇ ಡಾಲ್ಬಿ ವಿಷನ್, ಒಪ್ಪೋ ಕ್ರಿಸ್ಟಲ್ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್ 13T ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಪ್ರೊಸೆಸರ್ OnePlus 13 ಫೋನಿನಲ್ಲಿದೆ. ಈ ಮೊಬೈಲ್ 12GB RAM, 16GB RAM ಮತ್ತು 256GB, 512GB, 1TB ಸ್ಟೋರೇಜ್‌ ಆಯ್ಕೆಯೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದು 4K 60fps ವರೆಗೆ ವಿಡಿಯೋ ರೆಕಾರ್ಡಿಂಗ್‌ ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು 1080p 30fps ವಿಡಿಯೋ ರೆಕಾರ್ಡಿಂಗ್‌ ಬೆಂಬಲಿಸುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ 13T ಮೊಬೈಲ್ 6260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W SuperVOOC ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. OnePlus 13 ಫೋನಿನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್ 13T ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್ಫ್ರಾರೆಡ್ ಸೆನ್ಸರ್ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್‌ ಪಡೆದಿದೆ. ಈ ಫೋನಿನಲ್ಲಿ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಯುಎಸ್‌ಬಿ ಟೈಪ್ ಸಿ ಆಡಿಯೋ, 4 ಮೈಕ್ರೊಫೋನ್‌ಗಳು, ಡಾಲ್ಬಿ ಅಟ್ಮೋಸ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಬಂತು OnePlus 13T ಫೋನ್; 6260mAh ಬ್ಯಾಟರಿ, 1TB ಸ್ಟೋರೇಜ್‌.. ಬೆಲೆಯೂ ಕಡಿಮೆ!

ಒನ್‌ಪ್ಲಸ್ 13T ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್ 13T ಮೊಬೈಲ್ ಅನ್ನು ಐದು ಸ್ಟೋರೇಜ್ ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮಾರ್ನಿಂಗ್ ಮಿಸ್ಟ್ ಗ್ರೇ, ಹಾರ್ಟ್ ಪೌಂಡಿಂಗ್ ಪಿಂಕ್ ಮತ್ತು ಕ್ಲೌಡಿ ಇಂಕ್ ಬ್ಲ್ಯಾಕ್ ಸೇರಿದಂತೆ ಹಲವು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ಇದೇ ಏಪ್ರಿಲ್ 30 ರಂದು ಈ ಫೋನ್ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.

ಒನ್‌ಪ್ಲಸ್ 13T ಫೋನಿನ ಬೆಲೆ ಬಗ್ಗೆ ಹೇಳುವುದಾದರೆ, 12GB RAM + 256GB ಸ್ಟೋರೇಜ್ ರೂಪಾಂತರವನ್ನು ಹೊಂದಿರುವ ಮೊಬೈಲ್ 39,805 ರೂ.ಗೆ ಬಿಡುಗಡೆಯಾಗಿದೆ. 16GB RAM + 256GB ಸ್ಟೋರೇಜ್ ಮಾದರಿಯ ಫೋನ್ 42,150 ರೂ.ಗೆ ಲಭ್ಯವಿದೆ. 12GB RAM + 512GB ಸ್ಟೋರೇಜ್ ಆಯ್ಕೆ ಹೊಂದಿರುವ ಫೋನನ್ನು 44,490 ರೂ.ಗೆ ಪರಿಚಯಿಸಲಾಗಿದೆ. 16GB RAM + 512GB ಸ್ಠೊರೇಜ್ ವೇರಿಯಂಟ್ ಬೆಲೆ 46,835 ರೂ. ಆಗಿದೆ. ಇನ್ನು 16GB RAM + 1TB ಸ್ಟೋರೇಜ್ ರೂಪಾಂತರವು 52,690 ರೂ.ಗೆ ಮಾರಾಟವಾಗಲಿದೆ.

ಒನ್‌ಪ್ಲಸ್ 13T ಭಾರತದಲ್ಲಿ ಈ ಹೆಸರಿನೊಂದಿಗೆ ಬಿಡುಗಡೆ

ಕಂಪನಿಯು ಸಾಮಾನ್ಯವಾಗಿ ತನ್ನ ಮೊಬೈಲ್‌ಗಳನ್ನು ಬೇರೆ ಬೇರೆ ಮಾರುಕಟ್ಟೆಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಪರಿಚಯಿಸುತ್ತದೆ. ವರದಿಯ ಪ್ರಕಾರ, ಈ ಒನ್‌ಪ್ಲಸ್ 13T ಫೋನನ್ನು ಭಾರತದಲ್ಲಿ ಒನ್‌ಪ್ಲಸ್ 13S (OnePlus 13S) ಹೆಸರಿನಲ್ಲಿ ರಿಲೀಸ್ ಆಗಲಿದೆ. ಇದು ಖಚಿತವಾದರೆ, ಒನ್‌ಪ್ಲಸ್ 13T ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೆಸರನ್ನು ಪಡೆಯುತ್ತದೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ಮುಂಬರುವ ಫೋನಿನ ಅಧಿಕೃತ ಘೋಷಣೆ ಹೊರಬೀಳಲಿದೆ.

ಬಂತು OnePlus 13T ಫೋನ್; 6260mAh ಬ್ಯಾಟರಿ, 1TB ಸ್ಟೋರೇಜ್‌.. ಬೆಲೆಯೂ ಕಡಿಮೆ!

ಭಾರತದಲ್ಲಿ ಒನ್‌ಪ್ಲಸ್ 13s ಬಿಡುಗಡೆ ಯಾವಾಗ?

ಒನ್‌ಪ್ಲಸ್ 13s ಫೋನಿನ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೊಡ್ಡ ಮಾಹಿತಿ ಹೊರಬಿದ್ದಿದೆ. ಒನ್‌ಪ್ಲಸ್ 13s ಜೂನ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಈ ಟಿಪ್‌ಸ್ಟರ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ಒನ್‌ಪ್ಲಸ್ 13s ಮೊಬೈಲ್ ಇಂದು ಚೀನಾದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 13T ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ ಎಂದು ತಿಳಿಸಲಾಗಿದೆ. ಒನ್‌ಪ್ಲಸ್ 13s ಮೊಬೈಲ್ ಜೂನ್ ಕೊನೆಯ ವಾರದಲ್ಲಿ ರಿಲೀಸ್ ಆಗಬಹುದು. ಇದು ಜುಲೈ ತಿಂಗಳಲ್ಲಿ ಭಾರತದಲ್ಲಿ ಮಾರಾಟವಾಗಲಿದೆ. ಮಾಹಿತಿಯ ಪ್ರಕಾರ, ಒನ್‌ಪ್ಲಸ್ 13s ಫೋನಿನ ಬೆಲೆ 50,000 ರೂ.ಗಿಂತ ಹೆಚ್ಚಿರಲಿದೆ.

ಒನ್‌ಪ್ಲಸ್ 13s ವೈಶಿಷ್ಟ್ಯಗಳು

ಒನ್‌ಪ್ಲಸ್ 13s 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅಥವಾ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರುತ್ತದೆ. ಇದು ಆಂಡ್ರಾಯ್ಡ್ 15 ಆಕ್ಸಿಜನ್ OS 15 ಜೊತೆಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಈ ಫೋನಿನಲ್ಲಿ 6260mAh ಸಾಮರ್ಥ್ಯದ ಬ್ಯಾಟರಿ, 80W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಲಭ್ಯವಿರುತ್ತದೆ.

Best Mobiles in India

English summary
OnePlus 13T launched with Snapdragon 8 Elite and 6260mAh battery: when can it come to India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+