ಬಿಡುಗಡೆಗೂ ಮುನ್ನವೇ OnePlus 15 ಮತ್ತು OnePlus Ace 6 ಫೋನ್ ಬೆಲೆಗಳು ಲೀಕ್!
OnePlus ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳಾದ ಬಹುನಿರೀಕ್ಷಿತ OnePlus 15 ಮತ್ತು OnePlus Ace 6 ಅನ್ನು ಇಂದು (ಅಕ್ಟೋಬರ್ 27) ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೆ ಕೆಲ ಗಂಟೆಗಳ ಮುನ್ನವೇ, ಈ ಎರಡೂ ಫೋನ್‌ಗಳ ಬೆಲೆ ಮತ್ತು ಸ್ಟೋರೇಜ್ ವೈವಿಧ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈ ಮಾಹಿತಿಯನ್ನು ಟೆಕ್ ಮಾಧ್ಯಮ Gizmochina ವರದಿ ಬಹಿರಂಗಪಡಿಸಿದೆ. ಈ ಲೇಖನದಲ್ಲಿ OnePlus 15 ಮತ್ತು OnePlus Ace 6 ಸ್ಮಾರ್ಟ್‌ಫೋನ್‌ಗಳ ನಿರೀಕ್ಷಿತ ಬೆಲೆಗಳು ಮತ್ತು ಬಿಡುಗಡೆ ಕುರಿತಾದ ಮತ್ತಷ್ಟು ವಿವರಗಳನ್ನು ನೋಡೋಣ ಬನ್ನಿ.
OnePlus 15 ಮತ್ತು OnePlus Ace 6: ಲೀಕ್ ಆಗಿರುವ ಬೆಲೆಗಳು
Gizmochina ವರದಿಯ ಪ್ರಕಾರ, ಚೀನಾದ Weibo ವೇದಿಕೆಯಲ್ಲಿನ ಪೋಸ್ಟ್ನಲ್ಲಿ OnePlus 15 ಮತ್ತು OnePlus Ace 6 ಸ್ಮಾರ್ಟ್‌ಫೋನ್ ಬೆಲೆಗಳು ಸೋರಿಕೆಯಾಗಿವೆ. ಎರಡೂ ಫೋನ್‌ಗಳು ಸಹ ಮೂರು ವಿಭಿನ್ನ ಮಾದರಿಗಳಲ್ಲಿ ಬಿಡುಗಡೆಯಾಗಲಿವೆ.
OnePlus 15 ಬೆಲೆಗಳು ಈ ಕೆಳಗಿನಂತಿರಬಹುದು
(16GB + 256GB) : CNY 4,299 (ಸುಮಾರು ₹53,100)
16GB + 512GB ಮಾದರಿ : CNY 4,899 (ಸುಮಾರು ₹60,600)
16GB + 1TB ಮಾದರಿ : CNY 5,399 (ಸುಮಾರು ₹66,700)
OnePlus Ace 6 ಬೆಲೆಗಳು ಈ ಕೆಳಗಿನಂತಿರಬಹುದು
12GB + 512GB : CNY 3,099 (ಸುಮಾರು ₹38,300)
16GB + 512GB : CNY 3,399 (ಸುಮಾರು ₹42,000)
ವರದಿಯ ಪ್ರಕಾರ, OnePlus Ace 6 ಸ್ಮಾರ್ಟ್‌ಫೋನ್ ಕೂಡ 12GB RAM + 256GB ಸ್ಟೋರೇಜ್ ರೂಪಾಂತರ ಲಭ್ಯವಿದೆ, ಆದರೆ ಅದರ ನಿಖರ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.

ಈ ಹೊಸ ಲೀಕ್‌ನಲ್ಲಿ ಬಹಿರಂಗಗೊಂಡ ಬೆಲೆಗಳು ಹಿಂದಿನ ವರದಿಗಳಿಗಿಂತ ಕಡಿಮೆ. ಮೊದಲು ಪ್ರಸಿದ್ಧ ಟಿಪ್ಸ್ಟರ್ Arsène Lupin ಅವರು OnePlus 15 (16GB + 512GB) ಮಾದರಿಯ ಬೆಲೆ GBP 949 (ಸುಮಾರು ₹1,11,000) ಆಗಿರಬಹುದು ಎಂದು ಹೇಳಿದ್ದರು. ಇನ್ನೊಂದು ವರದಿಯ ಪ್ರಕಾರ, ಭಾರತದಲ್ಲಿ ಈ ಫೋನ್‌ಗಳ ಬೆಲೆ ₹70,000 ₹75,000 ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿತ್ತು. ಇದೀಗ ಈ ಹೊಸ ವರದಿಯು OnePlus 15 ಮತ್ತು OnePlus Ace 6 ಎರಡೂ ಸ್ಮಾರ್ಟ್‌ಫೋನ್‌ಗಳು ನಿರೀಕ್ಷೆಗಿಂತ ಕಡಿಮೆ ಬೆಲೆಯಲ್ಲಿ ಬರುವ ಸಾಧ್ಯತೆಯನ್ನು ಸೂಚಿಸಿದೆ.
OnePlus 15 ಮತ್ತು OnePlus Ace 6: ಅಧಿಕೃತ ಬಿಡುಗಡೆ ವಿವರಗಳು
ಮೊದಲೇ ಹೇಳಿದಂತೆ, OnePlus 15 ಮತ್ತು OnePlus Ace 6 ಫೋನ್‌ಗಳನ್ನು ಇಂದು ಸಂಜೆ 7 ಗಂಟೆಗೆ (ಚೀನಾದ ಸಮಯ) ಬಿಡುಗಡೆ ಮಾಡಲಾಗುತ್ತದೆ. ಭಾರತದಲ್ಲಿ ವೀಕ್ಷಿಸಲು ಬಯಸುವವರು ಈ ಕಾರ್ಯಕ್ರಮವನ್ನು ಇಂದು ಸಂಜೆ 4:30ಕ್ಕೆ ವೀಕ್ಷಿಸಬಹುದು. ಬಿಡುಗಡೆ ಬಳಿಕ ಅಧಿಕೃತ ಬೆಲೆ, ಸ್ಪೆಸಿಫಿಕೇಷನ್‌ಗಳು ಹಾಗೂ ಹೊಸ ವೈಶಿಷ್ಟ್ಯಗಳ ಕುರಿತು ಕಂಪನಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.
ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆ ಏನು?
OnePlus 15 ಸರಣಿಯು ಹೊಸ Snapdragon 8 Elite Gen 5 ಚಿಪ್‌ಸೆಟ್, ಅತ್ಯಾಧುನಿಕ ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಬರುತ್ತಿದೆ. ಪ್ರೀಮಿಯಂ ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ OnePlus ತನ್ನ ಹೊಸ ಆಫರ್‌ಗಳನ್ನು ನೀಡುವ ಸಾಧ್ಯತೆ ಇದೆ. ಭಾರತದಲ್ಲಿ ಇದರ ಬಿಡುಗಡೆ ಕೂಡ ಶೀಘ್ರದಲ್ಲೇ ನಡೆಯುವ ನಿರೀಕ್ಷೆ ಇದೆ. ಇಂದು ಫೋನ್‌ಗಳು ಬಿಡುಗಡೆಯಾದ ನಂತರ ನಾವು ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತೇವೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಾವು ಮುಂದಿನ ಲೇಖನಗಳಲ್ಲಿ ತಿಳಿಯೋಣ.


Click it and Unblock the Notifications








