OnePlus 15 ಕ್ಯಾಮೆರಾ: 4K 120fps ವೀಡಿಯೋ ರೆಕಾರ್ಡಿಂಗ್ ಸಪೋರ್ಟ್ ಖಚಿತ!
ಕಡಿಮೆ ಬೆಲೆಯಲ್ಲಿ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ OnePlus ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಮಾದರಿ ಸ್ಮಾರ್ಟ್‌ಫೋನ್ OnePlus 15 ಅನ್ನು ಇದೇ ಅಕ್ಟೋಬರ್ 27ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ನಂತರದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೂಡ ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದ್ದು, ಇದರ ವಿನ್ಯಾಸ, ಬಣ್ಣ ಆಯ್ಕೆಗಳು ಹಾಗೂ ಮುಖ್ಯ ತಾಂತ್ರಿಕ ವೈಶಿಷ್ಟ್ಯಗಳ ವಿವರಗಳು ಈಗಾಗಲೇ ಹೊರಬಿದ್ದಿವೆ. ಇತ್ತೀಚೆಗೆ ಕಂಪನಿಯು ಅದರ ಕ್ಯಾಮೆರಾ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆ ಕುರಿತ ಹೊಸ ಮಾಹಿತಿಯನ್ನು ಹಂಚಿಕೊಂಡಿದೆ.!
ಹೌದು, OnePlus 15 ನಲ್ಲಿ ಚಿತ್ರ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು OnePlus ತಿಳಿಸಿದೆ. OnePlus 15 ನಲ್ಲಿ ಇತ್ತೀಚಿನ Oppo LUMO Condensed Light Imaging System (ಜಾಗತಿಕವಾಗಿ DetailMax Engine ಎಂದು ಕರೆಯಲ್ಪಡುವ ಸಾಧ್ಯತೆ ಇದೆ) ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದು ಚಿತ್ರಗಳಲ್ಲಿ ಬೆಳಕು ನಿಯಂತ್ರಣ, ಬಣ್ಣ ನಿಖರತೆ ಮತ್ತು ವಿವರಗಳನ್ನು ಸುಧಾರಿಸುತ್ತದೆ ಎಂದು OnePlus ಕಂಪೆನಿ ಮಾಹಿತಿ ನೀಡಿದೆ.
ಈ ತಂತ್ರಜ್ಞಾನದಲ್ಲಿ OnePlus 15 ಫೋನ್ ಹಿಂದಿನ ಭಾಗದಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇರಲಿದ್ದು, 50MP Sony ಮುಖ್ಯ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (3.5x ಆಪ್ಟಿಕಲ್ ಜೂಮ್‌ನೊಂದಿಗೆ) ಒಳಗೊಂಡಿದೆ. ಹೊಸ ಮಾಸ್ಟರ್ ಮೋಡ್ ಬಳಕೆದಾರರಿಗೆ ಬಣ್ಣ ಮತ್ತು ಎಕ್ಸ್‌ಪೋಝರ್ ನಿಯಂತ್ರಣದ ವೃತ್ತಿಪರ ಆಯ್ಕೆಗಳನ್ನು ನೀಡುತ್ತದೆ. ಜೊತೆಗೆ, ಫೋನ್‌ನಲ್ಲಿ 4K 120fps ವೀಡಿಯೋ ರೆಕಾರ್ಡಿಂಗ್ ಸಹ ಸಪೋರ್ಟ್ ಮಾಡುತ್ತದೆ ಎಂದು ಕಂಪೆನಿಯು ಧೃಢಪಡಿಸಿದೆ.

ನಾವು ಈಗಾಗಲೇ ತಿಳಿದಿರುವಂತೆ, ಮುಂಬರುವ OnePlus 15 ಸ್ಮಾರ್ಟ್‌ಫೋನಿನಲ್ಲಿ ಅತ್ಯಾಧುನಿಕ Snapdragon 8 Elite Gen 5 ಪ್ರೊಸೆಸರ್ ಬಳಸಲಾಗಿದೆ. ಈ ಫೋನ್‌ನಲ್ಲಿ 7,300mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. ಕಂಪನಿಯ ಪ್ರಕಾರ, ಕೇವಲ ಕೆಲವು ನಿಮಿಷಗಳ ಚಾರ್ಜ್‌ನಲ್ಲೇ ಗಂಟೆಗಳ ಬಳಕೆ ಸಾಧ್ಯವಾಗುತ್ತದೆ. ಈ ಎಲ್ಲ ಅಧಿಕೃತ ಮಾಹಿತಿಗಳು ಕೆಲವೇ ದಿನಗಳ ಹಿಂದೆಯಷ್ಟೇ ಬಹಿರಂವಾಗಿದ್ದವು.
ಇಷ್ಟೇ ಅಲ್ಲದೆ, OnePlus 15 ಸ್ಮಾರ್ಟ್‌ಫೋನ್ ಅನ್ನು ಗೇಮರ್‌ಗಳಿಗಾಗಿ ಹೊಸ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಫೋನ್‌ನಲ್ಲಿ G2 ಗೇಮಿಂಗ್ ನೆಟ್‌ವರ್ಕ್ ಚಿಪ್ ಅಳವಡಿಸಲ್ಪಟ್ಟಿದ್ದು, ಇದು ಉತ್ತಮ ಸಂಪರ್ಕ ಮತ್ತು ಸ್ಥಿರತೆಯನ್ನು ನೀಡುತ್ತದೆ. ಹೊಸ Touch Display Sync ವೈಶಿಷ್ಟ್ಯವು ಸ್ಪರ್ಶ ಪ್ರತಿಕ್ರಿಯೆಯನ್ನು ವೇಗವಾಗಿ ಮಾಡುತ್ತದೆ. ತಾಪಮಾನ ನಿಯಂತ್ರಣಕ್ಕಾಗಿ Glacier Cooling System ಹಾಗೂ ಏರೋಜೆಲ್ ಇನ್ಸುಲೇಷನ್ ತಂತ್ರಜ್ಞಾನ ಬಳಸಲಾಗಿದೆ. ಜೊತೆಗೆ, Inter-game Recharge ವೈಶಿಷ್ಟ್ಯದಿಂದ ಆಟದ ಮಧ್ಯೆಯೇ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಡಿಸ್‌ಪ್ಲೇ ವಿಭಾಗದಲ್ಲಿ, OnePlus 15 ಸ್ಮಾರ್ಟ್‌ಫೋನಿನಲ್ಲಿ 1.5K BOE Flexible Oriental OLED ಡಿಸ್‌ಪ್ಲೇ ಇರಲಿದೆ. ಇದು 165Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಫೋನ್ Android 16 ಆಧಾರಿತ OxygenOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು Absolute Black, Misty Purple, ಮತ್ತು Sand Dune ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.ಒಟ್ಟಾರೆಯಾಗಿ, OnePlus 15 ಫೋನ್ ಅತ್ಯಾಧುನಿಕ ತಂತ್ರಜ್ಞಾನ ಅನುಭವದೊಂದಿಗೆ ಬರುವುದು ಬಹುತೇಕ ಖಚಿತವಾಗಿದೆ.
ಭಾರತದಲ್ಲಿ OnePlus 15 ಸ್ಮಾರ್ಟ್‌ಪೋನ್ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ, ನಿಖರ ದಿನಾಂಕವು ಇನ್ನೂ ಪ್ರಕಟವಾಗಿಲ್ಲ. ಭಾರತದಲ್ಲಿ ಇದರ ಬಿಡುಗಡೆ ಬಳಿಕ ಇದು ಹೈ-ಎಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.


Click it and Unblock the Notifications








