ಭಾರತಕ್ಕೆ Next-Gen ಪವರ್‌ಹೌಸ್ OnePlus 15 ಎಂಟ್ರಿ: ಬೆಲೆ ಎಷ್ಟು ಗೊತ್ತಾ?
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ OnePlus 15 ಸ್ಮಾರ್ಟ್‌ಪೋನ್ ಇಂದು(ಗುರುವಾರ 13/ 11/2025) ದೇಶದ ಮಾರುಕಟ್ಟೆಗೆ ಅದ್ಧೂರಿಯಗಿ ಬಿಡುಗಡೆಗೊಂಡಿದೆ. OnePlus ಕಂಪೆನಿಯ ತನ್ನ ಹಿಂದಿನ ಪೀಳಿಗೆಯ ಫೋನ್ OnePlus 13 ಸರಣಿಯ ಯಶಸ್ಸಿನ ನಂತರ ಈ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ದೇಶದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ Snapdragon 8 Elite Gen 5 ಚಿಪ್‌ಸೆಟ್ ಹೊತ್ತು ಹೊಂದಿರುವ ಮೊಟ್ಟಮೊದಲ ಸ್ಮಾರ್ಟ್‌ಫೋನ್ ಎಂಬ ಪ್ರಮುಖ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ, ಹೊಸ OnePlus 15 ಸ್ಮಾರ್ಟ್‌ಫೋನ್ ಹೇಗಿದೆ?, ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
OnePlus 15: ಪ್ರಮುಖ ವೈಶಿಷ್ಟ್ಯಗಳು
ನಿರೀಕ್ಷೆಯಂತೆಯೇ, ಹೊಸ OnePlus 15 ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇದರಲ್ಲಿರುವ ಕ್ವಾಲ್‌ಕಾಮ್‌ನ ನೂತನ Snapdragon 8 Elite Gen 5 (3nm) ಚಿಪ್‌ಸೆಟ್ ಒಂದು ನಿಜವಾದ ಗೇಮ್‌ಚೇಂಜರ್ ಆಗಿದೆ. ಇದರ 4.6GHz ಕ್ಲಾಕ್ ಸ್ಪೀಡ್, ಅಡ್ರಿನೋ 840 ಜಿಪಿಯು (GPU), ಮತ್ತು ಜಿ2 ವೈ-ಫೈ ಚಿಪ್ ವೇಗ ಮತ್ತು ಗ್ರಾಫಿಕ್ಸ್‌ನಲ್ಲಿ ಅಸಾಧ್ಯವಾದ ಅನುಭವ ನೀಡುತ್ತವೆ. ವಿಶೇಷವಾಗಿ ಈ ಪ್ರೊಸೆಸರ್ AI ಸಾಮರ್ಥ್ಯಗಳನ್ನು ಹೊಂದಿದೆ. AI Mind, Gemini AI, AI Portrait Glow, ಮತ್ತು AI Recorder ನಂತಹ ಸ್ಮಾರ್ಟ್ ವೈಶಿಷ್ಟ್ಯಗಳು ಈ ಫೋನ್ ಅನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಒಯ್ಯುತ್ತವೆ. ಈ ಪ್ರಬಲ ಸಂಯೋಜನೆಯಿಂದಾಗಿ, ಭಾರೀ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಅನ್ನು ಸರಾಗವಾಗಿ ನಿಭಾಯಿಸಬಲ್ಲ ಭರವಸೆಯನ್ನು ತಂದಿದೆ.
ವಿನ್ಯಾಸ ಮತ್ತು ಡಿಸ್‌ಪ್ಲೇ ವಿಭಾಗದಲ್ಲಿ, OnePlus 15 ಸ್ಮಾರ್ಟ್‌ಪೋನ್ ನೋಡಲು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದೆ. 6.78 ಇಂಚಿನ ದೊಡ್ಡದಾದ QHD+ AMOLED ಡಿಸ್ಪ್ಲೇ ಈ ಫೋನಿನಲ್ಲಿದೆ. ಈ ಡಿಸ್‌ಪ್ಲೇ 165Hz ಅತ್ಯಂತ ವೇಗದ ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದರಿಂದ ಸ್ಕ್ರೋಲಿಂಗ್ ಮತ್ತು ಅನಿಮೇಷನ್‌ಗಳು ಬಹಳ ನಯವಾಗಿರುವ ಭರವಸೆ ಇದೆ.ಜೊತೆಗೆ, ಇದು 1Hz ನಿಂದ 165Hz ವರೆಗೆ ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಅಡಾಪ್ಟಿವ್ ಮೋಡ್‌ನ್ನು ಹೊಂದಿದ್ದು, ಬ್ಯಾಟರಿ ಉಳಿತಾಯಕ್ಕೆ ಸಹಕಾರಿಯಾಗಿದೆ. ಇನ್ನು ಈ ಡಿಸ್‌ಪ್ಲೃ . 1,800 ನಿಟ್ಸ್ ಬ್ರೈಟ್‌ನೆಸ್‌ನಿಂದ ಸೂರ್ಯನ ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣುತ್ತದೆ. ಇದರ ವಿಶಿಷ್ಟ Eye Comfort Gaming ತಂತ್ರಜ್ಞಾನ ಗೇಮರ್‌ಗಳಿಗೆ ಅನುಕೂಲಕರವಾಗಿದೆ ಎಂದು ಕಂಪೆನಿಯು ಪ್ರಚಾರವನ್ನು ಮಾಡುತ್ತಿದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 15 ಸ್ಮಾರ್ಟ್‌ಫೋನ್ ಒಂದು 'ಕ್ಯಾಮೆರಾ ಬೀಸ್ಟ್' ಎಂದೇ ಹೇಳಬಹುದು. ಏಕೆಂದರೆ, ಇದು ಹಿಂಭಾಗದಲ್ಲಿ ಇದು ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಸೋನಿ IMX906 ಸೆನ್ಸಾರ್ ಹೊಂದಿದೆ. ಜೊತೆಗೆ, 3.5x ಆಪ್ಟಿಕಲ್ ಜೂಮ್ ಸಾಮರ್ಥ್ಯದ 50MP ಸ್ಯಾಮ್‌ಸಂಗ್ ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಲೆನ್ಸ್ ಅನ್ನು ಅಳವಡಿಸಲಾಗಿದೆ.ಈ ಸೆಟಪ್ ಬಳಕೆದಾರರಿಗೆ 8K 30fps ವೀಡಿಯೊ ರೆಕಾರ್ಡಿಂಗ್ ಮಾಡಲು ಅವಕಾಶ ನೀಡುತ್ತದೆ. ಇನ್ನುನಿರೀಕ್ಷೆಯಂತೆಯೇ, ಈ OnePlus 15 ಫೋನಿನ ಮುಂಭಾಗದಲ್ಲಿರುವ 32MP ಸೋನಿ ಸೆಲ್ಫಿ ಕ್ಯಾಮೆರಾ 4K 60fps ವೀಡಿಯೊ ರೆಕಾರ್ಡಿಂಗ್ ಮಾಡಲು ಬೆಂಬಲಿಸುತ್ತದೆ, ಇದು ವ್ಲಾಗರ್‌ಗಳು ಮತ್ತು ಸೆಲ್ಫಿ ಪ್ರಿಯರಿಗೆ ವರದಾನವಾಗಲಿದೆ.

ಬ್ಯಾಟರಿ ವಿಭಾಗದಲ್ಲಿ, OnePlus 15 ಫೋನಿನಲ್ಲಿ ದೈತ್ಯಾಕಾರದ 7,300mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ.. ಈ ದೊಡ್ಡ ಬ್ಯಾಟರಿಯನ್ನು ಪವರ್ ಮಾಡಲು 120W SuperVOOC ವೈರ್ಡ್ ಮತ್ತು 50W AirVOOC ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ. ಈ ಫೋನ್ ಅನ್ನು ಕೇವಲ 39 ನಿಮಿಷಗಳಲ್ಲಿ ಶೂನ್ಯದಿಂದ ನೂರಕ್ಕೆ ಚಾರ್ಜ್ ಮಾಡಬಹುದು ಎಂದು ಕಂಪೆನಿಯು ಹೇಳಿಕೊಂಡಿದೆ. ಇನ್ನು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಈ ಪೋನ್ IP66, IP68, ಮತ್ತು IP69K ಪ್ರಮಾಣೀಕರಣಗಳೊಂದಿಗೆ ಬಂದಿದೆ.
OnePlus 15: ಬೆಲೆ ಎಷ್ಟು?
ಭಾರತದಲ್ಲಿ OnePlus 15 ಬೆಲೆ ₹72,999 ರಿಂದ ಪ್ರಾರಂಭವಾಗುತ್ತದೆ (12GB RAM + 256GB ಸಂಗ್ರಹಣೆ). ಇದರ ಟಾಪ್ ಮಾದರಿ ₹79,999ಕ್ಕೆ ಲಭ್ಯವಿದೆ (16GB RAM + 512GB ಸಂಗ್ರಹಣೆ). ಗ್ರಾಹಕರು HDFC ಬ್ಯಾಂಕ್ ಕಾರ್ಡ್ ಬಳಸಿ ₹4,000 ರಿಯಾಯಿತಿ ಪಡೆಯುವ ಮೂಲಕ ಆರಂಭಿಕ ಬೆಲೆಯನ್ನು ₹68,999ಕ್ಕೆ ಇಳಿಸಬಹುದು. ಜೊತೆಗೆ ಗ್ರಾಹಕರ Infinite Black, Sand Storm, ಮತ್ತು ಆಕರ್ಷಕ Ultra Violet ಮೂರು ಬಣ್ಣಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ಒಟ್ಟಾರೆ ಸಾರಾಂಶವಾಗಿ, OnePlus 15 ಫೋನ್ ಅನದನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಮೂಲಕ, OnePlus ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್‌ಗೆ ಮಹತ್ವ ನೀಡಿದೆ. ಇದು ನಿಜವಾಗಿಯೂ ಒಂದು ಪ್ರೀಮಿಯಂ ಫ್ಲ್ಯಾಗ್‌ಶಿಪ್ ಆಗಿ ಗುರುತಿಸಿಕೊಂಡಿದ್ದು, ಈ ಬೆಲೆಯಲ್ಲಿ ದೇಶದ ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದೆ ಎಂದರೆ ತಪ್ಪಾಗುವುದಿಲ್ಲ.


Click it and Unblock the Notifications








