ಭಾರತದಲ್ಲಿ ಇಂದು OnePlus 15 ಲಾಂಚ್: ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳು!
ನವೆಂಬರ್ 13, 2025: OnePlus ಇಂದು ತನ್ನ ಮುಂದಿನ ಪೀಳಿಗೆಯ ಫ್ಲಾಗ್‌ಶಿಪ್ OnePlus 15 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುತ್ತಿದೆ. ಬಹುನಿರೀಕ್ಷಿತ ಈ ಫೋನ್ ಇಂದು ಸಂಜೆ 7 ಗಂಟೆಗೆ ಪರಿಚಯಗೊಳ್ಳಲಿದ್ದು, OnePlus ಇಂಡಿಯಾದ ಅಧಿಕೃತ YouTube ಚಾನೆಲ್, ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ಪೇಜ್‌ಗಳಲ್ಲಿ ಈ ಲಾಂಚ್ ಈವೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಕಳೆದ ಅಕ್ಟೋಬರ್ 27ರಂದು ಚೀನಾದಲ್ಲಿ ಮೊದಲ ಬಾರಿ ಅನಾವರಣಗೊಂಡಿದ್ದ ಈ ಪ್ರೀಮಿಯಂ ಸ್ಮಾರ್ಟ್‌ಫೋನ್, ಈಗ ಭಾರತೀಯ ಬಳಕೆದಾರರಿಗೆ ಅಧಿಕೃತವಾಗಿ ಲಭ್ಯವಾಗುತ್ತಿದೆ. ಹೊಸ ಚಿಪ್‌ಸೆಟ್, ಹೆಚ್ಚಿದ ಬ್ಯಾಟರಿ ಸಾಮರ್ಥ್ಯ, ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ OnePlus 15 ಈಗಾಗಲೇ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಹೈಪ್‌ನ್ನು ಸೃಷ್ಟಿಸಿದೆ. ಇಲ್ಲಿಯವರೆಗೂ ನಮಗೆ ಲಭ್ಯವಾಗಿರುವ ಮಾಹಿತಿ ಇಲ್ಲಿದೆ.
OnePlus 15: ಬಿಡುಗಡೆ ಮತ್ತು ಬೆಲೆ ವಿವರಗಳು
ಮೊದಲೇ ಹೇಳಿದಂತೆ, OnePlus 15 ಇಂದು ಸಂಜೆ 7 ಗಂಟೆಗೆ ಲಾಂಚ್ ಆಗಲಿದ್ದು, ಮತ್ತು ಇದೇ ದಿನ ರಾತ್ರಿ 8 ಗಂಟೆಯಿಂದ Amazon ಹಾಗೂ OnePlus ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಭಾರತದಲ್ಲಿ Absolute Black, Misty Purple, ಮತ್ತು Sand Dune ಬಣ್ಣಗಳಲ್ಲಿ ಈ ಫೋನ್ ಮಾರಾಟಕ್ಕೆ ಬರಲಿದೆ. ಇತ್ತೀಚಿನ ಮೂಲಗಳ ಪ್ರಕಾರ, ಇದರ ಆರಂಭಿಕ ಬೆಲೆ ₹72,999 ಇರಬಹುದು (12GB RAM + 256GB ಸ್ಟೋರೇಜ್). ಹಿಂದಿನ ವರದಿಗಳ ಪ್ರಕಾರ, ಬೆಲೆ ₹70,000 ರಿಂದ ₹75,000 ನಡುವೆ ಇರಲಿದೆ ಎನ್ನಲಾಗಿತ್ತು.
OnePlus 15: ವಿನ್ಯಾಸ ಮತ್ತು ಪ್ರಮುಖ ಫೀಚರ್ಸ್
ಚೀನಾದ ರೂಪಾಂತರದಂತೆಯೇ ಭಾರತದಲ್ಲಿ ಕುಡ OnePlus 15 ಫೋನ್ ಹೊಸ ವಿನ್ಯಾಸದ ಚೌಕಾಕಾರದ ಕ್ಯಾಮೆರಾ ಮೊಡ್ಯೂಲ್ ಹಾಗೂ ಅತ್ಯಂತ ತೆಳುವಾದ 1.15mm ಬೇಝೆಲ್‌ಗಳೊಂದಿಗೆ ಬರುತ್ತಿದೆ. ಇದು IP66, IP68, IP69 ಹಾಗೂ IP69K ರೇಟಿಂಗ್‌ಗಳನ್ನು ಹೊಂದಿದೆ. ಅಂದರೆ ಈ ಫೋನ್ ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಈ ಮಟ್ಟದ ರೇಟಿಂಗ್ ಸಾಮಾನ್ಯವಾಗಿ ಪ್ರೀಮಿಯಂ ಡಿವೈಸ್‌ಗಳಲ್ಲಿ ಮಾತ್ರ ಕಾಣಬಹುದು.

ಡಿಸ್‌ಪ್ಲೇ ವಿಭಾಗದಲ್ಲಿ, OnePlus 15 ಫೋನ್‌ನಲ್ಲಿ 6.78 ಇಂಚಿನ BOE Flexible AMOLED ಡಿಸ್‌ಪ್ಲೇ ಇದೆ, ಇದು 165Hz ರಿಫ್ರೆಶ್ ರೇಟ್, 1.5K ರೆಸಲ್ಯೂಶನ್ (1272x2772 ಪಿಕ್ಸೆಲ್) ಮತ್ತು 1,800 ನಿಟ್ಸ್ ಪೀಕ್ ಬ್ರೈಟ್ನೆಸ್ ಒದಗಿಸುತ್ತದೆ. ಜೊತೆಗೆ 100% DCI-P3 ಕಲರ್ ಗ್ಯಾಮುಟ್ ಬೆಂಬಲವಿದೆ. ಈ ಮಟ್ಟದ ಡಿಸ್‌ಪ್ಲೇ ತಂತ್ರಜ್ಞಾನ OnePlus 15 ಅನ್ನು ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಪ್ರಿಯರನ್ನು ಸೆಳೆದಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ Qualcomm Snapdragon 8 Elite Gen 5 (3nm) ಪ್ರೊಸೆಸರ್‌ನಿಂದ ಚಾಲಿತವಾಗಿರುವ ಭಾರತದ ಮೊದಲ ಫೋನ್ ಆಗಲಿದೆ. ಈ ಚಿಪ್‌ಸೆಟ್‌ಗೆ Adreno 840 GPU, ವೇಗದ LPDDR5X RAM (16GB ವರೆಗೆ) ಮತ್ತು UFS 4.1 ಸ್ಟೋರೇಜ್ (1TB ವರೆಗೆ) ಸಪೋರ್ಟ್ ನಿಡಲಿದೆ, ಅಲ್ಲದೆ, ಹೊಸ G2 Wi-Fi ಚಿಪ್ ಮತ್ತು Touch Response ಚಿಪ್ ಗೇಮಿಂಗ್ ಪ್ರತಿಕ್ರಿಯೆ ವೇಗವನ್ನು ಹೆಚ್ಚಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 15 ಫೋನಿನಲ್ಲಿನಲ್ಲಿ 50MP ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದ್ದು, ಇದು ಪ್ರಾಥಮಿಕ, ಅಲ್ಟ್ರಾ-ವೈಡ್ ಹಾಗೂ ಟೆಲಿಫೋಟೋ ಲೆನ್ಸ್‌ಗಳನ್ನು ಹೊಂದಿದೆ. ಈ ಬಾರಿ OnePlus ತನ್ನ DetailMax Image Engine ತಂತ್ರಜ್ಞಾನವನ್ನು ಪರಿಚಯಿಸಿದೆ, ಇದು ಹೆಚ್ಚು ಡೀಟೈಲ್ ಮತ್ತು ನೈಸರ್ಗಿಕ ಬಣ್ಣಗಳ ಫೋಟೋಗಳನ್ನು ಒದಗಿಸುತ್ತದೆ. ಮುಂಭಾಗದಲ್ಲಿ, 32-ಮೆಗಾಪಿಕ್ಸೆಲ್ (f/2.4) ಸೆಲ್ಫಿ ಕ್ಯಾಮೆರಾ ಇರಲಿದೆ.
ಬ್ಯಾಟರಿ ವಿಭಾಗದಲ್ಲಿ, OnePlus 15 ಫೋನಿನಲ್ಲಿ ಭಾರೀ 7,300mAh ಬ್ಯಾಟರಿ ನೀಡಲಾಗಿದೆ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ, ಫೋನ್ ಕೇವಲ 25 ನಿಮಿಷಗಳಲ್ಲಿ 100% ಚಾರ್ಜ್ ಆಗುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ Android 16 ಆಧಾರಿತ OxygenOS 16 ನೊಂದಿಗೆ ಬರುತ್ತದೆ, ಇದು ಹೆಚ್ಚು ವೇಗವಾದ ಮತ್ತು ಕ್ಲೀನರ್ ಯೂಸರ್ ಇಂಟರ್ಫೇಸ್ ಒದಗಿಸುತ್ತದೆ.
ಒಟ್ಟಾರೆ ಸಾರಾಂಶವಾಗಿ, OnePlus 15 ನವೀನ ವಿನ್ಯಾಸ, ಅತ್ಯಾಧುನಿಕ Snapdragon 8 Elite Gen 5 ಪ್ರೊಸೆಸರ್, ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ 2025ರ ಅತ್ಯಂತ ಶಕ್ತಿಶಾಲಿ ಫ್ಲ್ಯಾಗ್‌ಶಿಪ್‌ಗಳಲ್ಲಿ ಒಂದಾಗಿ ಹೊರಹೊಮ್ಮಬಹುದು. ಫೋನ್‌ನ ಡಿಸ್‌ಪ್ಲೇ ಮತ್ತು ಕ್ಯಾಮೆರಾ ವಿಭಾಗಗಳು ಗೇಮಿಂಗ್ ಹಾಗೂ ಫೋಟೋಗ್ರಫಿ ಪ್ರಿಯರನ್ನು ಖಂಡಿತ ಸೆಳೆಯಲಿವೆ ಎಂಬುದು ನನ್ನ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








