ಭಾರತಕ್ಕೆ OnePlus 15 ಆಗಮನ ಖಚಿತ: ವಿನ್ಯಾಸ ಮತ್ತು ವೈಶಿಷ್ಟ್ಯಗಳು ಲೀಕ್!
OnePlus ಕಂಪನಿಯ ಮುಂದಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 15 ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಅಧಿಕೃತವಾಗಿ ಖಚಿತವಾಗಿದೆ. OnePlus ಕಂಪೆನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ X (ಹಳೆಯ Twitter) ನಲ್ಲಿ ಪೋಸ್ಟ್ ಮಾಡಿರುವ ಟೀಸರ್‌ನಲ್ಲಿ ಫೋನ್‌ನ ಮೊದಲ ದೃಶ್ಯ ಮತ್ತು ಎರಡು ಬಣ್ಣದ ಆಯ್ಕೆಗಳನ್ನು ಹಂಚಿಕೊಂಡಿದೆ. "Coming Soon" ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯ ನಿರೀಕ್ಷೆ ಹೆಚ್ಚಾಗಿದ್ದು, ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ನವೆಂಬರ್ 13ರಂದು ಬಿಡುಗಡೆ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ.!
OnePlus 15 ವಿನ್ಯಾಸ ಮತ್ತು ಬಣ್ಣ ಆಯ್ಕೆಗಳು
ಮುಂಬರುವ OnePlus 15 ಫೋನ್ OnePlus 13s ನಿಂದ ಪ್ರೇರಿತ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. ಇದು ಲಂಬವಾಗಿರುವ ಕ್ಯಾಮೆರಾ ಸೆಟಪ್, ಫ್ಲ್ಯಾಷ್ ಮತ್ತು ಮೂರನೇ ಸಂವೇದಕದೊಂದಿಗೆ ಸ್ಕ್ವೇರ್ ಮಾಡ್ಯೂಲ್ ಅನ್ನು ಒಳಗೊಂಡಿರಬಹುದು. ಇದು ಕಿರಿದಾದ ಬೆಜೆಲ್‌ಗಳು ಮತ್ತು ಉತ್ತಮ ಇನ್-ಹ್ಯಾಂಡ್ ಗ್ರಿಪ್ ಅನ್ನು ಸಹ ಒಳಗೊಂಡಿರಬಹುದು. ಜೊತೆಗೆ ಫೋನ್ IP68 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನ ನಿರೋಧಕತೆ ಹೊಂದಿರಲಿದೆ. ಬಣ್ಣಗಳ ಆಯ್ಕೆಯಲ್ಲಿ Absolute Black, Mist Purple, ಮತ್ತು Original Sand Dune ಎನ್ನುವ ಮೂರು ಆಕರ್ಷಕ ಶೇಡ್‌ಗಳಿವೆ.
ಇನ್ನು ಹಲವು ವರದಿಗಳ ಪ್ರಕಾರ, OnePlus 15 ಸ್ಮಾರ್ಟ್‌ಫೋನ್ ಅನ್ನು ಮೊದಲು ಅಕ್ಟೋಬರ್ 27ರಂದು ಚೀನಾದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಂತರ, ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ನವೆಂಬರ್ 13ರಂದು ಬಿಡುಗಡೆ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಕಂಪನಿಯು ಈ ಬಾರಿ OnePlus 15 ಜೊತೆಗೆ OnePlus 15R ಮಾದರಿಯನ್ನೂ ಪರಿಚಯಿಸಲಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ ಚೀನಾ ಮಾರುಕಟ್ಟೆಯಲ್ಲಿ ಭಾರೀ ಸುದ್ದಿಯಾಗಿರುವ OnePlus Ace 6 ಸ್ಮಾರ್ಟ್‌ಫೋನ್ ಭಾರತದಲ್ಲಿ OnePlus 15R ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.
OnePlus 15 ಫೀಚರ್ಸ್ (ನಿರೀಕ್ಷಿತ)
OnePlus 15 ಸ್ಮಾರ್ಟ್‌ಫೋನ್ 6.78 ಇಂಚಿನ 1.5K LTPO AMOLED ಡಿಸ್‌ಪ್ಲೇ ಹೊಂದಿದೆ. ಇದು 165Hz ರಿಫ್ರೆಶ್ ರೇಟ್ ನೀಡಿದೆ. ಇದರ ಹಿಂದಿನ ಮಾದರಿ OnePlus 13 ಜೊತೆ ಹೋಲಿಸಿದರೆ 13% ಹೆಚ್ಚು ಪ್ರಕಾಶಮಾನತೆ ಮತ್ತು 30% ಹೆಚ್ಚು ಜೀವಮಾನ ನೀಡಲಿದೆ ಎಂದು ಹೇಳಲಾಗಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ ಹೊಸ Qualcomm Snapdragon 8 Elite Gen 5 ಚಿಪ್‌ಸೆಟ್, ಗರಿಷ್ಠ 16GB LPDDR5x RAM ಮತ್ತು 1TB ವರೆಗೆ ಮೆಮೊರಿ ದೊರೆಯಬಹುದು.

ಬ್ಯಾಟರಿ ವಿಭಾಗದಲ್ಲಿ 7,000mAh ಬ್ಯಾಟರಿ, 100W ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇರಬಹುದು. ಫೋನ್ OxygenOS 16 (Android 16 ಆಧಾರಿತ) ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ಯಾಮೆರಾ ವಿಭಾಗದಲ್ಲಿ, ಈ ಫೋನಿನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (3x ಆಪ್ಟಿಕಲ್ ಜೂಮ್), 50MP ಪ್ರೈಮರಿ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಲೆನ್ಸ್. ಉತ್ತಮ ಡೀಟೈಲ್‌ಗಳು ಮತ್ತು ಬಣ್ಣದ ನಿಖರತೆಗಾಗಿ ಹೊಸ ಸೆನ್ಸರ್‌ಗಳು ಸೇರಿಸಲ್ಪಟ್ಟಿವೆ ಎಂದು ವರದಿಯಾಗಿದೆ.
ಭಾರತದಲ್ಲಿ ನಿರೀಕ್ಷಿತ ಬೆಲೆ
OnePlus 15 ಸ್ಮಾರ್ಟ್‌ಫೋನ್ OnePlus 13s ನಿಂದ ಪ್ರೇರಿತ ವಿನ್ಯಾಸದೊಂದಿಗೆ ಬಿಡುಗಡೆಯಾಗುತ್ತಿದೆ. ಇದು ಇದರ ಕಾಂಪ್ಯಾಕ್ಟ್ವಿನ್ಯಾಸವನ್ನು ಬಹಿರಂಗಪಡಿಸಬಹುದಾದರೂ ಪೋನಿನ ಅಂದಾಜು ಬೆಲೆಯನ್ನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ, OnePlus 15 ಹೆಚ್ಚು ಫ್ಲಾಗ್‌ಶಿಪ್ ಫೀಚರ್ಸ್ ಹೊಂದಿರುವ ಸಾಧ್ಯತೆ ಇದೆ. ವಿಶೇಷವೆಂದರೆ, ಈ ಫೋನಿನ ಬೆಲೆ ₹65,000 ರಿಂದ ₹75,000 ರಷ್ಟು ಇರಬಹುದು ಎಂದು ಕೆಲವು ವರದಿಗಳು ಸೂಚಿಸುತ್ತಿವೆ. ಇನ್ನು OnePlus 15R ಬೆಲೆ OnePlus 15 ಗಿಂತ ಕಡಿಮೆ ಇರುವುದನ್ನು ನಾವು ಊಹಿಸಬಹುದು. ಆದರೆ, ಕಂಪನಿಯು ಅಧಿಕೃತ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು.
ಒಟ್ಟಾರೆಯಾಗಿ, OnePlus 15 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸ್ಮಾರ್ಟ್‌ಫೋನ್ ಪ್ರಿಯರು ಎದುರುನೋಡುತ್ತಿದ್ದಾರೆ. ಅಧಿಕೃತ ಘೋಷಣೆಯಾದ ನಂತರ, ಇದು 2025ರ OnePlus 15 ಸಾಧನವು ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗುವ ಸಾಧ್ಯತೆ ಇದೆ ಎಂಬುದು ನನ್ನ ಅಭಿಪ್ರಾಯ. ಈ ಕುರಿತು ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








