ಇದೇ ನ.13 ರಂದು OnePlus 15 ಬಿಡುಗಡೆ: ಅದಕ್ಕೂ ಮೊದಲೇ ಸಿಹಿಸುದ್ದಿ!
OnePlus ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 15 ಅನ್ನು ಇದೇ ನವೆಂಬರ್ 13ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ದೇಶದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಈ ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಕುರಿತು ಈಗಾಗಲೇ ಕುತೂಹಲ ಹೊಂದಿದ್ದರೆ, ಈ ಕುತೂಹಲವನ್ನು ತಣಿಸುವಂತಹ ವಿಷಯಗಳನ್ನು OnePlus ಬಹಿರಂಗಪಡಿಸಿದೆ. ಮುಂಬರುವ OnePlus 15 ಫೋನ್ ಅತ್ಯಾಧುನಿಕ Qualcomm Snapdragon 8 Elite Gen 5 ಪ್ರೊಸೆಸರ್, 1.5K ರೆಸಲ್ಯೂಷನ್ ಹೊಂದಿರುವ 165Hz AMOLED ಡಿಸ್‌ಪ್ಲೇ ಮತ್ತು 7,300mAh ಬ್ಯಾಟರಿ ಹೊಂದಿರುವುದು ಖಚಿತವಾಗಿದೆ. ಜೊತೆಗೆ ಲಭ್ಯತೆಯಂತಹ ಸಿಹಿಸುದ್ದಿ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ, ಮುಂಬರಲಿರುವ OnePlus 15 ಸ್ಮಾರ್ಟ್‌ಫೋನಿನ ಫೀಚರ್ಸ್ ಹೇಗಿವೆ?, ಬಿಡುಗಡೆ ಮತ್ತು ನಿಖರ ಸಮಯ ಯಾವುದು ಎಂಬೆಲ್ಲಾ ವಿಷಯಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
OnePlus 15: ಇಲ್ಲಿಯವರೆಗೆ ನಮಗೆ ತಿಳಿದಿರುವುದು
ಮುಂಬರುತ್ತಿರುವ ಈ ಫ್ಲ್ಯಾಗ್‌ಶಿಪ್ OnePlus 15 ಫೋನ್‌ನಲ್ಲಿ 6.78 ಇಂಚಿನ LTPO AMOLED ಡಿಸ್‌ಪ್ಲೇ ಇರುತ್ತದೆ. ಇದು 1.5K ರೆಸಲ್ಯೂಷನ್ ಮತ್ತು 165Hz ರಿಫ್ರೆಶ್ ರೇಟ್ ನೀಡುತ್ತದೆ. OnePlus ಪ್ರಕಾರ, Call of Duty: Mobile ಮತ್ತು Brawl Stars ಹೀಗೆ ಕೆಲವು ಗೇಮ್ಸ್‌ನಲ್ಲಿ 165fps native support ದೊರೆಯಲಿದೆ. ಜೊತೆಗೆ, ಈ ಡಿಸ್‌ಪ್ಲೇಯು ಗರಿಷ್ಠ 1800 ನಿಟ್ಸ್ ಬ್ರೈಟ್ನೆಸ್ ನೀಡುತ್ತದೆ ಹಾಗೂ ಕತ್ತಲಿನಲ್ಲಿ 1 ನಿಟ್ ತನಕ ಇಳಿಯಬಹುದು. ಕಣ್ಣಿನ ಆರಾಮಕ್ಕಾಗಿ TÜV Rheinland Intelligent Eye Care 5.0 ಪ್ರಮಾಣಪತ್ರವನ್ನು ಹೊಂದಿದೆ.
ಕಾರ್ಯಕ್ಷಮತೆ ವಿಭಾಗದಲ್ಲಿ, OnePlus 15 ಸ್ಮಾರ್ಟ್‌ಫೋನಿನ ಹೃದಯ ಭಾಗದಲ್ಲಿ ಶಕ್ತಿಶಾಲಿ Snapdragon 8 Elite Gen 5 ಚಿಪ್ ಇದೆ. ಜೊತೆಗೆ ಟಚ್ ರೆಸ್ಪಾನ್ಸ್ ಹೆಚ್ಚಿಸಲು ವಿಶೇಷ ಚಿಪ್ ಹಾಗೂ ನೆಟ್‌ವರ್ಕ್ ಸ್ಥಿರತೆಗೆ ಪ್ರತ್ಯೇಕ Wi-Fi ಚಿಪ್ ಸಹ ಇದೆ. ಈ ಮೂರು ಚಿಪ್ ಸಂಯೋಜನೆ ಹೊಸ OxygenOS 16 (Android 16) ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಗೇಮಿಂಗ್ ವೇಳೆ ಶಾಖ ನಿಯಂತ್ರಣಕ್ಕಾಗಿ "360° Cryo-Velocity Cooling System" ನೀಡಲಾಗಿದೆ. ಇದು ದೊಡ್ಡ 3D ವೆಪರ್ ಚೇಂಬರ್ ಮತ್ತು ಹೊಸ white graphite layer ಒಳಗೊಂಡಿದೆ.

ಕ್ಯಾಮೆರಾ ವಿಭಾಗದಲ್ಲಿ, OnePlus 15 ಫೋನ್ ಪ್ರಾಥಮಿಕ ಸಂವೇದಕ, ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಸೇರಿದಂತೆ ಮೂರು 50MP ಕ್ಯಾಮೆರಾಗಳ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ (50MP ವೈಡ್-ಆಂಗಲ್ ಕ್ಯಾಮೆರಾ + 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ + 50MP ಟೆಲಿಫೋಟೋ ಕ್ಯಾಮೆರಾ). ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 32MP ಸಾಮರ್ಥ್ಯದ ಕ್ಯಾಮೆರಾ ಇರಲಿದೆ. ಗಮನಿಸುವುದಾದರೆ, OnePlus ಈಗ Hasselblad ಸಹಭಾಗಿತ್ವವನ್ನು ನಿಲ್ಲಿಸಿ, ಸ್ವಂತ DetailMax Engine ಅನ್ನು ಚಿತ್ರ ಸಂಸ್ಕರಣೆಗೆ ಬಳಸುತ್ತಿದೆ.
ಬ್ಯಾಟರಿ ವಿಭಾಗದಲ್ಲಿ, OnePlus 15 ನಲ್ಲಿ 7,300mAh Silicon NanoStack ಬ್ಯಾಟರಿ ಇರಲಿದೆ. ಕಂಪನಿಯ ಪ್ರಕಾರ, ಇದು ನಾಲ್ಕು ವರ್ಷಗಳ ನಂತರವೂ 80% ಸಾಮರ್ಥ್ಯ ಉಳಿಸಿಕೊಳ್ಳುತ್ತದೆ ಹಾಗೂ -20°C ತಾಪಮಾನದಲ್ಲೂ ಕಾರ್ಯನಿರ್ವಹಿಸುತ್ತದೆ. ಚಾರ್ಜಿಂಗ್ ಆಯ್ಕೆಗಳಲ್ಲಿ, 120W SUPERVOOC ವೈರ್ಡ್ ಹಾಗೂ 50W AIRVOOC ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇರಲಿದೆ, ಜೊತೆಗೆ bypass charging mode ಗೇಮಿಂಗ್ ವೇಳೆ ಶಾಖ ತಡೆಯಲು ಸಹಾಯಮಾಡುತ್ತದೆ. ಇನ್ನು ನೀರು ಹಾಗೂ ಧೂಳಿನಿಂದ ರಕ್ಷಣೆಗೆ IP66, IP68, IP69 ಮತ್ತು IP69K ರೇಟಿಂಗ್ಸ್ ಇವೆ.
OnePlus 15: ಬಿಡುಗಡೆ, ಬಣ್ಣಗಳು ಹಾಗೂ ಮಾರಾಟ ವಿವರಗಳು
ಭಾರತದಲ್ಲಿ OnePlus 15 ಸ್ಮಾರ್ಟ್‌ಫೋನ್ ಅನ್ನು ನವೆಂಬರ್ 13 ರಂದು ಸಂಜೆ 7 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಅದೇ ದಿನ ರಾತ್ರಿ 8 ಗಂಟೆಯಿಂದ ಮಾರಾಟ ಆರಂಭವಾಗಲಿದೆ. ಗ್ರಾಹಕರು OnePlus 15 ಫೋನ್ ಅನ್ನು Sand Dune, Absolute Black, ಮತ್ತು Misty Purple ಮೂರು ಬಣ್ಣಗಳಲ್ಲಿ ಹಾಗೂ 12GB ಅಥವಾ 16GB RAM ಜೊತೆಗೆ 256GB, 512GB ಹಾಗೂ 1TB ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು. ಇನ್ನು ಬೆಲೆಯು, ₹60,000 ರಿಂದ ₹75,000 ವ್ಯಾಪ್ತಿಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಭಾರತದಲ್ಲಿ OnePlus 15R ಫೋನ್ ಕೂಡ ಬರಬಹುದು ಎಂದು ಊಹಿಸಲಾಗಿದೆ. ಆದರೆ ಕಂಪನಿಯು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ.


Click it and Unblock the Notifications








