Home
ಮೊಬೈಲ್

OnePlus 15 vs iQOO 15 vs Realme GT 8 Pro: ಯಾವ ಫ್ಲ್ಯಾಗ್‌ಶಿಪ್‌ ಸೂಪರ್?

2025ರ ನವೆಂಬರ್ ತಿಂಗಳು ಭಾರತದ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯ ಅತ್ಯಂತ ರೋಚಕ ತಿಂಗಳು ಆಗಲಿದೆ. ದೇಶದ ಮಾರುಕಟ್ಟೆಗೆ ಇದೇ ತಿಂಗಳು OnePlus 15, iQOO 15, ಮತ್ತು Realme GT 8 Pro ಮೂರು ಪ್ರಮುಖ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದೆ. ಈ ಮೂರೂ ಫೋನ್‌ಗಳು ಹೊಸ ತಲೆಮಾರಿನ Qualcomm Snapdragon 8 Elite Gen 5 ಪ್ರೊಸೆಸರ್ ಚಾಲಿತವಾಗಿ ಬರುತ್ತಿದ್ದು, ದೇಶದ ಮೊಬೈಲ್ ಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿವೆ. ಈಗಾಗಾಲೇ ಹೊರಬಿದ್ದಿರುವ ಮಾಹಿತಿಗಳ ಪ್ರಕಾರ, ಈ ಮೂರು ಸ್ಮಾರ್ಟ್‌ಫೋನ್‌ಗಳ ಕಾರ್ಯಕ್ಷಮತೆ ಮತ್ತು ವೇಗದ ವಿಷಯದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ, ಈ ಫೋನ್‌ಗಳು ವಿಭಿನ್ನ ವಿಷಯಗಳಿಂದ ಗಮನಸೆಳೆಯುತ್ತಿವೆ. ಹಾಗಾಗಿ, ಇಂದಿನ ಲೇಖನದಲ್ಲಿ OnePlus 15, iQOO 15, ಮತ್ತು Realme GT 8 Pro ಫೋನ್‌ಗಳು ಹೊಂದಿರುವ ಪ್ರಮುಖ ಅಂಶಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

OnePlus 15 vs iQOO 15 vs Realme GT 8 Pro: ಭಾರತದಲ್ಲಿ ಬಿಡುಗಡೆ ದಿನಾಂಕಗಳು ಮತ್ತು ನಿರೀಕ್ಷಿತ ಬೆಲೆ
ಮೊದಲು OnePlus 15, iQOO 15, ಮತ್ತು Realme GT 8 Pro ಪೋನ್‌ಗಳು ಬಿಡುಗಡೆಯಾಗುವ ಅಧಿಕೃತ ದಿನಾಂಕ ಮತ್ತು ನಿರೀಕ್ಷಿತ ಬೆಲೆಯನ್ನು ನೋಡುವುದಾದರೆ,
OnePlus 15
ಬಿಡುಗಡೆ ದಿನಾಂಕ: 13 ನವೆಂಬರ್ 2025
ನಿರೀಕ್ಷಿತ ಬೆಲೆ: ಸೋರಿಕೆಗಳಂತೆ ₹70,000 - ₹75,000
Realme GT 8 Pro
ಬಿಡುಗಡೆ ದಿನಾಂಕ: 20 ನವೆಂಬರ್ 2025
ನಿರೀಕ್ಷಿತ ಬೆಲೆ: ಸೋರಿಕೆಗಳಂತೆ ₹65,000 ಆಸುಪಾಸಿನಲ್ಲಿ ಇರಬಹುದು
iQOO 15
ಬಿಡುಗಡೆದಿನಾಂಕ: 26 ನವೆಂಬರ್ 2025
ನಿರೀಕ್ಷಿತ ಬೆಲೆ: ಸೋರಿಕೆಗಳಂತೆ ₹59,999 ಆಸುಪಾಸಿನಲ್ಲಿ ಇರಬಹುದು

Realme GT 8 Pro: ಫೋಟೋಗ್ರಫಿ ಪ್ರಿಯರಿಗೆ
ನಾವು ಗಮನಿಸಿರುವ ಮುಖ್ಯ ವೈಶಿಷ್ಟ್ಯಗಳು,
50MP ಮುಖ್ಯ ಕ್ಯಾಮೆರಾ + 50MP ಅಲ್ಟ್ರಾ ವೈಡ್ + 200MP ಪೆರಿಸ್ಕೋಪ್ ಟೆಲಿಫೋಟೋ (3x ಆಪ್ಟಿಕಲ್ ಜೂಮ್)
Ricoh ಕಂಪನಿಯ ಸಹಯೋಗದೊಂದಿಗೆ ಇಮೇಜ್ ಟ್ಯೂನಿಂಗ್
Snapdragon 8 Elite Gen 5 ISP ಸಹಾಯದಿಂದ ವೇಗದ ಇಮೇಜ್ ಪ್ರಾಸೆಸಿಂಗ್

OnePlus 15 vs iQOO 15 vs Realme GT 8 Pro: ಯಾವ ಫ್ಲ್ಯಾಗ್‌ಶಿಪ್‌ ಸೂಪರ್?

ಯಾಕೆ ಇದು ಉತ್ತಮ ಆಯ್ಕೆಯಾಗಬಹುದು?
Realme GT 8 Pro ಫೋನ್ ಕ್ಯಾಮೆರಾ ವಿಭಾಗದಲ್ಲಿ ಸ್ಪಷ್ಟ ಮುಂಚೂಣಿಯಲ್ಲಿದೆ. ಇದರ 200MP ಪೆರಿಸ್ಕೋಪ್ ಲೆನ್ಸ್ ಮೂಲಕ ದೂರದ ಚಿತ್ರಗಳನ್ನು ಅತ್ಯುತ್ತಮ ಸ್ಪಷ್ಟತೆಯೊಂದಿಗೆ ಸೆರೆಹಿಡಿಯಬಹುದು. ₹65,000 ಬೆಲೆಗಿಂತ ಹೆಚ್ಚು ವೈಶಿಷ್ಟ್ಯಗಳನ್ನು ನೀಡುವುದರಿಂದ ಇದನ್ನು ಫೋಟೋಗ್ರಾಫರ್‌ಗಳ ಫೋನ್ ಎಂದು ಹೇಳಲಾಗುತ್ತಿದೆ.

OnePlus 15: ಬ್ಯಾಟರಿ ಮತ್ತು ದೀರ್ಘಾವಧಿ ಬಳಕೆದಾರರಿಗೆ
ನಾವು ಗಮನಿಸಿರುವ ಮುಖ್ಯ ವೈಶಿಷ್ಟ್ಯಗಳು,
7300mAh ಸಿಲಿಕಾನ್-ಕಾರ್ಬನ್ ಬ್ಯಾಟರಿ
120W SuperVOOC ವೇಗದ ಚಾರ್ಜಿಂಗ್
6.78 ಇಂಚಿನ 1.5K LTPO AMOLED ಡಿಸ್‌ಪ್ಲೇ (165Hz ರಿಫ್ರೆಶ್ ರೇಟ್)

ಯಾಕೆ ಇದು ಉತ್ತಮ ಆಯ್ಕೆಯಾಗಬಹುದು?
OnePlus 15 ಫೋನ್ ಅತ್ಯಂತ ದೊಡ್ಡ ಬ್ಯಾಟರಿ ಹೊಂದಿರುವ ಫ್ಲ್ಯಾಗ್‌ಶಿಪ್ ಆಗಲಿದೆ. Snapdragon 8 Elite Gen 5 ಚಿಪ್‌ನ 3nm ತಂತ್ರಜ್ಞಾನ ಇದರ ಪವರ್ ಎಫಿಶಿಯನ್ಸಿಯನ್ನು ಹೆಚ್ಚಿಸುತ್ತದೆ. 120W ಚಾರ್ಜಿಂಗ್ ಸಹ ಇದ್ದು, ಕೆಲವೇ ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ₹70,000-₹75,000 ಬೆಲೆಗೆ ಬ್ಯಾಟರಿ ಹಾಗೂ ಕಾರ್ಯಕ್ಷಮತೆಯ ಸಮತೋಲನ ಅತ್ಯುತ್ತಮವಾಗಿದೆ. ದಿನವಿಡೀ ಕೆಲಸ ಮಾಡುವವರು, ಪ್ರಯಾಣಿಕರು, ಅಥವಾ ಬ್ಯಾಟರಿ ಬಗ್ಗೆ ಚಿಂತೆ ಇಲ್ಲದ ಬಳಕೆದಾರರಿಗೆ ಇದು ಸೂಕ್ತವಾಗಬಹುದು.

iQOO 15: ಗೇಮಿಂಗ್ ಮತ್ತು ಮೀಡಿಯಾ ಪ್ರಿಯರಿಗೆ
ನಾವು ಗಮನಿಸಿರುವ ಮುಖ್ಯ ವೈಶಿಷ್ಟ್ಯಗಳು,
Snapdragon 8 Elite Gen 5 + ಡೆಡಿಕೇಟೆಡ್ Q3 ಗೇಮಿಂಗ್ ಚಿಪ್
6.85 ಇಂಚಿನ 2K+ LTPO AMOLED ಡಿಸ್‌ಪ್ಲೇ
144Hz ರಿಫ್ರೆಶ್ ರೇಟ್ ಮತ್ತು 6000 ನಿಟ್ಸ್ ಪೀಕ್ ಬ್ರೈಟ್ನೆಸ್
7000mAh ಬ್ಯಾಟರಿ + 100W ಫಾಸ್ಟ್ ಚಾರ್ಜಿಂಗ್

ಯಾಕೆ ಇದು ಉತ್ತಮ ಆಯ್ಕೆಯಾಗಬಹುದು?
ಗೇಮಿಂಗ್ ಮತ್ತು ಮೀಡಿಯಾ ಉಪಯೋಗಕ್ಕೆ iQOO 15 ಫೋನ್ ಅತ್ಯುತ್ತಮ ಆಯ್ಕೆಯಾಗಲಿದೆ. ಇದರ ಡೆಡಿಕೇಟೆಡ್ ಗೇಮಿಂಗ್ ಚಿಪ್ ಗ್ರಾಫಿಕ್ಸ್ ಪ್ರಾಸೆಸಿಂಗ್‌ನನ್ನು ಸ್ಥಿರಗೊಳಿಸುತ್ತದೆ ಮತ್ತು ತಾಪಮಾನ ಕಡಿಮೆ ಇಡುತ್ತದೆ. ಡಿಸ್‌ಪ್ಲೇ 6000 ನಿಟ್ಸ್ ಇದ್ದು, ಪ್ರಕರ ಸೂರ್ಯನ ಬೆಳಕಿನಲ್ಲೂ ಸ್ಪಷ್ಟ ವೀಕ್ಷಣೆ ಸಾಧ್ಯ. ಒಟ್ಟಾರೆಯಾಗಿ, ₹59,999 ಬೆಲೆಗೆ ಇದು ಅತ್ಯಂತ "ವ್ಯಾಲ್ಯೂ ಫ್ಲ್ಯಾಗ್‌ಶಿಪ್" ಆಗಬಹುದು.

ಅಂತಿಮ ತೀರ್ಮಾನ: ಯಾವುದು ನಿಮಗಾಗಿ?
Realme GT 8 Pro: ಕ್ಯಾಮೆರಾ ಮತ್ತು ಫೋಟೋಗ್ರಫಿ ಪ್ರಿಯರಿಗೆ ಅತ್ಯುತ್ತಮ.
OnePlus 15: ದೀರ್ಘ ಬ್ಯಾಟರಿ ಲೈಫ್ ಮತ್ತು ವೇಗದ ಚಾರ್ಜಿಂಗ್ ಬೇಕಾದವರಿಗೆ ಸೂಕ್ತ.
iQOO 15: ಗೇಮಿಂಗ್ ಮತ್ತು ಮೀಡಿಯಾ ಅನುಭವ ಬಯಸುವವರಿಗೆ ಅತ್ಯುತ್ತಮ ಆಯ್ಕೆ.

ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗುತ್ತಿರುವ ಈ ಮೂರೂ Snapdragon 8 Elite Gen 5 ಸ್ಮಾರ್ಟ್‌ಫೋನ್‌ಗಳು ಬಹುತೇಕ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿವೆ. ಬೆಲೆ, ಬಳಕೆ ಮತ್ತು ವೈಶಿಷ್ಟ್ಯಗಳ ಆಧಾರದಲ್ಲಿ ಆಯ್ಕೆ ಮಾಡುವುದು ನಿಮ್ಮ ಜವಬ್ದಾರಿ.

Best Mobiles in India

English summary
Three major flagship smartphones the OnePlus 15, iQOO 15, and Realme GT 8 Pro are set to launch in India this month. All three devices are powered by Qualcomm’s latest Snapdragon 8 Elite Gen 5 processor, fueling excitement and high expectations among smartphone enthusiasts across the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+