Home
ಮೊಬೈಲ್

OnePlus 15R 5G vs OnePlus 13R 5G: ಮಿಡ್‌ರೇಂಜ್‌ನಲ್ಲಿ ಭಾರೀ ಬದಲಾವಣೆ?!

ಇತ್ತೀಚಿಗಷ್ಟೇ ಭಾರತದ ಮೊಬೈಲ್ ಮಾರುಕಟ್ಟೆಗೆ ಬಹುನಿರೀಕ್ಷಿತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 15 5G ಬಿಡುಗಡೆಯಾಗಿತ್ತು. ಈ ಬಿಡುಗಡೆ ವೇಳೆ ಎಲ್ಲರ ಚಿತ್ತ OnePlus R-ಸರಣಿಯ OnePlus 15R 5G ಮೇಲೆ ಕೂಡ ಇತ್ತು. ಏಕೆಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಸಹ OnePlus ತನ್ನ ಮಿಡ್‌ ರೇಂಜ್ ಫ್ಲಾಗ್‌ಶಿಪ್ OnePlus 15R 5G ಅನ್ನು ಪರಿಚಯಿಸಲಿದೆ ಎಂದು ಹಲವಾರು ಮೊಬೈಲ್ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ, ಈ ಬಾರಿ OnePlus 15R 5G ಫೋನ್ ಬಿಡುಗಡೆಯಾಗಲಿಲ್ಲ. ಆದರೆ, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.!

ಹೌದು, OnePlus ತನ್ನ ಹೊಸ R-ಸರಣಿ ಫೋನ್‌ಗಾಗಿ ಕಾಯುತ್ತಿದ್ದ ಬಳಕೆದಾರರಿಗೆ ಈಗಾಗಲೇ ದೊಡ್ಡ ಸುಳಿವು ನೀಡಿದೆ. OnePlus 15 5G ಲೈವ್ ಲಾಂಚ್ ವೇಳೆ, OnePlus 15R 5G ಕೂಡ ಶೀಘ್ರದಲ್ಲೇ ಬರಲಿದೆ ಎಂದು ಕಂಪನಿ ದೃಢಪಡಿಸಿದೆ. ಇನ್ನು ಕಳೆದ ಕೆಲವು ವಾರಗಳಿಂದಲೇ ಈ ಫೋನ್ ಬಗ್ಗೆ ಹಲವಾರು ಮಾಹಿತಿ ಲೀಕ್ ಆಗುತ್ತಿವೆ. ಇದೀಗ ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ OnePlus 15R 5G ಫೋನ್ ಹೊಸ ವರ್ಷದಂದು ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇದಕ್ಕೆ ನಿಖರವಾದ ಒಂದು ಕಾರಣವೂ ಸಹ ಇದೆ.

ಈ ಹಿಂದಿನ ಪೀಳಿಗೆಯ OnePlus 13R 5G ಅನ್ನು ಭಾರತದಲ್ಲಿ ಜನವರಿ 7, 2025 ರಂದು ಬಿಡುಗಡೆಯಾಗಿತ್ತು. ಕಂಪನಿಯ ತನ್ನ ಚಳಿಗಾಲದ ಉಡಾವಣಾ ಸಮಾರಂಭದಲ್ಲಿ OnePlus 13 5G ಜೊತೆಗೆ ಈ OnePlus 13R 5G ಫೋನ್ ಕೂಡ ಬಿಡುಗಡೆ ಮಾಡಿತ್ತು. ಇದೀಗ OnePlus R-ಸರಣಿಗೆ ಈ ಸಮಯವನ್ನೇ ಮೀಸಲಿಡಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ.!. ಇನ್ನಷ್ಟು ವರದಿಗಳು ಡಿಸೆಂಬರ್ 2025 ರ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿವೆ. ಆದರೆ, ಈ ಎಲ್ಲವೂ ಅಧಿಕೃತ ಮಾಹಿತಿಯಲ್ಲ. ಆದ್ದರಿಂದ, ನಾವು ಕಾಯಬೇಕಾಗುತ್ತದೆ.!

OnePlus 15R 5G vs OnePlus 13R 5G: ಏನೆಲ್ಲಾ ಅಪ್‌ಡೇಟ್‌ಗಳು?
OnePlus 15R 5G ಶೀಘ್ರದಲ್ಲೇ ಬರಲಿದೆ ಎಂಬುದನ್ನು OnePlus ದೃಢಪಡಿಸಿದೆ. ಇದೇ ವೇಳೆ ಈ ಫೋನ್ ಬಗ್ಗೆ ಹಲವಾರು ಮಾಹಿತಿ ಲೀಕ್ ಆಗುತ್ತಿದೆ. ಇದರಿಂದ, ಮುಂಬರುವ OnePlus 15R 5G ಫೋನ್ ಕಳೆದ ಬಾರಿಗೆ ಬಿಡುಗಡೆಯಾದ OnePlus 13R ಗೆ ಹೋಲಿಸಿದಾಗ ಎಷ್ಟು ಉತ್ತಮವಾಗಿರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಎರಡೂ ಫೋನ್‌ಗಳನ್ನು ಹೋಲಿಸಿದಾದ OnePlus 15R 5G ಫೋನಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ನೋಡೋಣ ಬನ್ನಿ.

ಡಿಸೈನ್: ಹೊಸ ಕ್ಯಾಮೆರಾ ಐಲ್ಯಾಂಡ್ ಮತ್ತು ಫ್ಲಾಟ್ ಬಾಡಿ
ಮುಂಬರುವ OnePlus 15R 5G ನಲ್ಲಿ ಡಿಸೈನ್ ವಿಭಾಗದಲ್ಲಿ ಗಮನಾರ್ಹ ಬದಲಾವಣೆ ಇರಬಹುದು. OnePlus 13R ನಲ್ಲಿ ಇದ್ದ ವೃತ್ತಾಕಾರದ ಕ್ಯಾಮೆರಾ ವಿನ್ಯಾಸಕ್ಕೆ ಬದಲಾಗಿ, 15R ನಲ್ಲಿ ಚೌಕಾಕಾರದ ಪ್ರೀಮಿಯಮ್ ಐಲ್ಯಾಂಡ್ ಬರಬಹುದು. ಈ ಬಾರಿ ಫ್ಲಾಟ್ ಏಡ್ಜ್‌ಗಳ ಬಾಡಿ ಫಿನಿಷ್ ಕೂಡ ಕಾಣಬಹುದು. ಇದು ಹಿಡಿಯಲು ಸುಲಭವಾಗಿರುತ್ತದೆ ಮತ್ತು ಪ್ರೀಮಿಯಮ್ ಲುಕ್ ನೀಡುತ್ತದೆ.

OnePlus 15R 5G vs OnePlus 13R 5G: ಮಿಡ್‌ರೇಂಜ್‌ನಲ್ಲಿ ಭಾರೀ ಬದಲಾವಣೆ?!

ಡಿಸ್‌ಪ್ಲೇ: ಹೆಚ್ಚು ಪ್ರಕಾಶಮಾನತೆ ಮತ್ತು ವೇಗದ ರಿಫ್ರೆಶ್ ರೇಟ್
ಹೊಸ OnePlus 15R 5G ನಲ್ಲಿ 6.83 ಇಂಚಿನ AMOLED ಸ್ಕ್ರೀನ್ ಮತ್ತು ಭರ್ಜರಿ 165Hz ರಿಫ್ರೆಶ್ ರೇಟ್ ಇರಬಹುದು. ಹೊರಾಂಗಣ ಬಳಕೆಯಲ್ಲಿ ಸಹ ಸ್ಪಷ್ಟ ದೃಶ್ಯ ನೀಡುವ 5000 nits ಪೀಕ್ ಬ್ರೈಟ್‌ನೆಸ್ ಕೂಡ ಲೀಕ್‌ಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆಹೋಲಿಸಿದರೆ, OnePlus 13R 6.78 ಇಂಚಿನ AMOLED ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. ಆದ್ದರಿಂದ, ಡಿಸ್‌ಪ್ಲೇ ವಿಭಾಗದಲ್ಲಿ 15R ಸ್ಪಷ್ಟವಾಗಿ ಗಮನಸೆಳೆಯಲಿದೆ.

ಪರ್ಫಾರ್ಮೆನ್ಸ್: Snapdragon 8 Elite ಜೊತೆಗೆ ಹೆಚ್ಚು ವೇಗ, ಹೆಚ್ಚು ಸ್ಟೇಬಿಲಿಟಿ
OnePlus 15R 5G Snapdragon 8 Elite ಚಿಪ್‌ಸೆಟ್‌ನೊಂದಿಗೆ ಬರಬಹುದು. ಇದು ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು AI ಫೀಚರ್‌ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುವ ಟಾಪ್‌-ಎಂಡ್ ಪ್ರೊಸೆಸರ್ ಆಗಿದೆ. OnePlus 13R ನಲ್ಲಿ ಇರುವ Snapdragon 8 Gen 3 ಕೂಡ ಶಕ್ತಿಯುತವಾದರೂ, Elite ಚಿಪ್ ಸ್ಪಷ್ಟವಾಗಿ ಇನ್ನೊಂದು ಹಂತ ಮುಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಬೃಹತ್ 7000mAh ಬ್ಯಾಟರಿ
OnePlus 15R ನಲ್ಲಿ 7000mAh ದೈತ್ಯ ಬ್ಯಾಟರಿ ಇರಬಹುದು ಎಂದು ವರದಿಗಳು ಸೂಚಿಸುತ್ತಿವೆ. ದಿನಪೂರ್ತಿ ಭಾರೀ ಬಳಕೆಯಲ್ಲಿಯೂ ಬ್ಯಾಟರಿ ಡ್ರೇನ್ ಆಗದಿರುವುದು ಇದರ ದೊಡ್ಡ ಪ್ಲಸ್ ಪಾಯಿಂಟ್. ಇತ್ತ OnePlus 13R 6000mAh ಬ್ಯಾಟರಿ ಹೊಂದಿದೆ. ಜೊತೆಗೆ, 15R ನಲ್ಲಿ 100W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರಬಹುದು ಎಂಬ ಮಾತಿದೆ.

ಕ್ಯಾಮೆರಾ: ಟೆಲಿಫೋಟೋ ಸೇರ್ಪಡೆ ದೊಡ್ಡ ಬದಲಾವಣೆ
OnePlus 15R 5G ನಲ್ಲಿ 50MP ಮುಖ್ಯ ಲೆನ್ಸ್ + 8MP ಅಲ್ಟ್ರಾವೈಡ್ + 50MP ಟೆಲಿಫೋಟೋ ಕ್ಯಾಮೆರಾ ಇರಬಹುದು. ಟೆಲಿಫೋಟೋ ಲೆನ್ಸ್ ಸೇರ್ಪಡೆಯ ಜೊತೆಗೆ ಉತ್ತಮ ಜೂಮ್ ಗುಣಮಟ್ಟ ಮತ್ತು ಡೆಪ್ತ್ ಡೀಟೈಲ್ ನೀಡುತ್ತದೆ ಎನ್ನಲಾಗಿದೆ. ಇತ್ತ OnePlus 13R ನಲ್ಲಿ 50MP + 8MP + 2MP ಮ್ಯಾಕ್ರೋ ಸೆಟ್‌ಅಪ್ ಇತ್ತು. ಹೀಗಾಗಿ, 15R ಕ್ಯಾಮೆರಾ ವಿಭಾಗದಲ್ಲಿ ಸ್ಪಷ್ಟ ಸುಧಾರಣೆ ನೀಡುತ್ತದೆ.

OnePlus 15R 5G vs OnePlus 13R 5G: ಭಾರತದಲ್ಲಿ ನಿರೀಕ್ಷಿತ ಬೆಲೆ
ಭಾರತದಲ್ಲಿ OnePlus 13R 5G ಫೋನ್ ₹39,999 ಆರಂಭಿಕ ಬೆಲೆಗೆ ಲಭ್ಯವಾಗಿತ್ತು. ಆದರೆ, ಹೊಸ OnePlus 15R 5G ಬೆಲೆ ₹42,999 - ₹44,990 ನಡುವೆಯಿರಬಹುದು ಎಂದು ಅಂದಾಜಿಸಲಾಗಿದೆ. ಹೊಸ ಅಪ್‌ಗ್ರೇಡ್‌ಗಳನ್ನು ನೋಡಿದರೆ ಬೆಲೆ ಸ್ವಲ್ಪ ಹೆಚ್ಚಾಗಿರುವುದು ಸಹಜ.ಒಟ್ಟಾರೆಯಾಗಿ, ಈ ಮೇಲಿಲಿ ಎಲ್ಲಾ ಅಂಶಗಳನ್ನು ಗಮನಿಸಿದರೆ, OnePlus 15R 5G ಖಂಡಿತವಾಗಿ ಹೆಚ್ಚು ಆಕರ್ಷಕ ಅಪ್‌ಗ್ರೇಡ್ ಆಗಬಹುದು. OnePlus 13R ಉತ್ತಮ ಮೌಲ್ಯ ನೀಡುವ ಫೋನ್‌ನಾದರೂ, OnePlus 15R ಬಿಡುಗಡೆಯು ಮತ್ತಷ್ಟು ಗಮನಸೆಳೆಯಬಹುದು.

Best Mobiles in India

English summary
OnePlus has finally dropped a major hint for users eagerly waiting for its next R-series smartphone. During the live launch of the OnePlus 15 5G, the company officially confirmed that the OnePlus 15R 5G is on the way. In fact, multiple leaks and reports over the past few weeks have already revealed several key details about the upcoming device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+