OnePlus 15R ಲಾಂಚ್‌ಗೆ ಹತ್ತಿರ: ಫೀಚರ್ಸ್ ಮತ್ತು ನಿರೀಕ್ಷಿತ ಬೆಲೆ ನೋಡಿ!
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 15R ಸ್ಮಾರ್ಟ್‌ಫೋನ್ ಬಿಡುಗಡೆಗೆ ಇನ್ನೊಂದೇ ವಾರವಿದೆ. ಈಗಾಗಲೇ OnePlus 15 ಮಾರುಕಟ್ಟೆಗೆ ಬಂದಿರುವುದರಿಂದ, ಕಂಪನಿಯು ಈಗ ಮಿಡ್‌ರೇಂಜ್- R-ಸಿರೀಸ್ ಮಾದರಿಯತ್ತ ಗಮನ ಹರಿಸಿದೆ. ದೇಶದಲ್ಲಿ OnePlus ನ ಅಧಿಕೃತ ಮೈಕ್ರೋಸೈಟ್ ಲೈವ್ ಆಗಿರುವುದರಿಂದ ಫೋನ್‌ನ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ಹಾಗಾದರೆ, ಮುಂಬರುವ OnePlus 15R ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಲಿವೆ?, ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ನಿರೀಕ್ಷಿತ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
OnePlus 15R: ಬಿಡುಗಡೆ ದಿನಾಂಕ ಮತ್ತು ಲಭ್ಯತೆ
ದೇಶದಲ್ಲಿ OnePlus 15R ಅನ್ನು ಇದೇ ಡಿಸೆಂಬರ್ 17 ರಂದು ಅಧಿಕೃತವಾಗಿ ಪರಿಚಯಿಸಲಾಗುತ್ತಿದೆ. ಇದೇ ಈವೆಂಟ್‌ನಲ್ಲಿ OnePlus Pad Go 2 ಕೂಡ ಅನಾವರಣಗೊಳ್ಳಲಿದೆ. ಬಿಡುಗಡೆ ನಂತರ, ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಮತ್ತು OnePlus ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಪ್ರಮುಖ ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿಸಬಹುದು. ಇತ್ತೀಚಿಗಷ್ಟೇ ಲಭ್ಯವಾಗಿರುವ ಹೊಸ ಮಾಹಿತಿ ಎಂದರೆ, ಈ ಫೋನ್ OnePlus 15R Ace ಎಂಬ ಮೂರನೇ ಬ್ರ್ಯಾಂಡಿಂಗ್‌ನಲ್ಲೂ ಸಹ ಪರಿಚಯಗೊಳ್ಳುತ್ತಿದೆ.
OnePlus 15R: Snapdragon 8 Gen 5 ಚಿಪ್‌ಸೆಟ್
ನಾವು ಈಗಾಗಲೇ ತಿಳಿದಿರುಂತೆ, OnePlus 15R ಸ್ಮಾರ್ಟ್‌ಫೋನಿನನ ಮುಖ್ಯ ಆಕರ್ಷಣೆ ಅದರ Snapdragon 8 Gen 5 ಚಿಪ್‌ಸೆಟ್. ಈ ಚಿಪ್ ಹಿಂದಿನ ಪೀಳಿಗೆಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಗೇಮಿಂಗ್, ಮಲ್ಟಿಟ್ಯಾಸ್ಕಿಂಗ್ ಮತ್ತು ಹೆವಿ ಆ್ಯಪ್‌ಗಳ ಬಳಕೆಯಲ್ಲಿ ಗಮನಾರ್ಹ ಕಾರ್ಯಕ್ಷಮತೆಯನ್ನು ನೀಡುತ್ತದೆ.ಫೋನ್‌ನಲ್ಲಿ LPDDR5X Ultra RAM ಮತ್ತು UFS 4.1 ಸ್ಟೋರೇಜ್ ಅನ್ನು ಬಳಸಲಾಗುತ್ತಿದ್ದು, ಆ್ಯಪ್ ಲೋಡ್ ವೇಗ ಮತ್ತು ಒಟ್ಟು ಸ್ಪೀಡ್ ಅನುಭವ ಇನ್ನಷ್ಟು ಸ್ಮೂತ್ ಆಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಬ್ಯಾಟರಿ: OnePlus ಫೋನ್‌ಗಳಲ್ಲಿ ಕಂಡಿರದ ದೊಡ್ಡ ಸಾಮರ್ಥ್ಯ
OnePlus 15R ನಲ್ಲಿ ಬಳಸಲಾಗಿರುವ ಬ್ಯಾಟರಿಯು OnePlus ಇತಿಹಾಸದಲ್ಲೇ ಅತಿ ದೊಡ್ಡದಾಗಿದೆ. ಇದು OnePlus 15 ರ 7,300mAh ಯೂನಿಟ್‌ಗಿಂತಲೂ ಹೆಚ್ಚು ಸಾಮರ್ಥ್ಯದ 7,400mAh ಬ್ಯಾಟರಿ ಹೊಂದಿದೆ. ಇನ್ನು ಬ್ಯಾಟರಿ ವಿಭಾಗದಲ್ಲಿ, ಕಂಪನಿ ಬಳಸಿರುವ Silicon Nanostack ತಂತ್ರಜ್ಞಾನ ಬ್ಯಾಟರಿಯನ್ನು ದೀರ್ಘಕಾಲ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಅನೋಡ್‌ನಲ್ಲಿ 15% ಸಿಲಿಕಾನ್ ಇರುವುದರಿಂದ ಬ್ಯಾಟರಿ ನಾಲ್ಕು ವರ್ಷಗಳ ನಂತರವೂ ಕನಿಷ್ಠ 80% ಸಾಮರ್ಥ್ಯ ಉಳಿಸಿಕೊಳ್ಳಲಿದೆ ಎಂದು OnePlus ಹೇಳಿದೆ.

ಡಿಸ್‌ಪ್ಲೇ: ಗೇಮರ್‌ಗಳು ಮತ್ತು ಎಂಟರ್ಟೈನ್‌ಮೆಂಟ್ ಪ್ರಿಯರಿಗೆ ಹಬ್ಬ
OnePlus 15R ನಲ್ಲಿ 165Hz 1.5K AMOLED ಡಿಸ್‌ಪ್ಲೇ ಬಳಸಲಾಗಿದೆ. ಇಂತಹ ಉನ್ನತ ರಿಫ್ರೆಶ್ ರೇಟ್ ಗೇಮಿಂಗ್‌ನಲ್ಲಿ ಅತ್ಯಂತ ಸ್ಮೂತ್ ಅನುಭವ ನೀಡುತ್ತದೆ ಎಂದು OnePlus ಹೇಳಿದೆ. ಈ ಡಿಸ್‌ಪ್ಲೇಯು 1,800 nits ಗರಿಷ್ಠ ಬ್ರೈಟ್ನೆಸ್ ನೀಡಬಲ್ಲದು. ಇದು ಹೊರಾಂಗಣದಲ್ಲಿ ಬಳಸುವವರಿಗೆ ಸ್ಪಷ್ಟ ವೀಕ್ಷಣೆ ನೀಡುತ್ತದೆ. ಹಾಗೆಯೇ, ರಾತ್ರಿ ವೇಳೆ ಕಣ್ಣುಗಳಿಗೆ ಒತ್ತಡ ಬಾರದಂತೆ ಪರದೆ ಕೇವಲ 1 nit ತನಕ ಡಿಮ್ ಆಗುತ್ತದೆ. ಜೊತೆಗೆ TÜV Rheinland Intelligent Eye Care 5.0 ಪ್ರಮಾಣೀಕರಣವೂ ಇದರ ದೃಷ್ಟಿ ಆರೈಕೆಯನ್ನು ಮತ್ತಷ್ಟು ಸಮರ್ಥಿಸುತ್ತದೆ.
ಕ್ಯಾಮೆರಾ: ನಿತ್ಯ ಬಳಕೆಯ ಜೊತೆಗೆ ಸಮತೋಲನ
OnePlus 15R ನಲ್ಲಿ 50MP Sony IMX906 ಮುಖ್ಯ ಕ್ಯಾಮೆರಾ (OIS ಸಹಿತ) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಕ್ಯಾಮೆರಾ ಸೆಟಪ್ ಇರಬಹುದು. ಹಾಗೂ, ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ವರದಿಗಳು ಸೂಚಿಸುತ್ತವೆ. ಒಂದು ವೇಳೆ ಈ ಮಾಹಿತಿ ನಿಜವಾದರೆ, OnePlus 15R ಫ್ಲಾಗ್‌ಶಿಪ್ ಮಟ್ಟದ ಕ್ಯಾಮೆರಾ ನೀಡುವುದಿಲ್ಲ. ಆದರೂ, ದೈನಂದಿನ ಬಳಕೆಯಲ್ಲಿ ನಿರಾಶೆಗೊಳಿಸುವುದಿಲ್ಲ ಎಂದು ನಂಬಬಹುದು. ಹಾಗೆಯೇ, ಈ ಫೋನ್ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ದೊರೆಯುವ ನಿರೀಕ್ಷೆ ಇದೆ. ಆದರೆ, ಈ ಮಾಹಿತಿಗಳು ಈವರೆಗೂ ಅಧಿಕೃತವಾಗಿಲ್ಲ.
ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧೆ?
OnePlus 15R ಭಾರತದಲ್ಲಿ ₹45,000-₹50,000 ನಡುವೆ ಬೆಲೆಗೆ ಲಾಂಚ್ ಆಗುವ ನಿರೀಕ್ಷೆ ಇದೆ. ಹಿಂದಿನ OnePlus 13R ₹42,999ಕ್ಕೆ ಬಂದಿದ್ದುದನ್ನು ಗಮನಿಸಿದರೆ, ಅಪ್‌ಗ್ರೇಡ್‌ಗಳನ್ನು ನೋಡಿದಾಗ ಈ ಬಾರಿ ಬೆಲೆ ಏರಿಕೆಯು ಸಹಜ. ಒಟ್ಟಾರೆಯಾಗಿ, OnePlus 15R ತನ್ನ ಶಕ್ತಿಯುತ ಚಿಪ್‌ಸೆಟ್, ಅತಿ ದೊಡ್ಡ ಬ್ಯಾಟರಿ, ಗೇಮಿಂಗ್-ಸ್ನೇಹಿ ಡಿಸ್‌ಪ್ಲೇ ಮತ್ತು ಸಮರ್ಪಕ ಕ್ಯಾಮೆರಾ ವ್ಯವಸ್ಥೆಗಳಿಂದ ಮಿಡ್-ಪ್ರೀಮಿಯಂ ವಿಭಾಗದಲ್ಲಿ ಬಲವಾದ ಸ್ಪರ್ಧಿ ಆಗಿ ಕಾಣುತ್ತಿದೆ. ದೀರ್ಘಕಾಲ ಬಳಸುವವರು, ಗೇಮರ್‌ಗಳು ಮತ್ತು ಹೆಚ್ಚಿನ ಕಾರ್ಯಕ್ಷಮತೆ ಬಯಸುವ ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಬಹುದು.


Click it and Unblock the Notifications








