OnePlus 15R (OnePlus Ace 6): ಡಿಸೈನ್, ಫೀಚರ್ಸ್ ಮತ್ತು ಬೆಲೆ ಎಷ್ಟು ನೋಡಿ!
OnePlus ತನ್ನ ಮುಂದಿನ ಪೀಳಿಗೆಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಇನ್ನೇನು ಸಜ್ಜಾಗಿದೆ. ಇದೇ ಅಕ್ಟೋಬರ್ 27ರಂದು ಚೀನಾದಲ್ಲಿ ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಜೊತೆಗೆ OnePlus Ace 6 ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗುತ್ತಿದೆ. ನಿರೀಕ್ಷೆಯಂತೆಯೇ, ಈ OnePlus Ace 6 ಫೋನ್ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಹೆಸರಿನಲ್ಲಿ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 165Hz AMOLED ಸ್ಕ್ರೀನ್ ಮತ್ತು ಭಾರೀ 7,800mAh ಬ್ಯಾಟರಿಯಂತ ಫೀಚರ್ಸ್‌ನಿಂದ ಗಮನಸೆಳೆಯುತ್ತಿವೆ. ಹಾಗಾದರೆ, ಮುಂಬರಲಿರುವ ಹೊಸ OnePlus 15R (OnePlus Ace 6) ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.
OnePlus 15R (OnePlus Ace 6): ಪ್ರಮುಖ ಫೀಚರ್ಸ್ ಯಾವುವು?
ಮೊದಲು ಬಣ್ಣ ಮತ್ತು ವಿನ್ಯಾಸದ ಕುರಿತು ನೋಡುವುದಾದರೆ, OnePlus 15R ಫೋನ್ ಕಪ್ಪು , ಫ್ಲ್ಯಾಶ್ ವೈಟ್ ಮತ್ತು ಕ್ವಿಕ್‌ಸಿಲ್ವರ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಈ ಫೋನಿನ ಹಿಂಭಾಗದಲ್ಲಿ 'ACE' ಎಂಬ ವಿಶೇಷ ಬ್ರ್ಯಾಂಡಿಂಗ್ ಮತ್ತು ಹೊಸ ವಿನ್ಯಾಸದ ಕ್ಯಾಮೆರಾ ಯೂನಿಟ್ ಕಾಣುತ್ತದೆ. ಫೋನ್‌ಗೆ ಮೆಟಲ್ ಫ್ರೇಮ್ ನೀಡಲಾಗಿದೆ, ಜೊತೆಗೆ IP66, IP68, IP69 ಮತ್ತು IP69K ಪ್ರಮಾಣೀಕರಣ ಇದ್ದು, ನೀರು ಮತ್ತು ಧೂಳಿನ ವಿರುದ್ಧ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಫೋನ್‌ನ ತೂಕ 213 ಗ್ರಾಂ ಆಗಿದ್ದು, ಅದು ದೃಢ ಮತ್ತು ಪ್ರೀಮಿಯಂ ಲುಕ್ ನೀಡುತ್ತದೆ.
ಡಿಸ್‌ಪ್ಲೇ ವೈಶಿಷ್ಟ್ಯಗಳು
OnePlus 15R ಫೋನ್ 165Hz ವರೆಗೆ ರಿಫ್ರೆಶ್ ರೇಟ್ ಬೆಂಬಲವಿರುವ ಫ್ಲಾಟ್ AMOLED ಸ್ಕ್ರೀನ್ ಹೊಂದಿರಲಿದೆ. ಇದು 60Hz, 90Hz, 120Hz ಹಾಗೂ 144Hz ತರಹದ ವಿಭಿನ್ನ ರಿಫ್ರೆಶ್ ಮೋಡ್‌ಗಳಿಗೆ ಸಹ ಬೆಂಬಲ ನೀಡುತ್ತದೆ. 1.5K ರೆಸಲ್ಯೂಶನ್ ಹೊಂದಿರುವ BOE OLED ಪ್ಯಾನೆಲ್ ಮತ್ತು ಕಣ್ಣಿನ ರಕ್ಷಣೆ ತಂತ್ರಜ್ಞಾನವೂ ಒಳಗೊಂಡಿದೆ. ಇನ್-ಡಿಸ್‌ಪ್ಲೇ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಲಭ್ಯವಿದೆ.

ಕಾರ್ಯಕ್ಷಮತೆ ಮತ್ತು ಬ್ಯಾಟರಿ
OnePlus 15R ಫೋನ್ Snapdragon 8 Elite ಚಿಪ್‌ಸೆಟ್ ಚಾಲಿತವಾಗಿದ್ದು, 16GB RAM ನೊಂದಿಗೆ ಬರುತ್ತದೆ.(ನಾವು ಗಮನಿಸುವುದಾದರೆ ಇದೇ ಚಿಪ್‌ಸೆಟ್ ಅನ್ನು ಈಗಾಗಲೇ OnePlus 13 ಮಾದರಿಯಲ್ಲಿಯೂ ಬಳಸಲಾಗಿತ್ತು. ) ಹಾಗೂ Android 16 ಆಧಾರಿತ ColorOS 16 ನೊಂದಿಗೆ ಚೀನಾದಲ್ಲಿ ಲಭ್ಯವಾಗಲಿದೆ. Geekbench ಪರೀಕ್ಷೆಯಲ್ಲಿ ಇದು 3,050 ಸಿಂಗಲ್-ಕೋರ್ ಮತ್ತು 9,440 ಮಲ್ಟಿ-ಕೋರ್ ಅಂಕಗಳನ್ನು ಗಳಿಸಿದೆ. ಇನ್ನು ಈ ಫೋನ್ 120W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ 7,800mAh ಸಾಮರ್ಥ್ಯದ ಭಾರೀ ಬ್ಯಾಟರಿಯನ್ನು ಹೊಂದಿರುವುದು ಖಚಿತವಾಗಿದೆ.
OnePlus 15R (OnePlus Ace 6): ಬಿಡುಗಡೆ ಯಾವಾಗ?
ಮೊದಲೇ ಹೇಳಿದಂತೆ, OnePlus 15 ಜೊತೆಗೆ OnePlus 15R (OnePlus Ace 6) ಕೂಡ ಅಕ್ಟೋಬರ್ 27ರಂದು ಸಂಜೆ 7 ಗಂಟೆಗೆ (ಭಾರತೀಯ ಸಮಯ ಸಂಜೆ 4:30) ಚೀನಾದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಈ ಲಾಂಚ್ ಈವೆಂಟ್ ಅನ್ನು ಕಂಪನಿಯ ಅಧಿಕೃತ Weibo ಪ್ಲಾಟ್‌ಫಾರ್ಮ್‌ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು. ಈಗಾಗಲೇ Oppo e-Shop ಮತ್ತು JD Mall ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಫೋನ್‌ಗಾಗಿ ಮುಂಗಡ ಬುಕ್ಕಿಂಗ್ ಪ್ರಾರಂಭಗೊಂಡಿದ್ದು, ಕೇವಲ ₹12 (CNY 1) ಪಾವತಿಸಿ ಗ್ರಾಹಕರು ₹40,000 ಮೌಲ್ಯದ ವಿಶೇಷ ಆಫರ್‌ಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.
OnePlus 15R (OnePlus Ace 6): ಬೆಲೆ ಎಷ್ಟು?
ಹೊಸ OnePlus Ace 6 (OnePlus 15R) ಫೋನ್ ಬೆಲೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ನಾವು ಈ ಹಿಂದಿನ OnePlus Ace 5 ಬೆಲೆಯನ್ನು ಗಮನಿಸಿದರೆ, ಈ ಬಾರಿ ಕೂಡ ದರವು ಅದರ ಸುತ್ತಮುತ್ತ ಇರಬಹುದು. ಹಿಂದಿನ ಮಾದರಿಯ 12GB + 256GB ಆವೃತ್ತಿ ಚೀನಾದಲ್ಲಿ ₹26,000 ಅಂದಾಜು ದರಕ್ಕೆ ಲಭ್ಯವಿತ್ತು, ಭಾರತದಲ್ಲಿ ಅದೇ ಮಾದರಿ ₹42,999 ಗೆ ಬಿಡುಗಡೆಯಾಗಿತ್ತು. ಅಕ್ಟೋಬರ್ 27ರ ಬಳಿಕ ಈ ಬಗ್ಗೆ ನಮಗೆ ಹೆಚ್ಚು ಮಾಹಿತಿ ಲಭ್ಯವಾಗಲಿದೆ. ನನ್ನ ಪ್ರಕಾರ, ಈ ಭಾರತದಲ್ಲಿ ಈ ಫೋನ್ 50 ಸಾವಿರಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು.


Click it and Unblock the Notifications








