ಭಾರತದಲ್ಲಿ ಇಂದಿನಿಂದ OnePlus 15R ಮೊದಲ ಸೇಲ್: ಫುಲ್ ಡೀಟೇಲ್ಸ್ ಇಲ್ಲಿದೆ!
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 15R ಇಂದು ಭಾರತದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. OnePlus 15 ಸರಣಿಯಲ್ಲಿ 50K ಗಿಂತ ಕಡಿಮೆ ಬೆಲೆಗೆ ಕಳೆದ ವಾರವಷ್ಟೇ ಪರಿಚಯಗೊಂಡಿರುವ ಈ ಹೊಸ ಸ್ಮಾರ್ಟ್‌ಫೋನ್, ಇಂದು ಮಧ್ಯಾಹ್ನ 12:00 (IST) ಗಂಟೆಗೆ ಅಮೆಜಾನ್ ಮತ್ತು OnePlus ನ ಅಧಿಕೃತ ಇ-ಸ್ಟೋರ್ ಮೂಲಕ ಹಾಗೂ OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಇತರ ಆಫ್‌ಲೈನ್ ರಿಟೇಲ್ ಚಾನೆಲ್‌ಗಳ ಪಾಲುದಾರರ ಮೂಲಕ ಮಾರಾಟಕ್ಕೆ ಬರಲಿದೆ.
OnePlus 15R ಬೆಲೆ, ಕೊಡುಗೆಗಳು!
ಭಾರತದಲ್ಲಿ OnePlus 15R ಬೆಲೆ ಮೂಲ 12GB/256GB ಮಾದರಿಗೆ ರೂ. 47,999 ರಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಟಾಪ್-ಎಂಡ್ 12GB/512GB ರೂಪಾಂತರವು 52,999 ರೂ. ಗೆ ದೊರೆಯುತ್ತದೆ. ಆದರೆ, ಬಿಡುಗಡೆ ಕೊಡುಗೆಯ ಭಾಗವಾಗಿ, ಖರೀದಿದಾರರು ಆಕ್ಸಿಸ್ ಬ್ಯಾಂಕ್ ಮತ್ತು HDFC ಕ್ರೆಡಿಟ್ ಕಾರ್ಡ್‌ಗಳ ಮೇಲೆ ₹3,000 ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು, ಇದರಿಂದಾಗಿ OnePlus 15R ಫೋನಿನ ಆರಂಭಿಕ ಬೆಲೆ ₹44,999 ಕ್ಕೆ ಇಳಿಯುತ್ತದೆ. ಇನ್ನು ಗ್ರಾಹಕರು ಚಾರ್ಕೋಲ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಎಲೆಕ್ಟ್ರಿಕ್ ವಾಯ್ಲೆಟ್ ಮೂರು ಬಣ್ಣಗಳಲ್ಲಿ ಸ್ಮಾರ್ಟ್‌ಫೋನನ್ನು ಖರೀದಿಸಬಹುದು.
OnePlus 15R: ಪ್ರಮುಖ ವೈಶಿಷ್ಟ್ಯಗಳು
ಹೊಸ OnePlus 15R ಸ್ಮಾರ್ಟ್‌ಫೋನ್ 6.83-ಇಂಚಿನ ಪೂರ್ಣ-HD+ (1,272x2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 165Hz ವರೆಗಿನ ರಿಫ್ರೆಶ್ ರೇಟ್, 450 ppi ಪಿಕ್ಸೆಲ್ ಸಾಂದ್ರತೆ, 19.8:9 ಆಕಾರ ಅನುಪಾತ, 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಬೆಂಬಲಿಸುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಇದರಲ್ಲಿ 165Hz ರಿಫ್ರೆಶ್ ರೇಟ್‌ನಿಂದ ಸ್ಮೂತ್ ಸ್ಕ್ರೋಲಿಂಗ್ ಮತ್ತು ಉತ್ತಮ ಗೇಮಿಂಗ್ ಅನುಭವ ನೀಡುವ ಭರವಸೆ ತಂದಿದೆ. Corning Gorilla Glass 7i ರಕ್ಷಣೆಯೊಂದಿಗೆ ಈ ಸ್ಕ್ರೀನ್ ಗಟ್ಟಿಮುಟ್ಟಾಗಿದೆ. Sun Display ಮತ್ತು Eye Comfort ಮುಂತಾದ ಫೀಚರ್‌ಗಳು ಭಾರತೀಯ ಹವಾಮಾನ ಮತ್ತು ದೀರ್ಘಕಾಲದ ಬಳಕೆಗೆ ಅನುಕೂಲವಾಗುತ್ತವೆ.

ಕಾರ್ಯಕ್ಷಮತೆ ವಿಭಾಗದಲ್ಲಿ, OnePlus 15R ಫೋನ್ ಶಕ್ತಿಯು Qualcomm ನ 3nm Snapdragon 8 Gen 5 ಪ್ರೊಸೆಸರ್ ಹೊಂದಿದೆ, ಇದ್ನ್ನು 12GB LPDDR5x Ultra RAM ಮತ್ತು 512GB ವರೆಗೆ UFS 4.1 ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿದೆ. ಇದರಿಂದ ಹೆವಿ ಅಪ್ಲಿಕೇಶನ್‌ಗಳು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ವೇಗದ ಪ್ರತಿಕ್ರಿಯೆ ಸಿಗುತ್ತದೆ. ಬಾರತದಲ್ಲಿ ಈ ಚಿಪ್‌ಸೆಟ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿ OnePlus 15R ಹೊರಹೊಮ್ಮಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, OnePlus 15R Android 16 ಆಧಾರಿತ OxygenOS 16 ನಲ್ಲಿ ಕಾರ್ಯನಿರ್ವಹಿಸಲಿದೆ, ಇದಕ್ಕೆ ನಾಲ್ಕು ಪ್ರಮುಖ OS ಅಪ್‌ಡೇಟ್‌ಗಳು ಮತ್ತು ಆರು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆಯನ್ನು OnePlus ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, OnePlus 15R ಹ್ಯಾಸೆಲ್‌ಬ್ಲಾಡ್-ಟ್ಯೂನ್ ಮಾಡಲಾದ ಕ್ಯಾಮೆರಾಗಳನ್ನು ಹೊಂದಿಲ್ಲ. ಈ ಫೋನ್ ಕೂಡ ಫ್ಲ್ಯಾಗ್‌ಶಿಪ್ OnePlus 15 ಮಾದರಿಯಂತೆಯೇ ಅದೇ DetailMax ಎಂಜಿನ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ (f/1.8) ಸೋನಿ IMX906 ಪ್ರಾಥಮಿಕ ಶೂಟರ್ ಮತ್ತು 112-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿರುವ 8-ಮೆಗಾಪಿಕ್ಸೆಲ್ (f/2.2) ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಬಳಕೆದಾರರು 120 fps ವರೆಗೆ 4K ರೆಸಲ್ಯೂಶನ್ ವೀಡಿಯೊಗಳನ್ನು ಶೂಟ್ ಮಾಡಬಹುದು. ಹಿಂಭಾಗದ ಕ್ಯಾಮೆರಾಗಳು ಸಿನಿಮೀಯ ವೀಡಿಯೊ, ಮಲ್ಟಿ-ವ್ಯೂ ವೀಡಿಯೊ ಮತ್ತು ವೀಡಿಯೊ ಜೂಮ್ ಶೂಟಿಂಗ್ ಅನ್ನು ಸಹ ಬೆಂಬಲಿಸುತ್ತವೆ. ಮುಂಭಾಗದಲ್ಲಿ, ಫೋನ್ 32-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಅದು 30 fps ನಲ್ಲಿ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
ಬ್ಯಾಟರಿ ವಿಭಾಗದಲ್ಲಿ, OnePlus 15R 7,400mAh ಸಾಮರ್ಥ್ಯದ ದೊಡ್ಡ ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಹೊಂದಿದ್ದು, 80W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡುತ್ತದೆ. 4 ವರ್ಷಗಳ ಬಳಕೆಯ ನಂತರವೂ ಇದರ ಬ್ಯಾಟರಿಯು ಅದರ ಮೂಲ ಸಾಮರ್ಥ್ಯದ 80 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಂಪರ್ಕ ಆಯ್ಕೆಗಳ ವಿಷಯದಲ್ಲಿ, OnePlus 15R 5G, 4G LTE, Wi-Fi 7, ಬ್ಲೂಟೂತ್ 6.0, NFC, USB ಟೈಪ್-C ಪೋರ್ಟ್, GPS, GLONASS, BDS, ಗೆಲಿಲಿಯೋ, QZSS, ಮತ್ತು NavIC ಅನ್ನು ಬೆಂಬಲಿಸುತ್ತದೆ. ಜೊತೆಗೆ IP66, IP68 ಮತ್ತು IP69 ರೇಟಿಂಗ್‌ಗಳು ಫೋನ್‌ಗೆ ಧೂಳು ಮತ್ತು ನೀರಿನಿಂದ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ಇದು ಹೊಸ G2 ವೈ-ಫೈ ಚಿಪ್ ಮತ್ತು ಟಚ್ ರೆಸ್ಪಾನ್ಸ್ ಚಿಪ್ ಅನ್ನು ಸಹ ಒಳಗೊಂಡಿದೆ.


Click it and Unblock the Notifications








