Geekbench ಲಿಸ್ಟಿಂಗ್‌ನಲ್ಲಿ OnePlus 15R: ಪರ್ಫಾರ್ಮೆನ್ಸ್ ಮಾಹಿತಿ ಬಹಿರಂಗ!
OnePlus ತನ್ನ ಬಹುನಿರೀಕ್ಷಿತ ಹೊಸ ಸ್ಮಾರ್ಟ್‌ಫೋನ್ OnePlus 15R ಅನ್ನು ಭಾರತದಲ್ಲಿ ಶೀಘ್ರದಲ್ಲೇ ಪರಿಚಯಿಸಲು ಸಿದ್ಧವಾಗಿದೆ. ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮಧ್ಯಮ ಪ್ರೀಮಿಯಂ OnePlus Ace 6T ಮಾದರಿಯ ರೀಬ್ರ್ಯಾಂಡ್ ರೂಪದಲ್ಲಿ ಇದು ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ. ಇದೀಗ, ಭಾರತದಲ್ಲಿ ಲಾಂಚ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ, ಈ OnePlus 15R ಫೋನ್ Geekbench ಲಿಸ್ಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದು ಅದರ ಪ್ರಮುಖ ತಾಂತ್ರಿಕ ವಿವರಗಳನ್ನು ಹೊರತಂದಿದೆ.!
Snapdragon 8 Gen 5 ಚಿಪ್‌ಸೆಟ್ ಬಳಕೆಯ ದೃಢಸೂಚನೆ
ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ಮೊದಲು Geekbench ನಲ್ಲಿ "OnePlus CPH2767" ಮಾಡೆಲ್ ನಂಬರ್‌ನೊಂದಿಗೆ ಕಂಡುಬಂದ ಸಾಧನವನ್ನು ಗುರುತಿಸಿದ್ದಾರೆ. ಇದನ್ನು OnePlus 15R ಎಂದೇ ಗ್ರಹಿಸಲಾಗಿದೆ. ಈ Geekbench ಲಿಸ್ಟಿಂಗ್ ಪ್ರಕಾರ, ಫೋನ್‌ನಲ್ಲಿ ARMv8 ಆರ್ಕಿಟೆಕ್ಚರ್ ಆಧಾರಿತ ಆಕ್ಟಾ-ಕೋರ್ ಪ್ರೊಸೆಸರ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಎರಡು ಹೈ-ಪರ್ಫಾರ್ಮೆನ್ಸ್ ಕೋರ್‌ಗಳು 3.80GHz ವೇಗದಲ್ಲಿ ಮತ್ತು ಉಳಿದ ಆರು ಕೋರ್‌ಗಳು 3.32GHz ವೇಗದಲ್ಲಿ ಕೆಲಸ ಮಾಡುತ್ತವೆ.
ಲಿಸ್ಟಿಂಗ್‌ನಲ್ಲಿ ಈ ಫೋನ್ ಸುಮಾರು 10.88GB RAM ಹೊಂದಿರುವುದಾಗಿ ತೋರಿಸುತ್ತಿದ್ದು, ಮಾರುಕಟ್ಟೆಯಲ್ಲಿ ಇದನ್ನು ಸಾಮಾನ್ಯವಾಗಿ 12GB RAM ಎಂದೇ ಪರಿಚಯಿಸಲಾಗುತ್ತದೆ ಎಂಬುದನ್ನು ನಾವು ಗಮನಿಸಬಹುದು. ಇದಲ್ಲದೆ, ಈ ಸಾಧನದ ಮದರ್‌ಬೋರ್ಡ್ ಕೋಡ್‌ನೇಮ್ "canoe" ಎಂದು ಲಿಸ್ಟಿಂಗ್‌ನಲ್ಲಿ ಕಾಣಿಸುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಇದು OnePlus ಈಗಾಗಲೇ ದೃಢಪಡಿಸಿರುವ Qualcomm Snapdragon 8 Gen 5 ಚಿಪ್‌ಸೆಟ್ ಆಗಿರುವುದು ಬಹುತೇಕ ಸ್ಪಷ್ಟವಾಗುತ್ತದೆ.

Geekbench ಸ್ಕೋರ್‌ಗಳು: ಪರ್ಫಾರ್ಮೆನ್ಸ್ ಹೇಗಿದೆ?
Geekbench 6.5.0 (Android AArch64) ಪರೀಕ್ಷೆಯಲ್ಲಿ OnePlus 15R 2,784 single-core ಮತ್ತು 9,329 multi-core ಸ್ಕೋರ್ ಗಳಿಸಿದೆ. ಈ ಸಂಖ್ಯೆಗಳು ಫ್ಲಾಗ್‌ಶಿಪ್ OnePlus 15 ಗಳಿಸಿರುವ ಸ್ಕೋರ್‌ಗಳಿಗಿಂತ ಸ್ವಲ್ಪ ಕಡಿಮೆಯಾಗಿದ್ದರೈ, ಮಧ್ಯ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಇದು ಉತ್ತಮ ಪರ್ಫಾರ್ಮೆನ್ಸ್ ನೀಡುವ ಸೂಚನೆಯಾಗಿದೆ. ಹೋಲಿಕೆಗಾಗಿ, OnePlus 15 ನಲ್ಲಿ ಬಳಸಿರುವ Snapdragon 8 Elite Gen 5 ಚಿಪ್ 3,622 single-core ಮತ್ತು 10,712 multi-core ಸ್ಕೋರ್ ಗಳಿಸಿತ್ತು(Gadgets 360 ಪರೀಕ್ಷೆಯಲ್ಲಿ).
ಡಿಸೆಂಬರ್ 17 ರಂದು ಬಿಡುಗಡೆ!
ಭಾರತದಲ್ಲಿ ಮುಂಬರುವ ಡಿಸೆಂಬರ್ 17 ರಂದು OnePlus 15R ಮತ್ತು OnePlus Pad Go 2 ಎರಡೂ ಸಾಧನಗಳನ್ನು ಪರಿಚಯಿಸುವುದಾಗಿ OnePlus ತಿಳಿಸಿದೆ. ಕಳೆದ ಸೋಮವಾರದಂದು ಕಂಪೆನಿಯು ಹೊಸ 'ಲಾಂಚ್ ಕೀನೋಟ್' ಪ್ರಕಟಣೆಯನ್ನು ಹೊರಡಿಸಿದ್ದು, ಬೆಂಗಳೂರಿನಲ್ಲಿ ಭವ್ಯ ಆಫ್‌ಲೈನ್ ಕಾರ್ಯಕ್ರಮದಲ್ಲಿ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.! ಅಂದರೆ, OnePlus ಮತ್ತೆ ಆಫ್‌ಲೈನ್ ಈವೆಂಟ್‌ಗಳಿಗೆ ವಾಪಸಾಗುತ್ತಿದೆ.
OnePlus ತನ್ನ ಅಧಿಕೃತ ಪ್ರಕಟಣೆಯಲ್ಲಿ, ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್ ಎರಡೂ ಉತ್ಪನ್ನಗಳು ಒಂದೇ ದಿನ ಲಭ್ಯವಾಗಲಿವೆ ಎಂಬುದನ್ನು ದೃಢಪಡಿಸಿದೆ. ಜೊತೆಗೆ ಈ ಸಾಧನಗಳ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ. ಹಾಗಾದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್ ಸಾಧನಗಳನ್ನು ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








