Home
ಮೊಬೈಲ್

OnePlus 15R ಬೆಲೆ, ಫೀಚರ್ಸ್ ಸೇರಿದಂತೆ ತಿಳಿಯಬೇಕಾದ ಎಲ್ಲಾ ಮಾಹಿತಿ!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ OnePlus 15R ಸ್ಮಾರ್ಟ್‌ಫೋನ್ ಬುಧವಾರದಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ದೇಶದ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮತ್ತು ಪರ್ಫಾರ್ಮೆನ್ಸ್ ಫೋನ್‌ಗಳ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ, 3nm ಸ್ನಾಪ್‌ಡ್ರಾಗನ್ 8 Gen 5 ಚಿಪ್, 12GB LPDDR5x ಅಲ್ಟ್ರಾ RAM, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,400mAh ಬ್ಯಾಟರಿ ಸೇರಿದಂತೆ ಹಲವಾರು ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊತ್ತು OnePlus 15R ಕಾಲಿಟ್ಟಿದೆ. ಈ ಹೊಸ ಬಹುನಿರೀಕ್ಷಿತ ಫೋನ್ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

OnePlus 15R: ಬೆಲೆ ಮತ್ತು ಲಭ್ಯತ
ಭಾರತದಲ್ಲಿ OnePlus 15R ಬೆಲೆ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮಾದರಿಗೆ ರೂ. 47,999 ರಿಂದ ಆರಂಭವಾಗುತ್ತದೆ. 512GB ಸ್ಟೋರೇಜ್ ಇರುವ ಟಾಪ್ ವೇರಿಯಂಟ್ ರೂ. 52,999ಕ್ಕೆ ಲಭ್ಯವಾಗಿದೆ. ಆದರೆ, Axis Bank ಮತ್ತು HDFC Bank ಕಾರ್ಡ್‌ಗಳ ಮೂಲಕ ಫೋನ್ ಖರೀದಿಸಿದರೆ ಹೆಚ್ಚುವರಿ 3000 ರಿಯಾಯಿತಿ ದೊರೆಯಲಿದ್ದು, ಪರಿಣಾಮಕಾರಿ ಬೆಲೆ ರೂ. 44,999 ರಿಂದ ಆರಂಭವಾಗುತ್ತದೆ. ಈ OnePlus 15R ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 22ರಂದು ಮಧ್ಯಾಹ್ನ 12 ಗಂಟೆಯಿಂದ Amazon, OnePlus ಇಂಡಿಯಾ ಆನ್‌ಲೈನ್ ಸ್ಟೋರ್ ಹಾಗೂ ಆಯ್ದ ಆಫ್‌ಲೈನ್ ರಿಟೇಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಬರಲಿದ್ದು, ಗ್ರಾಹಕರು Charcoal Black, Mint Breeze ಮತ್ತು Electric Violet ಎಂಬ ಮೂರು ಬಣ್ಣಗಳಲ್ಲಿ ಫೋನ್ ಅನ್ನು ಖರೀದಿಸಬಹುದು.

OnePlus 15R ಬೆಲೆ, ಫೀಚರ್ಸ್ ಸೇರಿದಂತೆ ತಿಳಿಯಬೇಕಾದ ಎಲ್ಲಾ ಮಾಹಿತಿ!

OnePlus 15R: ಪ್ರಮುಖ ವೈಶಿಷ್ಟ್ಯಗಳು
ಹೊಸ OnePlus 15R ಸ್ಮಾರ್ಟ್‌ಫೋನ್ 6.83-ಇಂಚಿನ ಪೂರ್ಣ-HD+ (1,272x2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 165Hz ವರೆಗಿನ ರಿಫ್ರೆಶ್ ರೇಟ್, 450 ppi ಪಿಕ್ಸೆಲ್ ಸಾಂದ್ರತೆ, 19.8:9 ಆಕಾರ ಅನುಪಾತ, 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಬೆಂಬಲಿಸುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಇದರಲ್ಲಿ 165Hz ರಿಫ್ರೆಶ್ ರೇಟ್‌ನಿಂದ ಸ್ಮೂತ್ ಸ್ಕ್ರೋಲಿಂಗ್ ಮತ್ತು ಉತ್ತಮ ಗೇಮಿಂಗ್ ಅನುಭವ ನೀಡುವ ಭರವಸೆ ತಂದಿದೆ. Corning Gorilla Glass 7i ರಕ್ಷಣೆಯೊಂದಿಗೆ ಈ ಸ್ಕ್ರೀನ್ ಗಟ್ಟಿಮುಟ್ಟಾಗಿದೆ. Sun Display ಮತ್ತು Eye Comfort ಮುಂತಾದ ಫೀಚರ್‌ಗಳು ಭಾರತೀಯ ಹವಾಮಾನ ಮತ್ತು ದೀರ್ಘಕಾಲದ ಬಳಕೆಗೆ ಅನುಕೂಲವಾಗುತ್ತವೆ.

ಕಾರ್ಯಕ್ಷಮತೆ ವಿಭಾಗದಲ್ಲಿ, OnePlus 15R ಫೋನ್ ಶಕ್ತಿಯು Qualcomm ನ 3nm Snapdragon 8 Gen 5 ಪ್ರೊಸೆಸರ್ ಹೊಂದಿದೆ, ಇದ್ನ್ನು 12GB LPDDR5x Ultra RAM ಮತ್ತು 512GB ವರೆಗೆ UFS 4.1 ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿದೆ. ಇದರಿಂದ ಹೆವಿ ಅಪ್ಲಿಕೇಶನ್‌ಗಳು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ವೇಗದ ಪ್ರತಿಕ್ರಿಯೆ ಸಿಗುತ್ತದೆ. ಬಾರತದಲ್ಲಿ ಈ ಚಿಪ್‌ಸೆಟ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿ OnePlus 15R ಹೊರಹೊಮ್ಮಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, OnePlus 15R Android 16 ಆಧಾರಿತ OxygenOS 16 ನಲ್ಲಿ ಕಾರ್ಯನಿರ್ವಹಿಸಲಿದೆ, ಇದಕ್ಕೆ ನಾಲ್ಕು ಪ್ರಮುಖ OS ಅಪ್‌ಡೇಟ್‌ಗಳು ಮತ್ತು ಆರು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆಯನ್ನು OnePlus ನೀಡಿದೆ.

OnePlus 15R ಬೆಲೆ, ಫೀಚರ್ಸ್ ಸೇರಿದಂತೆ ತಿಳಿಯಬೇಕಾದ ಎಲ್ಲಾ ಮಾಹಿತಿ!

ಕ್ಯಾಮೆರಾ ವಿಭಾಗದಲ್ಲಿ, OnePlus 15R ಹ್ಯಾಸೆಲ್‌ಬ್ಲಾಡ್-ಟ್ಯೂನ್ ಮಾಡಲಾದ ಕ್ಯಾಮೆರಾಗಳನ್ನು ಹೊಂದಿಲ್ಲ. ಈ ಫೋನ್ ಕೂಡ ಫ್ಲ್ಯಾಗ್‌ಶಿಪ್ OnePlus 15 ಮಾದರಿಯಂತೆಯೇ ಅದೇ DetailMax ಎಂಜಿನ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ (f/1.8) ಸೋನಿ IMX906 ಪ್ರಾಥಮಿಕ ಶೂಟರ್ ಮತ್ತು 112-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿರುವ 8-ಮೆಗಾಪಿಕ್ಸೆಲ್ (f/2.2) ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಬಳಕೆದಾರರು 120 fps ವರೆಗೆ 4K ರೆಸಲ್ಯೂಶನ್ ವೀಡಿಯೊಗಳನ್ನು ಶೂಟ್ ಮಾಡಬಹುದು. ಹಿಂಭಾಗದ ಕ್ಯಾಮೆರಾಗಳು ಸಿನಿಮೀಯ ವೀಡಿಯೊ, ಮಲ್ಟಿ-ವ್ಯೂ ವೀಡಿಯೊ ಮತ್ತು ವೀಡಿಯೊ ಜೂಮ್ ಶೂಟಿಂಗ್ ಅನ್ನು ಸಹ ಬೆಂಬಲಿಸುತ್ತವೆ. ಮುಂಭಾಗದಲ್ಲಿ, ಫೋನ್ 32-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಅದು 30 fps ನಲ್ಲಿ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ಬ್ಯಾಟರಿ ವಿಭಾಗದಲ್ಲಿ, OnePlus 15R 7,400mAh ಸಾಮರ್ಥ್ಯದ ದೊಡ್ಡ ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಹೊಂದಿದ್ದು, 80W ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡುತ್ತದೆ. 4 ವರ್ಷಗಳ ಬಳಕೆಯ ನಂತರವೂ ಇದರ ಬ್ಯಾಟರಿಯು ಅದರ ಮೂಲ ಸಾಮರ್ಥ್ಯದ 80 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಂಪರ್ಕ ಆಯ್ಕೆಗಳ ವಿಷಯದಲ್ಲಿ, OnePlus 15R 5G, 4G LTE, Wi-Fi 7, ಬ್ಲೂಟೂತ್ 6.0, NFC, USB ಟೈಪ್-C ಪೋರ್ಟ್, GPS, GLONASS, BDS, ಗೆಲಿಲಿಯೋ, QZSS, ಮತ್ತು NavIC ಅನ್ನು ಬೆಂಬಲಿಸುತ್ತದೆ. ಜೊತೆಗೆ IP66, IP68 ಮತ್ತು IP69 ರೇಟಿಂಗ್‌ಗಳು ಫೋನ್‌ಗೆ ಧೂಳು ಮತ್ತು ನೀರಿನಿಂದ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ಇದು ಹೊಸ G2 ವೈ-ಫೈ ಚಿಪ್ ಮತ್ತು ಟಚ್ ರೆಸ್ಪಾನ್ಸ್ ಚಿಪ್ ಅನ್ನು ಸಹ ಒಳಗೊಂಡಿದೆ.

ಒಟ್ಟಾರೆಯಾಗಿ, OnePlus 15R ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾರ್ಮೆನ್ಸ್ ಸ್ಮಾರ್ಟ್‌ಫೋನ್ ಹುಡುಕುವ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮಿದೆ. ಬೆಲೆ ಮತ್ತು ಫೀಚರ್‌ಗಳ ಸಮತೋಲನದ ದೃಷ್ಟಿಯಿಂದ, ಇದು 2025ರಲ್ಲಿ ಗಮನಿಸಬೇಕಾದ ಪ್ರಮುಖ ಫೋನ್‌ಗಳಲ್ಲೊಂದು ಎನ್ನಬಹುದು.

Best Mobiles in India

English summary
The OnePlus 15R price in India starts at Rs. 47,999 for the model with 12GB RAM and 256GB storage. The top variant with 512GB storage is available for Rs. 52,999. However, if you buy the phone through Axis Bank and HDFC Bank cards, you will get an additional discount of Rs. 3000, making the effective price start at Rs. 44,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+