Home
ಮೊಬೈಲ್

OnePlus 15R ಬೆಲೆ ಮಾಹಿತಿ ಸೋರಿಕೆ!

OnePlus ತನ್ನ ಹೊಸ ಮಧ್ಯಮ-ಪ್ರೀಮಿಯಂ ಸ್ಮಾರ್ಟ್‌ಫೋನ್ OnePlus 15R ಅನ್ನು ಭಾರತದಲ್ಲಿ ಡಿಸೆಂಬರ್ 17ರಂದು ಅಧಿಕೃತವಾಗಿ ಪರಿಚಯಿಸಲು ಸಿದ್ಧವಾಗಿದೆ. ಬಿಡುಗಡೆಗೂ ಮುನ್ನವೇ ಈ ಫೋನ್ ತನ್ನ ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ಗೇಮಿಂಗ್ ಕೇಂದ್ರಿತ ವೈಶಿಷ್ಟ್ಯಗಳ ಕಾರಣ ದೇಶದ ಟೆಕ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತೀಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಒನ್‌ಪ್ಲಸ್ ಈ ಬಾರಿ ಕೆಲವು ಪ್ರಮುಖ ಅಪ್‌ಗ್ರೇಡ್‌ಗಳನ್ನು ನೀಡಿದ್ದು, ಇದೀಗ ಜನಪ್ರಿಯ ಟಿಪ್‌ಸ್ಟಾರ್ ಓರ್ವರು ಫೋನ್ ಬೆಲೆಯನ್ನು ಸೋರಿಕೆ ಮಾಡಿದ್ದಾರೆ.

OnePlus 15R: ಸ್ಟೋರೇಜ್ ಮತ್ತು ಬೆಲೆ
OnePlus 15R ಭಾರತದಲ್ಲಿನ ನಿರೀಕ್ಷಿತ ಬೆಲೆ ಕುರಿತು ಈಗಾಗಲೇ ವಿಶ್ವಾಸಾರ್ಹ ಲೀಕ್‌ಗಳು ಹೊರಬಿದ್ದಿವೆ. ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಅವರಪ್ರಕಾರ, 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಯ ಬೆಲೆ ರೂ.45,999 ರಿಂದ ರೂ.46,999 ರವರೆಗೆ ಇರಬಹುದು. ಜೊತೆಗೆ 12GB RAM + 512GB ಸ್ಟೋರೇಜ್ ಆಯ್ಕೆಯೂ ಲಭ್ಯವಿದ್ದು, ಇದರ ಬೆಲೆ ಸುಮಾರು ರೂ.51,999 ಆಗುವ ಸಾಧ್ಯತೆ ಇದೆ. ಬ್ಯಾಂಕ್ ಆಫರ್‌ಗಳ ಮೂಲಕ ರೂ.3,000 ರಿಂದ ರೂ.4,000 ವರೆಗೆ ಹೆಚ್ಚುವರಿ ರಿಯಾಯಿತಿ ದೊರೆಯುವ ನಿರೀಕ್ಷೆಯಿರುವ ಬಗ್ಗೆ ತಿಳಿಸಿದ್ದಾರೆ.

OnePlus 15R: ಪ್ರಮುಖ ವೈಶಿಷ್ಟ್ಯಗಳು
ಕಾರ್ಯಕ್ಷಮತೆಯ ವಿಷಯದಲ್ಲಿ ಈ ಬಾರಿ OnePlus 15R ದೊಡ್ಡ ಹೆಜ್ಜೆ ಇಟ್ಟಿದೆ. ಈ ಫೋನ್‌ನಲ್ಲಿ Snapdragon 8 Gen 5 ಪ್ರೊಸೆಸರ್ ಬಳಕೆಯಾಗಿದ್ದು, ಇದು ಈ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ವೇಗ, ಗೇಮಿಂಗ್ ಸ್ಟೆಬಿಲಿಟಿ ಮತ್ತು ಪವರ್ ಎಫಿಷಿಯನ್ಸಿಗಾಗಿ ಒನ್‌ಪ್ಲಸ್ ಮತ್ತು ಕ್ವಾಲ್‌ಕಾಂ ಸುಮಾರು ಎರಡು ವರ್ಷಗಳ ಕಾಲ ಈ ಚಿಪ್ ಅನ್ನು ಒಟ್ಟಿಗೆ ಅಭಿವೃದ್ಧಿಪಡಿಸಿದ್ದಾಗಿ ಕಂಪನಿ ತಿಳಿಸಿದೆ. ಇದು ಹೆವಿ ಯೂಸರ್ಸ್ ಮತ್ತು ಮೊಬೈಲ್ ಗೇಮರ್‌ಗಳಿಗೆ ದೊಡ್ಡ ಪ್ಲಸ್ ಆಗಲಿದೆ.

ಡಿಸ್ಪ್ಲೇ ವಿಭಾಗದಲ್ಲೂ OnePlus 15R ಗಮನ ಸೆಳೆಯುತ್ತಿದೆದೆ. ಇದರಲ್ಲಿ 6.83 ಇಂಚಿನ AMOLED ಡಿಸ್ಪ್ಲೇ ಇರಲಿದ್ದು, Full HD+ ರೆಸಲ್ಯೂಶನ್ ಮತ್ತು 165Hz ರಿಫ್ರೆಶ್ ರೇಟ್ ಬೆಂಬಲ ನೀಡುತ್ತದೆ. ಹೈ ರಿಫ್ರೆಶ್ ರೇಟ್‌ನಿಂದ ಸ್ಕ್ರೋಲಿಂಗ್, ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆಯ ಅನುಭವ ಅತ್ಯಂತ ಸ್ಮೂತ್ ಆಗಿರಲಿದೆ. ದೀರ್ಘಕಾಲ ಫೋನ್ ಬಳಸುವವರಿಗೆ ಇದು ಕಣ್ಣಿಗೆ ಆರಾಮದಾಯಕ ಅನುಭವ ನೀಡುತ್ತದೆ.

OnePlus 15R ಬೆಲೆ ಮಾಹಿತಿ ಸೋರಿಕೆ!

ಬ್ಯಾಟರಿ ಸಾಮರ್ಥ್ಯವು OnePlus 15Rನ ಮತ್ತೊಂದು ದೊಡ್ಡ ಹೈಲೈಟ್ ಆಗಿದ್ದು, ಈ ಫೋನ್‌ನಲ್ಲಿ 7400mAh ದೊಡ್ಡ ಬ್ಯಾಟರಿ ನೀಡಲಾಗಿದ್ದು, ಇದು ಒಂದೇ ಚಾರ್ಜ್‌ನಲ್ಲಿ ದಿನವಿಡೀ ಬಳಕೆಗೆ ಸಾಕಾಗುವಂತಿದೆ. ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುವ ಸಾಧ್ಯತೆ ಇದ್ದು, ಕಡಿಮೆ ಸಮಯದಲ್ಲಿ ಫೋನ್ ಚಾರ್ಜ್ ಮಾಡಿಕೊಳ್ಳಲು ಇದು ಸಹಾಯಕವಾಗಲಿದೆ. ದೀರ್ಘ ಪ್ರಯಾಣ ಮತ್ತು ಗೇಮಿಂಗ್ ಸೆಷನ್‌ಗಳಿಗೆ ಇದು ಉಪಯುಕ್ತ ಆಯ್ಕೆಯಾಗಬಹುದು.

ಕ್ಯಾಮೆರಾ ವಿಭಾಗದಲ್ಲಿ OnePlus 15R ಅತ್ಯಂತ ಮುಂದುವರಿದ ಸೆಲ್ಫಿ ಕ್ಯಾಮೆರಾ" ವನ್ನು ಹೊಂದಿರುತ್ತದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ಇತ್ತೀಚಿಗಷ್ಟೇ ತಿಳಿಸಿದೆ. ಇದು 32-ಮೆಗಾಪಿಕ್ಸೆಲ್ ಸಂವೇದಕವು ಆಟೋಫೋಕಸ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ, ಅಂದರೆ ಇದು ಮಸುಕಾದ ಸೆಲ್ಫಿಗಳನ್ನು ತೆಗೆದುಹಾಕಲು ಲೆನ್ಸ್ ಅನ್ನು ಸ್ವಯಂಚಾಲಿತವಾಗಿ ಹೊಂದಿಸಬಹುದು.

ಇದರ ಹೊರತಾಗಿ, OnePlus 15R ಮುಂಭಾಗದ ಕ್ಯಾಮೆರಾದಲ್ಲಿ 4K 30fps ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವ ಮೊದಲ R ಸರಣಿಯ ಹ್ಯಾಂಡ್‌ಸೆಟ್ ಎಂದು ಹೇಳಲಾಗಿದೆ. ಇದರ ಹಿಂದಿನ ಪೀಳಿಗೆಯ OnePlus 13R 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದ್ದು ಅದು 1080p ರೆಸಲ್ಯೂಶನ್‌ನಲ್ಲಿ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವುದನ್ನು ನಾವು ನೋಡಬಹುದು.

OnePlus 15R ಉತ್ತಮ ಬ್ಯಾಲೆನ್ಸ್ ನೀಡುವ ನಿರೀಕ್ಷೆಯಿದೆ. ಲೀಕ್‌ಗಳ ಪ್ರಕಾರ, ಫೋನ್‌ನಲ್ಲಿ 50MP OIS ಹೊಂದಿದ ಮುಖ್ಯ ಕ್ಯಾಮೆರಾ ಇರಬಹುದು. ಇದಕ್ಕೆ 8MP ಅಲ್ಟ್ರಾ-ವೈಡ್ ಲೆನ್ಸ್ ಜೊತೆಯಾಗುವ ಸಾಧ್ಯತೆ ಇದೆ.

ಇನ್ನು ಬಲಿಷ್ಠತೆಯ ವಿಚಾರದಲ್ಲೂ OnePlus 15R ಹಿಂದೆ ಬೀದಿಲ್ಲ. ವರದಿಗಳ ಪ್ರಕಾರ, ಈ ಫೋನ್‌ಗೆ IP66, IP68, IP69 ಮತ್ತು IP69K ರೇಟಿಂಗ್‌ಗಳು ದೊರೆಯಬಹುದು. ಇದರಿಂದ ಧೂಳು, ನೀರು ಹಾಗೂ ಹೆಚ್ಚಿನ ಒತ್ತಡದ ನೀರಿನ ಜೆಟ್‌ಗಳ ವಿರುದ್ಧ ಉತ್ತಮ ರಕ್ಷಣೆ ಸಿಗಲಿದೆ. ಭಾರತೀಯ ಹವಾಮಾನ ಮತ್ತು ದೈನಂದಿನ ಬಳಕೆಗೆ ಇದು ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ.

ಒಟ್ಟಿನಲ್ಲಿ, OnePlus 15R ಭಾರತದಲ್ಲಿ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ ಹೊಸ ಮಾನದಂಡ ಸ್ಥಾಪಿಸುವ ಸಾಧ್ಯತೆ ಹೊಂದಿದೆ. ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ, ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಬಲಿಷ್ಠ ವಿನ್ಯಾಸದೊಂದಿಗೆ ಇದು ಟೆಕ್ ಪ್ರಿಯರು ಹಾಗೂ ಗೇಮರ್‌ಗಳ ಗಮನ ಸೆಳೆಯುವ ಫೋನ್ ಆಗಲಿದೆ. ಡಿಸೆಂಬರ್ 17ರ ಅಧಿಕೃತ ಬಿಡುಗಡೆಯ ಬಳಿಕ, ಭಾರತೀಯ ಮಾರುಕಟ್ಟೆಯಲ್ಲಿ ಇದು ಎಷ್ಟು ದೊಡ್ಡ ಪ್ರಭಾವ ಬೀರುತ್ತದೆ ಎಂಬುದು ಕುತೂಹಲಕರವಾಗಿರಲಿದೆ.

Best Mobiles in India

English summary
The OnePlus 15R is set to launch in India on December 17 and is already generating strong buzz thanks to its powerful processor, large battery, and gaming-focused features. Designed with Indian users in mind, the phone brings notable upgrades, and a popular tipster has now leaked its expected price ahead of the official debut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+