Home
ಮೊಬೈಲ್

OnePlus 15R ವಿಮರ್ಶೆ: ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆ ನೋಡಿ!

ಭಾರತದಲ್ಲಿ OnePlus 15R ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. OnePlus ತನ್ನ R ಸರಣಿ ಎಂದಿನಂತೆ ಈ ಬಾರಿ ಕೂಡ ಉತ್ತಮ ಕಾರ್ಯಕ್ಷಮತೆ ಮತ್ತು ಮೌಲ್ಯಾಧಾರಿತ ಬೆಲೆ ಎಂಬ ತತ್ವವನ್ನು ಬಲವಾಗಿ ಮುಂದುವರಿಸಿದೆ. ಪ್ರೀಮಿಯಂ ಫೀಚರ್‌ಗಳಿಗಿಂತ ವೇಗ, ಗೇಮಿಂಗ್ ಮತ್ತು ಸ್ಥಿರ ಪ್ರದರ್ಶನಕ್ಕೆ ಆದ್ಯತೆ ನೀಡುವ ಬಳಕೆದಾರರಿಗೆ OnePlus 15R ವಿಶೇಷವಾಗಿ ಆಕರ್ಷಕವಾಗಿದೆ. ಹಾಗಾದರೆ, OnePlus 15R ಫೋನಿನ ಸಂಪೂರ್ಣ ಕಾರ್ಯಕ್ಷಮತೆ ಹೇಗಿದೆ?.. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

OnePlus 15 ನ ಲೈಟ್ ಆವೃತ್ತಿಯಂತಿದೆ.!
ಮೊದಲ ನೋಟ ಮತ್ತು ಫೀಚರ್ಸ್ ನೋಡಿ ಹೇಳುವುದಾದರೆ, OnePlus 15R ಅನ್ನು ಫ್ಲಾಗ್‌ಶಿಪ್ OnePlus 15 ನ ಲೈಟ್ ಆವೃತ್ತಿಯೆಂದೇ ಹೇಳಬಹುದು. OnePlus 15 ನಲ್ಲಿ Snapdragon 8 Elite Gen 5 ಪ್ರೊಸೆಸರ್ ಇದ್ದರೆ, 15R ನಲ್ಲಿ Qualcomm Snapdragon 8 Gen 5 ಚಿಪ್‌ ನೀಡಲಾಗಿದೆ. ಇದು ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆಯನ್ನು ನೀಡುವ ಚಿಪ್ ಆಗಿದ್ದು, ₹45,000 ವಿಭಾಗದಲ್ಲಿ ಇದು ಗಟ್ಟಿಯಾದ ಸ್ಪರ್ಧೆ ನೀಡುವ ಫೋನ್ ಆಗಿದೆ. ಇದಕ್ಕೆ ನಮ್ಮ ವಿಮರ್ಶೆಯಲ್ಲಿ ಹಲವಾರು ಕಾರಣಗಳು ಸಹ ಇವೆ.

OnePlus 15R ವಿಮರ್ಶೆ: ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆ ನೋಡಿ!

Snapdragon 8 Gen 5 ಪ್ರೊಸೆಸರ್: ಹೊಸ ತಲೆಮಾರಿನ ಕಾರ್ಯಕ್ಷಮತೆ
OnePlus 15R ನಲ್ಲಿ ಬಳಸಿರುವ Snapdragon 8 Gen 5 ಚಿಪ್ ಅನ್ನು 3nm ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ. ಇದರಲ್ಲಿ 2 ಹೈ-ಪರ್ಫಾರ್ಮೆನ್ಸ್ ಪ್ರೈಮ್ ಕೋರ್‌ಗಳು ಮತ್ತು 6 ಪರ್ಫಾರ್ಮೆನ್ಸ್ ಕೋರ್‌ಗಳು ಇದ್ದು, Qualcomm ನ ಮೂರನೇ ತಲೆಮಾರಿನ Oryon ಕೋರ್‌ಗಳ ಶಕ್ತಿ ಇದಕ್ಕೆ ಬೆಂಬಲ ನೀಡುತ್ತದೆ. Qualcomm ನೀಡಿರುವ ಮಾಹಿತಿಯಂತೆ, ಈ ಚಿಪ್ ಹಿಂದಿನ ತಲೆಮಾರಿಗಿಂತ 36% ಹೆಚ್ಚು CPU ಕಾರ್ಯಕ್ಷಮತೆ ಮತ್ತು 42% ಉತ್ತಮ ಪವರ್ ಎಫಿಷಿಯನ್ಸಿ ಒದಗಿಸುತ್ತದೆ. ಜೊತೆಗೆ Adreno GPU ಮೂಲಕ ಗ್ರಾಫಿಕ್ಸ್ ಕಾರ್ಯಕ್ಷಮತೆ ಹೆಚ್ಚಾಗಿದ್ದು, ಹೊಸ Hexagon NPU ಕಾರಣದಿಂದ AI ಆಧಾರಿತ ಕಾರ್ಯಗಳು ಇನ್ನಷ್ಟು ವೇಗವಾಗಿ ನಡೆಯುತ್ತವೆ.

Benchmark ಫಲಿತಾಂಶಗಳು: ಸಂಖ್ಯೆಗಳಲ್ಲೇ ಶಕ್ತಿ
OnePlus 15R ಬೆಂಚ್‌ಮಾರ್ಕ್ ಪರೀಕ್ಷೆಗಳಲ್ಲಿ ಅತ್ಯಂತ ಬಲವಾದ ಪ್ರದರ್ಶನ ನೀಡಿದೆ. Geekbench ಪರೀಕ್ಷೆಯಲ್ಲಿ ಇದು 2681 (Single-core) ಮತ್ತು 8752 (Multi-core) ಸ್ಕೋರ್ ಗಳಿಸಿದ್ದು, ಈ ಬೆಲೆ ವಿಭಾಗದ ಹಲವಾರು ಫೋನ್‌ಗಳನ್ನು ಸ್ಪಷ್ಟವಾಗಿ ಮೀರಿಸಿದೆ. CPU ಕಾರ್ಯಕ್ಷಮತೆಯಲ್ಲಿ ಇದು ಹಳೆಯ ಫ್ಲ್ಯಾಗ್‌ಶಿಪ್‌ಗಳಿಗಿಂತ ಮುನ್ನಡೆ ಸಾಧಿಸಿದೆ. GPU ವಿಭಾಗದಲ್ಲಿ ಮಾತ್ರ Snapdragon 8 Elite ಇರುವ ಫೋನ್‌ಗಳು ಸ್ವಲ್ಪ ಮುನ್ನಡೆ ಕಾಯ್ದುಕೊಂಡಿವೆ. ತಾಪಮಾನ ನಿಯಂತ್ರಣವೂ ಉತ್ತಮವಾಗಿದ್ದು, ನಮ್ಮ ಬಳಕೆಯ ಭಾರೀ ಲೋಡ್‌ನಲ್ಲೂ ಫೋನ್ 44°C ಗಿಂತ ಹೆಚ್ಚು ಬಿಸಿಯಾಗಲಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ.

OnePlus 15R ವಿಮರ್ಶೆ: ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆ ನೋಡಿ!

ಸ್ಟೆಬಿಲಿಟಿ ಮತ್ತು ಥರ್ಮಲ್ ಮ್ಯಾನೇಜ್‌ಮೆಂಟ್
ನಮ್ಮ ಬಳಕೆಯ 20 ನಿಮಿಷಗಳ ನಿರಂತರ ಸ್ಟ್ರೆಸ್ ಟೆಸ್ಟ್‌ನಲ್ಲಿ OnePlus 15R ಉತ್ತಮ ಸ್ಥಿರತೆ ತೋರಿಸಿದೆ. ಆರಂಭದಲ್ಲಿ ಗರಿಷ್ಠ ಕಾರ್ಯಕ್ಷಮತೆ ನೀಡಿದ ಫೋನ್, ದೀರ್ಘಕಾಲದ ಲೋಡ್‌ನಲ್ಲಿ ತಾಪಮಾನ ಮತ್ತು ಬ್ಯಾಟರಿ ಉಳಿಸಲು ಸ್ವಲ್ಪ ಕಾರ್ಯಕ್ಷಮತೆಯನ್ನು ಸಮತೋಲಗೊಳಿಸುತ್ತದೆ. ಸುಮಾರು 80% ಸ್ಟೆಬಿಲಿಟಿ ಇರುವುದರಿಂದ, ದಿನನಿತ್ಯದ ಬಳಕೆ ಮತ್ತು ಗೇಮಿಂಗ್‌ಗೆ ಇದು ವಿಶ್ವಾಸಾರ್ಹ ಸಾಧನವಾಗಿದೆ.

OnePlus 15R ವಿಮರ್ಶೆ: ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆ ನೋಡಿ!

2 ಗಂಟೆಗಳ ಗೇಮಿಂಗ್ ಟೆಸ್ಟ್: ಗೇಮರ್‌ಗಳಿಗೆ ಖುಷಿ ಸುದ್ದಿ
OnePlus 15R ಅನ್ನು ದೀರ್ಘಕಾಲದ ಗೇಮಿಂಗ್ ಪರೀಕ್ಷೆಗೆ ಒಳಪಡಿಸಿದಾಗ, ಇದು ಅತ್ಯಂತ ಸ್ಥಿರ ಪ್ರದರ್ಶನ ನೀಡಿದೆ.BGMI ನಲ್ಲಿ 120fps ಗೆ ಬೆಂಬಲವಿದ್ದು, ಗೇಮ್ ಸಂಪೂರ್ಣವಾಗಿ ಸ್ಮೂತ್ ಆಗಿ ಓಡಿತು. Call of Duty: Mobile ನಲ್ಲಿ 165Hz ಡಿಸ್ಪ್ಲೇ ಪ್ರಯೋಜನ ಪಡೆದು 160fps ಕ್ಕೂ ಹೆಚ್ಚು ಸರಾಸರಿ ಫ್ರೇಮ್‌ರೇಟ್ ಸಿಕ್ಕಿತು. Genshin Impact ನಲ್ಲಿ High ಗ್ರಾಫಿಕ್ಸ್ ಸೆಟ್ಟಿಂಗ್‌ನಲ್ಲೂ ಯಾವುದೇ ಲ್ಯಾಗ್ ಅಥವಾ ಸ್ಟಟರ್ ಕಾಣಿಸಲಿಲ್ಲ.ಈ ಎಲ್ಲಾ ಗೇಮಿಂಗ್ ಸೆಷನ್‌ಗಳ ನಂತರವೂ ಫೋನ್‌ನ ತಾಪಮಾನ ನಿಯಂತ್ರಣದಲ್ಲಿ ಇತ್ತು. 7,400mAh ದೊಡ್ಡ ಬ್ಯಾಟರಿ ಕಾರಣ, ಸುಮಾರು 2 ಗಂಟೆಗಳ ಗೇಮಿಂಗ್ ಬಳಿಕವೂ 67% ಚಾರ್ಜ್ ಉಳಿದಿತ್ತು, ಇದು ಈ ವಿಭಾಗದಲ್ಲಿ ಅತ್ಯುತ್ತಮ ಎನ್ನಬಹುದು.

ಅಂತಿಮ ನಿರ್ಣಯ: OnePlus 15R ಯಾರಿಗೆ ಸೂಕ್ತ?
OnePlus 15R ಒಂದು ಪವರ್‌ಫುಲ್, ಸ್ಥಿರ ಮತ್ತು ಬ್ಯಾಲೆನ್ಸ್‌ಡ್ ಸ್ಮಾರ್ಟ್‌ಫೋನ್. ಇದು ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ, ಆದರೆ ಫ್ಲ್ಯಾಗ್‌ಶಿಪ್ ಬೆಲೆ ಕೇಳುವುದಿಲ್ಲ. ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ದೀರ್ಘ ಬ್ಯಾಟರಿ ಲೈಫ್ ಬೇಕು ಎನ್ನುವ ಬಳಕೆದಾರರಿಗೆ ಇದು ತುಂಬಾ ಸೂಕ್ತ ಆಯ್ಕೆ. ಫ್ಲ್ಯಾಗ್‌ಶಿಪ್ ಖರ್ಚು ಮಾಡದೇ, ಹೈ-ಪರ್ಫಾರ್ಮೆನ್ಸ್ ಫೋನ್ ಬೇಕಾದರೆ OnePlus 15R ಭಾರತದಲ್ಲಿ ಗಮನಿಸಲೇಬೇಕಾದ ಸ್ಮಾರ್ಟ್‌ಫೋನ್ ಎಂಬುದು ನಮ್ಮ ಅಭಿಪ್ರಾಯ.!

Best Mobiles in India

English summary
At first glance and looking at the features, the OnePlus 15R can be described as a lite version of the flagship OnePlus 15. While the OnePlus 15 has a Snapdragon 8 Elite Gen 5 processor, the 15R has a Qualcomm Snapdragon 8 Gen 5 chip. This is a chip that offers flagship-level performance, making it a tough competitor in the ₹45,000 segment. There are several reasons for this in our review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+