Home
ಮೊಬೈಲ್

ಭಾರತದಲ್ಲಿ OnePlus 15R ಬಿಡುಗಡೆ ಸಮೀಪ: ಅಧಿಕೃತ ಟೀಸರ್ ಔಟ್!

ಭಾರತದ ಮೊಬೈಲ್ ಮಾರುಕಟ್ಟೆಗೆ OnePlus ತನ್ನ ಮುಂದಿನ R-ಸಿರೀಸ್ ಫೋನ್‌ ಪರಿಚಯಿಸಲು ತಯಾರಾಗುತ್ತಿದೆ. ಕಂಪನಿಯು ತನ್ನ ಮುಂಬರುವ OnePlus 15R ಫೋನ್‌ನ ಮೊದಲ ಟೀಸರ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದ್ದು, ಶಿಘ್ರದಲ್ಲೇ ಕಂಪೆನಿಯ ಮಿಡ್‌ರೇಂಜ್ ಫ್ಲಾಗ್‌ಶಿಪ್ ಫೋನ್ ಬರುವುದು ಖಚಿತವಾಗಿದೆ. ಆದರೆ, ಈ ಹಿಂದಿನ ವರದಿಗಳಂತೆ, ಇದು OnePlus Ace 6 ಮರುಬ್ರ್ಯಾಂಡ್ ಎಂದು ಹೇಳಲಾಗಿತ್ತು. ಆದರೆ, ಇದು ಮುಂಬರಲಿರುವ OnePlus Ace 6T ಎಂದು ಹೇಳಲಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

OnePlus 15R ಸ್ಮಾರ್ಟ್‌ಫೋನ್ ಫೋನ್ ಮೊದಲು OnePlus Ace 6T ಹೆಸರಿನಲ್ಲಿ ಲಾಂಚ್ ಆಗಿ ನಂತರ ಭಾರತಕ್ಕೆ ಬರಲಿದೆ ಎಂದು ಪ್ರಮುಖ ಟೆಕ್ ವರದಿಗಳು ಹೇಳಿವೆ. ಮುಂಬರುವ ಸ್ಮಾರ್ಟ್‌ಫೋನ್ ಕುರಿತು ಕಂಪನಿಯು ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, X ನಲ್ಲಿ ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು OnePlus 15R ಭಾರತ ಸೇರಿದಂತೆ ಜಾಗತಿಕವಾಗಿ OnePlus Ace 6T ಅನಾವರಣಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಮಾಹಿತಿಯನ್ನು ಹಲವಾರು ವರದಿಗಳು ಪ್ರಕಟಿಸಿವೆ.

OnePlus 15R(Ace 6T/15R): ಅಧಿಕೃತ ಮತ್ತು ನಿರೀಕ್ಷಿತ ವೈಶಿಷ್ಟ್ಯಗಳು
OnePlus ಚೀನಾ ಅಧ್ಯಕ್ಷ ಲಿ ಜೀ ಈಗಾಗಲೇ ಬಹಿರಂಗಪಡಿಸಿರುವಂತೆ, Ace 6T/15R ವಿಶ್ವದಲ್ಲೇ ಮೊದಲ ಬಾರಿ Snapdragon 8 Gen 5 (non-Elite) ಚಿಪ್‌ನ್ನು ಬಳಸಲಿರುವ ಸ್ಮಾರ್ಟ್‌ಫೋನ್ ಆಗಲಿದೆ. ಇದು ಕ್ವಾಲ್ಕಾಮ್‌ನ ಮುಂದಿನ ಫ್ಲ್ಯಾಗ್‌ಶಿಪ್ ಚಿಪ್‌ನ ಎಲೈಟ್ ಅಲ್ಲದ ರೂಪಾಂತರವಾಗಿದ್ದು,ಈ ಚಿಪ್‌ನಲ್ಲಿ ವಿಶೇಷ ಗೇಮಿಂಗ್ ಕರ್ನಲ್ ಇದ್ದು, 165Hz ರಿಫ್ರೆಶ್ ರೇಟ್‌ನಲ್ಲಿ ನೆಪ್ಪಿಲ್ಲದ ಗೇಮಿಂಗ್ ಅನುಭವ ನೀಡುವುದಾಗಿ ತಿಳಿಸಲಾಗಿದೆ. ಜೊತೆಗೆ Genshin Impact ಜನಪ್ರಿಯ ಆಟಕ್ಕೆ OnePlus ವಿಶೇಷ 165Hz ಅಪ್ಟಿಮೈಸೇಶನ್ ಕೂಡ ಮಾಡಿರುವ ಸಾಧ್ಯತೆ ಇದೆ. ಇದನ್ನು OnePlus ನೊಂದಿಗೆ ಸಹ-ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.

ಭಾರತದಲ್ಲಿ OnePlus 15R ಬಿಡುಗಡೆ ಸಮೀಪ: ಅಧಿಕೃತ ಟೀಸರ್ ಔಟ್!

ಡಿಸ್ಪ್ಲೇ ಮತ್ತು ವಿನ್ಯಾಸದ ವಿಭಾಗದಲ್ಲಿ,OnePlus ಈ ವರ್ಷ ಬಳಸುತ್ತಿರುವ ಸ್ಕ್ವಿರ್ಕಲ್ ಕ್ಯಾಮೆರಾ ಐಲ್ಯಾಂಡ್ ವಿನ್ಯಾಸವು ಈ Ace 6T/15R ಫೋನ್‌ಗೂ ಬರಬಹುದಾಗಿದೆ. ಮುಂದೆ 165Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಅನ್ನು ಕಂಪನಿ ಈಗಾಗಲೇ ದೃಢಪಡಿಸಿದೆ. ಚೀನಾ ಲೀಕ್ಸ್ ಪ್ರಕಾರ, ಈ ಫೋನ್‌ನಲ್ಲಿ 6.7-ಇಂಚು 1.5K OLED ಸ್ಕ್ರೀನ್ ಬರಬಹುದು. ಕಾರ್ಯಕ್ಷಮೆತಾಗಿ, Snapdragon 8 Gen 5 ಜೊತೆಗೆ 16GB LPDDR5x Ultra RAM ಮತ್ತು 1TB UFS 4.1 ಸ್ಟೋರೇಜ್ ವರೆಗೆ ಆಯ್ಕೆ ಸಿಗಲಿದೆ ಎಂದು ಗಾಸಿಪ್ ಇದೆ. Oಚಿಪ್‌ಸೆಟ್ ಸ್ವತಃ 3nm TSMC ಪ್ರಕ್ರಿಯೆಯಲ್ಲಿ ಓರಿಯಾನ್ CPU ಕೋರ್‌ಗಳನ್ನು ಬಳಸುತ್ತದೆ ಎಂದು ನಂಬಲಾಗಿದೆ, ಇದನ್ನು 2+6 ಕ್ಲಸ್ಟರ್‌ನಲ್ಲಿ ಜೋಡಿಸಲಾಗಿದೆ ಮತ್ತು ಗ್ರಾಫಿಕ್ಸ್‌ಗಾಗಿ ಅಡ್ರಿನೊ 840 GPU ಅನ್ನು ಹೊಂದಿದೆ.

ಈ Ace 6T/15R ಸ್ಮಾರ್ಟ್‌ಫೋನ್‌ನ ದೊಡ್ಡ ಹೈಲೈಟ್ ಎಂದರೆ 8,000mAh ಬ್ಯಾಟರಿ. OnePlus ಫೋನ್‌ಗಳಲ್ಲಿ ಇದುವರೆಗಿನ ಅತಿ ದೊಡ್ಡ ಬ್ಯಾಟರಿ ಇದೇ ಆಗಬಹುದು. ಜೊತೆಗೆ 100W ಚಾರ್ಜಿಂಗ್ ಇದ್ದರೆ, ವೇಗ ಮತ್ತು ಬ್ಯಾಕಪ್ ಎರಡನ್ನೂ ನಿರಾಳವಾಗಿ ನಿರೀಕ್ಷಿಸಬಹುದು. ಚೀನಾ ಮಾದರಿಯಲ್ಲಿ ColorOS 16 ಇರಬಹುದು, ಆದರೆ ಭಾರತದಲ್ಲಿ OxygenOS + Android 16 ಬರಲಿದೆ ಎನ್ನಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, ಸೋರಿಕೆಗಳು 50-ಮೆಗಾಪಿಕ್ಸೆಲ್ + 8-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಸೆಟಪ್ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸೂಚಿಸುತ್ತವೆ, ಇದು ಒನ್‌ಪ್ಲಸ್ ಈ ಫೋನ್ ಅನ್ನು ಕ್ಯಾಮೆರಾ-ಭಾರೀ ಫ್ಲ್ಯಾಗ್‌ಶಿಪ್‌ಗಿಂತ ಕಾರ್ಯಕ್ಷಮತೆ-ಮೊದಲ ಸಾಧನವಾಗಿ ಇರಿಸುತ್ತಿದೆ ಎಂದು ಸ್ಪಷ್ಟಪಡಿಸುತ್ತದೆ.

OnePlus 15R(Ace 6T/15R): ಭಾರತದಲ್ಲಿ ನಿರೀಕ್ಷಿತ ಬೆಲೆ
OnePlus Ace 6T ಈಗಾಗಲೇ JD, Tmall ಮತ್ತು Oppo Store ನಂತಹ ಪ್ರಮುಖ ಚೀನೀ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೀ-ಬುಕ್ ಮಾಡಲು ಲಭ್ಯವಾಗಿದ್ದು, ಅಧಿಕೃತ ಬಿಡುಗಡೆಯು ಹತ್ತಿರದಲ್ಲಿರುವುದನ್ನು ಸೂಚಿಸುತ್ತದೆ ಮತ್ತು ನಂತರ ಭಾರತ ಲಾಂಚ್ ಕೂಡ ತಕ್ಷಣ ನಡೆಯುವ ನಿರೀಕ್ಷೆ. ಗಮನಿಸುವುದಾದರೆ, ಭಾರತದಲಲ್ಇ ಕಳೆದ OnePlus 12R ₹39,999 ರಿಂದ ಮತ್ತು 13R ₹42,999 ರಿಂದ ಆರಂಭವಾಗಿತ್ತು. OnePlus ಪ್ರತೀ ವರ್ಷ ಸುಮಾರು ₹3,000ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ, OnePlus 15R ಬೆಲೆ ₹45,000 ಒಳಗೆ ಇರುವ ಸಾಧ್ಯತೆ ಹೆಚ್ಚಿದೆ.

Best Mobiles in India

English summary
OnePlus 15R, hinting that it will soon become OnePlus’ next mid-range flagship. Earlier reports suggested that the device would be a rebranded version of the OnePlus Ace 6, but new leaks now indicate that it could actually be based on the upcoming OnePlus Ace 6T instead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+