Home
ಮೊಬೈಲ್

OnePlus 15R ಲಾಂಚ್‌ಗೆ ದಿನಗಣನೆ: ಬ್ಯಾಟರಿ ಕ್ಯಾಪ್ಯಾಸಿಟಿ ಎಷ್ಟು ನೋಡಿ!

OnePlus ತನ್ನ ಮುಂದಿನ ಬಹುನಿರೀಕ್ಷಿತ ಮಧ್ಯ-ಪ್ರೀಮಿಯಂ ಫೋನ್ OnePlus 15R ಅನ್ನು ಡಿಸೆಂಬರ್ 17 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಲಾಂಚ್‌ಗೆ ಮುನ್ನ ಕಂಪನಿ ಪ್ರಮುಖ ಫೀಚರ್‌ಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುತ್ತಿದೆ. ಇದೀಗ ಹೊಸ ಮಾಹಿತಿಯ ಪ್ರಕಾರ, OnePlus 15R ಫೋನಿನ ಬ್ಯಾಟರಿ ಸಾಮರ್ಥ್ಯಯು OnePlus ಇತಿಹಾಸದಲ್ಲೇ ದೊಡ್ಡ ಜಿಗಿತವಾಗಿದೆ. ಆದರೆ, ಈ ಮೊದಲು ನಾವೆಂದುಕೊಂಡಂತೆ 8,300mAh ಸಾಮರ್ಥ್ಯದ ಬ್ಯಾಟರಿ ಅಲ್ಲ. ಬದಲಾಗಿ, 7,400mAh ಸಾಮರ್ಥ್ಯದ ಬ್ಯಾಟರಿ ಇರಲಿದೆ.! ಜೊತೆಗೆ ಮತ್ತಷ್ಟು ಫೀಚರ್ಸ್ ಮಾಹಿತಿಗಳು ಬಹಿರಂಗವಾಗಿವೆ.

7,400mAh ಬ್ಯಾಟರಿ: ಈವರೆಗೆ ಬಂದಿರುವ OnePlus ಫೋನ್‌ಗಳಲ್ಲಿ ಅತಿ ದೊಡ್ಡದು
ಹೌದು, OnePlus 15R ನಲ್ಲಿ 7,400mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಇರಲಿದೆ ಎಂದು ಕಂಪನಿ ಅಧಿಕೃತವಾಗಿ ದೃಢಪಡಿಸಿದೆ. ಸಿಲಿಕಾನ್ ನ್ಯಾನೋಸ್ಟಾಕ್ ತಂತ್ರಜ್ಞಾನ ಬಳಸಿ ತಯಾರಿಸಲಾದ ಈ ಬ್ಯಾಟರಿ ಹೈ ಎನರ್ಜಿ ಡೆನ್ಸಿಟಿ ನೀಡಲಿದ್ದು, ನಾಲ್ಕು ವರ್ಷಗಳ ಬಳಕೆಯ ನಂತರವೂ ಕನಿಷ್ಠ 80% ಸಾಮರ್ಥ್ಯ ಉಳಿಸಿಕೊಳ್ಳುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಜೊತೆಗೆ, ಈ ಫೋನ್ 80W ಫಾಸ್ಟ್ ಚಾರ್ಜಿಂಗ್ ಹೊಂದಿರುವುದನ್ನು ಖಚಿತಪಡಿಸಲಾಗಿದೆ. ಗಮನಿಸುವುದಾದರೆ, ಫ್ಲಾಗ್‌ಶಿಪ್ OnePlus 15‌ನ 7,300mAh ಯೂನಿಟ್‌ಗಿಂತ OnePlus 15R ಬ್ಯಾಟರಿ ದೊಡ್ಡದಾಗಿದೆ. ಆದರೆ, ಕೆಲವು ಹಿಂದಿನ ಲೀಕ್‌ಗಳು 8,300mAh ಬ್ಯಾಟರಿ ಸಾಧ್ಯತೆಯ ಬಗ್ಗೆ ಸೂಚಿಸಿದ್ದವು. ಆದರೆ, ಅಧಿಕೃತ ವಿವರ ಈಗ ಸ್ಪಷ್ಟವಾಗಿದೆ.

OnePlus 15R ಲಾಂಚ್‌ಗೆ ದಿನಗಣನೆ: ಬ್ಯಾಟರಿ ಕ್ಯಾಪ್ಯಾಸಿಟಿ ಎಷ್ಟು ನೋಡಿ!

165Hz 1.5K AMOLED ಡಿಸ್‌ಪ್ಲೇ - ವೇಗ ಮತ್ತು ಸ್ಪಷ್ಟತೆಯ ಸಂಯೋಜನೆ
OnePlus 15R ನಲ್ಲಿ 165Hz ರಿಫ್ರೆಶ್ ರೇಟ್ ಹೊಂದಿದ 1.5K AMOLED ಪ್ಯಾನೆಲ್ ಇರುವುದನ್ನು ತಿಳಿಸಲಾಗಿದೆ. ಇದೇ ಡಿಸ್‌ಪ್ಲೇ OnePlus 15 ನಲ್ಲಿ ಕೂಡ ಇದೆ. ಡಿಸ್‌ಪ್ಲೇ ಗರಿಷ್ಠ 1,800 ನಿಟ್ಸ್ ಬ್ರೈಟ್‌ನೆಸ್ ತಲುಪಬಲ್ಲದು ಮತ್ತು ತೀರ ಕತ್ತಲಿಯಲ್ಲಿ 1 ನಿಟ್ ಮಟ್ಟಕ್ಕೆ ಇಳಿಯಬಲ್ಲದು.ಟ್ಯೂವ್ ರೈನ್‌ಲ್ಯಾಂಡ್ ಐ ಕೇರ್ 5.0 ಪ್ರಮಾಣೀಕರಣ ಇದಕ್ಕೆ ಲಭ್ಯವಿರುವುದರಿಂದ, ದಿನಪೂರ್ತಿ ಫೋನ್ ನೋಡಲೇಬೇಕಾಗಿದ್ದರೂ ಕಣ್ಣುಗಳಿಗೆ ಅನುಕೂಲವಾಗಿರಲಿದೆ.

4K@120fps ವೀಡಿಯೋ ಮತ್ತು Snapdragon 8 Gen 5 ಪರ್‌ಫಾರ್ಮೆನ್ಸ್
OnePlus 15R ನಲ್ಲಿ 4K 120fps ವೀಡಿಯೋ ರೆಕಾರ್ಡಿಂಗ್ ಸಪೋರ್ಟ್ ಇರಲಿದೆ. ಈ ಹೈ-ಫ್ರೇಮ್-ರೇಟ್ ವೀಡಿಯೋ ರೆಕಾರ್ಡಿಂಗ್ ಮೊದಲು OnePlus 15 ನಲ್ಲಿ ಮಾತ್ರ ಲಭ್ಯವಿದ್ದರೂ, ಈಗ 15R ಗೂ ಸಿಕ್ಕಿದೆ.ಕಾರ್ಯಕ್ಷಮತೆ ವಿಭಾಗದಲ್ಲಿ 15R ದೊಡ್ಡ ಬದಲಾವಣೆ ಪಡೆಯುತ್ತಿದೆ. ಇದು ಹೊಸ Snapdragon 8 Gen 5 ಚಿಪ್‌ಸೆಟ್‌ನೊಂದಿಗೆ ಬರುತ್ತಿದ್ದು, OnePlus ಹಾಗೂ Qualcomm ಸೇರಿ ಎರಡು ವರ್ಷಗಳ ಕಾಲ ಅಭಿವೃದ್ಧಿ ಪಡಿಸಿದ ಪ್ಲಾಟ್‌ಫಾರ್ಮ್ ಇದು. ಈ ಪ್ರೊಸೆಸರ್‌ನೊಂದಿಗೆ ಬರುತ್ತಿರುವ ವಿಶ್ವದ ಮೊದಲ ಫೋನ್ 15R ಆಗಲಿದೆ.ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟ್‌ಅಪ್ ನಿರೀಕ್ಷೆಯಾದರೂ, ಅಧಿಕೃತ ವಿವರ ಇನ್ನೂ ಬಾಕಿ ಉಳಿದಿದೆ.

OnePlus 15R: ಭಾರತದಲ್ಲಿ ಬಿಡುಗಡೆ ಮಾಡಿತಿ ಮತ್ತು ನಿರೀಕ್ಷಿತ ಬೆಲೆ
OnePlus 15R ಮತ್ತು OnePlus Pad Go 2 ಅನ್ನು ಕಂಪನಿ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯುವ ಈವೆಂಟ್‌ನಲ್ಲಿ ಪರಿಚಯಿಸಲಿದೆ. ಬೆಲೆ ವಿವರಗಳನ್ನು OnePlus ಇನ್ನೂ ಘೋಷಿಸದಿದ್ದರೂ, ಹಿಂದಿನ OnePlus 13R ₹42,999 ಗೆ ಬಂದಿದ್ದರಿಂದ 15R ನ ಬೆಲೆಯೂ ಅದೇ ಶ್ರೇಣಿಯಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದೆ. ಒಟ್ಟಾರೆಯಾಗಿ, ದೊಡ್ಡ ಬ್ಯಾಟರಿ, ವೇಗವಾದ ಚಾರ್ಜಿಂಗ್, ಪ್ರೀಮಿಯಂ AMOLED ಡಿಸ್‌ಪ್ಲೇ ಮತ್ತು ನವೀನ Snapdragon 8 Gen 5 ಪ್ರೊಸೆಸರ್, ಇವುಗಳಿಂದ OnePlus 15R ಸ್ಪರ್ಧೆಯಲ್ಲಿ ಗಮನ ಆಕರ್ಷಿಸುವ ಸಾಧನವಾಗುವ ಲಕ್ಷಣಗಳು ಸ್ಪಷ್ಟ. 2025 ರ ಆರಂಭದಲ್ಲಿ ಮಧ್ಯಮ-ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದು ಪ್ರಮುಖ ಆಯ್ಕೆಯಾಗುವುದು ಖಚಿತ. ಏನಂತಿರಾ?.. ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OnePlus has confirmed that the OnePlus 15R will pack a huge 7,400mAh battery using silicon nanostack technology, promising 80% capacity retention even after four years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+