Home
ಮೊಬೈಲ್

OnePlus 15R ಬಳಿಕ ಭಾರತಕ್ಕೆ ಬರುತ್ತಿದೆ ಹೊಸ OnePlus 15s!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ OnePlus ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊವನ್ನು ಭಾರತದಲ್ಲಿ ಮತ್ತೆ ವಿಸ್ತರಿಸಲು ಸಿದ್ಧವಾಗಿರುವಂತೆ ಕಾಣುತ್ತಿದೆ. ನೆನ್ನೆಯಷ್ಟೇ ದೇಶದಲ್ಲಿ OnePlus 15R ಫೋನ್ ಬಿಡುಗಡೆ ಮಾಡಿದ ಕಂಪನಿ, ಈಗ OnePlus 15 ಮತ್ತು OnePlus 15R ಫೋನ್‌ಗಳು ಜೊತೆಗೆ ಸೇರಿಕೊಳ್ಳುವ ಹೊಸ ಮಾದರಿಯೊಂದನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಹೊಸ ಸ್ಮಾರ್ಟ್‌ಫೋನ್ OnePlus 15s ಎಂಬ ಹೆಸರಿನಲ್ಲಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಬಹುದು ಎಂದು ವರದಿಗಳು ಸೂಚಿಸುತ್ತಿವೆ.!

ಹೌದು, ಭಾರತೀಯ ಮಾನದಂಡಗಳ ಬ್ಯೂರೋ (BIS) ಪ್ರಮಾಣೀಕರಣ ಡೇಟಾಬೇಸ್‌ನಲ್ಲಿ CPH2793 ಎಂಬ ಮಾದರಿ ಸಂಖ್ಯೆಯೊಂದಿಗೆ ಹೊಸ ಒನ್‌ಪ್ಲಸ್ ಫೋನ್ ದಾಖಲಾಗಿದ್ದು, ಇದು OnePlus 15s ಆಗಿರಬಹುದು ಎಂದು ಟೆಕ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಪ್ರಮಾಣೀಕರಣ ಪಟ್ಟಿಯಲ್ಲಿ ಫೋನ್‌ನ ಸ್ಪೆಸಿಫಿಕೇಶನ್‌ಗಳು ಅಥವಾ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ, ಭಾರತೀಯ ಮಾರುಕಟ್ಟೆಗೆ ಈ ಫೋನ್ ಅಧಿಕೃತವಾಗಿ ಎಂಟ್ರಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ಭಾರತದಲ್ಲಿ ಈ OnePlus 15s ಫೋನ್ ಬಿಡುಗಡೆಯಾದರೆ, ಇದು ಕಂಪನಿಯ ಫ್ಲ್ಯಾಗ್‌ಶಿಪ್ ಸರಣಿಯ ಮೂರನೇ ಸ್ಮಾರ್ಟ್‌ಫೋನ್ ಆಗಲಿದೆ. ಈ ಫೋನ್, ಈ ವರ್ಷದ ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ OnePlus 13s ಗೆ ಉತ್ತರಾಧಿಕಾರಿಯಾಗಿ ಬರಲಿದೆ ಎನ್ನಲಾಗಿದೆ. ಹೀಗಾಗಿ, ಹೊಸ ಮಾದರಿಯ ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಅಂದಾಜು ಮಾಡಲು OnePlus 13s ನ ವಿವರಗಳನ್ನು ನಾವು ನೋಡಬಹುದು. ದೇಶದಲ್ಲಿ 50 ಸಾವಿರದ ವಿಭಾಗದಲ್ಲಿ ಗಮನಸೆಳೆದಿದ್ದ ಈ ಫೋನ್ ಈಗ ಅಪ್‌ಗ್ರೇಡ್ ಆಗಬಹುದು.

OnePlus 15R ಬಳಿಕ ಭಾರತಕ್ಕೆ ಬರುತ್ತಿದೆ ಹೊಸ OnePlus 15s!

OnePlus 13s : ಶಕ್ತಿಶಾಲಿಯಾಗಿ ಬಿಡುಗಡೆಯಾಗಿತ್ತು.!
OnePlus 13s ಫೋನ್ ಅನ್ನು ಭಾರತದಲ್ಲಿ ರೂ. 54,999 ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ 12GB RAM ಮತ್ತು 256GB ಸ್ಟೋರೇಜ್ ಹೊಂದಿದ ಬೇಸ್ ವ್ಯಾರಿಯಂಟ್ ಜೊತೆಗೆ, 12GB RAM ಮತ್ತು 512GB ಸ್ಟೋರೇಜ್ ಟಾಪ್ ವ್ಯಾರಿಯಂಟ್‌ನಲ್ಲೂ ಲಭ್ಯವಿತ್ತು. ಬ್ಲಾಕ್ ವೆಲ್ವೆಟ್, ಗ್ರೀನ್ ಸಿಲ್ಕ್ ಮತ್ತು ಪಿಂಕ್ ಸ್ಯಾಟಿನ್ ಬಣ್ಣಗಳಲ್ಲಿ ಈ ಫೋನ್ ಗ್ರಾಹಕರಿಗೆ ಪರಿಚಯಿಸಲಾಗಿತ್ತು.

ಡಿಸ್ಪ್ಲೇ ಮತ್ತು ಕಾರ್ಯಕ್ಷಮತೆಯ ವಿಚಾರದಲ್ಲಿ, OnePlus 13s 6.32 ಇಂಚಿನ LTPO ಡಿಸ್ಪ್ಲೇ ಹೊಂದಿದ್ದು, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲ ನೀಡುತ್ತದೆ. ಗರಿಷ್ಠ 1,600 ನಿಟ್ಸ್ ಬ್ರೈಟ್ನೆಸ್ ಇರುವುದರಿಂದ ಹೊರಾಂಗಣ ಬಳಕೆಯಲ್ಲಿಯೂ ಸ್ಪಷ್ಟ ದೃಶ್ಯ ಅನುಭವ ದೊರೆಯುತ್ತದೆ. ಈ ಫೋನ್ Qualcomm Snapdragon 8 Elite ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ OnePlus 13s ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ Sony LYT-700 ಪ್ರೈಮರಿ ಸೆನ್ಸರ್ ಜೊತೆಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದಕ್ಕೆ 5,850mAh ಬ್ಯಾಟರಿ ಬೆಂಬಲವಿದ್ದು, 80W SuperVOOC ಫಾಸ್ಟ್ ಚಾರ್ಜಿಂಗ್ ಮೂಲಕ ಕಡಿಮೆ ಸಮಯದಲ್ಲಿ ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ OnePlus 15s ಕುರಿತು ಅಧಿಕೃತ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ, BIS ಪ್ರಮಾಣೀಕರಣದಿಂದಾಗಿ ಮುಂದಿನ ಕೆಲವು ತಿಂಗಳಲ್ಲಿ ಕಂಪನಿಯಿಂದ ಈ ಫೋನ್ ಕುರಿತ ಘೋಷಣೆ ನಿರೀಕ್ಷಿಸಬಹುದು. ಭಾರತದಲ್ಲಿ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಗ್ರಾಹಕರಿಗೆ OnePlus 15s ಒಂದು ಹೊಸ ಮತ್ತು ಆಕರ್ಷಕ ಆಯ್ಕೆಯಾಗುವ ಸಾಧ್ಯತೆ ಇದೆ. ನಮ್ಮ ಅಭಿಪ್ರಾಯದಂತೆ, ಈ ಮುಂಬರುವ ಫೋನ್ OnePlus 15 ಮತ್ತು OnePlus 15R ಗಳ ನಡುವೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Best Mobiles in India

English summary
OnePlus is expected to launch a new premium smartphone, likely called the OnePlus 15s, in India soon. The device has been spotted on the BIS certification database, hinting at an imminent launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+