OnePlus 15T/15s: ಇದು ಮುಂದಿನ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಫೋನ್!
OnePlus ಕಂಪನಿಯು ತನ್ನ ಮುಂದಿನ ಹೊಸ ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ತೊಡಗಿಕೊಂಡಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚಿಗಷ್ಟೇ ಫ್ಲಾಗ್‌ಶಿಪ್ ವೈಶಿಷ್ಟ್ಯಗಳಲ್ಲಿ OnePlus 13T (ಭಾರತದಲ್ಲಿ OnePlus 13s ಎಂದು ಬಿಡುಗಡೆಯಾಗಿದೆ) ಕಾಂಪ್ಯಾಕ್ಟ್ ಫೋನನ್ನು ಪರಿಚಯಿಸಿದ್ದ ಕಂಪೆನಿಯು, ಇದರ ಮುಂದಿನ ಆವೃತ್ತಿಯ ಫೋನನ್ನು ತಯಾರಿಸಿಸುತ್ತಿದೆ. ಈ ಹೊಸ ಫೋನ್ ಅನ್ನು OnePlus 15T ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದ್ದು, ಈ ಹೊಸ ಫೋನ್‌ನ ವಿನ್ಯಾಸ ಮತ್ತು ಕೆಲವು ಪ್ರಮುಖ ಫೀಚರ್‌ಗಳ ಮಾಹಿತಿ ಈಗಾಗಲೇ ಸೋರಿಕೆಯಾಗಿದೆ.
OnePlus 15T: ಸೋರಿಕಯ ವಿನ್ಯಾಸ ಮತ್ತು ಫೀಚರ್‌ಗಳು
OnePlus 15T ಫೋನ್ ಕುರಿತು ಜನಪ್ರಿಯ ಟಿಪ್‌ಸ್ಟಾರ್ ಡಿಜಿಟಲ್ ಚಾಟ್ ಸ್ಟೇಷನ್ ಮಾಹಿತಿ ಸೊರಿಕೆ ಮಾಡಿದೆ. ಡಿಜಿಟಲ್ ಚಾಟ್ ಸ್ಟೇಷನ್ ವರದಿಯಲ್ಲಿ ಮುಂಬರುವ ನಾಲ್ಕು ಹೊಸ ಫೋನ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಅವುಗಳಲ್ಲಿ OnePlus 15T ಕೂಡ ಒಂದಾಗಿದೆ. ಇದೀಗ ಸೋರಿಕೆಯಂತೆ ಮುಂಬರುವ OnePlus 15T/15s ಫೋನ್ 6.3-ಇಂಚಿನ ಫ್ಲಾಟ್ OLED ಡಿಸ್ಪ್ಲೇ ಯನ್ನು ಹೊಂದಿರಲಿದೆ. ಹಾಗೂ ಭದ್ರತೆಯ ದೃಷ್ಟಿಯಿಂದ ಈ ಫೋನ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ನೊಂದಿಗೆ ಬರುವ ನಿರೀಕ್ಷೆಯಿದೆ.
ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, OnePlus 15T/15s ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 8 Gen 2 ಎಲೈಟ್ ಪ್ರೊಸೆಸರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ OnePlus 13T ಕೂಡ ಸ್ನಾಪ್‌ಡ್ರಾಗನ್ 8 ಎಲೈಟ್ SoC ಯಿಂದ ಚಾಲಿತವಾಗಿದೆ.
ಕ್ಯಾಮೆರಾದ ವಿಭಾಗದಲ್ಲಿ, OnePlus 15T/15s ಫೋನ್ ಸ್ಕ್ವಿರ್ಕಲ್-ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಬಹುದು. ಈ ಮಾಡ್ಯೂಲ್‌ನಲ್ಲಿ ಮುಖ್ಯ ಸಂವೇದಕ, ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಟೆಲಿಫೋಟೋ ಯುನಿಟ್ (telephoto unit) ಇರಲಿದೆ.

OnePlus ಫೋನ್‌ಗಳಲ್ಲಿ ಸಾಮಾನ್ಯವಾಗಿರುವ ಅಲರ್ಟ್ ಸ್ಲೈಡರ್ ಬದಲು, ಈ ಹೊಸ ಮಾದರಿಯಲ್ಲಿ ಹೊಸ ಶಾರ್ಟ್‌ಕಟ್ ಕೀ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು OnePlus 13T ಯಲ್ಲಿಯೂ ಇತ್ತು.
ಈ ಫೋನ್‌ನಲ್ಲಿ ಗಮನಾರ್ಹವಾಗಿ ದೊಡ್ಡ ಬ್ಯಾಟರಿ ಇರಲಿದೆ ಎನ್ನಲಾಗಿದೆ. ಬಹುಶಃ ಇದು 6500mAh ನಿಂದ 7000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಬಹುದು. ಇದು OnePlus 13T ನಲ್ಲಿ ಇದ್ದ 6260mAh ಬ್ಯಾಟರಿಗಿಂತ ದೊಡ್ಡ ಅಪ್‌ಗ್ರೇಡ್ ಆಗಲಿದೆ.
ಸದ್ಯಕ್ಕೆ ಈ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ OnePlus 15T/15s ಕುರಿತು ಮತ್ತಷ್ಟು ವಿವರಗಳು ಹೊರಬರುವ ನಿರೀಕ್ಷೆಯಿದೆ. ಈ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಯಾವಾಗ ಬರಲಿದೆ ಮತ್ತು ಯಾವ ಬೆಲೆಯಲ್ಲಿ ಲಭ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕು. ಚೀನಾದಲ್ಲಿ OnePlus 13T ಆಗಿ ಬಿಡುಗಡೆಯಾದರೆ, ಭಾರತದಲ್ಲಿ ಇದು OnePlus 15s ಎಂಬ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಏಕೆಂದರೆ, ಚೀನಾದಲ್ಲಿ OnePlus 13T ಆಗಿ ಪರಿಚಯಗೊಂಡಿದ್ದ ಫೋನ್ ಭಾರತದಲ್ಲಿ OnePlus 13s ಹೆಸರಿನಲ್ಲಿ ಬಿಡುಗಡೆಯಾಗಿತ್ತು.
OnePlus ಕಂಪೆನಿಯು ಐಫೋನ್‌ನ ಮಾರುಕಟ್ಟೆ ಪಾಲನ್ನು ಕಬಳಿಸುವಂತಹ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ನೀಡಿದಾಗ ಅದರ ಆರ್ಭಟ ಹೆಚ್ಚಿತ್ತು. ಇದೀಗ OnePlus 13s ಸ್ಮಾರ್ಟ್‌ಫೋನ್ ಗಮನ, ನಿಖರತೆ ಮತ್ತು ಸಮುದಾಯ-ಚಾಲಿತವಾದ 'ಉತ್ತಮ ಹಳೆಯ ಒನ್‌ಪ್ಲಸ್'ನ ಪರಿಕಲ್ಪನೆಯನ್ನು ಮರಳಿ ತಂದಿದೆ. ದೇಶದಲ್ಲಿ ಇದೀಗ OnePlus 13s ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಪ್ರಸ್ತುತ ₹54,999 (12GB RAM + 256GB) ಮತ್ತು ₹59,999 (12GB RAM + 512GB) ಬೆಲೆಯಲ್ಲಿ ಲಭ್ಯವಿದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಭಾರತದ ಮಧ್ಯಮ-ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ. ಹಾಗಾದರೆ, ಈ ಫೋನ್ ನಿಮ್ಮ ಹಣಕ್ಕೆ ಯೋಗ್ಯವಾಗಿದೆಯೇ? ಬಳಸಿ ನೋಡಿದ ನಂತರ ನನಗೆ ಅನಿಸಿದ ಅನುಭವಗಳೆಲ್ಲವನ್ನೂ ನೋಡಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








