Home
ಮೊಬೈಲ್

OnePlus 15T ಶೀಘ್ರ ಬಿಡುಗಡೆ ಸಾಧ್ಯತೆ: ಭಾರತಕ್ಕೆ OnePlus 15s ಆಗಿ ಆಗಮನ?!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ OnePlus ತನ್ನ ಮುಂದಿನ ತಲೆಮಾರಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಸರಣಿಯನ್ನು ಇನ್ನಷ್ಟು ವಿಸ್ತರಿಸಲು ಸಜ್ಜಾಗಿದೆ. ಇತ್ತೀಚಿನ ಲೀಕ್‌ಗಳು ಮತ್ತು ಉದ್ಯಮ ವರದಿಗಳ ಪ್ರಕಾರ, OnePlus 15 ಸರಣಿಯಲ್ಲಿ OnePlus 15T ಎಂಬ ಹೊಸ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್ ಶೀಘ್ರದಲ್ಲೇ ದೇಶದ ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಸರಣಿಯ ಇತರೆ ಸಾಧನಗಳಂದರೆ, ಈ ಹೊಸ OnePlus 15T ಸ್ಮಾರ್ಟ್‌ಫೋನ್ ಕೂಡ ಉನ್ನತ ಕಾರ್ಯಕ್ಷಮತೆ, ಪ್ರೀಮಿಯಂ ವಿನ್ಯಾಸ ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತಿದೆ.!

ಚೀನಾ ಮೂಲದ ವಿಶ್ವಾಸಾರ್ಹ ಟಿಪ್ಸ್ಟರ್ Digital Chat Station ಒದಗಿಸಿರುವ ಮಾಹಿತಿಯಂತೆ, OnePlus ಈಗಾಗಲೇ OnePlus 15T ಸ್ಮಾರ್ಟ್‌ಫೋನ್‌ಗಾಗಿ ಪರಿಕರಗಳ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿದೆ. ವಿಶೇಷವಾಗಿ, ಈ ಫೋನ್‌ಗಾಗಿ ಮ್ಯಾಗ್ನೆಟಿಕ್ ಸ್ನ್ಯಾಪ್ ಕೇಸ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಬಿಳಿ ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಜೊತೆಗೆ, ಫೋನಿನ ಕೆಲವು ಮುಖ್ಯ ಅಂಶಗಳನ್ನು ಸಹ ಬಹಿರಂಗಪಡಿಸಲಾಗಿದೆ. ಇದು ಫ್ಲ್ಯಾಗ್‌ಶಿಪ್ OnePlus 15T ಆಗಮನದ ಪ್ರಮುಖ ಸೂಚನೆಯಾಗಿ ಕಾಣಿಸುತ್ತದೆ.

Digital Chat Station ಲೀಕ್ ಮಾಡಿರುವ ಮಾಹಿತಿಯಂತೆ, ಡಿಸ್ಪ್ಲೇ ವಿಭಾಗದಲ್ಲಿ OnePlus 15T ಮಹತ್ವದ ಅಪ್‌ಗ್ರೇಡ್ ನೀಡುವ ಸಾಧ್ಯತೆ ಇದೆ. ವರದಿಯ ಪ್ರಕಾರ, ಈ ಫೋನ್‌ನಲ್ಲಿ ಸುಮಾರು 6.3 ಇಂಚಿನ 1.5K ರೆಸಲ್ಯೂಶನ್ ಹೊಂದಿದ ಫ್ಲಾಟ್ AMOLED ಡಿಸ್ಪ್ಲೇ ಇರಬಹುದು. ಇದರೊಂದಿಗೆ 165Hz ಹೈ ರಿಫ್ರೆಶ್ ರೇಟ್ ಬೆಂಬಲ ದೊರೆಯುವ ನಿರೀಕ್ಷೆಯಿದೆ. ವಿನ್ಯಾಸದ ದೃಷ್ಟಿಯಿಂದ, OnePlus 15T ಮೆಟಲ್ ಫ್ರೇಮ್‌ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಭದ್ರತೆಗೆ, ಈ ಸ್ಮಾರ್ಟ್‌ಫೋನ್‌ನಲ್ಲಿ 3D ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗುವ ಸಾಧ್ಯತೆ ಇದೆ.

OnePlus 15T ಶೀಘ್ರ ಬಿಡುಗಡೆ ಸಾಧ್ಯತೆ: ಭಾರತಕ್ಕೆ OnePlus 15s ಆಗಿ ಆಗಮನ?!

ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುವುದಾದರೆ, OnePlus 15T ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಇರಬಹುದು. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹಾಗೂ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇರಲಿದೆ ಎಂದು ವರದಿಗಳು ಸೂಚಿಸುತ್ತವೆ. ಬ್ಯಾಟರಿ ವಿಚಾರದಲ್ಲಿ OnePlus 15T ತನ್ನ ಸೆಗ್ಮೆಂಟ್‌ನಲ್ಲಿ ಹೊಸ ಮಾನದಂಡ ಸ್ಥಾಪಿಸುವ ಸಾಧ್ಯತೆ ಇದೆ. ಲೀಕ್‌ಗಳ ಪ್ರಕಾರ, ಈ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್‌ನಲ್ಲಿ 7,000mAh ಗಿಂತ ಹೆಚ್ಚಿನ ಸಾಮರ್ಥ್ಯದ ದೊಡ್ಡ ಬ್ಯಾಟರಿ ಇರಬಹುದು. ಇದು ದೀರ್ಘಕಾಲ ಬಳಕೆ, ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗಾಗಿ ಸೂಕ್ತವಾಗಲಿದೆ.

ಕಾರ್ಯಕ್ಷಮತೆಯ ವಿಷಯದಲ್ಲಿ, OnePlus 15T ಅನ್ನು ಮುಂದಿನ ತಲೆಮಾರಿನ Qualcomm Snapdragon 8 Elite Gen 5 ಪ್ರೊಸೆಸರ್ ಚಾಲಿತಗೊಳಿಸುವ ಸಾಧ್ಯತೆ ಇದೆ. ಈ ಶಕ್ತಿಶಾಲಿ ಚಿಪ್‌ಸೆಟ್ ಹೈಎಂಡ್ ಗೇಮಿಂಗ್, ಎಐ ಫೀಚರ್‌ಗಳು ಮತ್ತು ಮಲ್ಟಿಟಾಸ್ಕಿಂಗ್‌ಗೆ ಸೂಕ್ತವಾಗಿರಲಿದೆ ಎಂದು ಹೇಳಲಾಗುತ್ತಿದೆ. ಲಾಂಚ್ ಟೈಮ್‌ಲೈನ್ ಕುರಿತು ಲಭ್ಯವಿರುವ ಮಾಹಿತಿಯಂತೆ, OnePlus 15T ಅನ್ನು 2026ರ ಮೊದಲಾರ್ಧದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಚೀನಾ ಲಾಂಚ್ ನಂತರ, ಇದೇ ಸ್ಮಾರ್ಟ್‌ಫೋನ್ ಭಾರತದಲ್ಲಿ OnePlus 15s ಎಂಬ ಹೆಸರಿನಲ್ಲಿ ಪರಿಚಯವಾಗುವ ನಿರೀಕ್ಷೆಯಿದೆ.

Best Mobiles in India

English summary
The smartphone is expected to launch in China as OnePlus 15T and later arrive in India under the name OnePlus 15s, featuring a compact flagship design with premium performance, elegant styling, and a powerful battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+