Subscribe to Gizbot

ಶೀಘ್ರವೇ ಮಾರುಕಟ್ಟೆಗೆ ಓನ್ ಪ್ಲಸ್ 5: ಇಲ್ಲಿದೆ ಅದಕ್ಕೆ ಪುರಾವೆ

Posted By: Precilla Dias

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳು ಸದ್ದು ಮಾಡುತ್ತಿರುವ ಮಾದರಿಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿವೆ. ಸ್ಮಾಮ್ ಸಂಗ್ ಗ್ಯಾಲೆಕ್ಸಿ S8, LG G6, ಮತ್ತು ಕ್ಸಿಯೋಮಿ Mi 6 ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿರುವುದು ಇದಕ್ಕೆ ಸಾಕ್ಷಿ. ಇದೇ ಮಾದರಿಯಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಓನ್ ಪ್ಲಸ್ ಸಹ 2017ನಲ್ಲಿ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ ಎನ್ನುವುದು ಸದ್ಯದ ಸುದ್ದಿ.

ಶೀಘ್ರವೇ ಮಾರುಕಟ್ಟೆಗೆ ಓನ್ ಪ್ಲಸ್ 5: ಇಲ್ಲಿದೆ ಅದಕ್ಕೆ ಪುರಾವೆ

ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಓನ್ ಪ್ಲಸ್ ತನ್ನ ಟಾಪ್ ಎಂಡ್ ಸ್ಮಾರ್ಟ್ ಫೋನ್ ಅನ್ನು ಈ ವರ್ಷದ ಎರಡನೇ ಭಾಗದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಓನ್ ಪ್ಲಸ್ ಈ ಬಾರಿ 4 ಅನ್ನು ಬಿಟ್ಟು ಓನ್ ಪ್ಲಸ್ 5 ಬಿಡುಗಡೆ ಮಾಡುವ ತವಕದಲ್ಲಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಲು ಬರುತ್ತಿದೆ ಎನ್ನಲಾಗಿದೆ. ಈ ಫೋನ್ ಕುರಿತು ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೀಘ್ರವೇ ಲಾಂಚ್:

ಶೀಘ್ರವೇ ಲಾಂಚ್:

ಈಗಾಗಲೇ ಓನ್ ಪ್ಲಸ್ 5 ಸ್ಮಾರ್ಟ್ ಫೋನ್ ಚೀನಾದಲ್ಲಿ 3C ಸರ್ಟಿಫಿಕೆಟ್ ಪಡೆದುಕೊಂಡಿದ್ದು, ಎಪ್ರಿಲ್ ನಲ್ಲಿಯೇ ಇದನ್ನು ತನ್ನದಾಗಿಸಿಕೊಂಡಿತ್ತು. ಶೀಘ್ರವೇ ಲಾಂಚ್ ದಿನಾಂಕವನ್ನು ಪ್ರಕಟಿಸಲಿದೆ ಎನ್ನಲಾಗಿದೆ. ಈ ಫೋನ್ ನಲ್ಲಿ ಟಾಪ್ ಎಂಡ್ ಫೋನ್ ಗಳಲ್ಲಿ ಇರುವ ಎಲ್ಲಾ ಆಯ್ಕೆಗಳು ಇರಲಿದ್ದು, ಈ ಫೋನ್ ನನ್ನು ಓನ್ ಪ್ಲಸ್ A5000 ಎಂದು ನಾಮಕರಣ ಮಾಡಲಿದೆ ಎನ್ನಲಾಗಿದೆ.

ರೆಡಿಯೋ ರೆಗ್ಯೂಲೆಷನ್ ಸರ್ಟಿಫಿಕೆಟ್:

ರೆಡಿಯೋ ರೆಗ್ಯೂಲೆಷನ್ ಸರ್ಟಿಫಿಕೆಟ್:

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಓನ್ ಪ್ಲಸ್ 3C ಸರ್ಟಿಫಿಕೆಟ್ ಪಡೆದುಕೊಂಡಿದ್ದು, ಇದರ ಬೆನ್ನಲೇ ರೆಡಿಯೋ ರೆಗ್ಯೂಲೆಟಿಂಗ್ ಆತರಿಟಿಯಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಈ ಫೋನಿನ ವಿಶೇಷತೆಗಳೇನು, ಹೆಸರೇನು ಎಂಬುದು ತಿಳಿದು ಬಂದಿದೆ. ಇಲ್ಲಿಯೇ ಈ ಫೋನಿನ ಮಾಡಲ್ ನಂಬರ್ ಸಹ A5000 ಎಂದು ತಿಳಿಸಲಾಗಿದೆ.

ಓನ್ ಪ್ಲಸ್ 5 ಕೇಸ್ ಲೀಕ್ ಆಗಿದೆ:

ಓನ್ ಪ್ಲಸ್ 5 ಕೇಸ್ ಲೀಕ್ ಆಗಿದೆ:

ಇದಲ್ಲದೇ ಓನ್ ಪ್ಲಸ್ ಫೋನಿನೊಂದಿಗೆ ದೊರೆಯುವ ಕೇಸ್ ಸಹ ಲೀಕ್ ಆಗಿದ್ದು, ಈ ಹಿನ್ನಲೆಯಲ್ಲಿ ಈ ಫೋನ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎನ್ನುವುದಕ್ಕೆ ಸುಳುಳಿವು ಸಿಕ್ಕಹಾಗಿದೆ. ಒಟ್ಟಿನಲ್ಲಿ ಈ ಫೋನ್ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಹೊಂದಿದೆ ಎಂಬುದು ಇಲ್ಲಿಯೇ ತಿಳಿದಿದೆ. ಒಟ್ಟಿನಲ್ಲಿ ಈಗಾಗಲೇ ಅಭಿಮಾನಿಗಳು ಓನ್ ಪ್ಲಸ್ 5 ಕೊಳ್ಳಲು ಉತ್ಸುಕರಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ಬರಲಿ ಎನ್ನುವುದು ಅವರ ಆಶಯವು ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
OnePlus 5 is all set to be unveiled sometime in the second quarter of this year. Here are some of the recent leaks confirming the specifications of the flagship smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot