ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಖರೀದಿಸಲು ಎಲ್ಲೆಡೆ ಕ್ಯೂ!!..ಏಕೆ ಗೊತ್ತಾ?

Written By:

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಸ್ಮಾರ್ಟ್‌ಫೋನ್‌ಗಳು ದಾಖಲೆ ಮಟ್ಟಕ್ಕೆ ಮಾರಾಟವಾದ ಮೊದಲ ಮಿಡ್‌ರೇಂಜ್ ಸ್ಮಾರ್ಟ್‌ಫೋನ್, ಭಾರತದಲ್ಲಿ ಪ್ರಸ್ತುತ ಬಿಸಿತುಪ್ಪದಂತೆ ಖರ್ಚಾಗುತ್ತಿರುವ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 5' ಎಂದರೆ ತಪ್ಪಾಗಲಾರದು.!!

ಭಾರತಕ್ಕೆ ಕಾಲಿಟ್ಟ ಮೂರೆ ವರ್ಷದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿರುವ ಒನ್‌ಪ್ಲಸ್ ಕಂಪೆನಿಯ ನೂತನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5 ಭಾರಿ ಫೀಚರ್ಸ್ ಹೊಂದಿದ್ದು, ಇಂತಹ ಫೀಚಸ್‌ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವ ಟಾಪ್ ಮೊಬೈಲ್ ಕಂಪೆನಿಯೂ ಕೂಡ ಬಿಡುಗಡೆ ಮಾಡಿಲ್ಲ!!

8GB RAM ಮತ್ತು 64GB ಆಂತರಿಕ ಮೆಮೊರಿ ಸೇರಿದಂತೆ ಕ್ಯಾಮೆರಾ, ಆಂಡ್ರಾಯ್ಡ್ ಫ್ಲಾಗ್‌ಶಿಪ್ ಎಲ್ಲವನ್ನೂ ಹೊಂದಿರುವ ಒನ್‌ಪ್ಲಸ್ 5 ನೀಡುವ ಹಣಕ್ಕೆ ಉತ್ತಮವಾಗಿದ್ದು, ಸ್ಮಾರ್ಟ್‌ಫೋನ್ ಏಕೆ ಖರೀದಿಸಲೇಬೇಕು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಧ್ಯಮ ಬೆಲೆಗೆ ಹೈ ಎಂಡ್ ಸ್ಮಾರ್ಟ್‌ಪೋನ್!!

ಮಧ್ಯಮ ಬೆಲೆಗೆ ಹೈ ಎಂಡ್ ಸ್ಮಾರ್ಟ್‌ಪೋನ್!!

ಬಿಡುಗಡೆಗೂ ಮುನ್ನವೇ ಟ್ರೆಂಡ್ ಸೃಷ್ಟಿಸಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಬಿಡುಗಡೆಗಡ ಮುನ್ನವೇ ಲಕ್ಷ ಲಕ್ಷ ಬುಕ್ಕಿಂಗ್ ಆಗಿತ್ತು. ಇದೇ 24 ನೇ ತಾರೀಖು ಭಾರತದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 5 ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿತ್ತು ಎಂದರೆ ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಫೋನ್ ಖರೀದಿಗೆ ಎಷ್ಟು ಒಲವು ತೋರಿದ್ದರು ಎಂಬುದನ್ನು ತಿಳಿಯಬಹುದು.!!

ಒನ್‌ಪ್ಲಸ್ 5 ಫೋನ್‌ಗೆ ಸಾಟಿ ಯಾವುದಿದೆ?

ಒನ್‌ಪ್ಲಸ್ 5 ಫೋನ್‌ಗೆ ಸಾಟಿ ಯಾವುದಿದೆ?

ಇದೇ ಮೊದಲ ಭಾರಿಗೆ ಅತ್ಯುತ್ತಮ ಫೀಚರ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ. 2.4GHz ಆಕ್ಟ-ಕೋರ್ ಚಿಪ್‌ಸೆಟ್, ಅತ್ಯುತ್ತಮ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ , 8GB RAM ಮತ್ತು 64GB ಆಂತರಿಕ ಮೆಮೊರಿ 4000mAh ಬ್ಯಾಟರಿ ಶಕ್ತಿ ಹೊಂದಿದ್ದು, ಅತ್ಯಂತ ಹೆಚ್ಚಿನ ಫೀಚರ್ಸ್ ಅನ್ನು ಒನ್‌ಪ್ಲಸ್ ಹೊಂದಿದ್ದು, ಇದಕ್ಕೆ ಯಾವ ಫೋನ್ ಕೂಡ ಸಾಟಿಯಿಲ್ಲ.!!

ಕ್ಯಾಮೆರಾಗೆ ಕೊಡ್ಬೇಕು ಮೊಬೈಲ್‌ನಷ್ಟು ಹಣ!!!

ಕ್ಯಾಮೆರಾಗೆ ಕೊಡ್ಬೇಕು ಮೊಬೈಲ್‌ನಷ್ಟು ಹಣ!!!

ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ ಬಹುತೇಕ ಎಲ್ಲಾ ಫೀಚರ್ಸ್‌ಗಳಲ್ಲಿಯೂ ತನ್ನ ಹವಾ ತೋರಿಸಿದ್ದು, 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 23 ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ.! ಕ್ಯಾಮೆರಾ ಗುಣಮಟ್ಟದಲ್ಲಿಯೂ ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಮೊದಲಿದ್ದು, ಇಷ್ಟು ಗುಣಮಟ್ಟದ ಕ್ಯಾಮೆರಾ ಖರೀದಿಸಲು ಮೊಬೈಲ್‌ಗಿಂತಲೂ ಹೆಚ್ಚು ಬೆಲೆ ನೀಡಬೇಕಾಗುತ್ತದೆ.!!

ಖರೀದಿಸಲು ಒನ್‌ಪ್ಲಸ್ 5 ಸ್ಮಾರ್ಟ್‌ಪೋನ್ ಬೆಸ್ಟ್!!

ಖರೀದಿಸಲು ಒನ್‌ಪ್ಲಸ್ 5 ಸ್ಮಾರ್ಟ್‌ಪೋನ್ ಬೆಸ್ಟ್!!

ಪ್ರತಿಯೋರ್ವ ಸ್ಮಾರ್ಟ್‌ಪೊನ್ ಬಳಕೆದಾರನು ಒಂದು ಸ್ಮಾರ್ಟ್‌ಫೋನ್‌ನಲ್ಲಿ ಏನೇನೆಲ್ಲಾ ಇರಬೇಕು ಎಂದು ಬಯಸುತ್ತಾನೋ, ಆ ಎಲ್ಲಾ ಫೀಚರ್ಸ್‌ಗಳು ಸಹ ಕೇವಲ ಒನ್‌ಪ್ಲಸ್ 5 ಸ್ಮಾರ್ಟ್‌ಪೋನ್‌ನಲ್ಲಿಯೇ ಲಭ್ಯವಿದೆ.! ಕ್ಯಾಮೆರಾ, ಡಿಸ್‌ಪ್ಲೇ, RAm, ಬ್ಯಾಟರಿ ಮತ್ತು ಪ್ರೊಸೆಸರ್ ಎಲ್ಲವೂ ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ ಗುಣಮಟ್ಟವನ್ನು ಹಿಡಿದಿಟ್ಟಿವೆ. ಹಾಗಾಗಿ, ಒನ್‌ಪ್ಲಸ್ 5 ಸ್ಮಾರ್ಟ್‌ಪೋನ್ ಖರೀದಿಸಲು ಬೆಸ್ಟ್ .!!

ಓದಿರಿ:ಫೇಸ್‌ಬುಕ್ ವಿಡಿಯೋಗಳನ್ನು ಜಾಸ್ತಿ ನೋಡ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here’s the success that OnePlus 5 has grabbed. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot